X

ಪ್ರಧಾನಸೇವಕನಿಗೆ “ನಮೋ” ಎಂದ ಗ್ಲೋಬಲ್ ಲೀಡರ್ಸ್!

ವಿಶ್ವ ನಾಯಕ, ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನು, ಬಾಲಿಯಲ್ಲಿ ಇಂಡೋನೇಷ್ಯಾ‌ದ ಅಧ್ಯಕ್ಷ ಜೋಕೋ ವಿಡೋಡೊ ಅವರಿಂದ ಬುಧವಾರ ಅಧಿಕೃತವಾಗಿ ಸ್ವೀಕರಿಸಿದ್ದಾರೆ.

ಅದರೊಂದಿಗೆ ಜಿ20 ಶೃಂಗಸಭೆ‌ಯ ಅಧ್ಯಕ್ಷ ಸ್ಥಾನ ಅಧಿಕೃತವಾಗಿ ಭಾರತಕ್ಕೆ ಹಸ್ತಾಂತರ‌ ಆದಂತಾಗಿದೆ. ಜಿ20 ಶೃಂಗಸಭೆಯಲ್ಲಿ ಡಿಸೆಂಬರ್ 1 ರಿಂದ ಭಾರತವು ಅಧಿಕೃತವಾಗಿ ಕುಳಿತುಕೊಳ್ಳಲಿದೆ.

ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಈ ಶೃಂಗಸಭೆ‌ಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಲಭಿಸಿರುವುದು ಪ್ರತಿಯೋರ್ವ ಭಾರತೀಯನಿಗೆ ಹೆಮ್ಮೆಯ ಸಂಗತಿಯಾಗಿದೆ. ಭಾರತದ ವಿವಿಧ ರಾಜ್ಯಗಳ‌ಲ್ಲಿ, ವಿವಿಧ ನಗರಗಳಲ್ಲಿ ಸಭೆಗಳನ್ನು ಆಯೋಜನೆ ಮಾಡಲಾಗುವುದು. ಈ ಶೃಂಗಸಭೆ‌ಯನ್ನು ಜಾಗತಿಕ ಬದಲಾವಣೆಯ ವೇಗವರ್ಧಕವಾಗಿ ಮಾಡಲಿರುವುದಾಗಿ ಅವರು ಹೇಳಿದ್ದಾರೆ. ಈ ಅಧ್ಯಕ್ಷ ಸ್ಥಾನ‌ದ ಥೀಮ್ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬುದಾಗಿ ಮೋದಿ ಅವರು ತಿಳಿಸಿದ್ದಾರೆ.

ಮುಂದುವರಿಸಿದ ಅವರು, ನಮ್ಮ ಮುಂದಿನ ಪೀಳಿಗೆಗಳು ಶಾಂತಿ, ಭದ್ರತೆ‌ಯ ಹೊರತಾಗಿ ಆರ್ಥಿಕ ,ತಾಂತ್ರಿಕ ಪ್ರಗತಿ ಸಾಧಿಸುವುದು ಸಾಧ್ಯವಿಲ್ಲ. ಪ್ರಪಂಚ ಏಕಕಾಲಕ್ಕೆ ಭೌಗೋಳಿಕ ರಾಜಕೀಯ ಉದ್ವಿಗ್ನ‌ತೆ, ಆರ್ಥಿಕ ಹಿಂಜರಿತ, ಆಹಾರ, ಇಂಧನ ಬೆಲೆ ಏರಿಕೆ, ಧೀರ್ಘಾವಧಿ ಸಾಂಕ್ರಾಮಿಕ‌ ಮೊದಲಾದ ಸಮಸ್ಯೆ‌ಗಳ ಜೊತೆಗೆ ಹೋರಾಟ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಭಾರತವು ಜಿ20 ಶೃಂಗಸಭೆಯ ಜವಾಬ್ದಾರಿ ಹೊತ್ತುಕೊಳ್ಳುತ್ತಿದೆ. ಜಗತ್ತು ಈ ಸಭೆಯನ್ನು ಭರವಸೆಯ ಕಂಗಳಿಂದ ನೋಡುತ್ತಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.

Post Card Balaga:
Related Post