X

ಮೂರೇ ತಿಂಗಳಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ..! ಮೋದಿ ವಿರೋಧಿಗಳ ಛಳಿ ಬಿಡಿಸಿದ ನವರಸ ನಾಯಕ..!

ಚುನಾವಣಾ ನಂತರದಲ್ಲಿ ಅಧಿಕಾರದ ಆಸೆಯಿಂದ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಕುಮಾರಸ್ವಾಮಿ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿ ಇಂದು ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿದ್ದರೆ, ಇತ್ತ ಭಾರೀ ಮಳೆಯಿಂದಾಗಿ ಪ್ರಮಾಣವಚನಕ್ಕೆ ಅಡ್ಡಿಯಾಗುವ ಸಂಭವವಿದೆ. ಅಪವಿತ್ರ ಮೈತ್ರಿ ಮಾಡಿಕೊಂಡು ಗದ್ದುಗೆ ಏರಲು ಸಿದ್ಧರಾದ ಕುಮಾರಸ್ವಾಮಿ ವಿರುದ್ಧ ಇಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಪರಾಜಿತ ಅಭ್ಯರ್ಥಿ, ಈ ಹಿಂದಿನ ಸಿದ್ದರಾಮಯ್ಯ ಸರಕಾರದ ನಿದ್ದೆಗೆಡಿಸಿದ್ದ ಕನ್ನಡ ಚಿತ್ರರಂಗದ ನವರಸ ನಾಯಕ, ಬಿಜೆಪಿ ಮುಖಂಡ ಜಗ್ಗೇಶ್ ಬೆಂಗಳೂರಿನಲ್ಲಿ ಹರಿಹಾಯ್ದಿದ್ದಾರೆ..!

ಸಿಂಹವನ್ನು ಮಣಿಸಲು ನರಿ, ತಿಗಣೆಗಳು ಒಂದಾಗಿವೆ..!

ಇಡೀ ಜಗತ್ತೇ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ನಾಯಕ ಎಂದು ಒಪ್ಪಿಕೊಂಡರೆ, ಇತ್ತ ದೇಶದೊಳಗೆ ಕೆಲ ಕುತಂತ್ರಿಗಳ ಗುಂಪು ಮೋದಿ ವಿರುದ್ಧ ಸೆಣಸಾಡಲು ಒಂದಾಗಿದೆ ಎಂದು ಟೀಕಿಸಿದ ಜಗ್ಗೇಶ್, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ತಪ್ಪಿಸಲು ಕಾಂಗ್ರೆಸ್, ಜೆಡಿಎಸ್‌, ಹೊರ ರಾಜ್ಯದ ಪಕ್ಷಗಳೂ ಕೈಜೋಡಿಸಿದೆ ಎಂದು ಟಾಂಗ್ ನೀಡಿದರು. ಈಗಾಗಲೇ ಪ್ರಮಾಣವಚನ ಸ್ವೀಕರಿಸಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದ ಬಿಎಸ್ ಯಡಿಯೂರಪ್ಪ ನವರು ಬಹುಮತ ಸಾಬೀತು ಪಡಿಸಲಾಗದೆ ರಾಜೀನಾಮೆ ನೀಡಿದ್ದರು. ಈ ವೇಳೆ ಬಿಜೆಪಿ ಒಂದು ಕಡೆಯಾದರೆ ಮತ್ತೊಂದು ಕಡೆ ಎಲ್ಲಾ ವಿರೋಧಿಗಳ ಪಕ್ಷ ಒಂದಾಗಿದ್ದವು, ಇದು ಅವರ ಯೋಗ್ಯತೆಯನ್ನು ತಿಳಿಸುತ್ತದೆ ಎಂದು ಭಾರೀ ಆಕ್ರೋಶ ವ್ಯಕ್ತಪಡಿಸಿದರ ಜಗ್ಗೇಶ್ , ಮೋದಿ ಎಂದರೆ ಸಿಂಹ ಈಗ ಈ ಸಿಂಹವನ್ನು ಎದುರಿಸಲು ಸಾಧ್ಯವಾಗದೆ ನರಿ , ತಿಗಣೆಗಳೆಲ್ಲವೂ ಒಂದಾಗಿದೆ ಎಂದು ದೂರಿದರು..!

ಮೂರೇ ತಿಂಗಳಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ..!

ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಬಹುಮತ ಸಾಧಿಸಲು ಸಾಧ್ಯವಾಗದೆ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಆದರೆ ಇದು ಕೇವಲ ತಾತ್ಕಾಲಿಕ ಅಷ್ಟೇ, ಇನ್ನು ಮೂರೇ ಮೂರು ತಿಂಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ, ಇಲ್ಲವಾದಲ್ಲಿ ಬೃಂದಾವನದಲ್ಲಿ ರಾಯರು ಇಲ್ಲ ಎಂದರ್ಥ ಎಂದು ಭಾರೀ ಭರವಸೆಯ ಮಾತು ನೀಡಿದ ಜಗ್ಗೇಶ್, ಕಾಂಗ್ರೆಸ್ ಮತ್ತು ಜೆಡಿಎಸ್‌ ಮಾಡಿಕೊಂಡಿರುವ ಮೈತ್ರಿ ಅವರಿಗೂ ಒಳ್ಳೆಯದಲ್ಲ ಮತ್ತು ರಾಜ್ಯಕ್ಕೂ ಒಳಿತಲ್ಲ ಎಂದರು. ಆದ್ದರಿಂದ ಅಧರ್ಮವನ್ನು ನಾಶ ಮಾಡಲು ಭಗವಾನ್ ಶ್ರೀ ಕೃಷ್ಣ ಯಾವ ರೀತಿ ಯಧಾ ಯಧಾಹೀ ಧರ್ಮಸ್ಯ ಎಂಬ ಶ್ಲೋಕ ಇಟ್ಟುಕೊಂಡಿದ್ದರೋ, ಅದೇ ರೀತಿ ಈ ರಾಜ್ಯದ ಜನ ಪ್ರತಿಯೊಬ್ಬರೂ ತಮ್ಮ ಎದೆಯಲ್ಲಿ ಈ ಶ್ಲೋಕ ಇಟ್ಟುಕೊಂಡು ಈ ಸರಕಾರದ ವಿರುದ್ಧ ಹೋರಾಡಬೇಕು ಎಂದು ಹೇಳಿದರು..!

ಕಿತ್ತಾಡಿಕೊಂಡಿದ್ದವರು ಇದೀಗ ಭಾಯಿ – ಭಾಯಿ..!

ಚುನಾವಣೆಗೂ ಮೊದಲು ಪರಸ್ಪರ ಕಿತ್ತಾಡಿಕೊಂಡು ತೊಡೆತಟ್ಟಿ ಯುದ್ದ ಮಾಡುವ ರೀತಿ ಹೇಳಿಕೆ ನೀಡುತ್ತಿದ್ದರು, ಆದರೆ ಇದೀಗ ಅಧಿಕಾರದ ಆಸೆಗೆ ಬಿದ್ದು ಕೈಜೋಡಿಸಿಕೊಂಡು ಅಧಿಕಾರ ನಡೆಸಲು ತಯಾರಾಗಿದೆ , ಕಾಂಗ್ರೆಸ್ ಮತ್ತು ಜೆಡಿಎಸ್‌ ಆಡಿದ ಪ್ರತಿಯೊಂದು ಮಾತುಗಳು ರಾಜ್ಯದ ಜನರ ಕಿವಿಯಲ್ಲಿ ಇನ್ನೂ ಗುಂಯಿ ಗುಟ್ಟುತ್ತಲೇ ಇದೆ. ಆದ್ದರಿಂದ ಈ ಸರಕಾರ ಹೆಚ್ಚು ದೂರ ಸಾಗಲು ಸಾಧ್ಯವೇ ಇಲ್ಲ ಎಂದು ಜಗ್ಗೇಶ್ ಪ್ರಶ್ನಿಸಿದರು..!

ಕುಮಾರಸ್ವಾಮಿ ಅವರು ಇಂದು ಪ್ರಮಾಣವಚನ ಸ್ವೀಕರಿಸಲು ಇರುವುದರಿಂದ ಬಿಜೆಪಿ ಇಂದು ರಾಜ್ಯಾದ್ಯಂತ ಕರಾಳ ದಿನ ಆಚರಿಸಲು ಕರೆ ಕೊಟ್ಟಿತ್ತು. ಆದ್ದರಿಂದ ಬೆಂಗಳೂರಿನಲ್ಲಿ ಬಿಎಸ್ ಯಡಿಯೂರಪ್ಪ ನವರ ನೇತ್ರತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಜಗ್ಗೇಶ್ ಕಾಂಗ್ರೆಸ್ ಮತ್ತು ಜೆಡಿಎಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು..!

–ಅರ್ಜುನ್

 

Editor Postcard Kannada:
Related Post