X

ಕಾಂಗ್ರೆಸ್ ಗೆ ಬಿಗ್ ಶಾಕ್ ನೀಡಲು ಸಜ್ಜಾದ ಗುತ್ತೇದಾರ್..! ಆರು ಬಾರಿ ಗೆದ್ದ ಶಾಸಕನ ಮಾತಿಗೆ ಕಾಂಗ್ರೆಸ್ ಹಿಂದೇಟು ಹಾಕಿದ್ದೇಕೆ ಗೊತ್ತಾ..?!

ಕಾಂಗ್ರೆಸ್ ನ ಅಂತ್ಯಕ್ಕೆ ಕ್ಷಣಗಣನೆ ಆರಂಭ..! ಕಾಂಗ್ರೆಸ್ ಮುಕ್ತ ಭಾರತಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಕಾಂಗ್ರೆಸ್ ಗೆ ಬಲವಾಗಿ ಇರುವ ಕರ್ನಾಟಕದಲ್ಲೂ ಇದೀಗ ಚುನಾವಣೆಗೂ ಮೊದಲೇ ಕಾಂಗ್ರೆಸ್ ಮಕಾಡೆ ಮಲಗುವುದು ಖಚಿತವಾಗಿದೆ. ಯಾಕೆಂದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಬಹಳ ಜೋರಾಗಿ ನಡೆಯುತ್ತಿದೆ. ಪಕ್ಷದ ಮುಖಂಡರ ಈ ನಡೆಯಿಂದಾಗಿ ದಂಗಾಗಿರುವ ಕಾಂಗ್ರೆಸ್ ಗೆ ಸೋಲಿನ ಭೀತಿ ಹೆಚ್ಚಾಗಿದೆ.!

ಸಿದ್ದರಾಮಯ್ಯನವರ ಆಡಳಿತಕ್ಕೆ ಅಸಮಧಾನಗೊಂಡ ಪಕ್ಷದ ನಾಯಕರು ಇದೀಗ ಬಿಜೆಪಿ ಸೇರುತ್ತಿದ್ದು, ದೇಶಾದ್ಯಂತ ಸೋಲಿನ ಮೇಲೆ ಸೋಲು ಅನುಭವಿಸಿಕೊಂಡು ಭಾರೀ ಏಟು ತಿಂದಿರುವ ಕಾಂಗ್ರೆಸ್ ಗೆ ಇದೀಗ ಕರ್ನಾಟಕವೂ ತಮ್ಮ ಕೈ ತಪ್ಪುವ ಮುನ್ಸೂಚನೆ ದೊರಕಿದೆ.!

ಈಗಾಗಲೇ ಬಿಜೆಪಿ ಸೇರುವುದಾಗಿ ಹೇಳಿಕೊಂಡಿದ್ದ ಹೈದರಾಬಾದ್-ಕರ್ನಾಟಕ ಭಾಗದ ಬಲಿಷ್ಠ ನಾಯಕ‌ , ಕಾಂಗ್ರೆಸ್ ನಿಂದ ಆರು ಬಾರಿ ಗೆದ್ದು ಶಾಸಕರಾದ ಮಾಲಿಕಯ್ಯ ಗುತ್ತೇದಾರ್ ಇದೀಗ ಕಾಂಗ್ರೆಸ್ ಗೆ ಮತ್ತೊಂದು ಶಾಕ್ ನೀಡಲು ಸಜ್ಜಾಗಿದ್ದಾರೆ. ಸಿದ್ದರಾಮಯ್ಯನವರ ಪುಷ್ಟೀಕರಣದ ನೀತಿಗೆ ಅಸಮಧಾನಗೊಂಡು ಬಿಜೆಪಿ ಸೇರಲು ಇಚ್ಚಿಸಿದ ಗುತ್ತೇದಾರ್ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸೋಲು ನಿಶ್ಚಿತ ಎಂದಿದ್ದಾರೆ.!

ಸದ್ಯದಲ್ಲೇ ಕಾಂಗ್ರೆಸ್ ಗೆ ಬಿಗ್ ಶಾಕ್..!

ಆರು ಬಾರಿ ಶಾಸಕರಾದರೂ ಕೂಡ ಕಾಂಗ್ರೆಸ್ ನಿಂದ ಯಾವುದೇ ಗೌರವ ದೊರೆಯಲಿಲ್ಲ.‌ ರಾಜ್ಯ ಸರ್ಕಾರವು ಗುತ್ತೇದಾರ್ ಗೆ ಯಾವುದೇ ಮಾನ್ಯತೆಯೂ ನೀಡಲಿಲ್ಲ. ಇದರಿಂದ ಆಕ್ರೋಷಗೊಂಡ ಗುತ್ತೇದಾರ್ ಇದೀಗ ಚುನಾವಣಾ ಹೊಸ್ತಿಲಲ್ಲೇ ಪಕ್ಷ ತೊರೆದಿದ್ದಾರೆ.‌ ಆದರೆ ಗುತ್ತೇದಾರ್ ಈ‌ ನಿರ್ಧಾರಕ್ಕೆ ದಂಗಾದ ಕಾಂಗ್ರೆಸ್ ಗುತ್ತೇದಾರ್ ನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ. ಇದರಿಂದ ಇನ್ನಷ್ಟು ಕೋಪಗೊಂಡ ಗುತ್ತೇದಾರ್ ಸದ್ಯದಲ್ಲೇ ಕಾಂಗ್ರೆಸ್ ಗೆ ಇನ್ನೊಂದು ಶಾಕ್ ನೀಡಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲೇ ನಾನು ಬಿಜೆಪಿ ಸೇರಲಿದ್ದೇನೆ , ಇದರ ಜೊತೆಗೆ ಕ್ಷೇತ್ರದ ಪ್ರಭಾವಿ ಇನ್ನಷ್ಟು ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಿದ ಮಾಲಿಕಯ್ಯ ಗುತ್ತೇದಾರ್ , ಕಾಂಗ್ರೆಸ್ ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ನಲ್ಲಿ ಹಿರಿಯರಿಗೆ ಕಿಮ್ಮತ್ತಿಲ್ಲ..!

ಕಾಂಗ್ರೆಸ್ ಪಕ್ಷ ಕೇವಲ ಅಧಿಕಾರದ ಆಸೆಗಾಗಿ ಶ್ರಮಿಸುತ್ತದೆ. ಪಕ್ಷಕ್ಕಾಗಿ ದುಡಿದ ನಾಯಕರಿಗೆ ಯಾವುದೇ ಗೌರವ ಸಿಗುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನಿಗೆ ಅಧಿಕಾರ ಕೊಡಿಸಲು ಭಾರೀ ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಯಾರು ಯಾರನ್ನು ಸೋಲಿಸುತ್ತಾರೆ ಎಂಬುದು ಮುಂದಿನ ಚುನಾವಣೆಯಲ್ಲಿ ಮತದಾರರೇ ನಿರ್ಧರಿಸಲಿದ್ದಾರೆ. ಕೌರವರ ವಧೆ ಆಗಲೇಬೇಕಿದೆ. ಶೀಘ್ರದಲ್ಲೇ ಕಾಂಗ್ರೆಸ್ ಗೆ ಇನ್ನೊಂದು ಶಾಕ್ ಕಾದಿದೆ ಎಂದು ಕಿಡಿಕಾರಿದರು.‌

ಅದೇನೇ ಆದರೂ ಈ ಬಾರಿಯ ವಿಧಾನಸಭಾ ಚುನಾವಣೆ‌ ಎಲ್ಲಾ ರೀತಿಯಲ್ಲೂ ರಂಗೇರುತ್ತಿದ್ದು , ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಗೆ ಹೊಡೆತಗಳ ಮೇಲೆ ಹೊಡೆತ ಬೀಳುತ್ತಿದ್ದು ಭಾರೀ ಸಂಕಷ್ಟಕ್ಕೀಡಾಗಿದೆ. ಕಾಂಗ್ರೆಸ್ ನಿಂದ ಪ್ರಭಾವಿ ನಾಯಕರೇ ಹೊರನಡೆಯುತ್ತಿದ್ದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಏನೂ ಮಾಡಲಾಗದ ಸ್ಥಿತಿಗೆ ತಲುಪಿರುವುದು ಸತ್ಯ..!

–ಅರ್ಜುನ್

Editor Postcard Kannada:
Related Post