X

ರಕ್ಷಣಾ ಮಾಹಿತಿ ಕದ್ದು ಪಾಕ್‌ಗೆ ಹಂಚಿದ ಪತ್ರಕರ್ತ: ಪ್ರಕರಣ ದಾಖಲು

ನಮ್ಮ ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿ ದಂತಹ ಮಾಹಿತಿಗಳನ್ನು ಶತ್ರು ರಾಷ್ಟ್ರ ಪಾಕಿಸ್ಥಾನಕ್ಕೆ ರವಾನಿಸುತ್ತಿದ್ದ ಪತ್ರಕರ್ತನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.

ಡಿಆರ್‌ಡಿಒ, ಸೇನೆಗೆ ಸಂಬಂಧಿಸಿದಂತಹ ಮಹತ್ವದ ಸೂಕ್ಷ್ಮ ಮಾಹಿತಿಗಳನ್ನು ಪಾಕ್‌ಗೆ ಒದಗಿಸುತ್ತಿದ್ದ ಆಕೋಪದಲ್ಲಿ ಈ ದೇಶದ್ರೋಹಿಯನ್ನು ಬಂಧಿಸಲಾಗಿದೆ.

ಭಾರತೀಯ ಸೇನೆ ಮತ್ತು ಡಿಆರ್‌ಡಿಒ‌ಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹ ಮಾಡಿ, ಅವುಗಳನ್ನು ವಿದೇಶಗಳ ಜೊತೆಗೆ ಈ ಅರೆಕಾಲಿಕ ಪತ್ರಕರ್ತ ಹಂಚಿಕೊಳ್ಳುತ್ತಿದ್ದ. ಈ ಹಿನ್ನೆಲೆಯಲ್ಲಿ ಸಿಬಿಐ ಆತನ ವಿರುದ್ಧ ದೂರನ್ನು ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿ ದೇಶದ್ರೋಹಿಯನ್ನು ವಿವೇಕ್ ರಘುವಂಶಿ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ರಹಸ್ಯ ಕಾಯ್ದೆಗಳಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಸೇನೆ ಮತ್ತು ಡಿಆರ್‌ಡಿಒಗೆ ಸಂಬಂಧಿಸಿದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ವಿಷಯಗಳನ್ನು ಸಂಗ್ರಹಿಸಿ, ವಿದೇಶಿ ಗುಪ್ತಚರ ಇಲಾಖೆಗಳ ಜೊತೆ ಹಂಚಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಜೈಪುರ, ದೆಹಲಿಗೆ ಸಂಬಂಧಿಸಿದ ೧೨ ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸುತ್ತಿದ್ದು, ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿಯೂ ತಿಳಿದು ಬಂದಿದೆ.

Post Card Balaga:
Related Post