X
    Categories: ಅಂಕಣ

ಭಾರತದ ವಿರುದ್ಧ ಪ್ರಬಲ ರಾಷ್ಟ್ರಗಳು ಯುದ್ಧ ಸಾರಿದ್ದೇ ಆದರೆ ಏನಾಗಲಿದೆ ಗೊತ್ತಾ?! ಅಮೇರಿಕಾದ ಸೈನಿಕನೊಬ್ಬ ಕೊಟ್ಟ ಉತ್ತರವೊಂದು ಭಾರತೀಯರನ್ನು ದಂಗು ಬಡಿಸುತ್ತದೆ!!

ಸತ್ಯ ಹೇಳಬೇಕಾ?! ಇವತ್ತು ಭಾರತ ಬಲಿಷ್ಟವಾಗಿ ನಿಂತಿದೆ! ಯಾವುದೇ ರಾಷ್ಟ್ರವಾದರೂ ಕಾಲಿಕ್ಕಲು ಒಮ್ಮೆ ಯೋಚಿಸುವಷ್ಟು!! ಅದರಲ್ಲಿಯೂ, ಮೋದಿ ಸರಕಾರ ಬಂದ ಮೇಲೆ ಅಷ್ಟು ಸುಲಭಕ್ಕೆ ಯಾವ ರಾಷ್ಟ್ರವೂ ಭಾರತದವ ವಿರುದ್ಧ ಉಸಿರೆತ್ತಲು ಸಾಧ್ಯವಿಲ್ಲದಷ್ಟು ಮಟ್ಟಕ್ಕೆ ಭಾರತ ಬೆಳೆದಿದೆ! ಎಂತೆಂತಹ ಸೂಪರ್ ಪವರ್ ರಾಷ್ಟ್ರಗಳಾದರೂ ನೂರಾರು ಬಾರಿ ಯೋಚಿಸುತ್ತವೆ! ಈ ತರಹದ ಸ್ಥಿತಿ ಇರಬೇಕಾದರೆ, ಅಕಸ್ಮಾತ್ ಯಾವುದಾದರೂ ರಾಷ್ಟ್ರ ಭಾರತದ ಮೇಲೆ ಯುದ್ಧ ಸಾರಿದರೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಯಾವ ರಾಷ್ಟ್ರಕ್ಕೆ ಬೆಂಬಲವಾಗಿ ನಿಲ್ಲುತ್ತದೆ?!

ಅಷ್ಟಕ್ಕೂ, ಸ್ವತಃ ಅಮೇರಿಕಾ ಭಾರತದ ವಿರುದ್ಧ ಯುದ್ಧ ಸಾರಲಿದೆಯಾ?!

ಹೇಳಿಬಿಡುತ್ತೇನೆ ಕೇಳಿ! ಅಮೇರಿಕಾ ಯಾವುದೇ ಕಾರಣಕ್ಕೂ ಭಾರತದ ವಿರುದ್ಧ ಯುದ್ಧ ಸಾರಲು ಧೈರ್ಯ ಕೂಡಾ ಮಾಡುವುದಿಲ್ಲ. ಇಡೀ ಜಗತ್ತಿಗೆ ಗೊತ್ತಿದೆ.. ಪ್ರಸಕ್ತ ಅಮೇರಿಕಾದ ಮತ್ತು ಭಾರತದ ರಾಜತಾಂತ್ರಿಕ ಸ್ನೇಹ ಯಾವ ಮಟ್ಟಕ್ಕೆ ಭದ್ರವಾಗಿ ನಿಂತಿದೆ ಎಂದು..! ಮುಂಬರುವ ವರ್ಷಗಳಲ್ಲಿ ಐತಿಹಾಸಿಕವಾದ ನಿರ್ಧಾರಗಳನ್ನೂ ಈ ಎರಡು ರಾಷ್ಟ್ರಗಳು ಒಂದಾಗಿ ತೆಗೆದುಕೊಂಡರೂ ಅಚ್ಚರಿಯಿಲ್ಲ! ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅಮೇರಿಕಾಕ್ಕೆ ಭಾರತದ ವಿರುದ್ಧ ಯುದ್ಧ ಸಾರಲು ಯಾವುದೇ ಕಾರಣಗಳೇ ಇಲ್ಲ! ಆದ್ದರಿಂದ, ಅಕಸ್ಮಾತ್ ಭಾರತದ ವಿರುದ್ಧ ಯಾವುದಾದರೂ ರಾಷ್ಟ್ರ ಯುದ್ಧಕ್ಕೆ ನಿಂತರೆ ಅವಶ್ಯವಾಗಿ ಅಮೇರಿಕಾ ಭಾರತದ ಪರ ನಿಲ್ಲುತ್ತದೆ! ಆದರೆ, ಅಷ್ಟಕ್ಕೂ ಭಾರತದ ಮೇಲೆ ಯುದ್ಧ ಮಾಡಲು ಸಾಮರ್ಥ್ಯವಿರುವಂತಹ ರಾಷ್ಟ್ರಗಳ ಬಗ್ಗೆ ಅನಾಲೈಸ್ ಮಾಡಿಬಿಡೋಣ!

ಮೊದಲನೆಯದಾಗಿ ರಶ್ಯಾ! ಅತ್ಯಂತ ಬಲಿಷ್ಟ ರಾಷ್ಟ್ರ! ಆದರೂ, ಭಾರತದ ವಿರುದ್ಧ ಯುದ್ಧ ಮಾಡಲಾರದು! ದಶಕಗಳಿಂದಲೂ ಸಹ ಭಾರತದ ಪರವಾಗಿ ವಕಾಲತ್ತು ವಹಿಸಿರುವ ರಶ್ಯಾ, ಭಾರತವನ್ನು ಯಾವುದೇ ಕಾರಣಕ್ಕೂ ಎದುರು ಹಾಕಿಕೊಳ್ಳಲಾರದು! ಅದಲ್ಲದೇ, ವ್ಲಾಡಿಮಿರ್ ಪುಟಿನ್ ಗೆ ಭಾರತದ ಬಗ್ಗೆ ವಿಶೇಷವಾದ ಒಲವಿದೆ.

ರಶ್ಯಾವನ್ನು ಹೊರತು ಪಡಿಸಿ, ನೋಡಿದರೆ ಭಾರತದ ವಿರುದ್ಧ ಯುದ್ಧ ಸಾರಲು ಸಶಕ್ತವಾಗಿರುವ ರಾಷ್ಟ್ರ ಚೀನಾ! ಚೀನಾ ಎಂದರೆ ಬೇರೆ ವಿವರಣೆಯೇ ಬೇಡ! ಅಕ್ರಮವಾಗಿ ನೆರೆ ರಾಷ್ಟ್ರಗಳ ಭೂಮಿಯನ್ನು ಆಕ್ರಮಿಸಿ ಬೇಲಿ ಹಾಕಿ, ಕೊನೆಗೆ ಇದು ತನ್ನದೇ ಎಂದು ಹೇಳಿಕೊಳ್ಳುವ ರಾಷ್ಟ್ರವೆಂದರೆ ಅದು ಚೀನಾ ಮಾತ್ರ! ಆದರೆ, ಭಾರತ ಚೀನಾದ ಈ ದುರಭ್ಯಾಸಕ್ಕೆ ತಕ್ಕದಾದ ಪಾಠ ಕಲಿಸಿತು! ದೋಕ್ಲಾಂ ನಿಂದ ಚೀನಾದ ಸೈನಿಕರನ್ನು ಭಾರತ ಹೇಗೆ ಒದ್ದೋಡಿಸಿತು ಎಂದು ಚೀನಾ ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ! ದೋಕ್ಲಾಂ ಸ್ಟಾಂಡ್ ಆಫ್ ಸತತವಾಗಿ ಎರಡು ತಿಂಗಳಕಾಲ ನಡೆದರೂ ಭಾರತದ ಸೈನಿಕರನ್ನು ಒಂದಿಂಚೂ ಅಗಲಿಸಲು ಸಾಧ್ಯವಾಗಲಿಲ್ಲ ಚೀನಾಕ್ಕೆ‌! ಅದಲ್ಲದೇ, ಭಾರತದ ರಾಜತಾಂತ್ರಿಕ ನಡೆಗೆ ಅನಿವಾರ್ಯವಾಗಿ ಯಾವುದೇ ಯುದ್ಧವಿಲ್ಲದೆಯೇ ಭಾರತ ಚೀನಾವನ್ನು ಯುಕ್ತಿಯಿಂದಲೇ ಸೋಲಿಸಿತ್ತು. ಅದೆಷ್ಟೇ ಸಲ ಚೀನಾ ದೋಕ್ಲಾಂ ಗಡಿಗೆ ಬಂದಾಗಲೂ ಭಾರತದ ಸೈನಿಕರ ಬಂದೂಕು ಸದ್ದು ಮಾಡಲು ಕಾದು ನಿಂತಿದ್ದನ್ನು ನೋಡಿ ಗಡಿ ಭಾಗದಿಂದ ಗಂಟುಮೂಟೆ ಕಟ್ಟಿ ತಿರುಗಿ ನಡೆದಿತ್ತು ಚೀನಾ!

ಹಾಗಿದ್ದಾಗಿಯೂ, ಅಕಸ್ಮಾತ್ ಚೀನಾ ಭಾರತದ ವಿರುದ್ಧ ಯುದ್ದ ಸಾರಿದ್ದರೆ, ಅಮೇರಿಕಾ ತನ್ನ ಸೈನಿಕರನ್ನು ಭಾರತಕ್ಕೆ ಕಳುಹಿಸಿ ಪರ ವಹಿಸುತ್ತಿತ್ತು! ಆದರೆ, ಈಗ ಅಮೇರಿಕಾ ಅದನ್ನು ಮಾಡುವುದಿಲ್ಲ. ಯಾಕೆ ಗೊತ್ತಾ?! ಚೀನಾದ ಬೆನ್ನುಮೂಳೆ ಮುರಿಯಲು ಕೇವಲ ಭಾರತದ ಸೈನಿಕರ ಬಂದೂಕಿನ ಸದ್ದೇ ಸಾಕು! ಬೇರೆ ಯಾವ ಸಹಾಯವೂ ಬೇಕಿಲ್ಲ!

ಇತಿಹಾಸದಲ್ಲಿಯೇ, ನ್ಯಾಯಾಧೀಶರ ಚುನಾವಣೆಯಲ್ಲಿ ಬ್ರಿಟನ್ ಮೊದಲ ಬಾರಿಗೆ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಸೋಲಿನ ರುಚಿಯನ್ನುಭವಿಸಿತು! ಭಾರತದ ನ್ಯಾಯಾಧೀಶರಾದ ಶ್ರೀ ಭಂಢಾರಿಗೆ ಬೆಂಬಲ ಹೆಚ್ಚಾಗುತ್ತ ಹೋದಂತೆ, ಬ್ರಿಟನ್ನಿಗೆದ ತನ್ನ ನಾಮಿನೇಷನ್ನುಗಳನ್ನು ಹಿಂಪಡೆಯದೇ ಇರಲು ಬೇರೆ ಅವಕಾಶವೇ ಇರಲಿಲ್ಲ. ಭಾರತದ ವಿರುದ್ದ ಶಸ್ತ್ರಗಳ ಯುದ್ಧವನ್ನು ಬಿಡಿ, ರಾಜತಾಂತ್ರಿಕ ಯುದ್ಧದಲ್ಲಿಯೇ ಬ್ರಿಟನ್ ಸೋತು ಸುಣ್ಣವಾಯಿತು!

ಇನ್ನು ಫ್ರಾನ್ಸ್?! ಈ ರಾಷ್ಟ್ರಕ್ಕೂ ಭಾರತದ ವಿರುದ್ಧ ಯುದ್ಧ ಸಾರಲು ಯಾವ ಕಾರಣವೂ ಇಲ್ಲ.. ಮತ್ತು, ಬೇರೆ ರಾಷ್ಟ್ರದ ಕುಮ್ಮಕ್ಕಿನಿಂದಲೂ ಈ ರಾಷ್ಟ್ರ ಭಾರತದ ವಿರುದ್ದ ನಿಲ್ಲುವುದು ಅಸಾಧ್ಯದ ಮಾತು.‌!

ಜಪಾನ್ ಹಾಗಾದರೆ ಭಾರತದ ಮೇಲೆ ದಾಳಿ ಮಾಡುತ್ತದೆಯಾ?! ಇಲ್ಲವೇ ಇಲ್ಲ! ಬೇಕಾದರೆ, ಭಾರತದ ಜೊತೆ ನಿಂತು ಭಾರತದ ಶತ್ರು ರಾಷ್ಟ್ರಗಳನ್ನು ನೆಲಸಮ ಮಾಡುತ್ತದೆಯೇ ವಿನಃ ಉಹೂಂ! ಭಾರತದ ವಿರುದ್ಧ ಜಪಾನ್ ತೊಡೆ ತಟ್ಟಲು ಸಾಧ್ಯವೇ ಇಲ್ಲ!

ಇನ್ನು ಜರ್ಮನಿ, ಭೂತಾನ್, ಬಾಂಗ್ಲಾ, ಮಯನ್ಮಾರ್, . ಎಂಬ ರಾಷ್ಟ್ರಗಳೆಲ್ಲವೂ ಭಾರತದ ವಿರುದ್ಧ ನಿಲ್ಲುವ ಸಾಹಸಕ್ಕೆ ಸ್ವತಃ ಅಮೇರಿಕಾವೇ ಸಹಾಯಕ್ಕೆ ನಿಂತರೂ ಯುದ್ಧ ಮಾಡುವುದಿಲ್ಲ. ಯಾಕೆಂದರೆ, ಭಾರತವನ್ನು ತಮ್ಮ ತವರೆಂದೇ ಭಾವಿಸುವ ರಾಷ್ಟ್ರಗಳವು!

ಅಕಸ್ಮಾತ್, ಪಾಕಿಸ್ಥಾನ ಯುದ್ಧ ಘೋಷಿಸಿದರೆ?!

ಭಾರತದ ಮೇಲೆ ಯುದ್ಧ ಸಾರಲು ಭಂಢ ಧೈರ್ಯ ಮಾಡುವ ಏಕೈಕ ರಾಷ್ಟ್ರವೆಂದರೆ ಅದು ಪಾಕಿಸ್ಥಾನ ಮಾತ್ರ! ಒಂದನ್ನು ನಿಮಗೆ ಹೇಳುತ್ತೇನೆ! ಪಾಕಿಸ್ಥಾನ ಯುದ್ಧ ಘೋಷಿಸುವುದೂ ಒಂದೇ, ಸ್ವತಃ ಆತ್ಮಹತ್ಯೆ ಮಾಡಿಕೊಳ್ಳುವುದೂ ಒಂದೇ! ಯಾಕೆಂದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗಷ್ಟೇ ಪಾಕಿಸ್ಥಾನಕ್ಕೆ ನೀಡುತ್ತಿದ್ದ ಅನುದಾನವನ್ನು ನಿಲ್ಲಿಸಿದ್ದಾರೆ! ಆದ್ದರಿಂದ, ಪಾಕಿಸ್ಥಾನಕ್ಕೆ ಈಗ ಭಯೋತ್ಪಾದಕರಿಗೆ ಕೊಡಲೂ ಹಣವಿಲ್ಲದಿರುವ ಸ್ಥಿತಿಯಲ್ಲಿ ಭಾರತದ ವಿರುದ್ಧ ಯುದ್ಧಕ್ಕಿಳಿಯುವುದು ಸುಲಭದ ಮಾತಲ್ಲ! ಅಕಸ್ಮಾತ್, ಭಂಢ ಧೈರ್ಯ ತೋರಿ ಯುದ್ಧ ಸಾರಿದರೂ, ಭಾರತದ ಗಡಿ ದಾಟುವುದರೊಳಗೆ ಅಮೇರಿಕಾ ಪಾಕಿಸ್ಥಾನದ ಒಂದಿಂಚೂ ಬಿಡದೇ ನಾಶ ಮಾಡಿರುತ್ತದೆ. . ಸಾಧ್ಯವಾದರೆ, ಅಮೇರಿಕಾ ಮಧ್ಯ ಪ್ರವೇಶಿಸಿ ಯುದ್ಧವಾಗದಂತೆ ತಡೆಯುತ್ತದೆ!

ನಾವು ಮಧ್ಯ ಪ್ರವೇಶಿಸುವುದು ಭಾರತದ ವಿರುದ್ಧ ನಿಲ್ಲುವುದಕ್ಕಾಗಲ್ಲ, ಅಥವಾ ಪಾಕಿಸ್ಥಾನದ ವಿರುದ್ಧವೂ ಅಲ್ಲ! ನಾವು ಪಾಕಿಸ್ತಾನಕ್ಕೆ ಬದುಕಲು ಅವಕಾಶವಾಗುವಂತೆ ಮಾಡಬಲ್ಲೆವಷ್ಟೇ! ಆದರದು, ಭಾರತ ಒಪ್ಪಿದರೆ ಮಾತ್ರ!!

In the event that the USA got word of Pakistan contemplating another war with India, we would probably “help” India in that we’d do whatever was necessary to prevent such a conflict, including arranging a regime change in Pakistan. But not because India needs protecting, but because in that case, we’d be saving Pakistan from itself.

ಮೂಲ : ಜಾನ್ ಕೇಟ್

– ನಿಹಾರಿಕಾ ಶರ್ಮಾ

Editor Postcard Kannada:
Related Post