X

ಮಹದಾಯಿ ಹೋರಾಟಗಾರರಿಗೆ ಮೋದಿಯಿಂದ ಗುಡ್ ನ್ಯೂಸ್..! ನನಸಾಗುವತ್ತ ಉತ್ತರ ಕರ್ನಾಟಕದ ಜನರ ಹೋರಾಟದ ಕನಸು..?

ಅದು ಅದೆಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿರುವ ಹೋರಾಟ. ಉತ್ತರ ಕರ್ನಾಟಕ ಭಾಗದ ಅದೆಷ್ಟೋ ಜನರಿಗೆ ಕುಡಿಯುವ ನೀರಿನ ಅಭಾವ ಇದ್ದಿದ್ದರಿಂದ ನಿರಂತರವಾಗಿ ಹೋರಾಟಗಳನ್ನೇ ನಡೆಸಿಕೊಂಡು ಸರ್ಕಾರ ಗಮನ ಸೆಳೆದಿದ್ದರು. ಆದರೆ ರಾಜ್ಯದಲ್ಲಿ ಆಳುವ ನಾಯಕರ ನಿರಾಸಕ್ತಿಯಿಂದ ಈ ಹೋರಾಟವೇ ನೆಲಕಚ್ಚುವಂತಾಗಿತ್ತು. ಆದರೆ ಇದೀಗ ಮತ್ತೆ ಆ ಭಾಗದ ಜನರ ಕನಸು ನನಸಾಗುವತ್ತ ಹೊಸ ದಿಗಂತ ಮೂಡುತ್ತಿದೆ.

ಹೋರಾಟಗಾರರಿಗೆ ಮೋದಿ ಬುಲಾವ್..!

ಈ ಹಿಂದೆ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳಸಾ ಬಂಡೂರಿ, ಮಹದಾಯಿ ಹೋರಾಟಗಾರರೊಂದಿಗೆ ಮಾತನಾಡಿ ಅವರನ್ನು ಮನವೊಲಿಸಿ ಈ ಬಾರಿ ಚುನಾವಣೆಗೆ ಸಹಕರಿಸುವಂತೆ ಮಾಡುತ್ತಾರೆ ಎಂದೇ ಎಲ್ಲಾ ಕಡೆ ಸುದ್ದಿಯಾಗಿತ್ತು. ಆದರೆ ನರೇಂದ್ರ ಮೋದಿಯವರು ಅಧಿಕಾರದ ಆಸೆಗಾಗಿ ಪೊಳ್ಳು ಭರವಸೆಗಳನ್ನು ನೀಡುವವರಲ್ಲ ಎಂಬುವುದನ್ನು ಮತ್ತೆ ಸಾಭೀತುಪಡಿಸಿದ್ದಾರೆ.

ಚುನಾವಣೆ ಮುಗಿದು, ಸರ್ಕಾರ ರಚಿಸಿದ ನಂತರವೇ ಮತ್ತೆ ಕಳಸಾ ಬಂಡೂರಿ ಸಮಸ್ಯೆಗೆ ಇತ್ಯರ್ಥ ಹಾಡಲು ಮುಂದಾಗಿದ್ದಾರೆ. ಕಳಸಾ ಬಂಡೂರಿ ಹೋರಾಟಗಾರರಿಗೆ ಪ್ರಧಾನಿ ಮೋದಿಯವರು ಬುಲಾವ್ ನೀಡಿದ್ದಾರೆ. ಡಾ.ವೆಂಕಟಾಚಲಯ್ಯ ನೇತೃತ್ವದಲ್ಲಿ ಹೋರಾಟಗಾರರ ತಂಡವೊಂದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಮಂತ್ರಿಸಿದ್ದಾರೆ. ಹುಬ್ಬಳ್ಳಿ, ದಾರವಾಢ, ಬೆಳಗಾವಿ ಜಿಲ್ಲೆಯ ಒಟ್ಟು 23 ಜನರ ತಂಡವನ್ನು ಪ್ರಧಾನಿ ಮೋದಿ ಆಮಂತ್ರಿಸಿದ್ದಾರೆ.

ಈ ಬಗ್ಗೆ ದಿನಾಂಕವನ್ನೂ ನಿಗಧಿಪಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ತಿಂಗಳ 24 ಅಥವಾ 25ರಂದು ತನ್ನ ಭೇಟಿಗೆ ಆಮಂತ್ರಿಸಿದ್ದಾರೆ. ಈ ಮೂಲಕ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೋರಾಟದ ಪ್ರತಿಫಲ ಈ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡುವ ಲಕ್ಷಣಗಳು ಗೋಚರಿಸುತ್ತಿದೆ. ಈವರೆಗೂ ಎಲ್ಲಾ ರಾಜಕೀಯ ಪಕ್ಷಗಳೂ ಮಹದಾಯಿ ಹೋರಾಟಗಾರರನ್ನು ಕಡೆಗಣಿಸುತ್ತಲೇ ಬರುತ್ತಿದೆ. ವಿವಾದದ ಕೇಂದ್ರಬಿಂದುವಾಗಿದ್ದ ಗೋವಾ ವಿಧಾನ ಸಭಾ ಚುನಾವಣೆಯಲ್ಲಿ ಕೂಡಾ ಸೋನಿಯಾ ಗಾಂಧಿ “ಕರ್ನಾಟಕಕ್ಕೆ ನೀರು ಕೊಡಲು ನನ್ನ ಜೀವ ಇರೋವರೆಗೂ ಬಿಡೋದಿಲ್ಲ” ಎಂದು ಹೇಳಿದ್ದರು. ಹೀಗಾಗಿ ಅದು ಮತ್ತೆ ಹಿಂದೆ ಉಳಿಯುವಂತೆ ಆಗಿತ್ತು. ಆದರೆ ಈ ಬಾರಿ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಈ ಸಾಹಸಕ್ಕೆ ಕೈ ಹಾಕಿದ್ದರಿಂದ ರಾಜ್ಯದ ಅತಿದೊಡ್ಡ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿದೆ.

-ಸುನಿಲ್ ಪಣಪಿಲ

Editor Postcard Kannada:
Related Post