X

ನನ್ನನ್ನು ಗೆಲ್ಲಿಸದಿದ್ದರೆ ನಾನು ಸತ್ತೇ ಹೋಗುತ್ತೇನೆ-ಕುಮಾರಸ್ವಾಮಿ..! ಮತ್ತೆ ಚುನಾವಣಾ ತಂತ್ರ ಹೆಣೆದರಾ ಕುಮಾರಣ್ಣ..?

ಚುನಾವಣೆಯಲ್ಲಿ ಗೆಲ್ಲಲು ರಾಜಕಾರಣಿಗಳು ಅದ್ಯಾವ ಹಂತಕ್ಕೂ ಇಳಿಯುತ್ತಾ ಅನ್ನೋದು ಇದೀಗ ಮತ್ತಷ್ಟು ಧೃಡವಾಗುತ್ತಿದೆ. ಚುನಾವಣಾ ಸಮಯದಲ್ಲಿ ಭಾವನಾತ್ಮಕ ಮಾತುಗಳನ್ನಾಡಿ ಜನರನ್ನು ಭಾವಪರವಶಗೊಳಿಸಿ ಓಟ್ ಗಿಟ್ಟಿಸಿಕೊಳ್ಳುವುದು ಹೊಸದೇನಲ್ಲ ಬಿಡಿ. ಇಂದು ಈ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಘಟನೆ ನಡೆಯಿರು. ಅದು ಜನತಾದಳದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರಿಂದ. 

ಗೆಲ್ಲಿಸಿ,ಇಲ್ಲವಾದರೆ ಸತ್ತು ಹೋಗುತ್ತೇನೆ..!

ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಚುನಾವಣಾ ಪ್ರಚಾರದ ಸಮಯದಲ್ಲಿ ಭಾವನಾತ್ಮಕ ಭಾಷಣ ಮಾಡಿದ್ದಾರೆ. ಈ ಬಾರಿ ಶತಾಯ ಗತಾಯ ಜನತಾದಳ ಗೆಲ್ಲಲೇ ಬೇಕು ಎಂಬ ಉದ್ಧೇಶದಿಂದ ಕುಮಾರ ಸ್ವಾಮಿ ನಾನಾ ತಂತ್ರಗಳಿಗೆ ಮೊರೆ ಹೋದಂತೆ ಕಾಣುತ್ತಿದೆ. ಇದೀಗ ಕುಮಾರ ಸ್ವಾಮಿ ಭಾವನಾತ್ಮಕವಾಗಿ ಭಾಷಣ ಮಾಡಿದ್ದು, ಗೆಲ್ಲದಿದ್ದರೆ ನನಗೆ ಸಾವೇ ಗತಿ ಎಂಬಂತೆ ಭಾಷಣ ಮಾಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರವೊಂದರಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಷಣ ಮಾಡುತ್ತಲೇ ಭಾವುಕರಾದರು. “ಈ ಬಾರಿ ನಾನು ಗೆಲ್ಲದಿದ್ದರೆ ಸತ್ತೇ ಹೋಗಬೇಕಾದೀತು. ನಿಮ್ಮ ಕುಮಾರಸ್ವಾಮಿ ಬದುಕಬೇಕಂದ್ರೆ ಈ ಬಾರಿ ನನ್ನನ್ನು ಗೆಲ್ಲಿಸಿ. ನನ್ನ ಕೈಯೆಲ್ಲಾ ಖಾಲಿಯಾಗಿದೆ. ನನ್ನಲ್ಲಿ ದುಡ್ಡಿಲ್ಲ. ಅಭ್ಯರ್ಥಿಗಳು ನನ್ನ ಮನೆಯ ಮುಂದೆ ಬಂದು ಚುನಾವಣೆಗೆ ದುಡ್ಡು ಕೊಡಿ ಎಂದು ಕೇಳುತ್ತಿದ್ದಾರೆ. ನಾನು ಎಲ್ಲಿಂದ ದುಡ್ಡು ತಂದು ಕೊಡಲಿ.ನಾನು ಚಂದಾ ಎತ್ತಿ ಅವರಿಗೆಲ್ಲಾ ದುಡ್ಡು ತಂದು ಕೊಡಬೇಕಾಗಿದೆ. ನಾನು ಗೆಲ್ಲಲೇ ಬೇಕು. ಗೆಲ್ಲದಿದ್ದರೆ ನಾನೆಲ್ಲಿ ಬಿದ್ದು ಸಾಯಬೇಕು..?ನನ್ನನ್ನು ಬದುಕಿಸುವ ಶಕ್ತಿ ನಿಮ್ಮಲ್ಲಿ ಮಾತ್ರ ಇದೆ. ಈ ಚುನಾವಣೆಯಲ್ಲಿ ನಾನು ಗೆಲ್ಲದಿದ್ದರೆ ಮತ್ತೆ ಸತ್ತೇ ಹೋಗಬೇಕಾಗುತ್ತದೆ”…

ಅಚ್ಚರಿಯಾದರೂ ಇದು ಸತ್ಯ. ಇದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಭಾವನಾತ್ಮಕ ನುಡಿಗಳು. ಈ ಬಾರಿ ಜನತಾದಳ ಅಧಿಕಾರದ ಗದ್ದುಗೆಯನ್ನು ಸ್ವತಂತ್ರ್ಯವಾಗಿ ದಕ್ಕಿಸಿಕೊಳ್ಳುವುದಿಲ್ಲ. ಆದರೆ ಇತರೆ ಪಕ್ಷಗಳೊಂದಿಗಾದರೂ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂಬುವುದು ಕುಮಾರಸ್ವಾಮಿಯವರ ತಂತ್ರಗಾರಿಕೆ. ಒಂದೊಮ್ಮೆ ಭಾರತೀಯ ಜನತಾ ಪಕ್ಷ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಹುಮತ ಬಂದರೆ ಜನತಾ ದಳಕ್ಕೆ ಕವಡೆ ಕಾಸಿನ ಕಿಮ್ಮತ್ತಿರೋದಿಲ್ಲ. ಹೀಗಾಗಿ ತಮ್ಮ  ಬಲವನ್ನು ಹೆಚ್ಚಿಸಿಕೊಂಡಲ್ಲಿ ಉಳಿದೆರಡು ರಾಷ್ಟ್ರೀಯ ಪಕ್ಷಗಳು ಅತಂತ್ರವಾಗುತ್ತದೆ. ಈ ವೇಳೆ ಕುಮಾರ ಸ್ವಾಮಿ ಕಿಂಗ್ ಮೇಕರ್ ಆಗುತ್ತಾರೆ.

ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಪ್ರತಿ ಚುನಾವಣೆಯಲ್ಲೂ ಇಂತಹಾ ಭಾವನಾತ್ಮಕ ಮಾತುಗಳಿಂದಲೇ ಜನರನ್ನು ಭಾವಪರವಶಗೊಳಿಸುತ್ತಾರೆ ಎಂದು ಇದೀಗ ಜನರ ಬಾಯಿಯಿಂದ ಕೇಳಿ ಬರುತ್ತಿದೆ. ಒಂದೊಮ್ಮೆ ಈ ಬಾರಿ ರಾಷ್ಟ್ರೀಯ ಪಕ್ಷವೊಂದು ಬಹುಮತವೊಂದು ಅಧಿಕಾರದ ಗದ್ದುಗೆ ಹಿಡಿದಿದ್ದೇ ಆದಲ್ಲಿ ಕುಮಾರಸ್ವಾಮಿಯವರಿಗೆ ಭಾರೀ ರಾಜಕೀಯ ಹಿನ್ನೆಡೆಯಾಗುವ ಎಲ್ಲಾ ಲಕ್ಷಣಗಳೂ ಇದೆ ಎನ್ನಲಾಗುತ್ತಿದೆ.

-ಸುನಿಲ್ ಪಣಪಿಲ

Editor Postcard Kannada:
Related Post