X

ಫೋರ್ಬ್ಸ್ ಜಾಗತಿಕ ಪ್ರಭಾವಿ ವ್ಯಕ್ತಿಗಳ ಪಟ್ಟಿ ಬಿಡುಗಡೆ!! ಪ್ರಧಾನಿ ನರೇಂದ್ರ ಮೋದಿಯವರಿಗೆ ಎಷ್ಟನೇ ಸ್ಥಾನ ಗೊತ್ತಾ?!

ನವಭಾರತದ ಉಜ್ಜಲ ಭವಿಷ್ಯದ ಕನಸನ್ನು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು “ಭಾರತದ ಭವಿಷ್ಯವನ್ನೇ ಬದಲಾಯಿಸುವ ಕ್ರಾಂತಿಕಾರಿ ನಾಯಕ” ರಾಗಿ ಹೊರಹೊಮ್ಮಿದ್ದಲ್ಲದೇ, ಅದೆಷ್ಟೋ ಮಂದಿಗೆ ರೋಲ್ ಮಾಡೆಲ್ ಕೂಡ ಹೌದು!! ಈಗಾಗಲೇ ಭಾರತದ ರಾಜಕೀಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಭಾವ ಶಾಲಿ ಹಾಗೂ ಜನಪ್ರಿಯ ರಾಜಕಾರಣಿ ಎಂದು ಈಗಾಗಲೇ ಬಿಡುಗಡೆಯಾಗಿರುವ ಹಲವಾರು ಸಮೀಕ್ಷೆಗಳು ಮೋದಿಯವರನ್ನು ಹಾಡಿ ಹೊಗಳಿತ್ತು. ಅಷ್ಟೇ ಅಲ್ಲದೇ, ಭ್ರಷ್ಟಾಚಾರ ವಿರೋಧಿಯಾಗಿ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ನೋಟ್ ಬ್ಯಾನ್, ಜಿ ಎಸ್ ಟಿ ಕ್ರಮವನ್ನು ಅಂತರಾಷ್ಟ್ರೀಯ ಸಂಸ್ಥೆಗಳಲ್ಲದೆ ಹಲವಾರು ಆರ್ಥಿಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಇದು ನರೇಂದ್ರ ಮೋದಿಯವರ  “ಎದೆಗಾರಿಕೆಯ ನಿರ್ಧಾರ” ಎಂದು ಕೂಡ ಬಣ್ಣಿಸಿದ್ದರು!!

ಆದರೆ ಭಾರತದಲ್ಲಿ ಮೋದಿಯ ನೋಟ್ ಬ್ಯಾನ್, ಜಿಎಸ್‍ಟಿಯ ನಿರ್ಧಾರದಿಂದಾಗಿ ಕೊಂಚ ಸಫಲತೆಯನ್ನು ಕಂಡರೂ ಕೂಡ ನರೇಂದ್ರ ಮೋದಿಯವರು “ಭಾರತ ಕಂಡ ಅತ್ಯುತ್ತಮ ಪ್ರಧಾನಿ” ಯಾಗಿ ಸಮೀಕ್ಷೆಗಳ ಮೂಲಕ ಹೊರಹೊಮ್ಮಿದ್ದರು. ಆದರೆ ಹಲವು ವಾದ ವಿರೋಧದ ನಡುವೆಯೂ ಪ್ರಧಾನಿ ಮೋದಿಯ ಪ್ರಭಾವ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದರ ಪರಿಣಾಮ ವಿಶ್ವ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ನಿಸ್ಸಂದೇಹವಾಗಿ ಅಗ್ರಸ್ಥಾನವನ್ನೇ ಪಡೆದಿದ್ದಾರೆ. ಇದೀಗ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೋದೀಜೀಗೆ ಅಗ್ರ ಸ್ಥಾನ ನೀಡಿದೆ!!

ಫೋರ್ಬ್ಸ್ ನಿಯತಕಾಲಿಕೆ ಪಟ್ಟಿಯಲ್ಲಿ ಮೋದಿಜೀಗೆ 9ನೇ ಸ್ಥಾನ!!

ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಜಾಗತಿಕ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 9ನೇ ಸ್ಥಾನ ಪಡೆದಿದ್ದಾರೆ. ಪ್ರಧಾನಿಯಾಗಿ 2014ರಲ್ಲಿ ಅಧಿಕಾರ ಸ್ವೀಕರಿಸಿದ್ದಾಗ ಜಾಗತಿಕ ಪ್ರಭಾವಿಗಳ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದ್ದ ಮೋದಿ ಈಗ 9ನೇ ಸ್ಥಾನಕ್ಕೆ ಜಿಗಿದಿದ್ದಾರೆ. ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ 34ನೇ ಸ್ಥಾನದಲ್ಲಿದ್ದಾರೆ. ಜಿಯೋ-4ಜಿ ಮೂಲಕ ಭಾರತದಲ್ಲಿ ಡಿಜಿಟಲ್ ಕ್ರಾಂತಿ ನಡೆಸಿರುವ ಹಿನ್ನೆಲೆಯಲ್ಲಿ ಮುಖೇಶ್ ಅಂಬಾನಿ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ವಿಶ್ವದ ಆಡಳಿತ ಹಾಗೂ ಆರ್ಥಿಕ ನೀತಿಗಳ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳಿಗೆ ಫೆÇೀಬ್ರ್ಸ್ ಜಾಗತಿಕ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ನೀಡಲಾಗುತ್ತದೆ. ಪ್ರಧಾನಿಯಾದ ವರ್ಷದಿಂದಲೂ ಮೋದಿ ಪ್ರಭಾವಿಗಳ ಪಟ್ಟಿಯಲ್ಲಿ ಟಾಪ್-15ರಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ 9ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಕಳೆದ ವರ್ಷ ನಡೆದಿದ್ದ ಇನ್ನೊಂದು ಜಾಗತಿಕ ಸಮೀಕ್ಷೆಯಲ್ಲಿ ಪ್ರಭಾವಿ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದರು.

`130 ಕೋಟಿ ಜನರಿರುವ ಭಾರತದಲ್ಲಿ ಇಂದಿಗೂ ಪ್ರಧಾನಿ ಮೋದಿ ಜನಪ್ರಿಯರಾಗಿ ಉಳಿದಿದ್ದಾರೆ. ಕಪ್ಪು ಹಣ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ 2016ರ ನವೆಂಬರ್‍ನಲ್ಲಿ ನೋಟು ಅಮಾನ್ಯೀಕರಣ ಮಾಡಿದರು. ಡೊನಾಲ್ಡ್ ಟ್ರಂಪ್ ಹಾಗೂ ಕ್ಸಿ ಜಿನ್‍ಪಿಂಗ್ ಭೇಟಿ ಬಳಿಕ ಜಾಗತಿಕ ನಾಯಕ ಎಂದು ಅವರನ್ನು ವಿಶ್ವ ಗುರುತಿಸಿತ್ತು. ಹವಾಮಾನ ವೈಪರೀತ್ಯ ಒಪ್ಪಂದಕ್ಕೆ ಇತರ ರಾಷ್ಟ್ರಗಳು ಸಹಮತ ವ್ಯಕ್ತಪಡಿಸುವಲ್ಲಿ ಮೋದಿ ನಿರ್ಣಾಯಕ ಪಾತ್ರ ವಹಿಸಿದ್ದರು’ ಎಂದು ಫೆÇೀಬ್ರ್ಸ್ ನಿಯತಕಾಲಿಕೆ ವರದಿ ಮಾಡಿದೆ.

ಈ ಹಿಂದೆ ಭಾರತವನ್ನು ಹಿಂದುಳಿದ ರಾಷ್ಟ್ರ ಅಂತ ಕೈ ಜೋಡಿಸಲು ಹಿಂದೆ ಸರಿಯುತ್ತಿದ್ದ ರಾಷ್ಟ್ರಗಳೆಲ್ಲ ಮೋದಿಯ ಪ್ರಭಾವದಿಂದಾಗಿ ನಾ ಮುಂದು ತಾ ಮುಂದು ಅಂತ ಭಾರತದ ಸ್ನೇಹಕ್ಕಾಗಿ ಸಾಲುಕಟ್ಟಿ ನಿಲ್ಲುತ್ತಿದೆ ಎಂದರೆ ಅದು ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಎನ್ನುವುದನ್ನು ನಾವು ಮರೆಯಬಾರದು. ಇಡೀ ವಿಶ್ವದ ನಾಯಕರ ಪಟ್ಟಿಯಲ್ಲಿ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ 9 ಸ್ಥಾನ ಎಂದರೆ ನಿಜವಾಗಿಯೂ ಗ್ರೇಟ್!!

  • ಪವಿತ್ರ
Editor Postcard Kannada:
Related Post