X

ಬಿಗ್ ಬ್ರೇಕಿಂಗ್!! ಬಂದ್ ಮಾಡುವವರನ್ನು ಒದ್ದು ಒಳಗೆ ಹಾಕಿ! ರಾಜ್ಯ ಸರಕಾರಕ್ಕೆ ಹೈ ಕೋರ್ಟ್ ತರಾಟೆ!

ರಾಜ್ಯ ಸರಕಾರಕ್ಕೆ ಹೈ ಕೋರ್ಟ್ ಅದೆಷ್ಟು ಸಲ ತರಾಟೆಗೆ ತೆಗೆದುಕೊಂಡಿದೆಯೋ ಲೆಕ್ಕವಿಲ್ಲ ಬಿಡಿ! ಪ್ರತೀ ಸಲವೂ ಕೂಡ ತಮಗೆ ಬೇಕಾದ ಹಾಗೆ, ಬಂದಷ್ಟು ಹೊತ್ತಿಗೆ ಮನಸೋ ಇಚ್ಛೆ ಇಡೀ ರಾಜ್ಯಕ್ಕೆ ಬಂದ್ ಕರೆ ನೀಡುವುದಲ್ಲದೇ, ರಾಜಕೀಯ ಸ್ವಾರ್ಥಕ್ಕೋಸ್ಕರ ಸಾರ್ವಜನಿಕರ ಬದುಕಿಗೂ ತೊಂದರೆ ಮಾಡುತ್ತಿರುವ ಈ ಮನಸೋ ಇಚ್ಛೆಯ ಬಂದ್ ಗೆ ಈಗ ಹೈ ಕೋರ್ಟ್ ಕಾದ ಎಣ್ಣೆ ಕಾಸಿ ಬಿಸಿ ಮಾಡಿಟ್ಟಿದೆ!

ನೆಪವೊಂದು ಮಹದಾಯಿ! ರಾಜಕೀಯದ ಹೊಗೆಯಲ್ಲಿ ಬೇಯುತ್ತಿರುವ ಮಹದಾಯಿ!

ಹೌದು! ಹೇಳಲೇ ಬೇಕೆಂದರೆ ರಾಜ್ಯದಲ್ಲಿ ಈಗ ಸದ್ಯಕ್ಕೆ ವಿವಾದದ ವಿಷಯವಾಗುತ್ತಿರುವುದು ಮಹದಾಯಿ ವಿಚಾರ! ಆದರೆ, ಮಹದಾಯಿಯ ಪರವಾಗಿ ಹೋರಾಟಗಾರರು ರಾಜ್ಯ ಸರಕಾರದ ಕೊರಳ ಪಟ್ಟಿ ಹಿಡಿಯುವುದನ್ನು ಬಿಟ್ಟು ಮಹದಾಯಿ ವಿಚಾರವಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದ ಯಡಿಯೂರಪ್ಪನವ ರ ವಿರುದ್ಧ ತಿರುಗಿ ಬಿದ್ದಾಗಲೇ ರಾಜ್ಯದ ಬಹುತೇಕ ಜನರಿಗೆ ಅರ್ಥವಾಗಿ ಹೋಗಿತ್ತು, ಇದು ಮಹದಾಯಿ ವಿಚಾರವಾಗಿ ನಡೆಯುತ್ತಿರುವ ಹೋರಾಟವಲ್ಲ ಬದಲಿಗೆ ಚುನಾವಣಾ ಗಬಿಮಿಕ್ ಕೂಡ ಸೇರಿಕೊಂಡಿದೆಯೆಂದು!!

ಅದರಲ್ಲಿಯೂ, ವಾಟಾಳ್ ನಾಗರಾಜ್ ಯಾವಾಗ ರಂಗ ಪ್ರವೇಶ ಮಾಡಿದರೋ, ಅಮಿತ್ ಷಾ ಚುನಾವಣಾ ಪ್ರಚಾರಕ್ಕೆ ಕರ್ನಾಟಕಕ್ಕೆ ಆಗಮಿಸುವ ದಿನವೇ ವಾಟಾಳ್ ನಾಗರಾಜ್ ಮತ್ತು ಅವರ ತಂಡ ಇಡೀ ರಾಜ್ಯದ ಬಂದ್ ಗೆ ಕರೆ ನೀಡಿದ್ದರು. ಅದಲ್ಲದೇ, ಬಂದ್ ಮಾಡದಿದ್ದರೆ ಬಂದ್ ಮಾಡಿಸುತ್ತೇವೆ ಎಂದು ಗುರುಗುಟ್ಟಿದ್ದ ಕನ್ನಡ ಒಕ್ಕೂಟ ಅಧ್ಯಕ್ಷರಾದ ವಾಟಾಳ್ ನಾಗರಾಜ್ ರ ಬಂದ್ ಗೆ ಮೊದ ಮೊದಲು ಕನ್ನಡ ಸಂಘದವರು ಹಿಂದಿನ ದಿನದ ತನಕವೂ ಡೋಲಾಯಮಾನವಾದ ಸ್ಥಿತಿಯಲ್ಲಿಯೇ ಇದ್ದರೂ ಅಮಿತ್ ಷಾ ಬಂದ ತಕ್ಷಣ ಬಂದ್ ಕೂಡಾ ಜೋರಾಗೇ ನಡೆದಿತ್ತು! ಅಮಿತ್ ಷಾ ಬರುವ ದಿನವೇ ಬೇಕಂತಲೇ ರಾಜಕೀಯ ದುರುದ್ದೇಶವನ್ನಿಟ್ಟುಕೊಂಡು ಬಂದ್ ಗೆ ಕರೆ ನೀಡಿದ್ದ ವಾಟಾಳ್ ನಾಗರಾಜ್ ಮತ್ತು ಅವರ ಕನ್ನಡ ಸಂಘಗಳು ಕೊನೆಗೆ ಮೋದಿಯನ್ನು ಸುತ್ತುವರೆಯುತ್ತೇವೆ, ನ್ಯಾಯ ಕೇಳುತ್ತೇವೆ ಎಂದು ಮೈಕು ಹಿಡಿದು ಭಾಷಣ ಬಿಗಿದಿದ್ದವು!!

ಹಣೆ ಬರಹವನ್ನು ತಪ್ಪಿಸುವರಾರು ಹೇಳಿ?!

ಅಲ್ಲವೇ,? ಯಾವಾಗ ಪೆಬ್ರುವರಿ ೪ ಕ್ಕೆ ಮತ್ತೆ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ವಾಟಾಳ್ ನಾಗರಾಜ್ ಅದೇ ದಿನ ಕರ್ನಾಟಕ ಬಂದ್ ಗೆ ಕರೆ ನೀಡಿದ್ದರು‌. ತಕ್ಕನಾಗಿ ಕನ್ನಡ ಸಂಘಗಳೂ ಕೂಡ ಹೌದೆಂದು ತಲೆಯಾಡಿಸಿದ್ದವಷ್ಟೇ! ಮಹದಾಯಿಯಂತಹ ಪುಣ್ಯ ನದಿಯನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಂಡಿದ್ದು ಮಹಾಪರಾಧವಾದರೂ ಪ್ರಶ್ನೆ ಮಾಡುವವರಾರಿದ್ದಾರೆ ಹೇಳಿ!? ಆದರೆ, ಸಾರ್ವಜನಿಕರ ಬದುಕಿಗೆ ತೊಂದರೆಯಾಗುತ್ತಿರುವುದಲ್ಲದೇ, ಮೂಲಭೂತ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ರಾಜಾಜಿ ನಗರದ ಶ್ರದ್ಧಾ ಪೋಷಕರ ಸಂಘ ಹೈ ಕೋರ್ಟ್ ಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದರ ಪರಿಣಾಮ, ಹೈ ಕೋರ್ಟ್ ಈ ವಿವಾದವನ್ನು ಗಂಭೀರವಾಗಿ ತೆಗೆದುಕೊಂಡಿದೆ! ಕೇವಲ, ಗಂಭೀರವಾಗಿದ್ದೊಂದೇ ಅಲ್ಲ, ಅಷ್ಟಕ್ಕೂ ಬಂದ್ ಗೆ ಯಾವ ರೀತಿ ಕರೆ ನೀಡುತ್ತಿದ್ದೀರಿ?! ರಾಜ್ಯ ಸರಕಾರಕ್ಕೆ ಯಾವುದೇ ರೀತಿಯ ಜವಾಬ್ಧಾರಿಯಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿರುವ ಹೈ ಕೋರ್ಟ್ ಜೊತೆಗೇ, *”ಫೆಬ್ರುವರಿ ನಾಲ್ಕರಂದು ಬಂದ್ ಗ್ ಕರೆ ನೀಡಿರುವುದು ಅಸಂವಿಧಾನಿಕ ಮತ್ತು ಬಂದ್ ಗೆ ಕರೆ ಕೊಟ್ಟವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಒಳಗೆ ಹಾಕಿ ” ಎಂದು ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸಿದೆ!!

ಕಾಂಗ್ರೆಸ್ ಪ್ರಾಯೋಜಿತ ಬಂದ್ ಠುಸ್!!

ವಾಸ್ತವವಾಗಿ, ಮಹದಾಯಿ ಹೋರಾಟಗಾರರನ್ನು ಎತ್ತಿ ಕಟ್ಟಿದ್ದೇ ಕಾಂಗ್ರೆಸ್ ಎನ್ನುವುದು ಕರ್ನಾಟಕಕ್ಕೆ ಗೊತ್ತಿದೆ! ಕೇವಲ ಅದೊಂದೇ ಅಲ್ಲ, ಯಡಿಯೂರಪ್ಪನವರನ್ನು ಗುರಿಯಾಗಿಸಿ ಹೋರಾಟ ಮಾಡಿ ಎಂದು ಟಾರ್ಗೆಟ್ಟಿಟ್ಟದ್ದೂ ಇದೇ ಕಾಂಗ್ರೆಸ್! ಆಗೆಲ್ಲೂ ಇರದ ಕನ್ನಡ ಪರ ಸಂಘಟನೆಗಳು, ಯಾವಾಗ ಅಮಿತ್ ಷಾ ಪರವರ್ತನಾ ಯಾತ್ರೆಗೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದು ಸುದ್ದಿ ಮುಟ್ಟಿತೋ, ಎದ್ದೆವೋ ಬಿದ್ದೆವೋ ಎಂದು ಹಾರಿಕೊಂಡು ಬಂದು ಕುಂತವು! ಮಹದಾಯಿ ನಮ್ಮ ಹಕ್ಕು ಎಂದವು! ಅಲ್ಲಿಯ ತನಕವಿಲ್ಲದ ವಿವಾದವೊಂದು ಹೊಸ ಸ್ವರೂಪ ಪಡೆದುಕೊಂಡಿತ್ತು!!

ಅಲ್ಲಿಯ ತನಕ ವಾಟಾಳ್ ನಾಗರಾಜ್ ಇರಲೇ ಇಲ್ಲ ನೋಡಿ!

ಅದೆಲ್ಲಿದ್ದರೋ, ಬಂದವರೇ ಒಮ್ಮೆ ಆವಾಜ್ ಹಾಕಿದರು! ಏ!! ನಾನು ಬಂದ್ ಗೆ ಕರೆ ನೀಡುತ್ತಿದ್ದೇನೆ! ನಾವು ಮಹದಾಯಿಯನ್ನು ಉಳಿಸಿಕೊಳ್ಳುತ್ತೇವೆ! ಯಾರ ಕೊರಳ ಪಟ್ಟಿಯನ್ನಾದರೂ ಹಿಡಿಯುತ್ತೇವೆ ಎಂದು ಅಬ್ಬರಿಸಿ ಇದ್ದ ಬದ್ದ ಕನ್ನಡ ಸಂಘಟನೆಗಳನ್ನೆಲ್ಲ ದರದರ ಎಳೆದು ಕೊಂಡು ಬಂದು ಮಹದಾಯಿಗೋಸ್ಕರ ಹೋರಾಡುತ್ತೀರೋ ಬಿಡುತ್ತೀರೋ, ಆದರೆ ಅಮಿತ್ ಷಾ ವಿರುದ್ಧ ಕೂಗಿ ಎಂದು ಪಿಸಿ ಪಿಸಿಗುಟ್ಟಿದ್ದವು.. ಪಾಪ! ಬಿಸಿಲಲ್ಲಿ ಕುಂತು ಕೈಯ್ಯಲ್ಲಿ ಬಿಸ್ಲರಿ ಬಾಟಲಿ ಹಿಡಿದು ಮಹದಾಯಿಗೋಸ್ಕರ ನಮ್ಮ ಹೋರಾಟ ಎಂದವು! ಅಲ್ಲಿ ಅಮಿತ್ ಷಾ ಮಾತ್ರ ತಣ್ಣಗೆ ತಾವು ಬಂದ ಕೆಲಸ ಮುಗಿಸಿ ಹೊರಟರು! ಅಷ್ಟೇ! ಅಮಿತ್ ಷಾ ರ ಭಾಷಣ ಮುಗಿಯುವ ತನಕ ಪ್ರತಿಭಟನೆ , ಬಂದ್ ಎಲ್ಲವೂ ಜೋರಾಗೇ ನಡೆದವು! ಎಲ್ಲಿ ಅಮಿತ್ ಷಾ ವಾಪಾಸ್ ಹೊರಟರೋ, ಬಂದ್ ಗ್ಯಾಂಗಿನವರೂ ಮನೆಗೆ ಹೋಗಿ ಸಾಮಾಜಿಕ ಜಾಲತಾಣದಲ್ಲಿ ರಪರಪ ಗೀಚಿದವು! “ಅಮಿತ್ ಷಾ ಮಹದಾಯಿಯ ಬಗ್ಗೆ
ಮಾತನಾಡಲೇ ಇಲ್ಲ” ಎಂದು!!

ಅಮಿತ್ ಷಾ ಮಹದಾಯಿ ವಿರುದ್ಧ ಸೊಲ್ಲೆತ್ತಲಿಲ್ಲ! ನಾವು ಮೋದಿಯನ್ನು ಸುತ್ತುವರೆಯುತ್ತೇವೆ! ಮುತ್ತಿಗೆ ಹಾಕುತ್ತೇವೆ! ಮಹದಾಯಿ ಪರ ವಹಿಸಿ ನ್ಯಾಯಕೊಡಿ ಎಂದು ಕೇಳುತ್ತೇವೆ ಎಂದಿದ್ದೆಲ್ಲ ಹೌದಾದರೂ, ಬಂದ್ ನಡೆಸಿಯೇ ಮೋದಿಯನ್ನು ಸುತ್ತುವರೆಯುತ್ತೇವೆ ಎಂಬ ರಾಜಕೀಯ ದರುದ್ದೇಶದ ಸದ್ದಿಗೆ ಸ್ವತಃ ಹೈ ಕೋರ್ಟ್ ಛೀಮಾರಿ ಹಾಕಿದೆ!

ಹೈ ಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್ ಜಿ ರಮೇಶ್ ಪೀಠದಿಂದ ಫೆಬ್ರುವರಿ ನಾಲ್ಕರಂದು ಬಂದ್ ನಡೆಸುವಂತಿಲ್ಲ ಎಂದಚು ಕಟ್ಟಜ್ಞೆ ಹೊರಡಿಸಿದೆ. ಬಂದ್ ಎಂದರೆ ಎಲ್ಲವನ್ನೂ ಮುಚ್ಚುವುದು. ಆದರೆ, ಬಂದ್ ಎಂದು ಹೋರಾಟ ಮಾಡಿ ಮೂಲಭೂತ ಹಕ್ಕಿಗೆ ತೊಂದರೆ ಮಾಡುವುದಲ್ಲ ಎಂದು ರಾಜ್ಯ ಸರಕಾರಕ್ಕೆ ತರಾಟೆಗೆ ತೆಗೆದುಕೊಂಡಿದೆ. ಜೊತೆಗೆ, ಬಂದ್ ಎಂದವರನ್ನು ಒದ್ದು ಒಳಗಾಕಿ ಎಂಬ ಪರೋಕ್ಷವಾದ ಎಚ್ಚರಿಕೆಯನ್ನೂ
ನೀಡಿರುವ ಹೈ ಕೋರ್ಟ್ ನಿಂದ ವಾಟಾಳ್ ನಾಗರಾಜ್ ಗೀಗ ತೀವ್ರ ಮುಖಭಂಗ!

ಇಷ್ಟು ದಿನ, ಮಹದಾಯಿ ಹೋರಾಟಗಾರರು ರಾಜ್ಯ ಕಾಂಗ್ರೆಸ್ ನ ವಿರೋಧ ಹೋರಾಟ ಮಾಡುವುದು ಬಿಟ್ಟು, ಸಿದ್ಧರಾಮಯ್ಯನ ಆದೇಶದಂತೆ ಬಿಜೆಪಿ ವಿರುದ್ಧ, ಅಮಿತ್ ಷಾ ವಿರುದ್ಧ, ಮೋದಿ ವಿರುದ್ಧ ಯುದ್ಧ ಘೋಷಿಸಿ ಎಂಬ ಕುತಂತ್ರಕ್ಕೆ ತಕ್ಕನಾಗಿಯೇ ನಡೆದುಕೊಂಡಿದ್ದ ಹೋರಾಟಗಾರರೀಗ ಸ್ವತಃ ಹೈ ಕೋರ್ಟ್ ಎಚ್ಚರಿಕೆ ನೀಡಿದೆ! ಬಂದ್ ನಡೆಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಪೀಠದಿಂದ ರಾಜ್ಯದ ಜನತೆಗೆ ಸ್ವಲ್ಪವಾದರೂ ನಿರಾಳವಾಗಿರುವುದು ಸುಳ್ಲಲ್ಲ! ಇನ್ನಾದರೂ, ವಾಟಾಳ್ ನಾಗರಾಜ್ ಮೂರ್ಖತನದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ ಇರುವ ಅಲ್ಪ ಸ್ವಲ್ಪ ಮರ್ಯಾದೆಯಾದರೂ ಉಳಿಯಬಹುದೇನೋ!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post