X

ಗ್ಲೋಬಲ್ ಪೀಸ್ ಇಂಡೆಕ್ಸ್ ನಲ್ಲಿ 142 ನೇ ಸ್ಥಾನದಿಂದ 136 ನೇ ಸ್ಥಾನಕ್ಕೆ ಜಿಗಿದ ಭಾರತ!! ಮೋದಿ ಸರಕಾರದ ಕಠಿಣ ಕಾನೂನು ಕ್ರಮದಿಂದಾಗಿ ಭಾರತ ಶಾಂತಿ ಸೂಚ್ಯಂಕದಲ್ಲಿ ಆರು ಸ್ಥಾನ ಮೇಲೆ ಜಿಗಿದಿದೆ ಎಂದ ವರದಿ!!

ಮೋದಿ ಸರಕಾರ ಬಂದ ಮೇಲೆ ಭಾರತದಲ್ಲಿ ಏಕಾಏಕಿ “ಅಸಹಿಷ್ಣುತೆ” ಹೆಚ್ಚಾಯಿತು, “ಸಂವಿಧಾನಕ್ಕೆ ಅಪಾಯ” ಬಂದಿತು, ಕ್ರೈಸ್ತ- ಮುಸಲ್ಮಾನರು ಭಯದಿಂದ ನರಳಲು ಶುರುವಿಟ್ಟುಕೊಂಡರು, ಭಾರತದಲ್ಲಿ ದಂಗೆಗಳು ಹೆಚ್ಚಾದವು, ಕಾಶ್ಮೀರದಲ್ಲಿ ಹಿಂಸೆ ಹೆಚ್ಚಾಯಿತು, ಉಗ್ರರ ಉಪಟಳ ಹೆಚ್ಚಾಯಿತು,ಅಭಿವೃದ್ದಿ ಹಳ್ಳ ಹಿಡಿಯಿತು, ಒಟ್ಟಾರೆ ಮೋದಿ ಪ್ರಧಾನಿ ಆದ ಮೇಲೆ ಭಾರತಕ್ಕೆ- ಭಾರತವೆ ಅಶಾಂತಿಯಿಂದ ನರಳಾಡುತ್ತಿದೆ. ಇದು ವಿರೋಧಿಗಳ ವಿಲಾಪ. ಆದರೆ ಅಂತರರಾಷ್ಟ್ರೀಯ ಚಿಂತಕರ-ಟ್ಯಾಂಕ್ ಎಂದೆ ಪ್ರಸಿದ್ದಿ ಪಡೆದ ‘ಇನ್ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್ (ಐಇಪಿ)’ ಪ್ರಕಾರ ಭಾರತದಲ್ಲಿ ಶಾಂತಿ ಹೆಚ್ಚಾಗಿದೆ!!

ಇತ್ತೀಚೆಗೆ ಐಇಪಿಯು ಗ್ಲೋಬಲ್ ಪೀಸ್ ಇಂಡೆಕ್ಸ್ (ಜಿಪಿಐ) 2018 ರ ಆವೃತ್ತಿಯನ್ನು ಬಿಡುಗಡೆ ಮಾಡಿತು ಅದರ ಪ್ರಕಾರ ಭಾರತ ಶಾಂತಿ ಕ್ರಮ ಸೂಚಿಯಲ್ಲಿ 142 ನೇ ಸ್ಥಾನದಿಂದ 136 ನೇ ಸ್ಥಾನ ಮೇಲಕ್ಕೆ ಜಿಗಿದಿದೆ! ಏನಿದರ ಅರ್ಥ? ಇದರ ಅರ್ಥ ಭಾರತದಲ್ಲಿ ಅಶಾಂತಿ ಕಡಿಮೆ ಆಗಿ ಜನರಲ್ಲಿ ಶಾಂತಿ ನೆಲೆಸುತ್ತಾ ಇದೆ ಎಂದು. ಅಶಾಂತಿ ಇರುವುದು ಕೇವಲ ಮೋದಿ ವಿರೋಧಿಗಳಿಗೆ ಮಾತ್ರ!

163 ರಾಷ್ಟ್ರಗಳ ಈ ಕ್ರಮ ಸೂಚಿಯಲ್ಲಿ ಭಾರತಕ್ಕೆ 136 ನೇ ಸ್ಥಾನ ದೊರಕಿದೆ. ಇದಕ್ಯಾಕೆ ಅಷ್ಟು ಖುಶಿ ಎನ್ನುತ್ತೀರೋ? ಹಾಗಾದರೆ ಕೇಳಿ:

  • 2012 ರಲ್ಲಿ ಜಿಪಿಐನಲ್ಲಿ ಭಾರತಕ್ಕೆ 142 ನೇ ಸ್ಥಾನ. ಆಗ ಯಾರ ಸರಕಾರ ಇದ್ದದ್ದು? ಕೈ ಕಮಾಂಡ್ ನ ಯೂಪಿಎ  ಸರಕಾರ ಇದ್ದದ್ದು.
  • 2018 ರಲ್ಲಿ ಜಿಪಿಐನಲ್ಲಿ ಭಾರತಕ್ಕೆ 136 ನೇ ಸ್ಥಾನ. ಈಗ ಯಾರ ಸರಕಾರ ಇರುವುದು? ಮೋದಿ ನೇತೃತ್ವದ ಎನ್.ಡಿ.ಎ ಸರಕಾರ.
  • ಆರು ವರ್ಷಗಳಲ್ಲಿ ಶಾಂತಿ ಕ್ರಮ ಸೂಚಿಯಲ್ಲಿ ಒಟ್ಟು ಎಷ್ಟು ಸ್ಥಾನಗಳ ಏರಿಕೆ? ಒಟ್ಟು ಆರು ಸ್ಥಾನಗಳ ಏರಿಕೆ.
  • ಯಾರ ಆಡಳಿತದ ಅವಧಿಯಲ್ಲಿ ಅಶಾಂತಿ ಹೆಚ್ಚಿತ್ತು? ಯೂಪಿಎ ಆಡಳಿತದ. ಯಾರ ಆಡಳಿತದಲ್ಲಿ ಶಾಂತಿ ನೆಲೆಸುತ್ತಿದೆ? ಮೋದಿ ಆಡಳಿತ.

ನೀತಿ: ಭಗವಾ ರಾಜ್ಯಗಳು ಹೆಚ್ಚಿದಂತೆಲ್ಲಾ ರಾಷ್ಟದಲ್ಲಿ ಶಾಂತಿ ಹೆಚ್ಚುತ್ತದೆ!!

ಹಾಗಾದರೆ ಮೋದಿ ರಾಜ್ಯದಲ್ಲಿ ಅಸಹಿಷ್ಣುತೆ, ಅಶಾಂತಿ, ಅಸುರಕ್ಷಿತತೆ ಹೆಚ್ಚಾಗಿದ್ದು? ಎಲ್ಲ ಮಣ್ಣಾಂಗಟ್ಟಿ. ಕಳ್ಳ-ಕಾಕ-ದರೋಡೆಕೋರ-ಉಗ್ರರಿಗೆ ಅಶಾಂತಿ ಹೆಚ್ಚಾಗಿದ್ದು ಹೊರತು ಜನಸಾಮಾನ್ಯರು ಶಾಂತಿಯಿಂದಲೆ ಬದುಕುತ್ತಿದ್ದಾರೆಂದು ವಿಶ್ವದ ಪ್ರತಿಷ್ಟಿತ ಸಂಸ್ಥೆಯೆ ಹೇಳಾಯ್ತಲ್ಲ ಮತ್ತಿನ್ನೇನು? ಛೆ, ಛೆ ಆ ಸಂಸ್ಥೆಯವರು “ಮೋದಿ ಏಜೆಂಟ್” ಆಗಿರಬೇಕು “ಭಕ್ತರು” ಹಣ ಕೊಟ್ಟು ಹೇಳಿಸಿರಬೇಕು, ನಾವಿದನ್ನೆಲ್ಲ ನಂಬಲ್ಲ ಬಿಡಿ!

ಸೂಚ್ಯಂಕವನ್ನು ಹೇಗೆ ತಯಾರಿಸಲಾಗುತ್ತದೆ?

ವಿಶ್ವದ 163 ದೇಶಗಳ 99.7% ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡು ಸೂಚ್ಯಂಕವನ್ನು ರಚಿಸಲಾಗಿದೆ. 23 ಮಹತ್ವಪೂರ್ಣ ಮತ್ತು ಪರಿಮಾಣಾತ್ಮಕ ಸೂಚಕಗಳನ್ನು ಬಳಸಿಕೊಂಡು ಹೆಚ್ಚು “ಗೌರವಾನ್ವಿತ ಮೂಲಗಳಿಂದ” ಈ ಸೂಚ್ಯಂಕ ಪಟ್ಟಿಯನ್ನು ತಯಾರಿಸಲಾಗಿದೆ. “ಭಕ್ತರು” ಕೊಟ್ಟ ಸೂಚ್ಯಂಕಗಳಲ್ಲ ಇವು. ಒಟ್ಟು ಮೂರು ವಿಷಯಾಧಾರಿತ ಡೊಮೇನ್ ಗಳ ಬಳಕೆಯಿಂದ ದೇಶದ ಶಾಂತಿಯ ಸ್ಥಿತಿಯನ್ನು ಅಳೆಯಲಾಗುತ್ತದೆ.

  • ಸಾಮಾಜಿಕ ಸುರಕ್ಷತೆ ಮತ್ತು ಭದ್ರತೆಯ ಮಟ್ಟ
  • ಪ್ರಸ್ತುತ ನಡೆಯುತ್ತಿರುವ ದೇಶೀಯ ಮತ್ತು ಅಂತರಾಷ್ಟ್ರೀಯ ಸಂಘರ್ಷದ ವ್ಯಾಪ್ತಿ
  • ಮಿಲಿಟರೀಕರಣದ ಮಟ್ಟ

ಇವೆ ಮೂರು ಡೋಮೇನ್ ಗಳ ಮೂಲಕ ಎಲ್ಲಾ ದೇಶಗಳ ಶಾಂತಿ ಸ್ಥಿತಿಯನ್ನು ಅಳೆಯಲಾಗುತ್ತದೆ. ಭಾರತದಲ್ಲಿ ಕಠಿಣ ಕಾನೂನು ಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಕಾರಣದಿಂದಾಗಿ ಸೂಚ್ಯಂಕದಲ್ಲಿ ಏರಿಕೆ ದಾಖಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಭಾರತದಲ್ಲಿ ಹಿಂಸಾತ್ಮಕ ಅಪರಾಧಗಳನ್ನು ನಿಭಾಯಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳು ಫಲಕೊಟ್ಟಿವೆ, ಮಿಲಿಟರಿ ಖರ್ಚುಗಳ ಕಡಿತ, ನಿರ್ದಿಷ್ಟ ಆಯುಧಗಳ ಆಮದಿನಲ್ಲಿ ಇಳಿಕೆಯು ಈ ಮಾತುಗಳಿಗೆ ಪುಷ್ಟಿ ನೀಡುತ್ತವೆ ಎಂದು ಜಿಪಿಐ ವರದಿ ತಿಳಿಸಿದೆ.

ವರದಿಯನ್ವಯ “ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಕಛೇರಿಯಲ್ಲಿ ಅಧಿಕಾರದ ಕೇಂದ್ರೀಕರಣದಿಂದಾಗಿ ದೇಶದಲ್ಲಿ ರಾಜಕೀಯ ಅಸ್ಥಿರತೆ ಕ್ಷಯಗೊಂಡಿತು ಮತ್ತು ರಾಜಕೀಯ ಭಯೋತ್ಪಾದನೆ ಪ್ರಮಾಣ ಮತ್ತು ಆಂತರಿಕ ಸಂಘರ್ಷಗಗಳ ವಿರುದ್ದ ಹೋರಾಟದ ಮೇಲಿನ ದೇಶದ ಅಂಕಗಳು ಕ್ರಮವಾಗಿ 4 ಮತ್ತು 4.7 ರಷ್ಟು ಉತ್ತುಂಗಕ್ಕೇರಿತು.” ಸಂಘರ್ಷಗಳನ್ನು ನಿಭಾಯಿಸುವಲ್ಲಿ ಮೋದಿ ಸರಕಾರಕ್ಕೆ 5ರಲ್ಲಿ4 ಮತ್ತು 4.7 ಅಂಕ ದೊರೆತಿದೆ. ತಗಳ್ರಪ್ಪಾ, ಮೋದಿ ನಾಯಕತ್ವದಲ್ಲಿ ದೇಶದಲ್ಲಿ ಶಾಂತಿ ನೆಲೆಸಿದೆ ಎನ್ನುವುದಕ್ಕೆ ಅಂತರಾಷ್ಟ್ರೀಯ ಸಂಸ್ಥೆಯೆ ತನ್ನ ಮೊಹರು ಒತ್ತಿದೆ. ಇನ್ನೂ ನಿಮಗೆ ದೇಶದಲ್ಲಿ ಅಶಾಂತಿ ಹೆಚ್ಚಾಗಿದೆ ಎನ್ನಿಸಿದರೆ ಐಸ್ಲ್ಯಾಂಡ್, ನ್ಯೂಜಿಲ್ಯಾಂಡ್, ಆಸ್ಟ್ರಿಯಾ, ಪೋರ್ಚುಗಲ್, ಡೆನ್ಮಾರ್ಕ್, ಕೆನಡಾ, ಝೆಕ್ ರಿಪಬ್ಲಿಕ್, ಸಿಂಗಾಪುರ್, ಜಪಾನ್ ಮತ್ತು ಐರ್ಲೆಂಡ್ ನಂತಹ ಅತ್ಯಂತ ಶಾಂತಿಪೂರ್ಣ ದೇಶಗಳಿಗೆ ಹೋಗಿ ನೆಲೆಸಬಹುದು. ಭವ್ಯ ಭಾರತದ ಬಾಗಿಲುಗಳು ಸದಾ ಕಾಲ ತೆರೆದಿದೆ, ಅಸುರಕ್ಷಿತತೆ ಅನುಭವಿಸುವರು ಗಂಟು ಮೂಟೆ ಕಟ್ಟಿಕೊಂಡು ಹೋಗಬಹುದು. ಹಾಗಾದಲ್ಲಿ ಭಾರತದಲ್ಲಿ ಸದಾಕಾಲಕ್ಕೂ ಶಾಂತಿ ನೆಲೆಸಿ ವಿಶ್ವದಲ್ಲೆ ನಂಬರ್ ಒಂದು ಸ್ಥಾನ ಪಡೆಯಬಹುದು. ಮೋದಿ ರಾಜ್ಯಕ್ಕೆ ಜೈ

-ಶಾರ್ವರಿ

Editor Postcard Kannada:
Related Post