X

ಬಯಲಾಯ್ತು ಸಿಎಂ ಬಂಟ ಜೆಡಿಎಸ್ ಅಭ್ಯರ್ಥಿಯ ಭ್ರಷ್ಟ ಮುಖ! ಶಿಕ್ಷಕರ ಕ್ಷೇತ್ರಕ್ಕೆ ಇಂತವರು ಬೇಕಾ..?

ಜೂನ್ 8ನೇ ತಾರೀಕಿನಂದು ನೈಋತ್ಯ ಶಿಕ್ಷಕರ ಹಾಗೂ ಪದವೀದರರ ಕ್ಷೇತ್ರದ ಚುನಾವಣೆ ನಡೆಯಲಿದೆ. ಈ ಎರಡು ಕ್ಷೇತ್ರಗಳೆಂದರೆ ಕೇಳಬೇಕಾ..! ಶಿಸ್ತು,ಸಂಯಮ,ಶುದ್ಧ ಹಸ್ತತೆ ಅನ್ನೋದು ಮೈಯೆಲ್ಲಾ ಹರಿದಾಡುತ್ತಿರಬೇಕು. ಆದರೆ ಸದ್ಯ ಸರ್ಕಾರ ನಡೆಸುತ್ತಿರುವ ಜನತಾ ದಳ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯೋರ್ವರ ಕಥೆ ಕೇಳಿದರೆ ಶಿಕ್ಷಕರ ಕ್ಷೇತ್ರದಲ್ಲಿ ಇಂತವರೂ ಸ್ಪರ್ಧಿಸುತ್ತಾರಾ ಎನ್ನುವ ಪ್ರಶ್ನೆ ಮೂಡದೇ ಇರದು.

ಜೆಡಿಎಸ್ ಅಭ್ಯರ್ಥಿಯ ಮತ್ತೊಂದು ಮುಖ..!

ಯಥಾ ಗುರು ತಥಾ ಶಿಷ್ಯ ಎಂಬಂತೆ ಶಿಕ್ಷಕರ ಕ್ಷೇತ್ರಕ್ಕೆ ಜನತಾ ದಳದಲ್ಲಿ ಸ್ಪರ್ಧಿಸುತ್ತಿರವ ಅಭ್ಯರ್ಥಿಯ ಜಾತಕ ನೋಡಿದರೆ ಬ್ರಹ್ಮಾಂಡ ಭ್ರಷ್ಟಾಚಾರವೇ ತಾಂಡವವಾಡುತ್ತಿದೆ. ಉತ್ತಮ ಚಾರಿತ್ರ್ಯತೆಗೆ ಹೆಸರಾಗಿರುವ ಶಿಕ್ಷಕರ ಕ್ಷೇತ್ರಕ್ಕೆ ಇಂತಹ ಅಭ್ಯರ್ಥಿಯೇ ಸಿಕ್ಕಿದ್ದಾ ಎಂಬ ಪ್ರಶ್ನೆ ಮೂಡದೇ ಇರದು. ಜೆಡಿಎಸ್ ಅಭ್ಯರ್ಥಿ ಭೋಜೇಗೌಡರ ಇತಿಹಾಸ ಕೆದಕಿದರೆ ಮತ್ತಷ್ಟು ಮಗದಷ್ಟು ಕಾನೂನು ಬಾಹಿರ ಚಟುವಟಿಕೆಗಳು ದೊರೆತ್ತವೆ.

ಪ್ರತಿಷ್ಟಿತ ಬಾರ್ ಕೌನ್ಸಿಲ್ ನಲ್ಲಿ ತೊಡಗಿಕೊಂಡಿದ್ದ ಜನತಾ ದಳದ ಭೋಜೇಗೌಡ ಅಲ್ಲಿಯೂ ತನ್ನ ಭ್ರಷ್ಟಾಚಾರದ ಮುಖವನ್ನು ಅನಾವರಣಗೊಳಿಸಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ ಭೋಜೇಗೌಡರನ್ನು ಬಾರ್ ಕೌನ್ಸಿಲ್ ಕಿತ್ತು ಹೊರ ಹಾಕಿದ್ದರು. ಗೌರವಯುತವಾಗಿರುವ ಬಾರ್ ಕೌನ್ಸಿಲ್ ನಿಂದ ಭೋಜೇಗೌಡವರನ್ನ ವಜಾ ಮಾಡಿದ್ದರು. ಈ ಮೂಲಕ ರಾಜ್ಯಮಟ್ಟದಲ್ಲಿ ತನ್ನ ಮಾನ ಮರ್ಯಾದೆಯನ್ನು ಹರಾಜು ಹಾಕಸಿಕೊಂಡಿದ್ದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಗೆ ನಡೆದ ಆಯ್ಕೆಯಲ್ಲಿ ಭಾರೀ ಅವ್ಯವಹಾರ ನಡೆಸಿದ್ದು ಜಗದ್ಜಾಹೀರಾಗಿತ್ತು. ವಾಮಮಾರ್ಗದ ಮೂಲಕ ನೌಕರರನ್ನು ಆಯ್ಕೆ ಮಾಡಿ ಅಲ್ಲೂ ಅಪಕೀರ್ತಿಗೆ ಪಾತ್ರರಾಗಿದ್ದರು. ನೌಕರರನ್ನು ನಿಯಮಾನುಸಾರ ಆಯ್ಕೆ ಮಾಡದೆ ವಾಮಮಾರ್ಗದಲ್ಲಿ ಆಯ್ಕೆ ಮಾಡಿ ಅದರಲ್ಲೂ ಕಾನೂನು ಮುರಿದ ಕುಖ್ಯಾತಿಗೆ ಗುರಿಯಾದವರು.

ನಗರ ಸಭೆ ಅಧ್ಯಕ್ಷ ಅವಧಿಯಲ್ಲಿ ಒಪ್ಪಂದ ಪ್ರಕಾರ ತನ್ನ ಅಧಿಕಾರವನ್ನು ಬಿಟ್ಟು ಕೊಡಬೇಕಾಗಿತ್ತು. ಆದರೆ ಅದಕ್ಕೆ ಬೆಲೆ ನೀಡದೆ ಅಧಿಕಾರವನ್ನು ಬಿಟ್ಟು ಕೊಡದೆ ಕುಮಾರ ಸ್ವಾಮಿ ಈ ಹಿಂದೆ ವಚನ ಭ್ರಷ್ಟ ನೀತಿಯನ್ನು ಅನುಸರಿಸಿ ಅಧಿಕಾರ ಕಳೆದುಕೊಂಡಂತೆ ಭೋಜೇಗೌಡ ತನ್ನ ಅಧಿಕಾರ ವನ್ನೂ ಕಳೆದುಕೊಂಡಿದ್ದರು.

ಶಿಕ್ಷಕರ ಓಲೈಕೆಗೆ ಮಹಾ ಕಸರತ್ತು.!

ಇದೀಗ ಜನತಾ ದಳದಿಂದ ಶಿಕ್ಷಕರ ಕ್ಷೇತ್ರದಲ್ಲಿ ಇಳಿದಿರುವ ಭೋಜೇಗೌಡ ಅವರ ಓಲೈಕೆಗೆ ಮಾಡುತ್ತಿರುವ ಅಪಚಾರ ಮತ್ತೊಂದು. ಶಾಲಾ ಶಿಕ್ಷಕರನ್ನು ಓಲೈಸಲು ಹಾಗೂ ಅವರ ಮತವನ್ನು ಓಲೈಸಲು ಬ್ಯಾಗ್ ನೀಡುತ್ತಿದ್ದಾರೆ.! ಶಿಸ್ತು, ಭ್ರಷ್ಟಾಚಾರ ಮುಕ್ತ ಸಮಾಜದ ಪಾಠಗಳನ್ನು ಹೇಳುವ ಶಿಕ್ಷಕರಿಗೇ ಬ್ಯಾಗ್ ನೀಡುವ ಮೂಲಕ ಅವರನ್ನು ಕಾನೂನುಬಾಹಿರವಾಗಿ ಓಲೈಸಿ ಆ ಸ್ಥಾನಕ್ಕೇ ಅಪಚಾರ ಮಾಡುತ್ತಿದ್ದಾರೆ.

ಕ್ಯಾಪ್ಟನ್ ಗೆ ಸೆಡ್ಡು ಸಾಧ್ಯವೇ.?

ಭಾರತೀಯ ಜನತಾ ಪಾರ್ಟಿಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತೆ ಕಣಕ್ಕಿಳಿದಿದ್ದಾರೆ. ಕಳೆದ ೧೨ ವರ್ಷಗಳಿಂದ ಶಿಕ್ಷಕರ ಕ್ಷೇತ್ರದಲ್ಲಿ ಅದ್ಭುತವಾಗಿ ಕೆಲಸ ಮಾಡಿರುವ ಇವರನ್ನು ಮಣಿಸುವುದು ಕಷ್ಟಸಾಧ್ಯ. ೧೨ ವರ್ಷ ಈ ಸ್ಥಾನದಲ್ಲಿದ್ದರೂ ಒಂದೇ ಒಂದು ಭ್ರಷ್ಟಾಚಾರದ ಕಳಂಕ ಕ್ಯಾಪ್ಟನ್ ಮೇಲೆ ಇಲ್ಲ. ಸರಕಾರ ಶಾಸಕರಿಗೆ ನೀಡುವ ಸೈಟನ್ನು ಕೂಡಾ ಇವರು ಬಳಸಿಕೊಂಡಿಲ್ಲ. ಇದು ಕ್ಯಾಪ್ಟನ್ ಅವರ ಶುದ್ಧಹಸ್ತ ಹಾಗೂ ತ್ಯಾಗಮಯಿ ರಾಜಕೀಯವನ್ನು ಬಣ್ಣಿಸುತ್ತದೆ. ಇವರ ಈ ನೀತಿಯೇ ಇದೀಗ ಅವರ ಗೆಲುವು ಸನ್ನಿಹಿತವಾಗುವಂತೆ ಮಾಡಿದೆ.

ಈ ಬಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ಸೋಲಿಸಲು ೧೧ ಮಂದಿ ಅಭ್ಯರ್ಥಿಗಳು ಸಜ್ಜಾಗಿದ್ದಾರೆ. ಆದರೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳೇ ಕ್ಯಾಪ್ಟನ್ ಅವರನ್ನು ಗೆಲ್ಲಿಸುತ್ತದೆ ಎಂದು ಪಕ್ಷದ ಲೆಕ್ಕಾಚಾರ. ಬಹುತೇಕ ಶಿಕ್ಷಣ ಸಂಸ್ಥೆಗಳು ಕೂಡಾ ಕ್ಯಾಪ್ಟನ್ ಬೆಂಬಲಕ್ಕೆ ನಿಂತಿದ್ದು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಮಾತ್ರವಲ್ಲದೆ ಎದುರಾಳಿಗಳ ಕಳಂಕ ವ್ಯಕ್ತಿತ್ವವೇ ಕ್ಯಾಪ್ಟನ್ ಗೆಲುವಿನ ಹಾದಿಯಾಗುತ್ತದೆ ಎಂದೂ ಹೇಳಲಾಗುತ್ತಿದೆ.

ಸುನಿಲ್ ಪಣಪಿಲ

Editor Postcard Kannada:
Related Post