X

ಮೂರು ದಶಕಗಳ ಇತಿಹಾಸದಲ್ಲಿ ಕಂಡೂ ಕೇಳರಿಯದ ಸಮರಾಭ್ಯಾಸ ನಡೆಸುತ್ತಿರುವ ವಾಯು ಸೇನೆ!! ನರೇಂದ್ರ ಮೋದಿ ಸರಕಾರದಿಂದ ಬದಲಾವಣೆಯ ಶಕೆ!!

ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ದೇಶದ ರಕ್ಷಣಾ ಕ್ಷೇತ್ರದಲ್ಲಿ ಬದಲಾವಣೆಯ ಶಕೆ ಈಗಾಗಲೇ ಆರಂಭವಾಗಿದ್ದು, ಶತ್ರುಗಳ ಉಪಟಳದಿಂದ ಭಾರತವನ್ನು ರಕ್ಷಿಸಿ ಶತ್ರುಗಳ ಹೆಡೆಮುರಿ ಕಟ್ಟಲು ಭಾರತದ ರಕ್ಷಣಾ ಕ್ಷೇತ್ರವು ಯಶಸ್ವಿಯಾಗಿರುವುದರೊಂದಿಗೆ ವಿಶ್ವದಲ್ಲೆ ಪ್ರಬಲ ಸೇನೆ ಎನ್ನುವ ಖ್ಯಾತಿಗೆ ಪಾತ್ರವಾಗುತ್ತಿದೆ. ಆದರೆ ನೆರೆ ದೇಶವಾದ ಚೀನಾ ದಿನೇ ದಿನೇ ತನ್ನ ಸೇನಾ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಭಾರತದ ಮೇಲೆ ಕಿಡಿಕಾರುತ್ತಲೇ ಇದ್ದು, ಇದೀಗ ಭಾರತವು ಚೀನಾ ಮತ್ತು ಪಾಕ್ ಗೆ ತಕ್ಕ ಪ್ರತ್ಯುತ್ತರವನ್ನು ನೀಡಲು ಸಜ್ಜಾಗಿದೆ.

ಈಗಾಗಲೇ ದಕ್ಷಿಣ ಚೀನಾ ಸಮುದ್ರ ಸೇರಿದಂತೆ ಹಿಂದೂ ಮಹಾಸಾಗರದ ಮೇಲೆ ಪ್ರಭುತ್ವ ಸಾಧಿಸಲು ಪ್ರಯತ್ನಿಸುತ್ತಿರುವ ಚೀನಾವನ್ನು ಬಗ್ಗು ಬಡಿಯುವ ಹಿನ್ನೆಲೆಯಲ್ಲಿ ಭಾರತ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಲು ಒತ್ತು ನೀಡಿದ್ದು, 6 ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿತ್ತು. ಅಷ್ಟೇ ಅಲ್ಲದೇ, ಶತ್ರುಗಳ ಮೇಲೆ 24 ಗಂಟೆ ನಿರಂತರವಾಗಿ ನಿಗಾ ಇಡಬಲ್ಲ, ಮಾನವರಹಿತ ವೈಮಾನಿಕ ವಾಹನ (ತಪಸ್) “ರುಸ್ತುಂ 2” ಡ್ರೋನ್ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು, ಸೇನಾ ಪಡೆಯ ಅಗತ್ಯಕ್ಕೆ ತಕ್ಕಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್’ಡಿಒ)ಯ ಏರೋನಾಟಿಕಲ್ ಆಂಡ್ ಡೆವಲಪ್’ಮೆಂಟ್ ಎಸ್ಟಾಬ್ಲಿಷ್’ಮೆಂಟ್ (ಎಡಿಇ) ವಿಭಾಗ “ರುಸ್ತುಂ 2” ಡ್ರೋನ್ ಅನ್ನು ಅಭಿವೃದ್ಧಿ ಪಡಿಸಿ ಎಲ್ಲೆಡೆ ಸುದ್ದಿಯಾಗಿತ್ತು!!

ಆದರೆ ಇದೀಗ ಭಾರತೀಯ ವಾಯುಸೇನೆಯು ಮೂರು ದಶಕಗಳಲ್ಲೇ ಅತೀದೊಡ್ಡ ಸಮರಭ್ಯಾಸ ‘ಗಗನಶಕ್ತಿ-2018’ ನ್ನು ಎಪ್ರಿಲ್ 8ರಿಂದ 22ವರೆಗೆ ಆಯೋಜನೆಗೊಳಿಸಿ ಇದೀಗ ಎಲ್ಲೆಡೆ ಸುದ್ದಿಯಾಗಿದೆ!! ಅಷ್ಟೇ ಅಲ್ಲದೇ, 6 ಸಾವಿರ ಏರ್ ಕ್ರಾಫ್ಟ್ ಗಳನ್ನು ನಿಯೋಜನೆಗೊಳಿಸುವ ಮೂಲಕ ಅತೀ ದೊಡ್ಡ ಸಮರಾಭ್ಯಾಸ ನಡೆಸುತ್ತಿದ್ದು, ಇದರಲ್ಲಿ 1,100 ಏರ್ ಕ್ರಾಫ್ಟ್ ಗಳು ಫೈಟರ್ ಜೆಟ್ ಗಳಾಗಿವೆ. ಹಾಗಾಗಿ ಈ ಸಮರಾಭ್ಯಾಸ ಪಶ್ಚಿಮ ಗಡಿ ಮತ್ತು ಪೂರ್ವ ಗಡಿಗಳಲ್ಲಿ ಆಯೋಜನೆಗೊಂಡಿದೆಯಲ್ಲದೇ ವಾಯುಪಡೆ ಸಿಬ್ಬಂದಿ ವಿವಿಧ ರೀತಿಯಲ್ಲಿ ಸಮರಾಭ್ಯಾಸಗಳಲ್ಲಿ ತೊಡಗಿಕೊಂಡಿದ್ದಾರೆ.

ಈಗಾಗಲೇ “ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿದ್ದು, ಇದು ಕಂಡು ಬಂದರೆ ಮತ್ತೆ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ. ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಒಂದು ಸಂದೇಶವಷ್ಟೇ. ಅಗತ್ಯ ಬಿದ್ದರೆ ಭಾರತ ದೊಡ್ಡ ಪ್ರಮಾಣದ ದಾಳಿಯನ್ನೇ ನಡೆಸಲು ಸಿದ್ದವಿದೆ” ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದರು. ಇದರ ಬೆನ್ನಲ್ಲೆ ಪಾಕಿಸ್ತಾನದ ಜತೆ ಭಾರತ ಶಾಂತಿಯುತ ಸಂಬಂಧ ಬಯಸುತ್ತದೆ. ಆದರೆ, ಪಾಕ್‍ನಿಂದ ಒಂದೇ ಒಂದು ಬುಲೆಟ್ ದೇಶದ ಗಡಿ ಪ್ರವೇಶಿಸಿದರೂ, ಅಸಂಖ್ಯಾತ ಬುಲೆಟ್‍ನಿಂದ ಉತ್ತರ ನೀಡಿ ಎಂದು ಸೇನೆಗೆ ಸೂಚಿಸಿರುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದರು!!

ಚೀನಾ ಮತ್ತು ಪಾಕಿಸ್ತಾನವು ತನ್ನ ಕುತಂತ್ರ ಬುದ್ದಿಯಿಂದ ಭಾರತದ ಗಡಿ ಪ್ರವೇಶಿಸಿ ಭಾರತದಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಲು ಹರಸಾಹಸ ಪಡುತ್ತಿರುವ ವಿಚಾರ ಗೊತ್ತೇ ಇದೆ!! ಈಗಾಗಲೇ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ನಂತರದಿಂದಾಗಿ, ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿಗೆ ಪಾಕಿಸ್ತಾನ ವಿಶ್ವದೆದುರು ತಮ್ಮ ಮರ್ಯಾದೆಯನ್ನು ಕಳೆದುಕೊಂಡಿತ್ತು!! ಅಷ್ಟೇ ಅಲ್ಲದೇ ಚೀನಾವನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿರುವ ಕೇಂದ್ರ ಸರ್ಕಾರವು ಇದೀಗ ‘ಗಗನಶಕ್ತಿ-2018’ ಎನ್ನುವ ಅತೀದೊಡ್ಡ ಸಮರಭ್ಯಾಸವನ್ನು ಕೈಗೊಳ್ಳುವ ಮೂಲಕ ಚೀನಾ-ಪಾಕ್ ನ ಹೆಡೆಮುರಿ ಕಟ್ಟಲಿದ್ದಾರೆ!!

ಹಾಗಾಗಿ ಇದೀಗ ಭಾರತೀಯ ವಾಯುಸೇನೆಯು ಮೂರು ದಶಕಗಳಲ್ಲೇ ಅತೀದೊಡ್ಡ ಸಮರಭ್ಯಾಸವಾದ ‘ಗಗನಶಕ್ತಿ-2018’ ನ್ನು ಪಶ್ಚಿಮ ಗಡಿ ಮತ್ತು ಪೂರ್ವ ಗಡಿಗಳಲ್ಲಿ ಆಯೋಜನೆಗೊಂಡಿದೆ. ಅಷ್ಟೇ ಅಲ್ಲದೇ ವಾಯುಪಡೆ ಸಿಬ್ಬಂದಿ ವಿವಿಧ ರೀತಿಯಲ್ಲಿ ಸಮರಾಭ್ಯಾಸಗಳಲ್ಲಿ ತೊಡಗಿಕೊಂಡಿದ್ದಾರೆ. ಚೀನಾ ಮತ್ತು ಪಾಕಿಸ್ತಾನದೊಂದಿಗೆ ಏಕಕಾಲದಲ್ಲಿ ಯುದ್ಧ ಸಂಭವಿಸಿದಾಗ ವಾಯುಪಡೆಯ ಸಿದ್ದತೆ ಮತ್ತು ಸಾಮಥ್ರ್ಯವನ್ನು ಪರೀಕ್ಷಿಸುವ ಸಲುವಾಗಿ ಈ ಬೃಹತ್ ಸಮರಭ್ಯಾಸವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ!!

ಪದೇ ಪದೇ ಭಾರತೀಯ ಸೇನೆ ತನ್ನ ನೆರೆ ರಾಷ್ಟ್ರದ ಉಪಟಳದಿಂದ ಅದೆಷ್ಟೂ ಬಾರಿ ಶತ್ರುರಾಷ್ಟ್ರವನ್ನು ಹೀನಾಯವಾಗಿ ಸೋಲಿಸಿದರೂ ಕೂಡ ತಮ್ಮ ನರಿ ಬುದ್ದಿಯನ್ನು ಬಿಡುವಲ್ಲಿ ಮಾತ್ರ ತಯಾರಾಗಿಲ್ಲ ಎನ್ನುವುದು ವಿಪರ್ಯಾಸ!! ಆದರೆ ಈಗಾಗಲೇ ವಿಶ್ವದಲ್ಲೇ ಅತಿದೊಡ್ಡ ಸೇನಾಪಡೆಯನ್ನು ಹೊಂದಿರುವ ಭಾರತ ಇನ್ನಷ್ಟೋ ಬಲಿಷ್ಠ ರಾಷ್ಟ್ರವಾಗಲು ಸಿದ್ಧತೆಗಳನ್ನು ನಡೆಸುತ್ತಿದ್ದು, ಶತ್ರುಗಳ ಎದೆಯಲ್ಲಿ ನಗಾರಿ ಭಾರಿಸಿದಂತಾಗಿದೆ!!

ಮೂಲ: https://www.hindustantimes.com/india-news/gaganshakti-2018-indian-air-force-displays-might-in-biggest-combat-exercise/story-JRSoJemNz7iy4Y676j9b6I.html

– ಅಲೋಖಾ

 

Editor Postcard Kannada:
Related Post