X
    Categories: ಅಂಕಣ

ನಾ ಕಂಡ ಅಪರೂಪದ ರಾಜಕಾರಣಿ ಪ್ರತಾಪ್ ಸಿಂಹ ಬದಲಾಗಿದ್ದಾರೆಯೇ?!

ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆ! ಮೈಸೂರಿನ ಸಂಸದರಾದ ಪ್ರತಾಪ್ ಸಿಂಹರವರ ಬರೆಯಲೇಬೇಕೆಂದು! ಹಾಗಂತಹ, ನನಗೆ ಅವರೇನೂ ತೀರಾ ಎನ್ನುವಷ್ಟು ಪರಿಚಯವಿಲ್ಲ! ಮೂರು ನಾಲ್ಕು ಬಾರಿ ಭೇಟಿಯಾಗಿರಬಹುದಷ್ಟೇ! ಮಾತುಕಥೆಗೆ ಸಮಯ ಕಳೆದಿರಬಹುದಷ್ಟೇ!

ಮೊನ್ನೆ ಆತ್ಮೀಯರೊಬ್ಬರ ಮದುವೆಗೆ ಹೋಗಿದ್ದೆ, ಮೈಸೂರಿಗೆ! ತಕ್ಷಣ ಪ್ರತಾಪ್ ಸಿಂಹರವರ ನೆನಪಾಗಿ ಕರೆ ಮಾಡಿ ಭೇಟಿ ಸಾಧ್ಯವಾ್ಬಹುದಾ ಎಂದೆ! “ಹೂಂ, ಮನೆಗೆ ಊಟಕ್ಕೇ ಬನ್ನಿ’ ಎಂದು ಆಹ್ವಾನಿಸಿದರು! ಅದರಂತೆಯೇ, ಹೋದಾಗ, ಜೊತೆಯಲ್ಲೊಬ್ಬ ನನ್ನ ಗೆಳೆಯನೂ ಇದ್ದ. ಮಾತಾಡುತ್ತಾ ವಿಷಯವೊಂದನ್ನು ಕೇಳಲ್ಪಟ್ಟೆ! “ಪ್ರತಾಪ್ ಸಿಂಹ ರಾಜಕೀಯಕ್ಕೆ ಬಂದ ಮೇಲೆ ಬಹಳ ದುಡ್ಡು ಮಾಡಿದ್ದಾರೆ!” ಎಂದು. ನನಗೆ ನಿಜಕ್ಕೂ ಆಶ್ಚರ್ಯವಾಗಿ ಹೋಯಿತು! ಹಾಗೆಲ್ಲ ಸಾಧ್ಯವೇ ಇಲ್ಲ ಎಂದು ವಾದಿಸಿದ್ದೆ ನಾನು! ಪ್ರತಾಪ್ ಸಿಂಹ ಒಬ್ಬ ಮೋದಿ ಅಭಿಮಾನಿ! ಎಲ್ಲದಕ್ಕಿಂತ ಹೆಚ್ಚಾಗಿ ಸಿದ್ಧಾಂತಗಳನ್ನು ನಂಬಿದ ವ್ಯಕ್ತಿ! ಹೀಗೆಲ್ಲ ಮಾಡಿ ಹೆಸರು ಕೆಡಿಸಿಕೊಳ್ಳುವಷ್ಟು ಮಟ್ಟಕ್ಕಿಲ್ಲ ಎಂದಿದ್ದೆ!

ಮನೆಗೆ ಹೋಗುತ್ತಿದ್ದ ಹಾಗೆ ಸ್ವಾಗತಿಸಿದ ಪ್ರತಾಪ್ ಸಿಂಹರ ಮನೆಯಲ್ಲಿ ಕುಳಿತಿದ್ದನಷ್ಟೇ! ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದಾಗ ತೀರಾ ಲೋಕಲ್ ಬ್ರಾಂಡ್ ನ ಟಿವಿಯೊಂದು ಕಂಡಿತು! ಇವತ್ತಿನ ಯುಗದಲ್ಲಿ ಎಲ್ಲರ ಮನೆಯಲ್ಲಿಯೂ ಇರುವುದು ದೊಡ್ಡ ದೊಡ್ಡ ಟಿವಿ! ಆದರೆ, ಸಂಸದರಾಗಿದ್ದೂ ಸಹ ಸರಳವಾಗು ಬದುಕಲು ಸಾಧ್ಯವಿದೆ ಎಂದು ಗೊತ್ತಾದದ್ದು ಪ್ರತಾಪ್ ಸಿಂಹರವರ ಮನೆ ನೋಡಿದಾಗ!

ಸ್ವಲ್ಪ ಕುಶಲೋಪರಿ ಆಗುತ್ತಿದ್ದ ಹಾಗೆ ತಡೆಯಲಾರದೇ ಕೇಳಿದೆ! ‘ಜೀ, ಸ್ವಂತ ಮನೆ ಕಟ್ಟಿಸಿದ್ದೀರಾ?!’ ‘ಇಲ್ಲ, ಬಾಡಿಗೆ ಮನೆಯಲ್ಲಿದ್ದೇನೆ ನಾನು” ಎಂದು ಅಷ್ಟೇ ತಣ್ಣಗೆ ಉತ್ತರಿಸಿದರು! ನಾನು ನಿಜಕ್ಕೂ ಬೆವತು ಹೋದೆ! ಒಬ್ಬ ಸಂಸದ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವುದಾ?! ಎಂಬ ಆಲೋಚನೆಯೇ ದಿಕ್ಕುಗೆಡಿಸಿತ್ತು!!!

ಮತ್ತೂ ಕೇಳಿದೆ! “ಜೀ, ತಪ್ಪು ತಿಳಿಯಬೇಡಿ! ಪ್ರತಾಪ್ ಸಿಂಹ ಬಹಳ ದುಡ್ಡು ಮಾಡಿದ್ದಾರೆ ಅಂತ ಹೇಳ್ತಿದ್ದಾರೆ. ನೀವು ನೋಡಿದರೆ, ಬಾಡಿಗೆ ಮನೆಯಲ್ಲಿದ್ದೇನೆ ಅಂತಿದ್ದೀರಲ್ಲ?!”

ಪ್ರತಾಪ್ ಸಿಂಹ ಜೋರಾಗಿ ನಕ್ಕುಬಿಟ್ಟರು!!

ನಾನು ಮತ್ತೆ ಬೇರೆ ಪ್ರಶ್ನೆ ಕೇಳಲಿಲ್ಲ! ರಾತ್ರಿಯೂಟವನ್ನು ಸಿಂಹರ ಜೊತೆ ಮುಗಿಸಿ ಹೊರಟೆ ಮನೆಗೆ!

ದಾರಿಯುದ್ದಕ್ಕೂ ಕೂಡ ಅದೇ ಯೋಚನೆ! ಒಬ್ಬ ಸಂಸದ! ಬಾಡಿಗೆ ಮನೆ! ಲೋಕಲ್ ಬ್ರಾಂಡ್ ಟಿವಿ! ನಗು!

ಪ್ರತಾಪ್ ಸಿಂಹರವರ ಬಗ್ಗೆ ತಿಳಿಯಲೇಬೇಕೆಂದೆನಿಸಿ ಅವರ ಆತ್ಮೀಯರೊಬ್ಬರ ಹತ್ತಿರ ವಿಚಾರಿಸಿದ್ದಷ್ಟೇ! ನಾನು ನಿಜಕ್ಕೂ ದಂಗಾಗಿ ಹೋಗಿದ್ದೆ!

ಇಲ್ಲಿ ಹೇಳಲಿಕ್ಕೆ ಸಾದ್ಯವಿಲ್ಲ ಕೆಲವು ಖಾಸಗಿ ವಿಷಯಗಳನ್ನು

ಅದರೆ ಚುನಾವಣೆಗೆ ಮಾಡಿದ ಸಾಲ ಇನ್ನು ಹಾಗೆಯೇ ಇರುವುದು ಅವರು ಪ್ರಾಮಾಣಿಕತೆ ಉಳಿಸಿಕೊಂಡಿದ್ದಾರೆ ಅನ್ನುವುದಕ್ಕೆ ಸಾಕ್ಷಿ

 

ನೀವು ಕೇಳಬಹುದು! ಸಿಂಹರಿಗೆ ಸಂಬಳ ಬರುವುದಿಲ್ಲವಾ ಎಂದು?! ಆದರೆ, ಒಬ್ಬ ಪತ್ರಕರ್ತರಾಗಿದ್ದಕ್ಕಿಂತ ಕಡಿಮೆ ಸಂಬಳ ಒಬ್ಬ ಸಂಸದರಿಗಿದ್ದಾಗಲೂ ಸಹ
ಇವತ್ತಿಗಿದ್ದಾಗಲೂ ‘ಸಮಾಜ’ ಎಂಬುವುದಕ್ಕಾಗಿ ದುಡಿಯುತ್ತಿರುವಾಗ ಎಲ್ಲವನ್ನೂ ನಿಭಾಯಿಸುವುದು ಸುಲಭವಲ್ಲ!

ಇನ್ನೂ ಅಚ್ಚರಿಯೆಂದರೆ, ಕಳೆದ ಚುನಾವಣೆಯ 19 ಲಕ್ಷ ಸಾಲ ಇನ್ನೂ ಹಾಗೇ ಇದೆ! ಕ್ರೆಡಿಟ್ ಕಾರ್ಡಿನದು 2,90,000 ರೂ ಹಾಗೇ ಇದೆ! ಸಂಸದರ ಅನುದಾನ ವರ್ಷಕ್ಕೆ ಕೇವಲ 5 ಕೋಟಿಯಾದರೂ ಸಹ, ಒಂದೂ ರೂಪಾಯಿಗಳನ್ನೂ ಸ್ವಂತಕ್ಕೋಸ್ಕರ ಖರ್ಚು ಮಾಡಿಲ್ಲ ಪ್ರತಾಪ್ ಸಿಂಹ ಎಂದರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ!

ಮನೆಗೆ ಬಂದು ಹೋಗುವವರಿಂದ ಹಿಡಿದು ಸಹಾಯ ಹಸ್ತ ಯಾಚಿಸಿ ಬರುವ ಪ್ರತಿಯೊಬ್ಬರಿಗೂ ಪ್ರತಾಪ್ ಸಿಂಹರಿಂದ ‘ಇಲ್ಲ’ ಎಂಬ ಉತ್ತರ ಬರುವುದಿಲ್ಲ! ನೀವೇ
ಯೋಚಿಸಿ!

ಇಷ್ಟಕ್ಕೂ ಪ್ರತಾಪ್ ಸಿಂಹರವರು ಸಂಸದರಾದ ಮೇಲೆ ಮೈಸೂರಿಗೆ ಮಾಡಿದ್ದೇನು ಗೊತ್ತೇ?!

ಪ್ರತಾಪ್ ಸಿಂಹ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ಹಿಂದಿನ ದಿನವಷ್ಟೇ ಒಬ್ಬ ರೈತ ತಂಬಾಕು ಲೈಸೆನ್ಸ್ ನನ್ನು ನವೀಕರಣ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಾಗ, ನಿರ್ದಿಷ್ಟ ಪ್ರಮಾಣದ ತಂಬಾಕನ್ನು ಬೆಳೆದಿಲ್ಲದ ಕಾರಣಕ್ಕೆ ಹುಣಸೂರು, ಪಿರಿಯಾಪಟ್ಟಣ, ಹೆಚ್ ಡಿ ಕೋಟೆಯ ಸುಮಾರು ನಾಲ್ಕು ಸಾವಿರ ಕ್ಕೂ ಹೆಚ್ಚು ಲೈಸೆನ್ಸ್ ಗಳನ್ನು ನವೀಕರಣ ಮಾಡದಿರುವುದು ಗೊತ್ತಾದಾಗ, ಕೇಂದ್ರ ವಾಣಿಜ್ಯ ಸಚಿವೆಯಾಗಿದ್ದ
ನಿರ್ಮಲಾ ಸೀತಾರಾಮನ್ ಹಾಗು ತಂಬಾಕು ಮಂಡಳಿಯ ಅಧ್ಯಕ್ಷರ ಜೊತೆ ಚರ್ಚಿಸಿ ಒಂದೇ ದಿನದಲ್ಲಿ ಪ್ರತಿ ರೈತರ ಲೈಸೆನ್ಸ್ ಗಳನ್ನೂ ನವೀಕರಿಸುವುದಕ್ಕೆ ಅವಕಾಶ ಮಾಡಿಕೊಟ್ಟದ್ದು ಇದೇ ಪ್ರತಾಪ್ ಸಿಂಹ!

ಲೈಸೆನ್ಸ್ ನವೀಕರಣ ಮಾಡಿಕೊಟ್ಟಾಗ ರಸಗೊಬ್ಬರದ ಅನಿವಾರ್ಯ ಹೆಚ್ಚಾಯಿತು! ಕೊನೆಗೆ, ಕೇಂದ್ರ ರಸಗೊಬ್ಬರ ಸಚಿವರಾದ ಶ್ರೀ ಅನಂತ ಕುಮಾರ್ ಹೆಗಡೆಯವರ ಜೊತೆ ಚರ್ಚಿಸಿ 2,850 ಟನ್ ಹೆಚ್ಚುವರಿ ಗೊಬ್ಬರ ಪೂರೈಕೆ ಮಾಡಿಸಿದ್ದು ಇದೇ ಸಿಂಹ!

ಪ್ರತಾಪ್ ಸಿಂಹ ಸಂಸದರಾದ ನಂತರ ಕಾಫಿ ಬೆಳೆಗಾರರಿಗೆ 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಕಾಫಿ ಬೆಳೆಗಾರರಿಗೆ 950 ಕೋಟಿ ರೂಗಳ ಪ್ಯಾಕೇಜ್ ಘೋಷಣೆಯಾಯಿತು! ತದನಂತರವೇ, ಕಾಫಿ ಬೆಳೆ ಮೈಸೂರು ವಿಭಾಗದಲ್ಲಿ ಅಭಿವೃದ್ದಿಯಾಯಿತು!

ರಸ್ತೆ ಕಾಮಗಾರಿ ಹಾಗೂ ನವೀಕರಣದಲ್ಲಿ ಮೈಸೂರು ಕಂಡಷ್ಟು ಅಭಿವೃದ್ದಿ ಸ್ವತಃ ಬೆಂಗಳೂರು ಸಹ ಕಂಡಿಲ್ಲ!

ಬೆಂಗಳೂರು, ಮೈಸೂರು ಮತ್ತು ದಕ್ಷಿಣ ಕನ್ನಡದ ಬಂಟ್ವಾಳವನ್ನು  ಜೋಡಿಸುವ ರಾಷ್ಟ್ರೀಯ ಹೆದ್ದಾರಿ 275 ಪುತ್ತೂರು, ಸುಳ್ಯ, ಮಡಿಕೇರಿ, ಪಿರಿಯಾಪಟ್ಟಣ, ಮೈಸೂರು, ಶ್ರೀರಂಗಪಟ್ಟಣ, ಮಂಡ್ಯ, ರಾಮನಗರಗಳನ್ನು ಜೋಡಿಸುತ್ತದೆ. ಮೈಸೂರು ನಗರದ ಹೊರವಲಯದಲ್ಲಿ ಹಾದುಹೋಗುವ ಈ ಹೆದ್ದಾರಿ, ಹಿನಕಲ್ ಜಂಕ್ಷನ್ ನಿಂದ ಇಲವಾಲ ಆರ್‍ಎಂಪಿ ಕ್ವಾಟ್ರಸ್ ವರೆಗಿನ 12 ಕಿ.ಮೀ ರಸ್ತೆಯ ನವೀಕರಣ ಕಾಮಗಾರಿ ರೂ. 8 ಕೋಟಿ ವೆಚ್ಚದಲ್ಲಿ 2015 ರಲ್ಲಿ
ಚಾಲನೆಗೊಂಡಿದೆ. ಕಾಮಗಾರಿ ಆರಂಭವಾದ ಮೂರು ತಿಂಗಳೊಳಗೆ ಕಾಮಗಾರಿ ಮುಗಿಸಲು ಗಡುವು ನೀಡಲಾಗಿತ್ತು.

ಅದಲ್ಲದೇ, 2016 – 2017 ರ ಸಾಲಿನ ಕೇಂದ್ರ ರಸ್ತೆ ಅನುದಾನದಡಿ ಮೈಸೂರು ಜಿಲ್ಲೆಗೆ 282 ಕೋಟಿ ಅನುದಾನ ಹಾಗೂ ಕೊಡಗು ಜಿಲ್ಲೆಗೆ 28 ಕೋಟಿ ರೂ ಗಳ ಅನುದಾನವನ್ನು ಬಿಡುಗಡೆ ಮಾಡಿದೆ! ಕಾಮಗಾರಿ ಪ್ರಗತಿಯಲ್ಲಿದ್ದರೂ ಸಹ ಸ್ವತಃ ಪ್ರತಾಪ್ ಸಿಂಹರವರೇ ಕೆಲಸದ ಪ್ರತಿ ವಿವರಗಳನ್ನೂ ತೆಗೆದುಕೊಳ್ಳುತ್ತಾರೆ.

ಮೊದಲ ಬಜೆಟ್ ನಲ್ಲಿಯೇ ಮೈಸೂರಿಗೆ ಟೆಕ್ಸ್ಟ್ ಟೈಲ್ ಕ್ಲಸ್ಟರ್ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಕೇಂದ್ರ ವಿತ್ತ ಸಚಿವರಾದ ಅರುಣ್ ಜೇಟ್ಲಿ 200 ಕೋಟಿ ರೂ ಅನುದಾನ ನೀಡಿದ್ದಾರೆ!

ಮೈಸೂರಿನಲ್ಲಿ ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರ ಸ್ಥಾಪನೆಯಾಗಿದ್ದು ಕೂಡ ಪ್ರತಾಪ್ ಸಿಂಹರವರ ಒತ್ತಾಸೆಯಿಂದಲೇ! ನೆನಪಿರಲಿ, ಮೈಸೂರಿನ ಕಡೆಯವರೇ ಆದ ಎಸ್ ಎಮ್ ಕೃಷ್ಣ ರವರು ಈ ಹಿಂದೆ ವಿದೇಶಾಂಗ ಸಚಿವರಾಗಿದ್ದಾಗಲೂ ಈ ಕೆಲಸವಾಗಿರಲಿಲ್ಲ!

137 ಕೋಟಿ ರೂ ವೆಚ್ಚದಲ್ಲಿ ಮೈಸೂರಿನ ಅಖಿಲ ಭಾರತ ಶ್ರವಣ ಹಾಗೂ ವಾಕ್ ಸಂಸ್ಥೆಯ ಸಂಶೋಧನಾ ಕೇಂದ್ರಕ್ಕೆ ಎರಡು ವರ್ಷಗಳ ಹಿಂದಷ್ಟೇ ಶಂಕು ಸ್ಥಾಪನೆಯಾಗಿದೆ!

ರೈಲ್ವೇ ಕ್ಷೇತ್ರದಲ್ಲಿ ಪ್ರತಾಪ್ ಸಿಂಹರವರ ಸಾಧನೆ ಅದ್ವಿತೀಯ!

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರ–ಮಡಿಕೇರಿ ಮಾರ್ಗದ ಸರ್ವೇ ಕಾರ್ಯ ತ್ವರಿತಗತಿಯಲ್ಲಿ ನಡೆಯಲು ಕೇಂದ್ರಕ್ಕೆ ಒತ್ತಡ ತಂದ ಮೇಲೆ ಕೇಂದ್ರ ಸರಕಾರ ತಕ್ಷಣವೇ ಸರ್ವೇ ಮಾಡಲು ಭರವಸೆ ನೀಡಿತು.

ಹಳೇ ಮೈಸೂರು ಭಾಗದಿಂದ ಮೈಸೂರು – ವಾರಣಾಸಿ ರೈಲು ಸಂಚಾರವನ್ನು ವಾರಕ್ಕೆ ಎರಡು ದಿನ ಸಂಚರಿಸುವ ಹೊಸ ರೈಲನ್ನು ಮಂಜೂರು ಮಾಡಿದ್ದರಿಂದ ದಕ್ಷಿಣ ಕರ್ನಾಟಕದ ತೀರ್ಥಯಾತ್ರಿಗಳಿಗೆ ಅನುಕೂಲವಾಗುವಂತಾಗಿದ್ದು ಇದೇ ಪ್ರತಾಪ್ ಸಿಂಹರಿಂದ!

ಮೈಸೂರು –ಹೌರಾ ಹೈಸ್ಪೀಡ್ ರೈಲನ್ನು ವಾರದಲ್ಲಿ ಎರಡು ಬಾರಿ ರೈಲು ಸಂಚರಿಸುವಂತೆ ಒತ್ತಡ ತಂದಿದ್ದು ಇದೇ ಸಿಂಹ!

ಮೈಸೂರು ರೈಲ್ವೇ ನಿಲ್ದಾಣದ ಎರಡನೆಯ ಪ್ರವೇಶ ದ್ವಾರದ ಪಾರ್ಕಿಂಗ್ ಜಾಗದ ಅಗಲೀಕರಣ ರೂ. 18.44 ಲಕ್ಷದಲ್ಲಿ, ಇ-ಶೌಚಾಲಯಗಳ ನಿರ್ಮಾಣ, ಮಹಿಳಾ ಶೌಚಾಲಯಗಳ ನಿರ್ಮಾಣ ಮತ್ತು ಸ್ಯಾನಿಟರಿ ನ್ಯಾಪ್‍ಕಿನ್ ಯಂತ್ರಗಳ ಅಳವಡಿಕೆ ರೂ. 15.00 ಲಕ್ಷ ವೆಚ್ಚದಲ್ಲಿ, ಪ್ರಯಾಣಿಕರ ಮೂಲಭೂತ ಸೌಲಭ್ಯಗಳಿಗೆ ರೂ. 7.00 ಲಕ್ಷ ವೆಚ್ಚ.ಮಾಡಿದಪ್ರತಾಪ್ ಸಿಂಹ ಮೈಸೂರಿನ ದಿಕ್ಕನ್ನೇ ಬದಲಿಸಿದ್ದು ಸುಳ್ಳಲ್ಲ.

ರೂ. 3.11 ಲಕ್ಷ ವೆಚ್ಚದಲ್ಲಿ ಎಂಎಫ್‍ಸಿ ಕಟ್ಟಡ ಆವರಣದಲ್ಲಿ ಉದ್ಯಾನವನ ನಿರ್ಮಾಣವಾಯಿತು! ಚಾಮರಾಜಪುರಂ ರೈಲ್ವೇ ನಿಲ್ದಾಣದಲ್ಲಿ ರೂ. 37.40 ಲಕ್ಷ ವೆಚ್ಚದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ವಿಶಾಲ ಮತ್ತು ಸುಸಜ್ಜಿತ ತಂಗುದಾಣವನ್ನುನಿರ್ಮಿಸಿದರು! ಒಟ್ಟು 80.95 ರೂ. ಲಕ್ಷ ವೆಚ್ಚದಲ್ಲಿ ರೈಲ್ವೇ ನಿಲ್ದಾಣ ಮೂಲ ಸೌಲಭ್ಯ ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಂಡಪ್ರತಾಪ್ ಸಿಂಹ ಯುರೋಪ್ ರೈಲ್ವೇ ನಿಲ್ದಾಣಗಳ ರೀತಿಯನ್ನು ಅಳವಡಿಸಲು, ಮೈಸೂರು ನಗರದ ಮುಖ್ಯ ರೈಲ್ವೆ ನಿಲ್ದಾಣ ಹಾಗೂ ಚಾಮರಾಜಪುರಂ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯ ಕಲ್ಪಿಸಲು ರೂ. 8.94 ಲಕ್ಷಗಳನ್ನು ಮಂಜೂರು ಮಾಡಿದ್ದು ಇದೇ ಪ್ರತಾಪ್ ಸಿಂಹ!

ಕಾಫಿ, ಕರಿಮೆಣಸು ಹಾಗು ಸಾಂಬಾರು ಪದಾರ್ಥಗಳ ಬೆಳೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಪ್ರತಾಪ್ ಸಿಂಹರಿಗೆ ಮೈಸೂರನ್ನು ಯಾವ ರೀತಿಯಾಗಿ ಅಭಿವೃದ್ಧಿಗೊಳಿಸಬೇಕೆಂಬ ಸ್ಪಷ್ಟ ಚಿತ್ರಣವಿದೆ!

ಕರ್ನಾಟಕದಲ್ಲಿಯೇ ಕೇಂದ್ರ ಸರಕಾರದ ಅನುದಾನಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡ ಎರಡನೇ ಸಂಸದ ಪ್ರತಾಪ್ ಸಿಂಹ!

ಮೊನ್ನೆಯಷ್ಟೇ ಮೈಸೂರಿನಲ್ಲಿ ಡಿಸಿ ಕಚೇರಿ ನಿರ್ಮಾಣಕ್ಕಾಗಿ 15 ಎಕರೆ ಜಾಗ ಮಂಜೂರು ಮಾಡಿದ್ದಾರೆ!

ಇಷ್ಟರವರೆಗೂ ನಡೆದ ಸಂಸತ್ತಿನಲ್ಲಿ 519 ಪ್ರಶ್ನೆಗಳನ್ನು ಕೇಳಿದ್ದಾರೆ! 10 ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ!

ಇದಲ್ಲದೇ, ಮೈಸೂರಿನ ಮುಖ್ಯ ನಿಲ್ದಾಣದಲ್ಲಿ ಅಂಧರಿಗೆ ಅನುಕೂಲಾವಗುವ ಹಾಗೆ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ‘ಬ್ರೈಲ್ ಲಿಪಿಯಿರುವ ಸೂಚನಾ ಫಲಕಗಳನ್ನು’ ಅಳವಡಿಸಲಾಗಿದೆ!

ಮೈಸೂರಿನಲ್ಲೊಂದರಲ್ಲಿಯೇ ಪ್ರಧಾನಿಯ ಜನೌಷಧ ಭಾರತೀಯ ಕೇಂದ್ರ ಒಟ್ಟಾರೆಯಾಗಿ 17 ಇವೆ! ಬೆಂಗಳೂರಿನಲ್ಲಿಯೂ ಸಹ ಇಷ್ಟು ದೊಡ್ಡ ಮತ್ತದಲ್ಲಿ ಕೇಂದ್ರಗಳಿಲ್ಲ.

PM Reliefe fund ನ್ನು ಅತೀ ಹೆಚ್ಚಾಗಿ ಸಮರ್ಥವಾಗಿ ಬಳಸಿಕೊಂಡು, ಹಿಂದುಳಿದ ವರ್ಗಗಳ ಮಾರಣಾಂತಿಕ ಖಾಯಿಲೆಗೆ ಒಳಗಾಗಿರುವ ವೃದ್ಧರಿಗೆ ಸಮರ್ಥವಾಗಿ ವೈದ್ಯಕೀಯ ಸೇವೆಯನ್ನು ನೀಡಿದ ಸಂಸದ ಪ್ರತಾಪ್ ಸಿಂಹ!

PM Relief Foundation Fund Grand Total : 1,23,02,574 Cr.Rs

Ambedkar Foundation Fund Grand Total : 14,50,ooo Cr.Rs

Grand Total : 1,37,52, 574 Cr. Rs

ಕೆ.ಆರ್. ಆಸ್ಪತ್ರೆಯಲ್ಲಿ ಅಗತ್ಯವಿದ್ದ 1 ಕೋಟಿ 20 ಲಕ್ಷ ಮೊತ್ತದ ಯಂತ್ರೋಪಕರಣದ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದು ಇದೇ ಪ್ರತಾಪ್ ಸಿಂಹ!!

ಸಂಸದರ ಅನುದಾನದಲ್ಲಿ ರೈಲ್ವೇ ನಿಲ್ದಾಣದಲ್ಲಿ ಬಾಡಿಗೆ ವಾಹನಗಳನ್ನು, ಕುಳಿತುಕೊಳ್ಳುವ ಆರಾಮ ಕುರ್ಚಿಗಳನ್ನು ಸಂಸದ ಪ್ರತಾಪ್ ಸಿಂಹ ನೀಡಿದ‌್ದಾರೆ!

ಮೈಸೂರು ನಗರಕ್ಕೆ ಹೆಸರು ತಂದುಕೊಟ್ಟಿದ್ದೇ ವಿಶ್ವಮಾನವ ಎಕ್ಸ್ ಪ್ರೆಸ್ ಎಂದರೆ ಅತಿಶಯೋಕ್ತಿಯಲ್ಲ! ಮೈಸೂರಿನಲ್ಲಿ ಇವತ್ತಿನ ತನಕ ಯಾವ ಸಂಸದರಿಗೂ ಕೂಡ ಇಂತಹ ದೊಡ್ಡ ಮಟ್ಟದ ಯೋಜನೆಯನ್ನು ತರಲು ಸಾಧ್ಯವಾಗಿಲ್ಲ!

ಚಾಮುಂಡಿ ಬೆಟ್ಟದಲ್ಲಿ ‘Water Plants’ನನ್ನು ನಿರ್ಮಿಸಿದ್ದು ಕೂಡ ಪ್ರತಾಪ್ ಸಿಂಹರ ಸಾಮಾಜಿಕ ಕಳಕಳಿ ಎಷ್ಟಿದೆಯೆಂಬುದಕ್ಕೊಂದು ಜೀವಂತ ನಿದರ್ಶನ!

ಹೇಳ ಹೋದರೆ ಬಹಳಷ್ಟಿದೆ!!!

ಇದು ತೀರಾ ಮುಖ್ಯವಾದ ಸಾಧನೆಗಳಷ್ಟೇ! ಚಿಕ್ಕಪುಟ್ಟ ಕೆಲಸ ಕಾರ್ಯಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಪ್ರತಾಪ್ ಸಿಂಹ ಎಂಬ ಮೈಸೂರಿನ ನಾಯಕರೊಬ್ಬರು ಇದೆಲ್ಲಕ್ಕಿಂತ ಹೊರತು ಪಡಿಸಿ ಒಬ್ಬ ಸ್ವಾಭಿಮಾನಿ ಹಿಂದೂ! ಸತ್ಯ!! ಹಿಂದುತ್ವದ ಅಡಿಯಲ್ಲಿಯೇ ರಾಜಕೀಯಕ್ಕೆ ಕಾಲಿಟ್ಟ ಪ್ರತಾಪ್ ಸಿಂಹ ಇವತ್ತಿಗೂ ಮತಕ್ಕೋಸ್ಕರ ತುಷ್ಟೀಕರಣಕ್ಕೆ ನಿಂತವರಲ್ಲ! “ನನ್ನ ಕೆಲಸ ನೋಡಿ ಮತ ನೀಡಿ’ ಎನ್ನುವ ಪ್ರತಾಪ್ ಸಿಂಹ ಇವತ್ತಿಗೂ ಮೈಸೂರಿನ ಸಿಂಹನಾಗಿಯೇ ಉಳಿದಿದ್ದಾರೆ!

ಇದನ್ನೆಲ್ಲ ಬಿಡಿ, ಹೇಳಲೇಬೇಕೆಂದರೆ ಸಂಸದರಾಗಿಯೂ ಕೂಡ, ಒಬ್ಬ ಸಾಮಾನ್ಯರ ಹಾಗೆ ಇವತ್ತಿಗೂ ತೀರಾ ಸರಳವಾಗಿ ಜೀನ್ಸು ಟೀ ಶರ್ಟ್ ತೊಟ್ಟು ಸಾಮಾನ್ಯನಲ್ಲಿ ಸಾಮಾನ್ಯರ ಹಾಗಿದ್ದು ಬಿಡುವ ಪ್ರತಾಪ್ ಸಿಂಹ ಅಡಿಗಡಿಗೂ ಅಚ್ಚರಿಯೇ!

ಇವತ್ತಿನ ಯಾವ ಸಂಸದರೊಬ್ಬರು ವೈಯುಕ್ತಿಕ ಸಮಸ್ಯೆಗಳನ್ನೂ ಬದಿಗಿರಿಸಿ, ಕೇವಲ ಸಮಾಜಕ್ಕಷ್ಟೇ ಬದುಕಬಲ್ಲರು?! ಎಲ್ಲೋ, ಕೋಟಿಗೆ ಸಿಗುವ ಇಂತಹ ನಾಯಕರಷ್ಟೇ! ಹೇಳ ಹೋದರೆ., ರಾಜಧಾನಿ ಬೆಂಗಳೂರಿಗಿಂತ ಇವತ್ತು ಮೈಸೂರು ಮುಂದುವರೆಯುತ್ತಲಿದೆ! ಕಾರಣ ಅವರೊಬ್ಬರೇ! ಪ್ರತಾಪ್ ಸಿಂಹ!!

ಬಹುಷಃ ಒಬ್ಬ ಸಂಸದರಾಗಿ ಇಷ್ಟು ಮಟ್ಟದ ಸಾಧನೆಗಳನ್ನು ಮಾಡಿದಂತಹ ಪ್ರತಾಪ್ ಸಿಂಹರವರು ಭವಿಷ್ಯದಲ್ಲಿ ದೇಶದ ರಾಜಕೀಯ ನಾಯಕರಾಗಿ ಗುರುತಿಸಿಕೊಂಡರೂ ಅಚ್ಚರಿಯೇನಿಲ್ಲ! ಮೋದಿಯ ಅಪ್ಪಟ ಅಭಿಮಾನಿಯಾಗಿರುವ ಪ್ರತಾಪ್ ಸಿಂಹ ಎಂಬಂತಹ ನಿಜವಾದ ‘ಯೂತ್ ಐಕಾನ್’ ನಿಜಕ್ಕೂ ಒಂದು ಅಚ್ಚರಿಯೇ ಬಿಡಿ!

ಕೊನೆಯದಾಗಿ, ನನ್ನ ಪ್ರಕಾರ ಹೇಳಿಬಿಡುತ್ತೇನೆ! ಇಂತಹ ಸರಳ ಪ್ರಾಮಾಣಿಕ ರಾಜಕಾರಣಿ, ಮುತ್ಸದ್ದಿ ಹಾಗೂ ಅಪ್ಪಟ ಸಿದ್ಧಾಂತವಾದಿ, ಬಹುಷಃ ಸಿಗುವುದು
ಸುಲಭವಲ್ಲ!!

– ಸಂದೀಪ್

Editor Postcard Kannada:
Related Post