X

ಅಮೆರಿಕದ ಹಿಂದೂ ದೇವಾಲಯವೊಂದರ ಮೇಲೆ ಖಲೀಸ್ತಾನಿ ಉಗ್ರರ ಅಟ್ಟಹಾಸ

ಖಲೀಸ್ತಾನಿ ಉಗ್ರರು ಅಮೆರಿಕಾದಲ್ಲಿಯೂ ತಮ್ಮ ಭಾರತ ವಿರೋಧಿ ಮನಸ್ಥಿತಿಯನ್ನು ಪ್ರದರ್ಶನ ಮಾಡಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿನ ಹಿಂದೂ ದೇವಾಲಯವೊಂದನ್ನು ವಿರೂಪಗೊಳಿಸಿ, ಖಲೀಸ್ತಾನಿ ಪರ ಘೋಷಣೆಗಳನ್ನು ಬರೆಯುವ ಮೂಲಕ ಭಾರತ ವಿರೋಧಿ ಮನಸ್ಥಿತಿಯನ್ನು ಪ್ರದರ್ಶನ ಮಾಡಿದ್ದಾರೆ‌. ಆ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕ್ಯಾಲಿಫೋರ್ನಿಯಾದ ನೆವಾರ್ಕ್ ‌ನಗರದಲ್ಲಿರುವ ಸ್ವಾಮಿ ನಾರಾಯಣ ಮಂದಿರ ವಸನಾ ಸಂಸ್ಥೆಯ ದೇವಾಲಯದ ಮೇಲಿನ ಗೋಡೆಗಳ ಮೇಲೆ ಖಲೀಸ್ತಾನಿ ಉಗ್ರರು ಈ ವಿಕೃತಿ ಮೆರೆದಿರುವುದಾಗಿದೆ. ಇಂತಹ ಹಿಂದೂ ವಿರೋಧಿ ವಿಕೃತ ಘೋಷಣೆಗಳನ್ನು ಗೀಚಿರುವ ಚಿತ್ರಗಳನ್ನು ಹಿಂದೂ ಅಮೆರಿಕನ್ ಫೌಂಡೇಶನ್ ತನ್ನ ಟ್ವಿಟರ್ ಖಾತೆ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

ಈ ದೇವಾಲಯದ ಮೇಲೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ದ್ವೇಷಭರಿತ ಗೋಡೆ ಬರಹಗಳನ್ನು ಬರೆಯಲಾಗಿದೆ. ಈ ಘಟನೆಯನ್ನು ದ್ವೇಷಭರಿತ ಅಪರಾಧ ಎಂದು ಪರಿಗಣಿಸಿ ತನಿಖೆ ಮಾಡಬೇಕು ಎಂಬುದಾಗಿಯೂ ಪ್ರತಿಷ್ಠಾನ ಒತ್ತಡ ಹೇರಿದೆ. ಹಾಗೆಯೇ, ಇದನ್ನು ನೆವಾರ್ಕ್ ‌ಪೊಲೀಸರು ಮತ್ತು ನ್ಯಾಯಾಂಗ ನಾಗರಿಕ ಹಕ್ಕುಗಳ ವಿಭಾಗಕ್ಕೂ ಮಾಹಿತಿ ನೀಡಲಾಗಿದೆ.

ಫ್ರಾನ್ಸಿಸ್ಕೊದಲ್ಲಿರುವ ಭಾರತೀಯ ದೂತಾವಾಸ ಕಚೇರಿ ಈ ಘಟನೆಯನ್ನು ಖಂಡಿಸಿದೆ. ಹಾಗೆಯೇ ಈ ದುಷ್ತೃತ್ಯ ಎಸಗಿದ ದುಷ್ಟರ ವಿರುದ್ಧ ತ್ವರಿತ ತನಿಖೆ ಮತ್ತು ಕ್ರಮ ಕೈಗೊಳ್ಳುವ ಹಾಗೆಯೂ ಒತ್ತಡ ಹೇರಿದೆ. ಈ ಹಿಂದೆಯೂ ಅಮೆರಿಕಾದಲ್ಲಿನ ಹಿಂದೂ ದೇವಾಲಯದ ಮೇಲೆ ದಾಳಿ, ಭಾರತ ವಿರೋಧಿ ಘೋಷಣೆಗಳ ಮೂಲಕ ವಿಕೃತಿ ಮೆರೆಯಲಾಗಿತ್ತು. ಕೆನಡಾ‌ದಲ್ಲಿಯೂ ಸಹ ಇಂತಹ ವಿಕೃತಿಗಳು ಭಾರತದ ವಿರುದ್ಧ, ಹಿಂದೂ ದೇವಾಲಯಗಳ ವಿರುದ್ಧ ಖಲೀಸ್ತಾನಿ ಭಯೋತ್ಪಾದಕರು ನಡೆಸಿದ್ದನ್ನು ನಾವಿಲ್ಲಿ ನೆಪಿಸಿಕೊಳ್ಳಬಹುದು.

ಭಾರತದ ಆಡಳಿತ ಚುಕ್ಕಾಣಿ ಪ್ರಧಾನಿ ಮೋದಿ ಅವರ ತೈ ಸೇರಿದ ಬಳಿಕ ಭಾರತದಲ್ಲಿ ಖಲೀಸ್ತಾನಿ ಉಗ್ರರಿಗೆ ನೆಲೆ ಇಲ್ಲದಾಗಿದೆ. ಭಯದ ವಾತಾವರಣ ನಿರ್ಮಾಣವಾಗಿದೆ. ಖಲೀಸ್ತಾನಿ ಉಗ್ರರ ವಿರುದ್ಧ ಪ್ರಧಾನಿ ಮೋದಿ ಅವರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಭಾರತದಲ್ಲಿದ್ದು ಅವರನ್ನು ಎದುರಿಸಲಾಗದ ಹೇಡಿಗಳು ವಿದೇಶಗಳಲ್ಲಿ ಭಾರತ ವಿರೋಧಿ ಕೃತ್ಯ ಎಸಗುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

Post Card Balaga:
Related Post