X

ಗೋ ಮೂತ್ರದ ಬಗ್ಗೆ ಅವಹೇಳನ: ಹಿಂದೂಗಳನ್ನು ಕೆರಳಿಸಿದರೇ ಉದ್ಧವ್ ಠಾಕ್ರೆ

ಆರ್ ಎಸ್‌ ಎಸ್ ಮತ್ತು ಬಿಜೆಪಿ ಪಕ್ಷವನ್ನು ಕಂಡರೆ ಮೈ ಉರಿದುಕೊಳ್ಳುವವರು ನಮ್ಮ ದೇಶದಲ್ಲಿ ಸಾಕಷ್ಟು ಜನರಿದ್ದಾರೆ. ಆರ್ ಎಸ್‌ ಎಸ್ ಬಗ್ಗೆ ವಿವಾದಾತ್ಮಕ ವಾಗಿ ಮಾತನಾಡುವ ಮೂಲಕ ತಮ್ಮ ಉರಿ ಕಡಿಮೆ ಮಾಡಿಕೊಳ್ಳಲು ಬಯಸುವವರ ‌ಸಾಲಿನಲ್ಲಿ ಶಿವಸೇನೆ ಹಾಗೂ ಚಿಹ್ನೆ ಕಳೆದುಕೊಂಡ ಮಹಾರಾಷ್ಟ್ರದ ಮಾಜಿ ಸಿಎಂ ಉದ್ದವಾದ ಠಾಕ್ರೆ ಸಹ ಸೇರಿಕೊಂಡಿದ್ದಾರೆ.

ಶಿವಸೇನೆ ಮತ್ತು ಚಿಹ್ನೆ ಕಳೆದುಕೊಂಡ ಹತಾಶೆಯಲ್ಲಿ ಅವರು ಆಡಳಿತಾರೂಢ ಬಿಜೆಪಿ ಮೇಲೆ ಹರಿಹಾಯ್ದಿದ್ದು, ಹಿಂದೂಗಳು ಪವಿತ್ರ ಎಂದೇ ನಂಬಿರುವ ಗೋಮೂತ್ರದ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಆರ್ ಎಸ್‌ ಎಸ್ ಮತ್ತು ಬಿಜೆಪಿಯನ್ನು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಯನ್ನು ಸ್ವಾಧೀನಪಡಿಸಿಕೊಳ್ಳುವ ವಿಷಯಕ್ಕೆ ಗುರಿಯಾಗಿಸಿದ್ದಾರೆ. ಭಾರತಕ್ಕೆ ಗೋ ಮೂತ್ರ ಸಿಂಪಡಣೆ ಮಾಡುವ ಮೂಲಕ ಸ್ವಾತಂತ್ರ್ಯ ಸಿಕ್ಕಿತೇ? ಎಂದು ಪ್ರಶ್ನಿಸಿದ್ದಾರೆ. ಗೋ ಮೂತ್ರ ಎರಚಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯೇ ಎಂದು ಪ್ರಶ್ನಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ಪ್ರಾಣಾರ್ಪಣೆ ಮಾಡಿದ ಬಳಿಕ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ಅವರು ಹೇಳಿದ್ದು, ಹತಾಶೆಯಿಂದ ಬಿಜೆಪಿ ಮತ್ತು ಆರ್ ಎಸ್‌ ಎಸ್ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಹಿಂದೆಯೂ ಉದ್ದವ್ ಇದೇ ರೀತಿಯ ಹೇಳಿಕೆ ನೀಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು. ೨೦೨೦ ರಲ್ಲಿ ಅವರು ಬಿಜೆಪಿ ನಮ್ಮ ಮೇಲೆ ಹಸುವಿನ ಸೆಗಣಿ ಎರಚಲು ಪ್ರಯತ್ನ ನಡೆಸುತ್ತಿದ್ದಾರೆ. ಅದು ಅಂಟಿಕೊಳ್ಳುತ್ತದೆ ಎಂಬ ಭ್ರಮೆ ಬಿಜೆಪಿಗರದ್ದು. ಅವರ ಬಾಯಿ ಮತ್ತು ಬಟ್ಟೆಗಳು ಗೋ ಮೂತ್ರ ದಿಂದ, ಸೆಗಣಿಯಿಂದ ಕೆರಳುತ್ತಿವೆ ಎಂಬ ಹೇಳಿಕೆ ನೀಡಿದ್ದರು.

ಉದ್ದವ್ ತಂದೆ ಭಾಳಾ ಠಾಕ್ರೆ ಅವರು ಹಿಂದುತ್ವದ ಹೆಸರಿನಲ್ಲಿ ಕಟ್ಟಿದ ಪಕ್ಷವನ್ನು, ಮಗ ಹಿಂದೂ ವಿರೋಧಿ ಪಕ್ಷದ ಹಾಗೆ ಬಿಂಬಿಸುತ್ತಿರುವುದು ಬಾಳಾ ಠಾಕ್ರೆ ಅವರಿಗೆ ಮಾಡುತ್ತಿರುವ ಅವಮಾನವೇ ಸರಿ. ಗೋವನ್ನು ಪೂಜಿಸುವ ಹಿಂದೂಗಳಿಗೆ ಗೋಮೂತ್ರವನ್ನು ಅವಹೇಳನ ಮಾಡಿರುವ ಉದ್ದವ್ ಮಾತುಗಳು ಕೆರಳಿಸಿರುವುದಂತೂ ಸತ್ಯ. ಚುನಾವಣೆಯಲ್ಲಿ ಇದಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ.

Post Card Balaga:
Related Post