X

ಬಿಜೆಪಿ ನಡೆಗೆ ಸೈನ್ಯ, ಪೊಲೀಸ್ ಫುಲ್ ಖುಷ್! ಗಡಿಯಲ್ಲಿ ದೀಪಾವಳಿ ಆಚರಣೆಗೆ ಸಿದ್ದರಾದ ಭಾರತೀಯ ಸೈನಿಕರು!

ದೇಶದ ಸುರಕ್ಷತೆ ಹಾಗೂ ಭದ್ರತೆಯ ಹಿತಧೃಷ್ಟಿಯಿಂದ ನಾವು ಪಿಡಿಪಿ ಪಕ್ಷಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆಯುತ್ತಿದ್ದೇವೆ. ನಮಗೆ ದೇಶವೇ ಮುಖ್ಯ” ಎಂದು ಭಾರತೀಯ ಜನತಾ ಪಕ್ಷ ಯಾವಾಗ ತಾವು ಪಿಡಿಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸ್ ಪಡೆಯಿತೋ ಆ ಸಮಯದಿಂದ ಭಾರತೀಯ ಸೈನಿಕರಿಗೆ ಹಾಗೂ ಜಮ್ಮು ಕಾಶ್ಮೀರದ ಪೊಲೀಸರಿಗೆ ದೀಪಾವಳಿ ಹಬ್ಬ ಆಚರಿಸಿದಂತಾಗಿದೆ. ಈವರೆಗೆ ದೊಣ್ಣೆ ನಾಯಕ ಅಪ್ಪಣೆಯನ್ನು ಕೇಳುತ್ತಾ ಶತ್ರು ದೇಶದ ವಿರುದ್ಧ ಗುಂಡು ಹಾಯಿಸುತ್ತಿದ್ದ ಭಾರತೀಯ ಸೈನಿಕರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 

ಕೆಲ ದಿನಗಳ ಹಿಂದೆ ತಾನೇ ಭಾರತೀಯ ವೀರ ಯೋಧ ಔರಂಗಜೇಬ್ ಎಂಬಾತ, ರಂಜಾನ್ ಹಬ್ಬಕ್ಕಾಗಿ ಮನೆಗೆ ತೆರಳುವ ಸಂದರ್ಭದಲ್ಲಿ ಆತನನ್ನು ಅಪಹರಿಸಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಆದರೆ ಇಂತಹ ಅದೆಷ್ಟೋ ಉಗ್ರ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕಷ್ಟವಾಗುತ್ತಿತ್ತು. ಈ ಕಾರಣಕ್ಕಾಗಿಯೇ ತಾನು ಪಾಲು ಹೊಂದಿದ್ದ ಜಮ್ಮು ಕಾಶ್ಮೀರದ ಮೈತ್ರಿ ಸರ್ಕಾರದಿಂದ ಭಾರತೀಯ ಜನತಾ ಪಕ್ಷ ಹೊರ ಬಂದಿದೆ.

 

ಭಾರತೀಯ ಜನತಾ ಪಕ್ಷ ಇಂತಹಾ ನಿರ್ಧಾರ ಕೈಗೊಂಡ ಕೆಲವೇ ಕ್ಷಣಗಳಲ್ಲಿ ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯವನ್ನು ಮುಕ್ತವಾಗಿರಿಸಿದ್ದರು. ಇದು ಜಮ್ಮು ಕಾಶ್ಮೀರದಲ್ಲಿರುವ ಭಾರತೀಯ ಸೈನಿಕರಿಗೆ ಮಾತ್ರವಲ್ಲದೆ ಇಡೀ ದೇಶದ ಜನತೆಗೇ ಹಬ್ಬದ ವಾತಾವರಣವನ್ನೇ ಉಣಿಸಿತ್ತು. ರಾಷ್ಟ್ರಪತಿ ಆಳ್ವಿಕೆ ಆರಂಭವಾಗಿ ರಾಜ್ಯಪಾಲರಿಗೆ ಅಧಿಕೃತವಾಗಿ ಅಧಿಕಾರ ಬಂದ ಕೂಡಲೇ ಕಣಿವೆ ರಾಜ್ಯದಲ್ಲಿ ಗುಂಡಿನ ಮೊರೆತ ಆರಂಭವಾಗಿತ್ತು. ಉಗ್ರರು ಅಡಗಿದ್ದ ಮನೆಯೊಂದನ್ನೇ ಉಡೀಸ್ ಮಾಡಿದ್ದರು. 

ಈ ಮಧ್ಯೆ ಕಣಿವೆ ರಾಜ್ಯದ ಸೈನಿಕರು ಹಾಗೂ ಪೊಲೀಸ್ ಅಧಿಕಾರಿಗಳು ಭಾರತೀಯ ಜನತಾ ಪಕ್ಷದ ಈ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಈ ಬಗ್ಗೆ ಸೈನ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಬಹಿರಂಗ ಹೇಳಿಕೆಗಳನ್ನೇ ನೀಡಿದ್ದಾರೆ. ಈವರೆಗೆ ಇದ್ದಂತಹ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ನೇತೃತ್ವದ ಜಮ್ಮು ಕಾಶ್ಮೀರದ ಸರ್ಕಾರದಲ್ಲಿ ಈ ಇಲಾಖೆಗೆ ತಮ್ಮ ಕೆಲಸ ಮಾಡಲು ಎಷ್ಟು ಕಷ್ಟವಾಗುತ್ತಿತ್ತು ಎಂಬುವುದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಬಹಿರಂಗ ಹೇಳಿಕೆಯನ್ನು ನೀಡಿದ ಜಮ್ಮು ಡಿಜಿಪಿ ಎಸ್ಪಿ ವೈಡ್ ಅವರು ಈಗ ನಮಗೆ ಸಂಪೂರ್ಣ ಸ್ವಾತಂತ್ರಯ ಸಿಕ್ಕಿದೆ ಎಂದು ಹೇಳಿದ್ದಾರೆ. “ನಮ್ಮ ಕಾರ್ಯಾಚರಣೆಗಳು ಮುಂದುವರೆಯುತ್ತದೆ. ರಂಜಾನ್ ಅವಧಿಯಲ್ಲಿ ಕಾರ್ಯಾಚರಣೆಗಳನ್ನು ನಿಷೇಧಿಸಲಾಗಿತ್ತು.ಇನ್ನು ಮುಂದೆ ಕಾರ್ಯಾಚರಣೆಗಳು ಮುಂದಿನ ಹಾಗೆಯೇ ಮುಂದುವರೆಯುತ್ತದೆ. ಇನ್ನು ಮುಂದೆಯೂ ಉಗ್ರರ ಭೇಟೆಯನ್ನು ಮುಂದುವರೆಸುತ್ತೇವೆ. ಸರ್ಕಾರ ಪತನದ ಕಾರಣ ನಮ್ಮ ಕಾರ್ಯಾಚರಣೆಗೆ ಹಿಂದಿಗಿಂತಲೂ ಹೆಚ್ಚಿನ ವೇಗ ಸಿಗಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ” ಎಂದು ಹೇಳಿದ್ದಾರೆ.

ಇನ್ನು ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಸಹಿತ ಅನೇಕ ಸೇನಾ ನಾಯಕರು ಕೂಡಾ ಭಾರತೀಯ ಜನತಾ ಪಕ್ಷದ ಪರವಾಗಿ ಮಾತನಾಡಿದ್ದು ಇದೊಂದು ಉತ್ತಮ ನಿರ್ಧಾರ ಎಂದು ಬಣ್ಣಿಸಿದ್ದಾರೆ.

ಸರ್ಕಾರದಿಂದ ಅಧಿಕಾರ ಕಳೆದುಕೊಂಡು ಕೆಳಗಿಳಿದಾಗ ಪಕ್ಷದ ನಾಯಕರಲ್ಲಿ ಅಥವಾ ಕಾರ್ಯಕರ್ತರಲ್ಲಿ ಬೇಸರ ಉಂಟಾಗುವುದು ಸಮಾನ್ಯ. ಆದರೆ ಬಿಜೆಪಿಯ ಈ ನಿರ್ಧಾರದಿಂದ ಕಾರ್ಯಕರ್ತರು ಹೆಚ್ಚಿನ ಖುಷಿಯನ್ನು ಹೊಂದಿದ್ದಾರೆ. ಇದು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಸಂದೇಶ ಎಂದು ಬಿಜೆಪಿ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ಒಟ್ಟಾರೆ ಭಾರತೀಯ ಜನತಾ ಪಕ್ಷದ ಈ ನಿರ್ಧಾರದಿಂದ ಗಡಿಯಲ್ಲಿ ಗುಂಡಿನ ಸುರಿಮಳೆಯೇ ಆರಂಭವಾಗಲಿದೆ. ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಯುವುದರಲ್ಲಿ ಅನುಮಾನವಿಲ್ಲ ಎಂಬಂತಾಗಿದೆ. ಜಮ್ಮು ಕಾಶ್ಮೀರದ ಈಗಿನ ಸ್ಥಿತಿ ಕಣಿವೆ ರಾಜ್ಯದ ಭದ್ರತಾ ಅಧಿಕಾರಿಗಳಿಗೆ ಹಾಗೂ ಸೈನಿಕರಿಗೆ ದೀಪಾವಳಿಯ ಸಂಭ್ರಮವನ್ನು ಉಣಿಸಿದ್ದಂತು ಸುಳ್ಳಲ್ಲ.

Source: http://vishwadhvani.com/news/5489

-ಸುನಿಲ್ ಪಣಪಿಲ

Editor Postcard Kannada:
Related Post