X

ಯುಪಿಎ ಸರಕಾರಕ್ಕೆ ಹತ್ತು ವರ್ಷಗಳಲ್ಲಿ ಸಾಧಿಸಲಾಗದ್ದನ್ನು ಮೋದಿ ಕೇವಲ ಎರಡೇ ವರ್ಷಗಳಲ್ಲಿ ಸಾಧಿಸಿದರು ಎಂದು ತಿಳಿದರೆ ದಂಗಾಗುವಿರಿ…!! ಯಾವ ಕ್ಷೇತ್ರದಲ್ಲಿ ಗೊತ್ತೇ?

ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುವ ಅದೆಷ್ಟೋ ಬುದ್ದಿಜೀವಿಗಳು ನರೇಂದ್ರ ಮೋದಿ ದೇಶಕ್ಕೋಸ್ಕರ, ದೇಶದ ಜನರ ಸುಭಿಕ್ಷೆಗೋಸ್ಕರ ಅದೇನೇನು ಮಾಡಿದರು ಎಂದು ತಿಳಿದುಕೊಳ್ಳುವ ಗೋಜಿಗೆ ಎಂದೂ ಹೋಗುವುದಿಲ್ಲ!! ಒಂದು ವೇಳೆ ಆ ಬಗ್ಗೆ ತಿಳಿದುಕೊಂಡರೆ ನರೇಂದ್ರ ಮೋದಿಯವರನ್ನು ದ್ವೇಷಿಸುವ ಬದಲು ಅವರ ಮೇಲೆ ಇದ್ದ ಗೌರವ ಇನ್ನಷ್ಟು ಹೆಚ್ಚಾಗುತ್ತೆ ಎನ್ನುವ ಭಯವೋ ಏನೋ ಗೊತ್ತಿಲ್ಲ!! ಆದರೆ ಸಣ್ಣ ಸಣ್ಣ ವಿಚಾರಗಳಲ್ಲೂ ಹುಳುಕನ್ನು ತೆಗೆದು ಅದನ್ನೇ ಬೊಬ್ಬಿಡುವ ಕಾಂಗ್ರೆಸ್ಸಿಗರಿಗೆ ಇದೀಗ ಅತೀ ದೊಡ್ಡ ಶಾಕ್ ಒಂದು ಕಾದಿದೆ!!

ಯಾವಾಗ ನರೇಂದ್ರ ಮೋದಿಯವರು ರಾತ್ರೋ ರಾತ್ರಿ 500, 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದರೋ ಅಂದು ಕಾಳಧನಿಕರ ಎದೆಯಲ್ಲಿ ನಗಾರಿ ಭಾರಿಸಿದ್ದಂತೂ ಅಕ್ಷರಶಃ ನಿಜ!! ತದ ನಂತರದಲ್ಲಿ ಕಪ್ಪುಕುಳಗಳನ್ನು ಮಟ್ಟ ಹಾಕಲು ಕೈಗೊಂಡ ಕ್ರಮದಿಂದಾಗಿ ಅದೆಷ್ಟೋ ಶ್ರೀಮಂತರಿಗೆ ಮೋದಿಯವರ ಈ ಯೋಜನೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಅದರಲ್ಲೂ ಕಾಂಗ್ರೆಸ್ಸಿಗರಿಗೆ ಮಾತ್ರ ನೋಟ್ ಬ್ಯಾನ್ ನಿಂದಾಗಿ ಮೋದಿ ವಿಫಲರಾದರೂ ಎಂದು ಎಲ್ಲೆಡೆ ಬೊಬ್ಬಿಡಲು ಆರಂಭಿಸಿಯೇ ಬಿಟ್ಟರು!! ಆದರೆ ಕೊನೆಗೆ ಅದೇನಾಯಿತು?? ನರೇಂದ್ರ ಮೋದಿಯವರ ಈ ಕ್ರಮದಿಂದಾಗಿ ವಿಶ್ವವೇ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಲ್ಲದೇ “ಎದೆಗಾರಿಕೆಯ ನಿರ್ಧಾರ” ಎಂದು ಹಾಡಿ ಹೊಗಳಿತ್ತು!! ಇದರ ಜೊತೆಗೆ ದೇಶದ ಜಿಡಿಪಿ ದರವು ಹೆಚ್ಚಾಯಿತಲ್ಲದೇ ಆರ್ಥಿಕ ಸ್ಥಿತಿಯಲ್ಲೂ ಭಾರತ ಕೊಂಚ ಮಟ್ಟಿಗೆ ಯಶಸ್ಸಿನ ಮೆಟ್ಟಿಲೇರಲು ಕಾರಣವಾಯಿತು!!

ಆದರೆ ಇದೀಗ ನರೇಂದ್ರ ಮೋದಿಯವರು ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಅದೇನೂ ಕ್ರಮ ಕೈಗೊಂಡಿಲ್ಲ ಎಂದು ಬೊಬ್ಬಿರುವವರಿಗೆ ಮೋದಿ ಸರ್ಕಾರದ ಸಾಧನೆ ಗರ ಬಡಿಯುವಂತೆ ಮಾಡುತ್ತೆ!! ಹೌದು…. ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ಆರೋಪ ಕೇಳಿ ಬರುತ್ತಿರುವ ನಡುವೆಯೇ, ಮಾರ್ಚ್ ನಲ್ಲಿ ಸೇವಾ ಕ್ಷೇತ್ರದಲ್ಲಿ 7 ವರ್ಷದಲ್ಲೇ ದಾಖಲೆಯ ಉದ್ಯೋಗ ಸೃಷ್ಟಿಸಿ ಮತ್ತೊಂದು ಗರಿಯನ್ನು ಮೋದಿ ಸರ್ಕಾರ ತನ್ನ ಮುಡಿಗೇರಿಸಿಕೊಂಡಿದೆ!!

ಈಗಾಗಲೇ ಕೇಂದ್ರ ಸರ್ಕಾರ ಮಂಡಿಸಿದ 2018-19 ಸಾಲಿನ ಬಜೆಟ್ ನಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದ್ದು, ಸರ್ಕಾರದ ಮೂಲ ಸೌಕರ್ಯ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಹಲವು ಯೋಜನೆಗಳಲ್ಲಿ ವರ್ಷಕ್ಕೆ ಅಂದಾಜು 50 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿತ್ತು!! ಅಷ್ಟೇ ಅಲ್ಲದೇ ಫೆ.1ರಂದು ಮಂಡಿಸಿರುವ ಬಜೆಟ್‍ನಲ್ಲಿ ಇದೇ ಮೊದಲ ಬಾರಿಗೆ ನಾನಾ ಯೋಜನೆಗಳ ಜಾರಿಗೆ ಬೇಕಾಗುವ ಉದ್ಯೋಗಿಗಳು ಹಾಗೂ ಮಾನವ ದಿನಗಳ ಸಂಖ್ಯೆಯನ್ನು ತಿಳಿಸಲಾಗಿದೆ. ಕೇಂದ್ರ ಆಯವ್ಯಯದಲ್ಲಿ ಹೆದ್ದಾರಿ ನಿರ್ಮಾಣ, ಶೌಚಾಲಯ, ಗ್ರಾಮೀಣ ವಸತಿ, ಗ್ರಾಮೀಣ ರಸ್ತೆ, ಮೆಗಾ ಫುಡ್ ಪಾರ್ಕ್ ಇತ್ಯಾದಿ ಹಲವು ಯೋಜನೆಗಳಿದ್ದು, ಇವುಗಳಿಗೆ ಸಂಬಂಧಿಸಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದೂ ತಿಳಿಸಿತ್ತು!!

ಅಷ್ಟೇ ಅಲ್ಲದೇ, ಸ್ವಚ್ಛ ಭಾರತ ಯೋಜನೆಯಡಿಯಲ್ಲಿ 2 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಾಣವಾಗಲಿದ್ದು, ಇದಕ್ಕೆ 16.92 ಕೋಟಿ ಮಾನವ ದಿನಗಳ ಅಗತ್ಯ ಇದೆ. 51 ಲಕ್ಷ ಗ್ರಾಮೀಣ ಮನೆಗಳ ನಿರ್ಮಾಣಕ್ಕೆ 46.55 ಕೋಟಿ ಮಾನವ ದಿನಗಳ ಅಗತ್ಯ ಇದೆ. ಗ್ರಾಮೀಣ ರಸ್ತೆ ಯೋಜನೆ ಜಾರಿಗೆ 28.35 ಕೋಟಿ ಮಾನವ ದಿನಗಳ ಅನಿವಾರ್ಯತೆ ಇದೆ. ಇದರ ಜೊತೆಯಲ್ಲಿ ನರೇಗಾ ಯೋಜನೆ ಮತ್ತು ಮೆಗಾಫುಡ್‍ಪಾರ್ಕ್ ಯೋಜನೆಗಳು ಸಹ ಸುಮಾರು ಒಂದು ಲಕ್ಷ ಉದ್ಯೋಗವನ್ನು ಸೃಷ್ಟಿಸಲಿವೆ. ಸರಣಿ ಶೀಥಲೀಕರಣ ನಿರ್ಮಾಣ, ವಿಸ್ತೃತ ಪ್ರಧಾನಮಂತ್ರಿ ರೋಜ್‍ಗಾರ್ ಮತ್ತಿತರ ಯೋಜನೆಗಳಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬಜೆಟ್ ನಲ್ಲಿ ಮಂಡಿಸಲಾಗಿತ್ತು!!

ಇದರೊಂದಿಗೆ ಸರ್ಕಾರ ಪ್ರತಿ ವರ್ಷ ಕೊನೆಯಲ್ಲಿ ತನ್ನ ನಾನಾ ಯೋಜನೆಗಳಡಿಯಲ್ಲಿ ಎಷ್ಟು ಜನರಿಗೆ ಉದ್ಯೋಗ ಲಭಿಸಿತು ಎಂಬುದನ್ನು ಬಹಿರಂಗಪಡಿಸಲಿದೆ. ಇದರಿಂದ ಉದ್ಯೋಗ ಸೃಷ್ಟಿಯಲ್ಲಿ ಸರಕಾರ ವಹಿಸಿರುವ ಪಾತ್ರದ ಬಗ್ಗೆ ಜನ ಜಾಗೃತಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು!! ಅಷ್ಟೇ ಅಲ್ಲದೇ ವಿಸ್ತೃತ ಪ್ರಧಾನಮಂತ್ರಿ ರೋಜ್‍ಗಾರ್ ಯೋಜನೆಯಡಿಯಲ್ಲಿ ವಾರ್ಷಿಕ ಸುಮಾರು 30 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಎಲ್ಲವನ್ನೂ ಸೇರಿಸಿದರೆ ಒಟ್ಟು 50 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಈಗಾಗಲೇ ವರದಿ ತಿಳಿಸಿತ್ತು!!

ಆದರೆ ಇದೀಗ ಭಾರತದಲ್ಲಿ ಕಳೆದ 7 ವರ್ಷದಲ್ಲೇ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಅಷ್ಟೇ ಅಲ್ಲದೇ ಮಾರ್ಚ್ ತಿಂಗಳಲ್ಲಿ ಭಾರತದ ಸೇವಾ ವಲಯದ ಚಟುವಟಿಕೆಗಳಲ್ಲಿ ಬೆಳವಣಿಗೆ ದಾಖಲಾಗಿದ್ದು, ಹೊಸ ಉದ್ಯೋಗಗಳ ಸೃಷ್ಟಿಯ ಪರಿಣಾಮ ಎಂದು ಸಮೀಕ್ಷೆಯ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಕಳೆದ 7 ವರ್ಷಗಳಲ್ಲಿ ಮೊದಲ ಬಾರಿಗೆ ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಳವಾಗಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿರುವುದು ಮಾತ್ರ ಅಕ್ಷರಶಃ ನಿಜ.

“ನೀಕ್ಕೈ ಇಂಡಿಯಾ ಸವೀರ್ಸ್ ಬಿಸಿನೆಸ್ ಆ್ಯಕ್ಟಿವಿಟಿ” ಸೂಚ್ಯಂಕದ ಪ್ರಕಾರ ಶೇ.47.8 ರಷ್ಟಿದ್ದ ಉದ್ಯೋಗ ಸೃಷ್ಟಿಯು ಮಾರ್ಚ್ ನಲ್ಲಿ ಶೇ.50.3ಕ್ಕೇರಿದೆ. ಫೆಬ್ರವರಿಯಲ್ಲಿ ಇದರ ಪ್ರಮಾಣ ಶೇ.50ಕ್ಕಿಂತ ಕೆಳಗೆ ಕುಸಿದು ಶೇ.47.8ರಷ್ಟು ದಾಖಲಾಗಿತ್ತು. ಹಾಗಾಗಿ ಈ ಕಾರಣದಿಂದಾಗಿ ತೀವ್ರ ಆತಂಕಕ್ಕೋಳಗಾಗಿದ್ದ ಸರ್ಕಾರವು ಇದೀಗ ಕಳೆದ 7 ವರ್ಷಗಳಲ್ಲಿ ಮಾಡಲಾಗದ ಸಾಧನೆಯನ್ನು ಇದೀಗ ನರೇಂದ್ರ ಸರ್ಕಾರ ಮಾಡಿದೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ!!

“ಭಾರತದ ಸೇವಾ ಕ್ಷೇತ್ರ ಈ ತ್ರೈಮಾಸಿಕದ ಕೊನೆಗೆ ಪುನಃ ಹಳಿಗೆ ಬಂದಿದೆ. ಹೊಸ ಉದ್ಯೋಗ ಸೃಷ್ಟಿಯೇ ಇದಕ್ಕೆ ಕಾರಣ. ಉದ್ಯೋಗ ವಲಯವು ಪರಿವರ್ತನೆಯ ಹಾದಿಯಲ್ಲಿದ್ದ ಕಾರಣ ಅಂಕಿ-ಅಂಶಗಳು ಕುಸಿತವಾಗಿದ್ದವು. ಮಾರ್ಚ್ ಉತ್ಪಾದನಾ ವಲಯವು ಸೇವಾ ವಲಯದ ಪ್ರಗತಿಯನ್ನು ಹೆಚ್ಚಿಸಿದ್ದು, ಔದ್ಯೋಗಿಕ ಪ್ರಗತಿಗೆ ಕಾರಣವಾಗಿದೆ” ಎಂದು ಅರ್ಥಶಾಸ್ತ್ರಜ್ಞ ಆಶ್ನಾ ಧೋಡಿಯಾ ಅಭಿಪ್ರಾಯಪಟ್ಟಿದ್ದಾರೆ.

ಜೂನ್ 2011ರ ನಂತರ ಕಂಡಿರುವ ಅತಿ ಹೆಚ್ಚಿನ ಔದ್ಯೋಗಿಕ ಪ್ರಗತಿ ಇದಾಗಿದೆ ಎಂದೂ ಧೋಡಿಯಾ ತಿಳಿಸಿದ್ದಾರೆ!! ಈ ನಡುವೆ, ಸೇವಾ ಮತ್ತು ಉತ್ಪಾದನೆ- ಎರಡೂ ಕ್ಷೇತ್ರಗಳು ಸೇರಿ ಪ್ರಗತಿ ಸೂಚ್ಯಂಕವು ಶೇ.49.7ರಿಂದ ಶೇ.50.8ಕ್ಕೇರಿದೆ. ಇನ್ನು ಉದ್ಯಮದ ಕಾರ್ಯನಿರ್ವಹಣೆಯ ಇಂಡೆಕ್ಸ್ ನಲ್ಲಿಯೂ ಏರಿಕೆ ಕಂಡುಬಂದಿದ್ದು, ಸ್ಥಿರತೆ ಕಾಯ್ದುಕೊಂಡಿದೆ. ಅಷ್ಟೇ ಅಲ್ಲದೇ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ಇದು 2011 ರ ಜೂನ್ ತಿಂಗಳಿನ ನಂತರ ಅತಿ ಹೆಚ್ಚು ಹಾಗೂ ತ್ವರಿತವಾಗಿ ಏರಿಕೆಯಾದ ದಾಖಲೆಯಾಗಿದೆ!!

ನರೇಂದ್ರ ಮೋದಿ ಸರ್ಕಾರ ಮಾಡಿರುವ ಸಾಧನೆಗಳ ಪಟ್ಟಿಗಳನ್ನು ಮಾಡುತ್ತಾ ಹೋದರೆ ಇಷ್ಟು ವರ್ಷ ಕಾಂಗ್ರೆಸ್ ಸರ್ಕಾರ ಮಾಡದೇ ಇರುವಂತಹ ಅದೆಷ್ಟೋ ಕೆಲಸಗಳನ್ನು ನರೇಂದ್ರ ಮೋದಿ ಸರ್ಕಾರವು ಕೇವಲ ನಾಲ್ಕೇ ನಾಲ್ಕು ವರ್ಷದಲ್ಲಿ ಮಾಡಿದೆ ಎಂದರೆ ಇದಕ್ಕಿಂತಲೂ ದೊಡ್ಡ ಹೆಮ್ಮೆಯ ವಿಚಾರ ಮತ್ತೊಂದಿದೆಯೇ?? ಭಾರತ ಬಡ ರಾಷ್ಟ್ರ ಎಂದು ಭಾರತದ ಸ್ನೇಹ ಬಯಸಲು ಹಿಂದೆ ಸರಿಯುತ್ತಿದ್ದ ರಾಷ್ಟ್ರಗಳೆಲ್ಲವೂ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ನೈಪುಣ್ಯತೆಗೆ ತಲೆಬಾಗಿ, ಇಂದು ಭಾರತದೊಂದಿಗೆ ಸ್ನೇಹ ಬೆಳೆಸಲು ಕ್ಯೂ ನಿಲ್ಲುತ್ತೇ ಎಂದರೆ ನರೇಂದ್ರ ಮೋದಿಗೆ ಸರಿಸಾಟಿಯಾದ ಪ್ರಧಾನಿ ಇರಲು ಸಾಧ್ಯವೇ ಇಲ್ಲ ಎಂದನಿಸುತ್ತೆ!!

ಮೂಲ:http://www.financialexpress.com/jobs/big-boost-to-pm-modi-job-creation-at-7-year-high-services-pmi-back-on-growth-track/1122276/

https://goo.gl/JQZMYw

  • ಅಲೋಖಾ
Editor Postcard Kannada:
Related Post