X

ಸಿಎಮ್ ಸಿದ್ಧರಾಮಯ್ಯನವರಿಂದ ಮಹಮ್ಮದ್ ಹ್ಯಾರಿಸ್ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನ?! ರಾಜಿ ಸಂಧಾನಕ್ಕೆ ನಿಂತ ಕರ್ನಾಟಕ ಮುಖ್ಯಮಂತ್ರಿ!!

ಬೆಂಗಳೂರೆಂಬ ಮಹಾನಗರದಲ್ಲಿ ನಡೆದ ಕಾಂಗ್ರೆಸ್ ಶಾಸಕನ ಮಗನ ಕ್ರೌರ್ಯವೊಂದು ದಿನಕ್ಕೊಂದು ಹೊಸವತಿರುವು ಪಡೆದುಕೊಳ್ಳುತ್ತ ಸಾಗಿದೆಯಷ್ಟೇ!! ಬಿಯರ್ ಬಾಟಲಿಯಿಂದ ಹಲ್ಲೆ ಮಾಡುವುದನ್ನೇ ಪ್ರತಿಷ್ಟೆ ಎಂದುಕೊಂಡಿರುವ ಮಹಮ್ಮದ್ ಹ್ಯಾರಿಸ್ ನ ಮೇಲಾದ ಮೊಕದ್ದಮೆಯೊಂದು ಗಂಭೀರವಾಗಿ ಹೋಗಿದೆ!ಅದಕ್ಕೆ ತಕ್ಕನಾಗಿ, ಪ್ರತಿ ತಂತ್ರವೆಂಬಂತೆ ಸಿದ್ದರಾಮಯ್ಯನ ಸರಕಾರ ಸಹ ಮೊಕದ್ದಮೆಯನ್ನು ಹೇಗಾದರೂ ಮಾಡಿ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಲೇ ಇದೆ ಬಿಡಿ!! ಕಳೆದ ವಾರ, ಮಹಮ್ಮದ್ ಹ್ಯಾರಿಸ್ ನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ವಿದ್ವತ್ ನ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸಿಂಗಾಪೂರಕ್ಕೆ ಸಾಗಿಸುವ ಯೋಚನೆಯೂ ನಡೆಯುತ್ತಿದೆಯಷ್ಟೇ!

ಇದು ಮುಂಚೆಯ ಕಥೆಯಲ್ಲ!! ಮಹಮ್ಮದ್ ನ ಗೂಂಡಾಗಿರಿಗೋ ಅಥವಾ , ಅಪ್ಪ ಹ್ಯಾರಿಸ್ ನ ಪ್ರಭಾವಿ ವ್ಯಕ್ತಿತ್ವಕ್ಕೋ, ದೌರ್ಜನ್ಯಗಳನ್ನು ವಿಧಿಯಿಲ್ಲದೇ ಸಹಿಸಿಕೊಂಡು ಬಂದಿದ್ದ ಜನತೆ ಇವತ್ತು, ವಿದ್ವತ್ ನ ಪ್ರಕರಣ ಹೊರ ಬರುತ್ತಿದ್ದಂತೆ, ಒಂದೊಂದೇ ಕಥೆಗಳನ್ನು ಬಿಚ್ಚತೊಡಗಿದ್ದಾರೆ! ಕೇವಲ, ವಿದ್ವತ್ ಮಾತ್ರವೇ ಅಲ್ಲ, ಶಾಂತಿನಗರದ ಹೈ ಎನ್ಡ್ ಏರಿಯಾಗಳ ವಸೂಲಿಯಲ್ಲಿಯೂ ಸಹ ಎತ್ತಿದ ಕೈ ಆಗಿರುವ ಈ ಮಹಮ್ಮದ್ ನಲಪಾಡ್ ಗೆ ಗುನ್ನ ಬಿದ್ದಿರುವುದೂ ಸಹ ಸರಿಯಾದ ಸಮಯದಲ್ಲಿಯೇ!! ಅಪ್ಪ ಎಮ್ ಎಲ್ ಎ ಎಂಬ ಗತ್ತಿನಿಂದ ಕಂಡವರ ಪ್ರಾಣ ಹಿಂಡುತ್ತಿದ್ದವನಿಗೆ ಅರಿವಾಗಬೇಕಿತ್ತು ಹತ್ತು ಸಲ ಹೊಡೆತ ತಿಂದವನು ಹನ್ನೊಂದನೇ ಬಾರಿಗಾದರೂ ತಿರುಗಿ ತಿನ್ನುತ್ತಾನೆ ಎಂದು!! ಆದರೆ, ವಿದ್ವತ್ ವಿಚಾರದಲ್ಲಿಯೂ ನಡೆಯುತ್ತೆ ಬಿಡು ಎಂದು ಹಲ್ಕೆಗಿಳಿದ ಮಹಮ್ಮದ್ ನಲಪಾಡ್ ನ ಗ್ರಹಚಾರ ಕೆಟ್ಟಿದ್ದು ಅಲ್ಲಿಯೇ!! ಈ ದೌರ್ಜನ್ಯವೊಂದು ಕಾಂಗ್ರೆಸ್ ಸರಕಾರದ ನ್ಯಾಯಾಂಗ ವ್ಯವಸ್ಥೆ ಯಾವ ಬಗೆಯಲ್ಲಿ ದಿವಾಳಿನೆದ್ದಿದೆ ಎಂಬುದನ್ನು ಸಾಬೀತು ಪಡಿಸಿತ್ತಷ್ಟೇ!! ಜೊತೆಗೆ, ಇಡೀ ರಾಜ್ಯದ ಕಾಂಗ್ರೆಸ್ ಖಾಂದಾನ್ ಗಳ ನಾಯಕರನ್ನು ಮುಜುಗರಕ್ಕೀಡು ಮಾಡಿದ್ದ ಈ ಪ್ರಕರಣವೊಂದನ್ನು ಗಂಭೀರವಾಗಲು ಬಿಡಬಾರದೆಂಬ ಕಾರಣಕ್ಕೆ, ವಿದ್ವತ್ ನ ತಂದೆಯಾದ ಲೋಕನಾಥ್ ರನ್ನು ಭೇಟಿಯಾಗಿ ಸಂಧಾನಕ್ಕೊಪ್ಪಿಸಬೇಕು ಎಂದು ಸಾಲಿನಲ್ಲಿ ನಿಂತಿದ್ದಾರೆ! ಕಳೆದ ಮೂರು ದಿವಸದಿಂದ ರಾಜ್ಯದ ಗೃಹ ಸಚಿವರು, ಡಿಜಿಪಿ ಮತ್ತು ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳು ವಿದ್ವತ್ ನ ಪ್ರಕರಣವನ್ನು ವಾಪಾಸು ತೆಗೆದುಕೊಳ್ಳುವಂತೆ, ಲೋಕನಾಥ್ ರನ್ನು ಬಲವಂತಪಡಿಸುತ್ತಿದ್ದಾರೆ!! ಆದರೆ, ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಲೋಕನಾಥ್ ಮಹಮ್ಮದ್ ಹ್ಯಾರಿಸ್ ನಿಗೆ ಶಿಕ್ಷೆಯಾಗುವ ತನಕವೂ ಬಿಡಬಾರದೆಂಬ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ! ಅದಲ್ಲದೇ, ರಾಜಿಯ ಬಗ್ಗೆ ಸ್ವತಃ ಹ್ಯಾರಿಸ್ ನಲಪಾಡ್ ಆಸ್ಪತ್ರೆಗೆ ಹೋಗಿ ರಾಜಿ ಸಂಧಾನಕ್ಕೆ ಯತ್ನಿಸಿದರೂ ಸಹ, ಲೋಕನಾಥ್ ಉತ್ತರವನ್ನೂ ನೀಡದೇ ಎದ್ದು ನಡೆದಿದ್ದಾರೆ! ಅದಲ್ಲದೇ, ಖ್ಯಾತ ನಟರೂ ಸಹ ವಿದ್ವತ್ ನ ಆರೋಗ್ಯವನ್ನು ವಿಚಾರಿಸಲು ಮಲ್ಯ ಆಸ್ಪತ್ರೆಗೆ ಭೇಟಿ
ನೀಡಿದ್ದಲ್ಲದೆ, ಮಹಮ್ಮದ್ ನ ಕೃತ್ಯವನ್ನು ಖಂಡಿಸಿದ್ದಾರೆ!! ಕಾಂಗ್ರಸ್ ನ ಮೂಲಗಳಿಂದ ಬಂದ ಮಾಹಿತ ಪ್ರಕಾರ, ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಮುಚ್ಚಲು ರಾಜ್ಯ ಕಾಂಗ್ರೆಸ್ ನಾಯಕರು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ!

ವಾಸ್ತವವಾಗಿ, ಈ ಪ್ರಕರಣವನ್ನು ರಾಜ್ಯಾದ್ಯಂತ ಖಂಡಿಸಿರುವ ಕನ್ನಡಿಗರು, ನೇರವಾಗಿ ಸಿದ್ಧರಾಮಯ್ಯನವರನ್ನು ಪ್ರಶ್ನೆ ಮಾಡಿದ್ದಾರೆ!! ಅದಲ್ಲದೇ, ವಿಧಾನಸಭೆ ಚುನಾವಣೆ ಹತ್ತಿರ ಬಂದ ಹಾಗೆ ನಡೆದಿರುವ ಈ ಪ್ರಕರಣ ನೇರವಾಗಿ ಚುನಾವಣೆಗೆ ಸಮಸ್ತೆ ತಂದೊಡ್ಡುವುದಲ್ಲದೆ, ಈಗಾಗಲೇ ತುಕ್ಕು ಹಿಡಿದಿರುವ ರಾಜ್ಯ ಸರಕಾರದ ನ್ಯಾಯಾಂಗ ವ್ಯವಸ್ಥೆಯನ್ನು ಜನ ಮತ್ತೆ ನಂಬಿ ಮತ ನೀಡಲು ಸಾಧ್ಯವೇ ಇಲ್ಲ ಎಂಬ ಸತ್ಯ ಮನವರಿಕೆಯಾಗಿ ಹೋಗಿದೆ ರಾಜ್ಯ ಸರಕಾರಕ್ಕೆ ಬಿಡಿ! ಅದಕ್ಕೇ, ಸನ್ಮಾನ್ಯ ಸಿಎಮ್ ಸಿದ್ಧರಾಮಯ್ಯನವರು ಸ್ವತಃ ಲೋಕನಾಥ್ ರನ್ನು ಭೇಟಿ ಮಾಡಿ ಸಂಧಾನಕ್ಕಿಳಿಸಲೂ ಬಹುಷಃ ಹಿಂದೆ ಮುಂದೆ ನೋಡುವುದಿಲ್ಲವೇನೋ!! ಪ್ರಕರಣ ಆಗುವುದಕ್ಕಿಂತ ಮುಂಚೆ ಕಳೆದೊಂದಿಷ್ಟು ವರ್ಷಗಳಿಂದಲೂ ಶಾಂತಿನಗರದ ಕಿಂಗ್ ಆಗಿ ಮೆರೆಯುತ್ತಿದ್ದಾಗ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಈಗ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಬೊಬ್ಬಿರಿಯುತ್ತಿರುವ ಸಿದ್ಧರಾಮಯ್ಯನವರಿಗೆ ಕೆಲವೊಂದಿಷ್ಟು ಸತ್ಯಗಳು ಅರ್ಥವಾಗಲೇ ಬೇಕಿದೆ!! ಗೂಂಡಾ ಮತ್ತು ರೌಡಿಗಳಿಗೆ ಬೇಕಾ ಬಿಟ್ಟಿ ಸ್ವಾತಂತ್ರ್ಯ ಕೊಟ್ಟಿದ್ದು ಇದೇ ರಾಜ್ಯ ಕಾಂಗ್ರೆಸ್ ಎಂಬುದು!!

ವಿದ್ವತ್ ರ ಪ್ರಕರಣ ಗಂಭೀರವಾಗುವುದಕ್ಕಿಂತ ಮುಂಚೆ ,ಎರಡು ಮೂರು ದಿನದಲ್ಲಿ ಇನ್ನೊಂದಿಷ್ಟು ಇದೇ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿವೆ!! ಕಾಂಗ್ರೆಸ್ ನಾಯಕರು ಬಿಜೆಪಿ ಕಾರ್ಯಕರ್ತರನ್ನು ಥಳಿಸಿದ್ದರಿಂದ ಹಿಡಿದು, ಇನ್ನೊಬ್ಬ ಕಾಂಗಿ ನಾಯಕ ಇಡೀ ಬಿಬಿಎಂಪಿ ಗೆ ಬೆಂಕಿ ಹಚ್ಚುತ್ತೇನೆ ಎನ್ನುವವರೆಗೂ ಸಹ ನಡೆದಿದೆ ಘಟನೆಗಳು!! ವ್ಹಾ!! ಇದು ಕಳೆದ ಐದು ವರ್ಷಗಳಿಂದ ನಡೆಯುತ್ತಲೇ ಬಂದಿದೆ ಬಿಡಿ! ಆದರೆ, ಈ ಸಲ ಚುನಾವಣೆಯ ಹಿನ್ನೆಲೆಯಲ್ಲಿಯೇ ನಡೆದಿರುವ ಈ ಘಟನೆಗಳು ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿರುವುದು ಅಷ್ಟೇ ಸತ್ಯ!

ಚುನಾವಣೆಯ ಮತ ಬ್ಯಾಂಕ್ ತಪ್ಪಿದರೆ ಕಷ್ಟ ಎನ್ನುವ ಒಂದೇ ಒಂದು ಕಾರಣದಿಂದ, ಇವತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸ್ವತಃ ಲೋಕನಾಥ್ ಗೆ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದಾರೆ!! ಮಹಮ್ಮದ್ ಹ್ಯಾರಿಸ್ ನ ಮೇಲೆ ದಾಖಲಿಸಿರುವ ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಂಡು ಬಿಡಿ ಎನ್ನುವ ಒತ್ತಡಕ್ಕಿಂತ, ಯಾವ ನೈತಿಕತೆಯೂ, ಮಾನವೀಯತೆಯೂ ಮುಖ್ಯಮಂತ್ರಿಗಿಲ್ಲ ಎನ್ನುವುದು ತಿಳಿಯುತ್ತಲೇ ಇದೆ!! ಆದರೆ, ಯಾವಾಗ ಲೋಕನಾಥ್ ಯಾವಾಗ ರಾಜಿಯಾಗುವುದಿಲ್ಲ ಎಂದಿದ್ಧಾರೋ, ಇದೇ ಘನತೆವೆತ್ತ ಸಿಎಮ್ ಸಿದ್ಧರಾಮಯ್ಯನವರು ಮಹಮ್ಮದ್ ಗೆ ಕೊಡುವ ಜಾಮೀನನ್ನು ಪ್ರಶ್ನಿಸಬೇಡಿ
ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ! ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ಲೋಕನಾಥ್ ತಮ್ಮ ಮಗನ ಮೇಲೆ ನಡೆದಿರುವ ಹಲ್ಲೆ ಸಾಮಾನ್ಯ ವಿಷಯವಲ್ಲ ಎಂದು ಹೇಳಿರುವುದಲ್ಲದೇ, ನಾನು ಯಾವುದೇ ಪಕ್ಷದ ವತಿ ಅಥವಾ ವಿರುದ್ಧವಾಗಿ ನಿರ್ಧಾರ ತಳೆದಿಲ್ಲ! ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ನನ್ನ ಮಗನ ಪರವಾಗಿ ನಿರ್ಧಾರ ತಳೆದಿದ್ದೇನೆ! ಯಾವುದೇ ಕಾರಣಕ್ಕೂ, ಮಹಮ್ಮದ್ ತಪ್ಪಿಸಿಕೊಳ್ಳಲು ಬಿಡುವುದಿಲ್ಲ! ಯಾರೇ ಅಡ್ಡ ಬಂದರೂ ಅಷ್ಟೇ ! ಎಂದು ಗುಡುಗಿ ಹೊರ ಬಂದಿರುವ ಲೋಕನಾಥ್ ರಿಂದ ಸಿದ್ಧರಾಮಯ್ಯನವರು ಪಾಪ!! ಮೂಗಿನ ಮೇಲೆ ಬೆರಳಿಟ್ಟು ಕೂರುವಂತಾಗಿದೆ!!

ಮೂಲಗಳ ಪ್ರಕಾರ, ಕಾಂಗ್ರೆಸ್ ನ ಹಿರಿಯ ನಾಯಕರು ಸ್ವತಃ ಸಿದ್ಧರಾಮಯ್ಯನವರಿಗೇ ಈ ವಿವಾದವನ್ನು ಬಗೆಹರಿಸುವಂತೆ ಕೇಳಿದ್ದರಲ್ಲೂ ಹಿಂದೊಂದು ಬಲವಾದ ಕಾರಣವಿದೆ!! ರಾಹುಲ್ ಗಾಂಧಿ ಮತ್ತೆ, ಕರ್ನಾಟಕ ಪ್ರವಾಸಕ್ಕೆ ಬರಲಿರುವುದರಿಂದ, ಬರುವುದರೊಳಗೆ ವಿವಾದ ಬಗೆಹರಿಸದಿದ್ದರೆ, ರಾಹುಲ್ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತೆಂದಯ ಹೆದರಿರುವ ರಾಜ್ಯ ಕಾಂಗ್ರೆಸ್ ಈಗ ಇಂಗು ತಿಂದ ಮಂಗನಂತಾಗಿದೆ!!

ಇದು ನಿಜಕ್ಕೂ ಅದ್ಭುತವೇ ಸರಿ!! ಲೋಕನಾಥ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯದೇ ಇದ್ದದ್ದು ಎಲ್ಲಾ ದೃಷ್ಟಿಯಿಂದಲೂ ಒಳ್ಳೆಯದೇ ಆಗಿದೆ!! ಮಹಮ್ಮದ್ ಹ್ಯಾರಿಸ್ ನಂತಹ ಗೂಂಡಾಗಳನ್ನು ರಕ್ಷಿಸಲು ಹೊರಟಿರುವ ಸರಕಾರಕ್ಕೂ ಪಾಠ ಕಲಿಸಲೇಬೇಕು ಎಂದು ಹಠ ಹಿಡಿದು ನಿಂತಿರುವ ಲೋಕನಾಥ್ ರಿಂದ ಈ ಸಲ ನಿಜಕ್ಕೂ ಬುದ್ದಿ ಕಲಿಯಲಿದೆ ರಾಜ್ಯ ಕಾಂಗ್ರೆಸ್!! ಪರಿಸ್ಥಿತಿ ನೋಡಿ!! ಸ್ವತಃ ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರು
ಹಲ್ಲೆಯಾಗಿಬಹೋಗಿದೆ! ಸಣ್ಣ ವಿಷಯ ದೊಡ್ಡದು ಮಾಡುವುದಿ ಬೇಡ ಎಂದು ರಾಜಿ ಸಂಧಾನಕ್ಕೆ ಯತ್ನಿಸುವ ಮುಂಚೆ ತಮ್ಮ ಮನೆ ಮಕ್ಕಳನ್ನು
ಗಮನದಲ್ಲಿರಿಸಿಕೊಳ್ಳಬೇಕಾಗಿತ್ತು! ತಮ್ಮ ಮನೆಯ ದೀಪ ಆರಿತೆಂದು ಪರರದ್ದೂ ಆರಲೆಂಬ ಆಶಯ ಹೊತ್ತಿರುವವರೇ ಸಿದ್ಧರಾಮಯ್ಯ?! ಅಥವಾ ಹಿಂದೂವಿನ ಮಕ್ಕಳಲ್ಲವೇ ಎಂದು ಮತ್ತದೇ ತುಷ್ಟೀಕರಣಕ್ಕಿಳಿದಿದೆಯೇ ಸರಕಾರ?!

ಇವತ್ತೂ ಸಹ ಮತ್ತದೆ ಗೂಂಡಾಗಳ ಪರ ನಿಂತಿರುವ ಸಿದ್ದರಾಮಯ್ಯ ಸಾಧಿಸ ಹೊರಟಿರುವುದಾದರೂ ಏನು ಸ್ವಾಮಿ?! ಗೆಲುವನ್ನೇ?! ಅಥವಾ ಪಾಪ ಕರ್ಮಗಳನ್ನೇ?! ಇದೇ ಸಂಧಾನವನ್ನು ವಿದ್ವತ್ ನ ಬದಲಾಗಿ ಮಹಮ್ಮದ್ ನೇ ಹೊಡೆತ ತಿಂದು ಮಲಗಿದ್ದಿದ್ದರೆ ಮಾಡುತ್ತಿದ್ದರಾ ಸಿದ್ಧರಾಮಯ್ಯ?! ನಿಜಕ್ಕೂ ನಾಚಿಕೆಯಾಗಬೇಕಿದೆ!! ಕರ್ನಾಟಕದಂತಹ ಅದ್ಭುತ ರಾಜ್ಯವೊಂದು ಇಂತಹ ನಾಚಿಕೆಗೆಟ್ಟ ನೈತಿಕತೆ ಇಲ್ಲದ ಮುಖ್ಯ ಮಂತ್ರಿಯೊಂದರಿಂದ ಅನುಭವಿಸಬೇಕಾಗಿ ಬಂದಿತಲ್ಲ?! ಛೇ!!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post