X

ಗಡಿಯಲ್ಲಿ ತಂಟೆಗೆ ಬಂದರೆ ಅಲ್ಲೇ ಡ್ರಾ ಅಲ್ಲೇ ಬಹುಮಾನ!

ಭಾರತ -ಚೀನಾ ಗಡಿಯಲ್ಲಿ ಚೀನಾವು ವಾಸ್ತವಿಕ ನಿಯಂತ್ರಣ ರೇಖೆಯನ್ನು ಬದಲಾಯಿಸಲು ಏಕಪಕ್ಷೀಯವಾಗಿ ಪ್ರಯತ್ನ ನಡೆಸುತ್ತಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜಯಶಂಕರ್ ತಿಳಿಸಿದ್ದಾರೆ.

ಏಕಪಕ್ಷೀಯ ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನು ಬದಲಾಯಿಸದಿರಲು ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಹಾಗಾಗಿ ಏಕಪಕ್ಷೀಯವಾಗಿ ಹೀಗೆ ಗಡಿ ನಿಯಂತ್ರಣ ರೇಖೆಯನ್ನು ಬದಲಾಯಿಸುವಾಗ ಸಮಸ್ಯೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆಗಳಲ್ಲಿ ನಾವು ಸೇನೆಯನ್ನು ನಿಯೋಜನೆ ಮಾಡುವುದಾಗಿ ಚೀನಾದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಚೀನೀಯರು ಈ ಒಪ್ಪಂದವನ್ನು ಮೀರುತ್ತಿದ್ದಾರೆ. ಈ ಕಾರಣದಿಂದಲೇ ಅಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ‌ವಾಗುತ್ತಿರುವುದು ಎಂದು ಅವರು ಹೇಳಿದ್ದಾರೆ. ಗಡಿ ಭಾಗದಲ್ಲಿ ಯಥಾಸ್ಥಿತಿ ಕಾಪಾಡಲು ಚೀನಾ ಸಹಕಾರ ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಭಾರತದ ಜೊತೆಗೆ ಕಾಲು ಕರೆದುಕೊಂಡು ಚೀನಾವು ಬಾಲ ಬಿಚ್ಚಲು ಯತ್ನಿಸುತ್ತಿದ್ದು, ಭಾರತೀಯ ಸೇನೆ ಸಹ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಲೇ ಬರುತ್ತಿದೆ.

Post Card Balaga:
Related Post