X

ಪ್ರಚಾರ ಮುಗಿಸಿದ ಬಿಜೆಪಿ ಕಾಂಗ್ರೆಸ್ ನಾಯಕರ ಸುದ್ಧಿಗೋಷ್ಠಿಯ ವ್ಯತ್ಯಾಸವೇನಿತ್ತು ಗೊತ್ತಾ?! ನಾಮ್‍ದಾರಿ Vs ಕಾಮ್‍ದಾರಿ!!

ಚುನಾವಣೆಗೆ ಇನ್ನು ಒಂದು ದಿನ ಮಾತ್ರ ಬಾಕಿ ಇದ್ದು ಬಿಜೆಪಿ ಸೇರಿದಂತೆ ಕಾಂಗ್ರೆಸ್ ಕೂಡಾ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು ಕರ್ನಾಟಕದಲ್ಲಿ ರಾಜ್ಯ ವಿಧಾನ ಸಭಾ ಚುನಾವಣೆಯ ಭರಾಟೆ ಜೋರಾಗುತ್ತಿದ್ದಂತೆ ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಭೇಟಿಯ ಎಂಟ್ರಿಯಿಂದ ಇದು ಮತ್ತಷ್ಟು ರಂಗೇರಿದೆ. ಕೊನೇ ಘಳಿಗೆಯಲ್ಲಿ ಕರ್ನಾಟಕಕ್ಕೆ ಭರ್ಜರಿ ಎಂಟ್ರಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ದಿನಕ್ಕೆ 4 ಜಾಥಾಗಳಲ್ಲಿ ಚುನಾವಣಾ ಭಾಷಣಗಳನ್ನು ನಡೆಸುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿ ಅಧಿಕಾರವನ್ನು ನೀಡಬೇಕು ಎಂದು ಮತಭೇಟೆಯನ್ನು ನಡೆಸಿದ್ದರು!!

ಪ್ರತೀ ಪಕ್ಷದ ಮುಖಂಡರುಗಳು ಕೊನೇ ಘಳಿಗೆಯಲ್ಲಿ ನಡೆಸುವ ಪ್ರಚಾರ ಮತದಾರರ ಮನಸ್ಸಿನಲ್ಲಿ ಓಟು ಹಾಕಲು ಸ್ಪಷ್ಟತೆಯನ್ನು ನೀಡುತ್ತದೆ!! ರಾಹುಲ್-ಸೋನಿಯಾ ನೇತೃತ್ವದ ಕಾಂಗ್ರೆಸ್ಗೆ ಹೋಲಿಸಿದರೆ ಮೋದಿ-ಶಾ ಸಂಯೋಜನೆಯ ಪ್ರಚಾರ ನಿಜಕ್ಕೂ ಹೆಚ್ಚಿನ ಪ್ರಭಾವ ಬೀರಿದೆ!!

ಕೊನೆಯ ಘಳಿಗೆಯಲ್ಲಿ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು ಆ ಸಮಯದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ ವೇದಿಕೆಯಲ್ಲಿದ್ದರು!! ಅದಲ್ಲದೆ ಪತ್ರಿಕಾಗೋಷ್ಠಿಯನ್ನು ನಡೆಸಿ ಕೆಲ ಪಕ್ಷದ ನಾಯಕರನ್ನು ಏಕವಚನದಲ್ಲಿದಲ್ಲಿ ನಿಂದಿಸುತ್ತಾರೆ!! ಪತ್ರಿಕಾಗೋಷ್ಠಿ ಮಾಡಿ ಅಥವಾ ಪ್ರಚಾರ ನಡೆಸುವಾಗ ಅವರು ಪ್ರಮುಖವಾಗಿ ಹೇಳಬೇಕಾಗಿರುವುದು ಕರ್ನಾಟಕ ಚುನಾವಣೆಯ ಬಗ್ಗೆ ಕರ್ನಾಟಕ ಅಭಿವೃದ್ಧಿಯ  ಬಗ್ಗೆ!! ಆದರೆ ರಾಹುಲ್ ಗಾಂಧಿ ಮಾತ್ರ ಕರ್ನಾಟಕ ಚುನಾವಣೆ ಬಗ್ಗೆ ಮಾತನಾಡುವ ಬದಲು ಕೇವಲ ಚೀನಾ, ಪಾಕಿಸ್ತಾನ, ರಷ್ಯಾ ಮತ್ತು ರೆಫೆಲ್ ಡೀಲ್ ಬಗ್ಗೆ ಚರ್ಚಿಸಿದ್ದು ಅದಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ವಿದೇಶಿ ಹೂಡಿಕೆಗಳು ಸಂಪೂರ್ಣವಾಗಿ ಹದಗೆಟ್ಟಿದೆ ಎಂಬ ಮಾತನ್ನು ಮಾತ್ರ ಹೇಳಿದ್ದು ದೇಶದ ಅಭಿವೃದ್ಧಿಯ ಬಗ್ಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಯಾವುದೇ ಮಾತನ್ನು ಹೇಳದೆ ರಾಹುಲ್ ಗಾಂಧಿ ಸುಖಾಸುಮ್ಮನೆ ಭಾಷಣ ಮಾಡಿದ್ದೇ ಮಾಡಿದ್ದು!! ಬೊಗಳೆ ಬಿಟ್ಟಿದ್ದೇ ಬಿಟ್ಟಿದ್ದು!!

ಅದಲ್ಲದೆ ಅಲ್ಲಿ ನೆರೆದಿದ್ದ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮತ್ತೆ ಚೀನಾದ ವಿಷಯವಾಗಿಯೇ ಮತ್ತೆ ಪ್ರಸ್ತಾಪ ಮಾಡುತ್ತಾರೆ!! ಇದು ಮುಂದಿನ ಪ್ರಧಾನಿಯಾಗುವವರ ಪ್ರತಿಕ್ರಿಯೆ!! ಸಣ್ಣ ಮಕ್ಕಳು ಕೂಡಾ ರಾಹುಲ್ ಗಾಂಧಿಯನ್ನು ಕಾರ್ಟೂನ್‍ಗೆ ಹೋಲಿಸುವ ಪಪ್ಪುವನ್ನು ಪ್ರಧಾನಿ ಎಂದು ಇಮ್ಯಾಜಿನ್ ಮಾಡುವುದೇ ನಗು ಬರುತ್ತದೆ!! ಇನ್ನು ಪ್ರಧಾನಿಯಾಗಲು ಸಾಧ್ಯವೇ?! ಕರ್ನಾಟಕ ಚುನಾವಣೆಗೆ ಪ್ರಚಾರಕ್ಕೆ ಬಂದು ಪಾಕಿಸ್ತಾನ, ಚೀನಾ , ರಷ್ಯಾ ರೆಫೆಲ್ ಡೀಲ್ ಬಗ್ಗೆ ಮಾತನಾಡುವ ಈತ ದೇಶದ ಪ್ರಧಾನಿಯಾಗುವ ಕನಸೇ?! ಮೊದಲು ರಾಜ್ಯದ ಬಗ್ಗೆ ಮಾತನಾಡಲು ಕಲಿಯಿರಿ!! ವಂಶ ಪಾರಂಪರ್ಯವಾಗಿ ಪಟ್ಟ ಕಟ್ಟುವ ಕಾಂಗ್ರೆಸ್‍ಗೆ ಈ  ಬಾರಿ  ಸೋಲು ನಿಶ್ಚಿತ ಎಂಬುವುದು ಈಗಾಗಲೇ ತಿಳಿದಿರಬಹುದು! ಕೇವಲ ಮೋದಿಯನ್ನು ದೂರಿದರೆ ಅಥವಾ ಬಿಜೆಪಿಯನ್ನು ತೆಗಳಿದರೆ ನಿಮಗೆ ಓಟು ಸಿಗಲ್ಲ ಎನ್ನುವುದು ನಿಮಗೆ ಮೊದಲು ಅರ್ಥವಾಗಬೇಕು!! ಮೋದಿ ಎಂದರೆ ಏನು ಇಡೀ ಶತ್ರು ರಾಷ್ಟ್ರವೇ ಗಢಗಢ ನಡುಗುತ್ತದೆ ಅವರ ಮುಂದೆ ನಿಮ್ಮಂತವರು ಎಲ್ಲಿಗೆ ಸಮ!!?

ಮಾಧ್ಯಮದ ಪ್ರಶ್ನೆಗೆ ಪೆಚ್ಚಾದ ರಾಹುಲ್ ಗಾಂಧಿ:

ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ಸಿಗರು ನಾಮ್‍ದಾರಿಗಳು ಎನ್ನುತ್ತಾರೆ ಅದಲ್ಲದೆ ನೀವು 15 ನಿಮಿಷಗಳ ಕಾಲ ಯಾವುದೇ ಚೀಟಿಯನ್ನು ಉಪಯೋಗಿಸದೆ ನಿಮ್ಮ ಪಕ್ಷದ ಸಾಧನೆಯ ಬಗ್ಗೆ ಮಾತನಾಡುವಿರಾ ಎಂಬ ಪ್ರಶ್ನೆಗೆ ಇದರ ಬಗ್ಗೆ ನೀವೇನ್ನೆನ್ನುತ್ತೀರಿ ರಾಹುಲ್ ಗಾಂಧಿಯವರೆ ಎಂಬುವುದು ಮಾಧ್ಯಮದ ಪ್ರಶ್ನೆಯಾಗಿತ್ತು!! ಅದಕ್ಕೆ ರಾಹುಲ್ ಗಾಂಧಿ ಒಮ್ಮೆಲೆ ಉಸಿರಾಟವನ್ನು ತೆಗೆದುಕೊಂಡು ಮೋದಿಯವರು ಅಂದುಕೊಂಡಿದ್ದಾರೆ ನಾನು ಯಾವಾಗಲೂ ತುಂಬಾ ಕೋಪದಿಂದ ಇರುತ್ತೇನೆ ಎಂದು !! ಇಷ್ಟು ಸಣ್ಣ ಪ್ರಶ್ನೆಗೇ ಉತ್ತರಿಸಲು ಪೆಚ್ಚಾಗುವ ರಾಹುಲ್ ಗಾಂಧಿ ಇನ್ನು ದೇಶದ ಅಭಿವೃದ್ಧಿಯನ್ನು ಮಾಡಲು ಸಾಧ್ಯವೇ?!

ಕರ್ನಾಟಕ ಚುನಾವಣೆಗೆ ಮೋದಿ ಇಡೀ ಕರ್ನಾಟಕವನ್ನು ಸುತ್ತುವರಿದು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ವರ್ಗದ ಬಗ್ಗೆ ಹೆಚ್ಚಿನ ಕಾಳಜಿ ಮಾಡಿದ್ದು ಮತ್ತು ನಮೋ ಅಪ್ಲಿಕೇಶನ್ ಮೂಲಕ ಮೋರ್ಚಾ ಕೆಲಸಗಾರರೊಂದಿಗೆ ನೇರವಾಗಿ ಮಾತನಾಡಿ ಕರ್ನಾಟಕದಲ್ಲಿ ಯಾವ ರೀತಿ ಗೆಲುವು ಸಾಧಿಸಬೇಕು ಎಂಬುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ!! ಅದಲ್ಲದೆ ಹಿಂದುಳಿದ ಸಮುದಾಯಕ್ಕೆ ಯಾವ ರೀತಿ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ!! ಅದಲ್ಲದೆ  ಮೇ 12 ರಂದು ಯಾವ ಪಕ್ಷಕ್ಕಾಗಿ ಯಾತಕ್ಕಾಗಿ ಮತ ಹಾಕಬೇಕು ಎಂಬುದ್ನು ಜನರಿಗೆ ಮನದಟ್ಟಾಗಿ ಹೇಳಿದ್ದಾರೆ!!.. ಮುಂದಿನ ಚುನಾವಣೆ ಕರ್ನಾಟಕದ್ದಾದ್ದರಿಂದ ಯಾವ ರೀತಿ ಇಲ್ಲಿಯವರೆಗೆ ಕಾಂಗ್ರೆಸ್ಸಿನವರು ಹಗರಣವನ್ನು ಮಾಡಿದ್ದಾರೆ, ಯಾವ ರೀತಿ ಜನರನ್ನು ಮೋಸ ಗೊಳಿಸಿದ್ದಾರೆ ಅದಲ್ಲದೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಯಾವ ರೀತಿ ರಾಜ್ಯದ ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ ಎಂಬುವುದನ್ನು ಪ್ರತೀ ರ್ಯಾಲಿಯಲ್ಲೂ ಸಾರೀ ಸಾರೀ ಹೇಳಿದ್ದಾರೆ!!

ಅದರಲ್ಲೂ ಪ್ರಮುಖವಾಗಿ ಮೋದೀಜೀಯವರು ದಲಿತರು ಎಸ್‍ಟಿ/ಎಸ್‍ಸಿ ಒಬಿಸಿಯವರ ಬಗ್ಗೆ ಗಮನ ಹರಿಸಿದ್ದು, ಅವರ ಮತದಾನವು ಬಿಜೆಪಿಗೇ ಹಾಕುವಂತೆ ಪ್ರೋತ್ಸಹಿಸಿದ್ದಾರೆ!! ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೇನೆಂದರೆ ಮೋದಿಜಿ ಮತ್ತು ಅಮಿತ್ ಷಾ ಅವರ ಚುನಾವಣಾ ತಂತ್ರವೇ ಡಿಫರೆಂಟ್!! ಅಮಿತ್ ಶಾ ಬಾದಾಮಿಗೆ ಎಂಟ್ರಿ ಕೊಟ್ಟಿದ್ದು  ಸಂಪೂರ್ಣವಾಗಿ ರೋಡ್ ಶೋ ಮಾಡುವ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ!!

ಬಾದಾಮಿಯಲ್ಲಿ ಶ್ರೀರಾಮುಲು ಮತ್ತು ಸಿಎಂ ಸಿದ್ದರಾಮಯ್ಯನವರು ಸ್ಪರ್ಧಿಸುತ್ತಿದ್ದು ಈಗಾಗಲೇ ಸಿಎಂ ಸಿದ್ದರಾಮಯ್ಯನವರಿಗೆ ಸೋಲಿನ ಭಯ ಶುರುವಾಗಿದೆ!! ರಾಜ್ಯಾದ್ಯಂತ ಸುಮಾರು 50 ಸಾವಿರ ಕಿ.ಮೀ. ಸಂಚರಿಸಿದ್ದು, ಪ್ರಸಕ್ತ ಸರ್ಕಾರದ ಆಡಳಿತ ವಿರುದ್ಧ ಜನಾಕ್ರೋಶವಿದೆ. ನಮ್ಮ ಕಾರ್ಯಕರ್ತರ ಮೂಲಕ ಪಡೆದ ಮಾಹಿತಿ ಪ್ರಕಾರ, ಚುನಾವಣೆಯಲ್ಲಿ ಬಿಜೆಪಿ 130ಕ್ಕಿಂತ ಕಡಿಮೆ ಸ್ಥಾನ ಪಡೆಯುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.

ವಿಧಾನಸಭೆ ಚುನಾವಣೆಗೆ ಬಹಿರಂಗ ಪ್ರಚಾರ ಮುಕ್ತಾಯವಾದ ನಿನ್ನೆ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಅಂತಿಮ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ರಾಜ್ಯದ ಸುಮಾರು 56 ಸಾವಿರ ಮತಗಟ್ಟೆಗಳಲ್ಲಿ ನಮ್ಮ ಕಾರ್ಯಕರ್ತರು ಚುನಾವಣಾ ಅಭಿಯಾನದಲ್ಲಿ ತೊಡಗಿದ್ದಾರೆ. ಪ್ರಧಾನಿ ಮೋದಿ ಸೇರಿ 39 ರಾಷ್ಟ್ರೀಯ ನಾಯಕರು ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಎಲ್ಲ ನಾಯಕರ ರ್ಯಾಲಿ, ರೋಡ್ ಶೋ ಸೇರಿ ಒಟ್ಟು 400 ಕಾರ್ಯಕ್ರಮಗಳು ನಡೆದಿವೆ ಎಂದರು.

ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ನಡೆದ 3,800ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಬಗ್ಗೆ ಜನರಿಗೆ ಆಕ್ರೋಶವಿದೆ. ಈ ಸರ್ಕಾರದ ಅವಧಿಯಲ್ಲಿ ರೈತರ ಆತ್ಮಹತ್ಯೆ ಶೇ.173 ಏರಿಕೆ ಕಂಡಿದ್ದರೆ, ಬಿಜೆಪಿ ಅಧಿಕಾರದಲ್ಲಿ ರುವ ಮಹಾರಾಷ್ಟ್ರದಲ್ಲಿ ಶೇ.46 ಕಡಿಮೆಯಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅಧಿಕಾರಿಗಳು ಕಂಗೆಟ್ಟಿದ್ದಾರೆ, ಕರ್ನಾಟಕದ ವಿಕಾಸ ಸಂಪೂರ್ಣ ಸ್ಥಗಿತವಾಗಿದೆ. ಕೆಲವೇ ಜನರ ಕೈಗೆ ಬೆಂಗಳೂರನ್ನು ಒಪ್ಪಿಸಿರುವ ಸರ್ಕಾರದ ವಿರುದ್ಧ ಜನಾಕ್ರೋಶವಿದೆ. 14ನೇ ಹಣಕಾಸು ಆಯೋಗದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸುಮಾರು 2.19 ಲಕ್ಷ ಕೋಟಿ ರೂ. ನೀಡಿದೆ ಎಂದು ನಾವು ಹೇಳಿದರೆ ಇಲ್ಲಿನ ಕೆಲವರು, `ಧರ್ಮಕ್ಕೆ ನೀಡಿದ್ದೀರಾ’ ಎಂದು ಪ್ರಶ್ನಿಸುತ್ತಾರೆ. ಈ ಹಣ ಕರ್ನಾಟಕದ ಜನರ ಅಧಿಕಾರ. ಆ ಅಧಿಕಾರವನ್ನು ಈ ಹಿಂದಿದ್ದ ಯುಪಿಎ ಸರ್ಕಾರ ನೀಡಿರಲಿಲ್ಲ, ನಾವು ನೀಡುತ್ತಿದ್ದೇವಷ್ಟೆ ಎಂದು ಷಾ ಸ್ಪಷ್ಟಪಡಿಸಿದರು. ಕೆಲ ದಿನಗಳಿಂದ ರಾಜರಾಜೇಶ್ವರಿನಗರ, ಬಾದಾಮಿ ಕ್ಷೇತ್ರಗಳಲ್ಲಿ ವರದಿ ಆಗುತ್ತಿರುವ ಪ್ರಕರಣಗಳೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉತ್ತಮವಾದದ್ದಲ್ಲ. ಸೋಲುವ ಭಯದಲ್ಲಿ ಕೆಲವರು ಹತಾಶೆಗೊಳಗಾಗಿ ಇಂತಹ ಕೃತ್ಯಕ್ಕೆ ಇಳಿದಿದ್ದಾರೆ. ದೇಶದ್ರೋಹಿಗಳ ಜತೆಗೂ ಕೈಜೋಡಿಸಲು ಮುಂದಾಗಿರುವುದು ದುರದೃಷ್ಟಕರ. ಇಲ್ಲಿನ ಸಮೃದ್ಧ ಸಂಸ್ಕೃತಿಯನ್ನು ಕೈಬಿಟ್ಟು ಟಿಪ್ಪು ಬಹಮನಿ ಜಯಂತಿಗಳನ್ನು ಆಚರಿಸಲು ಮುಂದಾಗಿ ತುಷ್ಟೀಕರಣ ರಾಜಕಾರಣಕ್ಕೆ ಪ್ರಯತ್ನಿಸಿತು ಎಂದು ದೂರಿದ್ದಾರೆ!!

ಮೇ 17ರಂದು ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಲಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ. ಶಿಕಾರಿಪುರದಲ್ಲಿ ನಿನ್ನೆ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳಿಂದ ಜನ ರೋಸಿಹೋಗಿದ್ದು ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡಲಿದ್ದಾರೆ. ಬಾದಾಮಿಯಲ್ಲಿ ನಡೆದ ರೋಡ್ ಶೋನಲ್ಲಿ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಇದನ್ನು ಗಮನಿಸಿದರೆ ಅಲ್ಲಿ ಸಿದ್ದರಾಮಯ್ಯ ಸೋಲು ನಿಶ್ಚಿತ ಎನಿಸುತ್ತಿದೆ ಎಂದರು. ಮೋದಿಗೆ ಹಿಂದುತ್ವದ ಬಗ್ಗೆ ಅರಿವಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಎಸ್‍ವೈ, ಹಿಂದುತ್ವ ಎಂದರೆ ಏನೆಂಬುದನ್ನು ರಾಹುಲ್ ಗಾಂಧಿ ಸರಿಯಾಗಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ!!

source: firstpost

  • ಪವಿತ್ರ

 

 

Editor Postcard Kannada:
Related Post