X

ಭೀಕರ ಮಳೆಯನ್ನೂ ಲೆಕ್ಕಿಸದೆ ಪ್ರವಾಹ ಪೀಡಿತರನ್ನು ರಕ್ಷಿಸಿದ ಈ ಐಎಎಸ್ ಅಧಿಕಾರಿ ಇದೀಗ ಇಂಟರ್ನೆಟ್ ಹೀರೋ!! 

ದೇಶದೆಲ್ಲೆಡೆ ವರುಣನ ಆರ್ಭಟದಿಂದಾಗಿ ಅದೆಷ್ಟೋ ಜೀವ ಸಂಕುಲಗಳು ಸಂಕಷ್ಟವನ್ನು ಅನುಭವಿಸುತ್ತಿದ್ದರೆ ಈ ಬಗ್ಗೆ ಕ್ಯಾರೆ ಅನ್ನದ ಅದೆಷ್ಟೋ ಅಧಿಕಾರಿಗಳು ತಮ್ಮ ಕಛೇರಿಯಲ್ಲೋ ಅಥವಾ ತಮ್ಮ ಮನೆಯಲ್ಲೂ ನಿಂತು ಕೆಲ ಅಗತ್ಯಕ್ರಮಗಳನ್ನು ಕೈಗೊಳ್ಳುವವರನ್ನು ನೋಡಿದ್ದೇವೆ, ಕೇಳಿದ್ದೇವೆ!!! ಆದರೆ ನೆರೆ ಪೀಡಿತ ಭಾಗಗಳಲ್ಲಿ ಸ್ವತಃ ಕಾರ್ಯಾಚರಣೆಗಿಳಿದು ಸಂತ್ರಸ್ಥರನ್ನು ರಕ್ಷಣೆ ಮಾಡುತ್ತಿರುವ ಅಧಿಕಾರಿಗಳು ಅದೆಷ್ಟು ಜನ ಇದ್ದಾರೋ ನಾ ಕಾಣೆ!! ಆದರೆ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿದ್ದರೂ ಅದ್ಯಾವುದನ್ನು ಲೆಕ್ಕಿಸದ ಐಎಎಸ್ ಅಧಿಕಾರಿಯೊಬ್ಬರು ಪ್ರವಾಹ ಪೀಡಿತರಿಗೆ ನೆರವಾಗುವ ಮೂಲಕ ಇಂಟರ್ನೆಟ್ ಹೀರೋ ಆಗಿದ್ದಾರೆ.

ಹೌದು… ಉನ್ನತ ಅಧಿಕಾರದಲ್ಲಿದ್ದರೆ ತಾವು ಹೇಳಿದ್ದೇ ರೂಲ್ಸ್ ಎನ್ನುವಂತಹ ಮನಸ್ಥಿತಿಯುಳ್ಳ ಅದೆಷ್ಟೋ ಅಧಿಕಾರಿಗಳಿಗೆ ಈ ಐಎಎಸ್ ಅಧಿಕಾರಿ ನಿಜಕ್ಕೂ ಕೂಡ ರೋಲ್ ಮಾಡೆಲ್ ಆದರೂ ಆಗಬಹುದೇನೋ?? ಆದರೆ ಭೀಕರ ಮಳೆಯನ್ನೂ ಲೆಕ್ಕಿಸದೆ ಪ್ರವಾಹ ಪೀಡಿತರಿಗೆ ನೆರವಾಗಿದ್ದನ್ನು ಕಂಡರೆ ನಿಜಕ್ಕೂ ಹೆಮ್ಮೆ ಎಂದೆನಿಸುತ್ತೆ!! ಅಷ್ಟಕ್ಕೂ ಆ ಐಎಎಸ್ ಅಧಿಕಾರಿಯಾದರೂ ಯಾರು ಗೊತ್ತೇ??

ದೇಶದ ಹಲವೆಡೆ ಮಳೆ ಆರ್ಭಟ ಜೋರಾಗುತ್ತಿದ್ದು, ಅದರಲ್ಲೂ ಮಣಿಪುರದಲ್ಲೂ ಕಳೆದ ಕೆಲ ದಿನಗಳಿಂದ ಮಳೆ ಅಬ್ಬರ ಜೋರಾಗಿದೆ. ಅಷ್ಟೇ ಅಲ್ಲದೇ, ಮಣಿಪುರದ ಇಂಫಾಲದಲ್ಲಿಯೂ ಪ್ರವಾಹ ಪರಿಸ್ಥಿತಿ ಉದ್ಭವವಾಗಿದ್ದು, ಸ್ವತಃ ಅಲ್ಲಿನ ಐಎಎಸ್ ಅಧಿಕಾರಿಯೇ ಜನರ ಸಹಾಯಕ್ಕಾಗಿ ಧಾವಿಸಿ ಬಂದಿದ್ದಾರೆ ಅವರೇ ಐಎಎಸ್ ಅಧಿಕಾರಿ ದಿಲೀಪ್ ಸಿಂಗ್ !! ಹೌದು… ಮಣಿಪುರದ ಇಂಫಾಲದಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಭೀಕರ ಮಳೆಯನ್ನೂ ಲೆಕ್ಕಿಸದೆ ಪ್ರವಾಹ ಪೀಡಿತರಿಗೆ ದಿಲೀಪ್ ಸಿಂಗ್ ಎಂಬ ಐಎಎಸ್ ಅಧಿಕಾರಿ ನೆರವಾಗಿದ್ದು, ಅವರ ಕಾರ್ಯಕ್ಕೆ ಟ್ವಿಟರ್ ಮತ್ತು ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಪ್ರಶಂಸೆ ಕೇಳಿ ಬಂದಿದೆ.

ಕಳೆದ ಎರಡು ಮೂರು ದಿನಗಳಿಂದ ಇಂಫಾಲದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಭಾಗಗಳು ನೆರೆಯಂತಹ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಅಷ್ಟೇ ಅಲ್ಲದೇ ಈ ಕಾರಣದಿಂದಾಗಿ ಜನರ ಜನಜೀವನವು ಅಸ್ತವ್ಯಸ್ಥಗೊಂಡಿದೆ. ಹಾಗಾಗಿ ಇಂಫಾಲದಲ್ಲಿ ನೆರೆ ಪೀಡಿತ ಭಾಗಗಳಲ್ಲಿ ಸ್ವತಃ ಕಾರ್ಯಾಚರಣೆಗಿಳಿದು ಸಂತ್ರಸ್ಥರನ್ನು ರಕ್ಷಣೆ ಮಾಡುತ್ತಿರುವ ಐಎಎಸ್ ಅಧಿಕಾರಿ ದಿಲೀಪ್ ಸಿಂಗ್ ಈಗ ಇಂಟರ್ನೆಟ್ ಹೀರೋ ಆಗಿದ್ದಾರೆ.

ಸರಕಾರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಂಡಿದ್ದರೂ ಕೂಡ ಪ್ರವಾಹ ನಿಯಂತ್ರಣ ಇಲಾಖೆಯ ಜೊತೆಗೆ ಸ್ವತಃ ದಿಲೀಪ್ ಸಿಂಗ್, ನೆರೆ ನಿಯಂತ್ರಣಕ್ಕೆ ಸ್ವತಃ ನೀರಿಗೆ ಇಳಿದಿದ್ದಾರೆ.  ರಕ್ಷಣಾ ಪಡೆಯ ಜತೆಗೆ ದಿಲೀಪ್ ಸಿಂಗ್ ಮಳೆಯನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿರುವ ಚಿತ್ರಗಳು ಟ್ವಿಟರ್‍ನಲ್ಲಿ ವೈರಲ್ ಆಗಿದೆ. ಜನರು ಐಎಎಸ್ ಅಧಿಕಾರಿಯ ಕಾರ್ಯುವನ್ನು ಪ್ರಶಂಶಿಸಿದರೆ, ಪರಿಹಾರ ಕಾರ್ಯಕ್ಕೆ ಸೂಕ್ತ ವ್ಯವಸ್ಥೆ ಮಾಡದ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಸುರಿಯುವ ಮಳೆಯನ್ನೂ ಲೆಕ್ಕಿಸಿದೆ ಜನ ರಕ್ಷಣೆಗಾಗಿ ಧಾವಿಸಿರುವ ಐಎಎಸ್ ಅಧಿಕಾರಿಯನ್ನು ನೋಡಿದಾಗ ನಿಜಕ್ಕೂ ಕೂಡ ಹೆಮ್ಮೆ ಎಂದೆನಿಸುತ್ತದೆ!! ಇಂತಹ ಅಧಿಕಾರಿಗಳು ದೇಶದ ಮೂಲೆ ಮೂಲೆಯಲ್ಲಿದ್ದಿದ್ದರೆ ದೇಶ ಇಂದು ಅಭಿವೃದ್ಧಿಶೀಲ ರಾಷ್ಟ್ರ ಎನ್ನುವ ಪಟ್ಟಿಗೆ ಸೇರುತ್ತಿತ್ತೋ ಏನೋ ಗೊತ್ತಿಲ್ಲ!! ಆದರೆ ಭ್ರಷ್ಟಚಾರವೆಂಬ ಮೋಹದ ಜಾಲದಲ್ಲಿ ಹಣ ಮಾಡಿಕೊಂಡು ಐಷಾರಾಮಿ ಜೀವನವನ್ನು ಸಾಗಿಸುತ್ತಿರುವ ಕೆಲ ಐಎಎಸ್ ಅಧಿಕಾರಿಗಳಾಗಲಿ ಅಥವ ಯಾವೊಬ್ಬ ಅಧಿಕಾರಿಗಳಾಗಲಿ ದಿಲೀಪ್ ಸಿಂಗ್ ರಂತಹ ಒಬ್ಬ ಅಧಿಕಾರಿ ನಿಜಕ್ಕೂ ಕೂಡ ರೋಲ್ ಮಾಡೆಲ್ ಆದರೂ ಆಗಬಹುದು!!

ಮೂಲ:
http://news13.in/archives/104168

– ಅಲೋಖಾ

 

Editor Postcard Kannada:
Related Post