X

ಅಯೋಧ್ಯೆಯಲ್ಲಿ ಯಾವ ಮಸೀದಿಯೂ ಇರಲಿಲ್ಲ!! ಅಯೋಧ್ಯೆ ಕೇವಲ ರಾಮ ದೇಗುಲ!! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದ್ವಾರಕ ಪೀಠದ ಸ್ವಾಮೀಜಿ!!

ಅಯೋಧ್ಯೆ ಎಂದಾಕ್ಷಣ ನೆನಪಾಗುವುದು ನಮಗೆ ರಾಮಮಂದಿರ!! ಇತ್ತೀಚೆಗೆ ಕೆಲ ಮುಸ್ಲಿಮರು ಅಯೋಧ್ಯೆ ನಿರ್ಮಾಣಕ್ಕೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ… ಜಾತ್ಯಾತೀತ ಪಕ್ಷ ಎಂಬುವುದನ್ನು ಸಾಭೀತುಪಡಿಸಲು ಈಗ ಕೆಲ ಮುಸ್ಲಿಮರು ಮುಂದಾಗುತ್ತಿದ್ದಾರೆ!! ಆದರೆ ಸುಮಾರು 60 ವರ್ಷಗಳ ಕಾಲ ಆಳಿದ ಈ ಕಾಂಗ್ರೆಸ್ ಸರಕಾರ ಮಾತ್ರ ಹಿಂದೂ ಮತ್ತು ಮುಸ್ಲಿಮರ ನಡುವೆ ಯಾವಾಗಲೂ ಘರ್ಷಣೆ ನಡೆಯುತ್ತಿರಬೇಕು ಎನ್ನುವ ಉದ್ಧೇಶವನ್ನಿಟ್ಟುಕೊಂಡು ಶಾಶ್ವತವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗದಂತೆ ಮಾಡಿ ಹಿಂದೂ ಮತ್ತು ಮುಸ್ಲಿಮರ ನಡುವೆ ಕಂದಕವನ್ನು ಸೃಷ್ಟಿ ಮಾಡಿ ಜೀವಂತ ಇರುವಂತೆ ಮಾಡುತ್ತಿದ್ದಾರೆ…

ಕ್ರಮೇಣವಾಗಿ ಮುಸ್ಲಿಮರು ಬದಲಾದರೂ ಕೆಲ ವಿರೋಧಿಗಳು ಮಾತ್ರ ರಾಮ ಮಂದಿರ ನಿರ್ಮಾಣವಾಗದಂತೆ ಉಪಾಯವನ್ನು ಮಾಡುತ್ತಿದ್ದಾರೆ. ಒಂದು ವೇಳೆ ರಾಮ ಮಂದಿರ ನಿರ್ಮಾಣವಾದಲ್ಲಿ ಎಲ್ಲಿ ಬಲಪಂಥೀಯರಿಗೆ ಕ್ರೆಡಿಟ್ ಹೋಗುತ್ತದೋ ಎಂಬ ಉದ್ಧೇಶವನ್ನಿಟ್ಟುಕೊಂಡು ಕಪಿಲ್ ಸಿಬಲ್ 2019ರ ಚುನಾವಣೆಯ ಮುಂಚೆ ಯಾವುದೇ ತೀರ್ಪನ್ನು ನೀಡಬಾರದು ಎಂಬ ನಿಲುವನ್ನು ಸುಪ್ರಿಂ ಕೋರ್ಟಲ್ಲಿ ಸ್ಪಷ್ಟ ನಿಲುವನ್ನು ಹಾಕಿದ್ದಾರೆ.. ಆದರೂ ಕೆಲ ಮುಸ್ಲಿಮರು ಮಾತ್ರ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಿರುವುದು ಜಾತ್ಯಾತೀತ ಅಂತ ತಿರುಗಾಡುತ್ತಿರುವ ಕೆಲವರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ!! ಆದರೆ ಇದೀಗ ಅಯೋಧ್ಯೆಯಲ್ಲಿ ರಾಮ ಮಂದಿರ ಮಾತ್ರ ಇದ್ದಿರುವಂತಹದ್ದು ಅದನ್ನು ಬಿಟ್ಟು ಯಾವ ಮಸೀದಿಯೂ ಇರಲಿಲ್ಲ ಎಂಬ ಸ್ಫೋಟಕ ಮಾಹಿತಿಯೊಂದನ್ನು ದ್ವಾರಕಾ ಮಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ಹೇಳಿದ್ದಾರೆ!!

ಅಯೋಧ್ಯೆ ರಾಮ ದೇಗುಲ ಮಾತ್ರ ಅಲ್ಲಿ ಯಾವುದೇ ಮಸೀದಿ ಇರಲಿಲ್ಲ!!

ರಾಮ ಜನ್ಮಸ್ಥಳ ಅಯೋಧ್ಯೆಯಲ್ಲಿ ಬಲಪಂಥೀಯರು ನೆಲಕ್ಕುರುಳಿಸಿದ ಕಟ್ಟಡ ಮಸೀದಿಯಲ್ಲ, ಆ ಜಾಗದಲ್ಲಿ ಮಸೀದಿಯೇ ಇರಲಿಲ್ಲ. ಅದೊಂದು ರಾಮನ ದೇವಾಲಯವಾಗಿತ್ತು ಎಂದು ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ಹೇಳಿದ್ದಾರೆ. ರಾಮ ಮಂದಿರ ಹಾಗೂ ಬಾಬರಿ ಮಸೀದಿ ವಿವಾದದ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಶಂಕರಾಚಾರ್ಯ, ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಮಸೀದಿ ಅಸ್ತಿತ್ವದಲ್ಲಿಯೇ ಇರಲಿಲ್ಲ. ಕರ ಸೇವಕರು ದೇಗುಲವನ್ನು ಕೆಡವಿದ್ದರೇ ಹೊರತು, ಮಸೀದಿಯನ್ನಲ್ಲ ಎಂದು ಹೇಳಿದ್ದಾರೆ.

ವಿವಾದಿತ ಸ್ಥಳದಲ್ಲಿ ರಾಮನ ದೇಗುಲ ನಿರ್ಮಾಣದ ಕುರಿತು ನ್ಯಾಯಾಲಯದಲ್ಲಿ ಹೂಡಿರುವ ಅರ್ಜಿಯ ವಿಚಾರಣೆ ಈಗಾಗಲೇ ನಡೆಯುತ್ತಿದೆ. ಆದರೆ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ಹಿಂದಕ್ಕೆ ಪಡೆದುಕೊಂಡ ಬಳಿಕ ರಾಮನ ದೇಗುಲವನ್ನು ಮರು ನಿರ್ಮಾಣ ಮಾಡಲಾಗುತ್ತದೆ ಎಂದು ಶಂಕರಾಚಾರ್ಯರು ಹೇಳಿದ್ದಾರೆ.

ಜಾತ್ಯಾತೀತ ಪಕ್ಷಗಳು ರಾಮಮಂದಿರದ ಬಗೆಗಿನ ವಿಷಯಗಳ ಬಗ್ಗೆ ಸಾಕಷ್ಟು ಕುತಂತ್ರ ಹೂಡುತ್ತಿದ್ದಾರೆ!! ಇದೀಗ ರಾಮ ಮಂದಿರದ ಕನಸು ಮಾತ್ರ ನನಸಾಗುವ ಹೊಸ್ತಿಲಿನಲ್ಲಿದೆ. ಬಿಜೆಪಿ ನಾಯಕ ಸುಬ್ಮಮಣಿಯನ್ ಸ್ವಾಮಿ ಹೇಳಿರುವಂತೆ, ರಾಜ್ಯ ಸಭೆಯಲ್ಲಿ ಬಿಜೆಪಿ ಬಹುಮತವನ್ನು ಪಡೆದುಕೊಂಡರೆ, 2018ರಲ್ಲಿ ರಾಮಮಂದಿರವನ್ನು ಕಟ್ಟುತ್ತೇವೆ ಎನ್ನುವ ಮಾತನ್ನು ಹೇಳಿದ್ದರು. ಅದರಂತೆ ರಾಮಮಂದಿರದ ಮರುನಿರ್ಮಾಣಕ್ಕೆ ಅಯೋಧ್ಯೆ ಸಜ್ಞಾಗಿದೆ. ಅದೆಷ್ಟೋ ಮಾಧ್ಯಮಗಳು ತನ್ನ ಟಿಆರ್ಪಿಯನ್ನು ಹೆಚ್ಚಿಸಿಕೊಳ್ಳಲು, ರಾಮಮಂದಿರದ ಸಮಸ್ಯೆಗಳನ್ನು ಎತ್ತಿತೋರಿಸುತ್ತಿದ್ದರು. ಇದೀಗ ರಾಮ ಮಂದಿರದ ಸಮಸ್ಯೆಗಳಿಗೆ ಬ್ರೇಕ್ ಬಿದ್ದಂತಾಗಿದೆ. ರಾಮ ಮಂದಿರದ ವಿಷಯವನ್ನು ಕೆದುಕುತ್ತಿದ್ದ ಅದೆಷ್ಟೊ ಮೀಡಿಯಾಗಳು ಇದೀಗ ಟಿಆರ್ಪಿಯಿಂದ ಬರುತ್ತಿದ್ದ ಹಣದ ದಾಹಕ್ಕೆ ಪೂರ್ಣವಿರಾಮ ಇಟ್ಟತಾಂಗಿದೆ. ಅಲ್ಲದೇ ಹಿಂದೂ ಮುಸ್ಲಿಂ ಜಗಳದಲ್ಲಿ ರಾಮಮಂದಿರವನ್ನು ಕಟ್ಟಲು ಮುಸಲ್ಮಾನರೇ ಬಿಡುತ್ತಿಲ್ಲ ಎನ್ನುತ್ತಿದ್ದ ವಿಚಾರ ಈಗ ಹುಸಿಯಾಗಿದೆ ಯಾಕೆಂದರೆ ರಾಮ ಮಂದಿರವನ್ನು ಮರುನಿರ್ಮಾಣಕ್ಕೆ ಮುಂದಾಗಿರುವುದು, ಈಗ ಅದೆಷ್ಟೋ ಮುಸಲ್ಮಾನ ಸ್ನೇಹಿತರು!!

ರಾಮ ಎಂದಾಕ್ಷಣ ನೆನಪಾಗೋದು ಅಯೋಧ್ಯಾ. ಅದು ರಾಮ ಜನ್ಮಭೂಮಿ. 100 ಕೋಟಿ ಹಿಂದುಗಳ ಆರಾಧ್ಯದೇವ ಮರ್ಯಾದಾ ಪುರುಷೋತ್ತಮನ ಒಂದು ಮಂದಿರವನ್ನು ನಮ್ಮಿಂದ ನಿರ್ಮಿಸೋಕೆ ಆಗುತ್ತಿಲ್ಲವಲ್ಲ ಅನ್ನೋದೆ ದೊಡ್ಡ ವ್ಯಥೆ. ಅಷ್ಟಕ್ಕೂ ಅಯೋಧ್ಯೆ ಹಿಂದುಗಳಿಗೆ ಯಾಕೆ ಮುಖ್ಯ ಗೊತ್ತಾ? ಅಯೋಧ್ಯಾ, ಮಥುರಾ, ಮಾಯಾ, ಕಾಶಿ, ಕಾಂಚಿ, ಅವಂತಿಕಾ, ಪುರಿ, ದ್ವರವತಿ ಸಪ್ತತೈಕೆ ಮೋಕ್ಷದಾಯಕ. ಮೋಕ್ಷ ನೀಡುವ ಪವಿತ್ರ 7 ಕ್ಷೇತ್ರಗಳಲ್ಲಿ ಅಯೋಧ್ಯೆಗೆ ಮೊದಲ ಸ್ಥಾನ. ಸರಯೂ ನದಿ ತೀರದಲ್ಲಿರುವ ಭವ್ಯನಗರ ಅಯೋಧ್ಯೆ.

ಹಿಂದುಗಳ ಆರಾಧ್ಯದೇವ , ಮರ್ಯಾದಾ ಪುರುಷೋತ್ತಮನ ಜನ್ಮಭೂಮಿ ಅಯೋಧ್ಯೆ. 14-15 ನೇ ಶತಮಾನದಲ್ಲಿ ರಾಜ ವಿಕ್ರಮಾದಿತ್ಯನು 7 ಅಂತಸ್ತಿನ ಭವ್ಯ ಶ್ರೀರಾಮ ಮಂದಿರವನ್ನು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಕಟ್ಟಿಸಿ ಸಮಾಜಕ್ಕೆ ಅರ್ಪಿಸಿ, ಪ್ರಭು ಶ್ರೀರಾಮನ ನೆನಪನ್ನು ಶಾಶ್ವತವಾಗಿಸಿದ. 15 ನೇ ಶತಮಾನದಲ್ಲಿ ಭಯೋತ್ಪಾದಕ ಬಾಬರ್ ನ ಕೆಟ್ಟ ಕಣ್ಣು ಭಾರತದ ಮೇಲೆ ಬಿತ್ತು. ಬಾಬರ್ ಮಧ್ಯ ಏಶಿಯಾದ ಉಜ್ಬೇಕಿಸ್ತಾನದವನು. ಬಾಬರ್, ಮಧ್ಯ ಏಷ್ಯಾದ ಪ್ರಸಿದ್ಧ ದಾಳಿಕೋರರ ಟರ್ಕ್ ಮೂಲದ ತೈಮೂರ ಮತ್ತು ಮೊಗಲ್ ಮೂಲದ ಚೆಂಗಿಸ್ ಖಾನ್‍ರ ರಕ್ತಸಂಬಂಧಿಯಾಗಿದ್ದ. ಭಾರತಕ್ಕೆ ಬಂದು ದಾಳಿಮಾಡಿ ಮೊಗಲ ದೊರೆ ಎನಿಸಿಕೊಂಡ.

ಆ ಭಯೋತ್ಪಾದಕನ ಕೆಟ್ಟ ಕಣ್ಣು ಏಳು ಅಂತಸ್ತಿನ ಭವ್ಯ ರಾಮಮಂದಿರದ ಮೇಲೆ ಬಿತ್ತು. ಹಿಂದುಗಳ ಆರಾಧ್ಯ ದೇವ ಶ್ರೀರಾಮನ ಮಂದಿರ ಕೆಡವಿದರೆ ಹಿಂದೂ ಧರ್ಮವೇ ನಾಶವಾಗುತ್ತೆ ಎಂದು ಭಾವಿಸಿ ತನ್ನ ಸೇನೆಯನ್ನ ಮೀರ್ ಬಾಕಿ ನೇತೃತ್ವದಲ್ಲಿ ಮಂದಿರದ ಮೇಲೆ ದಾಳಿ ಮಾಡಿಸಿ ಕೆಡವಿದ. ಅದೇ ಕೆಡವಿದ ಮಂದಿರದ ಅವಶೇಷಗಳಿಂದ ಮಸೀದಿಯನ್ನು ಕಟ್ಟಿಸಿದ . ಅದಕ್ಕೆ ಜನ್ಮಸ್ಥಾನ ಮಸೀದಿ ಎಂದು ಹೆಸರಿಟ್ಟ. 1985 ರವರೆಗೂ ಅದನ್ನ ಜನ್ಮಸ್ಥಾನ ಮಸೀದಿ ಅಂತಾನೇ ಕರೆಯುತ್ತಿದ್ದರು. ಅರೇ ಜನ್ಮಸ್ಥಾನ ಮಸೀದಿ ಅಂದ್ರೆ ಯಾರ ಜನ್ಮಸ್ಥಾನ ಅನ್ನುವ ಪ್ರಶ್ನೆ ಕೇಳಬಹುದು ಅಂದುಕೊಂಡು ಬಾಬರ್ ಕ್ರಿಯಾಸಮಿತಿ ಮತ್ತು ಕೆಲವರು ಸೇರಿ ಬಾಬರೀ ಮಸೀದಿ ಅಂತ ಕರೆಯಲು ಪ್ರಯತ್ನ ಮಾಡಿದರು. ಬಾಬರ್ ರಾಮ ಮಂದಿರವನ್ನು ಕೆಡವಿ ಗಿನಿಂದಲೂ ಹಿಂದುಗಳು ಅದರ ವಿರುದ್ಧ ಹೋರಾಡುತ್ತಲೇ ಬಂದರು. ಆದರೆ ನ್ಯಾಯ ಮಾತ್ರ ಮರೀಚಿಕೆಯಾಗಿಯೇ ಉಳಿಯಿತು.

1989 ನವೆಂಬರನಲ್ಲಿ ಭಾರತೀಯ ಜನತಾ ಪಕ್ಷದ ಲಾಲ್ ಕೃಷ್ಣ ಅಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆವರೆಗಿನ 10,000ಕಿಮೀ ರಥಯಾತ್ರೆ ಮಾಡಿ ಹಿಂದುಗಳಿಗೆ ಹೊಸ ಚೈತನ್ಯ ತುಂಬಿದರು. ನ್ಯಾಯಾಲಯಕ್ಕೆ ಅಲೆದಾಡಿದ ಹಿಂದುವಿಗೆ ನ್ಯಾಯ ಮರೀಚಿಕೆ ಆಗಿಯೇ ಉಳಿಯಿತು. ಅದರಿಂದ ಹಿಂದುವಿನ ಸಹನೆ ಕಟ್ಟೆಯೊಡೆದು 1992 ಡಿಸೆಂಬರ್ 6 ಕ್ಕೆ ಸಿಡಿದೆದ್ದ.

ಗ್ರಾಮ ಗ್ರಾಮಗಳಿಂದ ಹಿಂದುಗಳು ಅಯೋಧ್ಯೆಯ ಕಡೆಗೆ ಹೊರಟು ನಿಂತರು. ಎಲ್ಲಿ ಕೇಳಿದರಲ್ಲಿ ಜೈ ಶ್ರೀರಾಮ ಜೈ ಶ್ರೀರಾಮ ಜೈ ಶ್ರೀರಾಮ ಅನ್ನುವ ಘೋಷಣೆಗಳು ಕೇಳಿ ಬರಲು ಶುರುವಾದವು. ಆ ಘೋಷಣೆಗೆ ದಾಸ್ಯದ ಕುರುಹಾಗಿದ್ದ ಮಸೀದಿ ಉರುಳಿತು. ಇದು ರಾಮ ಮಂದಿರದ ಸಂಕ್ಷಿಪ್ತ ವಿವರಣೆ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು ಬಂದತಹ ರಾಷ್ಟ್ರ. ಇಲ್ಲಿ ಎಲ್ಲಾ ಧರ್ಮೀಯರಿಗೂ ಬದುಕುವ ಹಕ್ಕನ್ನು ಕೊಟ್ಟಿದೆ. ತಮ್ಮ ಧರ್ಮದ ಆಚರಣೆಗಳನ್ನು ಆಚರಿಸಲು ಬಿಟ್ಟಿದೆ. ಕಾರಣ ಹಿಂದುಗಳು ಸಹಿಷ್ಣುಗಳು.

ಜಗತ್ತಿನಲ್ಲಿ ಯಾರೂ ನೆರವಾಗದೇ ಇದ್ದವರಿಗೆ ಭಾರತ ನೆರವಾಗಿದೆ. ಯಹೂದಿಯರನ್ನು ತಮ್ಮ ಮೂಲ ರಾಷ್ಟ್ರದಿಂದ ಓಡಿಸಿದಾಗ ಜಗತ್ತಿನ ಯಾವ ರಾಷ್ಟ್ರಗಳು ನೆಲೆ ಕಲ್ಪಿಸಿ ಕೊಡಲಿಲ್ಲ. ಆಗ ಭಾರತವೇ ಯಹೂದಿಗಳಿಗೆ ಆಸರೆಯಾಗಿ, ಭಾರತದಲ್ಲಿರಿಸಿಕೊಂಡು ಪೋಷಿಸಿತು. ಭಾರತ-ಪಾಕಿಸ್ತಾನ ವಿಭಜನೆಯಾದಾಗ ಮುಸಲ್ಮಾನರಿಗೆ ನೆರವು ನೀಡಿ ಪೋಷಿಸಿತು. ಇದುವೇ ನನ್ನ ಭಾರತ. ಇದನ್ನೆಲ್ಲಾ ಅವಲೋಕಿಸಿದ ಭಾರತದ ಮುಸಲ್ಮಾನರು ರಾಮ ಮಂದಿರಕ್ಕೆ ಬೆಂಬಲ ಕೊಟ್ಟಿದ್ದಾರೆ. ನಿಜಕ್ಕೂ ಅಚ್ಚರಿ ಎನಿಸಿದರು ಇದು ಭಾರತದಲ್ಲಿ ನಡೆಯುವಂತದ್ದು. ಹಿಂದೂ ಮುಸ್ಲಿಂ ಜಗಳದಲ್ಲಿ ರಾಮಮಂದಿರವನ್ನು ಕಟ್ಟಲು ಮುಸಲ್ಮಾನರೇ ಬಿಡುತ್ತಿಲ್ಲ ಎನ್ನುತ್ತಿದ್ದ ವಿಚಾರ ಹುಸಿಯಾಗಿದೆ ಯಾಕೆಂದರೆ ರಾಮ ಮಂದಿರವನ್ನು ಮರುನಿರ್ಮಾಣಕ್ಕೆ ಮುಂದಾಗಿರುವುದು, ಮುಸಲ್ಮಾನ ಸ್ನೇಹಿತರು!!

ಇದೀಗ ರಾಮ ಮಂದಿರದ ಮರುನಿರ್ಮಾಣಕ್ಕೆ ಮುಂದಾದವರು ಕೆಲ ಮುಸಲ್ಮಾನರು. ಇದರಿಂದಾಗಿ ರಾಜಕೀಯವಾಗಿ ರಾಮ ಮಂದಿರದ ವಿಚಾರದಲ್ಲಿ ಭಾಷಣ ಬಿಗಿಯುತ್ತಿದ್ದ ಜಾತ್ಯಾತೀತವಾದಿಗಳ ಬಾಯಿಗೆ ಬೀಗ ಜಡಿದಂತಾಗಿದೆ. ಆದರೆ ಖುಷಿಯ ಸಮಾಚಾರ ಏನಂದರೆ ಕೆಲವೊಂದು ಮುಸ್ಲಿಂ ಸಹೊದರ-ಸಹೋದರಿಯವರು ರಾಮ ಮಂದಿರದ ಮರುನಿರ್ಮಾಣಕ್ಕೆ ಸಾಥ್ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ ವಿಪರ್ಯಾಸವೇನೆಂದರೆ ಮರುನಿರ್ಮಾಣಕ್ಕೆ ಸಾಥ್ ನೀಡಿರುವ ಮುಸಲ್ಮಾನ ಸ್ನೇಹಿತರ ಬಗೆಗೆ ಮುಖ್ಯವಾಹಿನಿ ಮಾಧ್ಯಮಗಳು ಯಾವುದೇ ರೀತಿಯ ಮಾಹಿತಿಯನ್ನು ಹೊರಹಾಕಿಲ್ಲ. ಒಂದೆರಡು ಮಾಧ್ಯಮಗಳನ್ನು ಬಿಟ್ಟರೇ ಈ ಬಗೆಗೆ ಯಾವುದೇ ರೀತಿಯ ವಿಷಯವನ್ನು ವ್ಯಕ್ತಪಡಿಸಿಲ್ಲ.

ನಿಜಾಂಶವನ್ನು ಭಿತ್ತರಿಸುವಲ್ಲಿ ಮಾಧ್ಯಮಗಳು ವಿಫಲರಾಗಿರುವುದು ಯಾಕೆ ಎನ್ನುವುದೇ ಒಂದು ಪ್ರಶ್ನೇ??? ಆದರೆ ಕೆಲವೊಂದು ಮುಸಲ್ಮಾರು, ರಾಮಮಂದಿರದ ಮರುನಿರ್ಮಾಣದ ಕುರಿತು ವಿರೋಧವನ್ನು ವ್ಯಕ್ತಪಡಿಸಿರುವ ಬಗೆಗೆ ಮಾಧ್ಯಮಗಳು ಕಾರ್ಯನಿರತರಾದರೇ ಹೊರತು ರಾಮಮಂದಿರವನ್ನು ಮರುನಿರ್ಮಾಣಕ್ಕೆ ಮುಂದಾದವರನ್ನು ಶ್ಲಾಘಿಸಲೇ ಇಲ್ಲ.

ಅಂತೂ ಕೆಲವೊಂದು ಮುಸಲ್ಮಾನ ಸಹೊದರ-ಸಹೋದರಿಯವರು ರಾಮಮಂದಿರ ಮರುನಿರ್ಮಾಣಕ್ಕೆ ಕೈಜೋಡಿಸಿದ್ದಲ್ಲದೇ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತುಂಬುವಲ್ಲಿ ಮುಂದಾಗಿದ್ದಾರೆ. ಜಾತ್ಯಾತೀತವಾದಿಗಳೇ ಇನ್ನಾದರೂ ನಿಮ್ಮ ಕಣ್ಣು ತೆರೆಯಿರಿ. ಭಾರತೀಯರು ಎಂದಿಗೂ ಯಾರ ಮೇಲೆಯೂ ದಾಳಿ ಮಾಡಿಲ್ಲ. ಇಡೀ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ ಏಕೈಕ ಶ್ರೇಷ್ಠ ದೇಶ ನನ್ನ ಭಾರತ. ಹಾಗಂತ ದಾಳಿ ಮಾಡಿದಾಗ ಕೈಕಟ್ಟಿಕೊಂಡು ಸುಮ್ಮನೆಯೂ ಕುಳಿತಿಲ್ಲ, ದಾಳಿ ಮಾಡಿದಾಗ ಪ್ರತಿದಾಳಿ ಮಾಡಿ ಭಾರತೀಯರ ತಾಕತ್ತನ್ನು ತೋರಿಸಿತ್ತು. ನೆನಪು ಮಾಡಿಕೊಳ್ಳಿ ಶಿವಾಜಿ ಮಹಾರಾಜರನ್ನು, ನೆನಪು ಮಾಡಿಕೊಳ್ಳಿ ರಾಣಾ ಪ್ರತಾಪ ಸಿಂಹರನ್ನು, ನೆನಪು ಮಾಡಿಕೊಳ್ಳಿ ಪೃಥ್ವಿರಾಜ್ ಚೌಹಾಣರನ್ನು, ನೆನಪು ಮಾಡಿಕೊಳ್ಳಿ ಶ್ರೀಕೃಷ್ಣ ದೇವರಾಯರನ್ನು, ನೆನಪು ಮಾಡಿಕೊಳ್ಳಿ ಮದಕರಿ ನಾಯಕರನ್ನು, ನೆನಪು ಮಾಡಿಕೊಳ್ಳಿ ಇವರೆಲ್ಲಾ ಭಾರತದ ಮೇಲೆ ಶತ್ರುಗಳು ದಾಳಿ ಮಾಡಿದಾಗ ತಮ್ಮ ಕ್ಷಾತ್ರ ತೇಜಸ್ಸನ್ನು ತೋರಿಸಿ ಅವರನ್ನು ಹಿಮ್ಮೆಟ್ಟಿಸಿ ಭಾರತದ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದರು.

ಉತ್ತರ ಪ್ರದೇಶವನ್ನು ಹಿಂದೂ ಫೈರ್ ಯೋಗಿ ಆದಿತ್ಯಾನಾಥರು ಆಳುತ್ತಿದ್ದಾರೆ, ರವಿಶಂಕರ ಗುರೂಜಿಯವರು ಇತ್ತೀಚೆಗೆ ರಾಮ ಮಂದಿರದ ವಿವಾದದ ಕುರಿತಂತೆ ಮುಸಲ್ಮಾನ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ಇವೆಲ್ಲವುಗಳು ರಾಮ ಮಂದಿರ ನಿರ್ಮಾಣವಾಗುವುದು ಸನಿಹದಲ್ಲಿದೆ ಎನ್ನುವುದನ್ನು ತೋರಿಸುತ್ತಿವೆ. ಓವೈಸಿ ಮಾತ್ರ ವಿರೋಧಿಸುತ್ತಲೇ ಇದ್ದಾನೆ. ಆದರೆ ಓವೈಸಿ ಮಾತನ್ನು ಯಾರು ಕಿವಿಗೆ ಹಾಕಿಕೊಳ್ಳಲ್ಲ. ಒಟ್ಟಿನಲ್ಲಿ ಶೀಘ್ರದಲ್ಲಿ ಮರ್ಯಾದಾ ಪುರುಷೋತ್ತಮ, ಹಿಂದುಗಳ ಆರಾಧ್ಯದೇವ ಪ್ರಭು ಶ್ರೀರಾಮನ ಮಂದಿರ ನಿರ್ಮಾಣಗೊಳ್ಳುವುದು ಖಚಿತವಾಗಿದೆ!!

source: https://vijaykarnataka.indiatimes.com/news/india/mosque-never-existed-at-lord-rams-birthplace-in-ayodhya-shankaracharya/articleshow/63366927.cms

ಪವಿತ್ರ

Editor Postcard Kannada:
Related Post