X

ಬ್ರೇಕಿಂಗ್! ಕುಮಾರ ಸ್ವಾಮಿಗೆ ಭಾರೀ ನಿರಾಸೆ.! ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅಡ್ಡಿ ಮೇಲೆ ಅಡ್ಡಿ…!

ಉತ್ಪ್ರೇಕ್ಷೆಯಾದರೂ ಸತ್ಯ. ಕಾಂಗ್ರೆಸ್ ಹಾಗೂ ಜನತಾದಳದ ಮೈತ್ರಿ ಸರ್ಕಾರ ಸ್ವತಃ ಭಗವಂತನಿಗೇ ಇಷ್ಟವಿರಲಿಲ್ಲ ಅನ್ನಿಸುತ್ತೆ. ಇಂದು ಕಾಂಗ್ರೆಸ್ ಹಾಗೂ ಜನತಾದಳ ಮೈತ್ರಿಯ ಕೂಸಾಗಿರುವ ನಿಯೋಜಿತ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ರಾಜ್ಯದ  25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನುವುದು ರಾಜ್ಯದ ಮಾತ್ರವಲ್ಲದೆ ಇಡೀ ದೇಶದ ಜನತೆಗೂ ಗೊತ್ತಿರುವ ಸಂಗತಿಯೇ. ಆದರೆ ಇಂದು ನಡೆದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಭಾರೀ ಹಿನ್ನೆಡೆಯಾಗಿದ್ದು ದೇವರಿಗೂ ಪ್ರಮಾಣ ವಚನ ಇಷ್ಟ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಟ್ರೋಲ್ ಆಗುತ್ತಿವೆ. 

ಪ್ರಮಾಣ ವಚನಕ್ಕೆ ಅಡ್ಡಿಯಾದ ವರುಣ..!

ಇಂದು ಸಂಜೆಯ ವೇಳೆಗೆ ವಿಧಾನ ಸೌಧಾದ ಮುಂಭಾಗದಲ್ಲಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಕಾರ್ಯಕ್ರಮ ನಡೆಸುವುದಾಗಿ ಸಿದ್ದತೆ ನಡೆಸಿದ್ದರು. ಪ್ರಾದೇಶಿಕ ಪಕ್ಷಗಳ ನಾಯಕರನ್ನು ಆಹ್ವಾನಿಸಿ ಮುಖ್ಯಮಂತ್ರಿಯಾಗಿ ಪ್ರಮಾಣ ಮಾಡಲು ಸಿದ್ದರಾಗಿದ್ದರು. ಆದರೆ ಏಕಾಏಕಿ ಅಬ್ಬರಿಸಿದ ಮಳೆರಾಯ ವಿಧಾನ ಸೌಧದ ಮುಂಭಾಗದಲ್ಲಿ ಹಾಕಲ್ಪಟ್ಟಿದ್ದ ವೇದಿಕೆ ಸಹಿತ ಆಸನ ವ್ಯವಸ್ಥೆಗಳು ಚೆಲ್ಲಾಪಿಲ್ಲಿಯಾಗಿದೆ.

ಭಾರೀ ಗಾಳಿ ಸಹಿತ ಮಳೆಯಿಂದಾಗಿ ವೇದಿಕೆಯ ಮುಭಾಗದಲ್ಲಿದ್ದ ಕುರ್ಚಿಗಳು ಹಾರಿ ಹೋಗಿದೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕಾಂಗ್ರೆಸ್ ಹಾಗೂ ಹಾಗೂ ಜನತಾ ದಳದ ಕಾರ್ಯಕರ್ತರು ಮಳೆಯಿಂದ ತಪ್ಪಿಸಿಕೊಳ್ಳಲು ಸಿಕ್ಕ ಸಿಕ್ಕಲ್ಲಿ ಓಡಿಹೋಗಲು ತೊಡಗಿದರು. ಹಲವಾರು ಜನರು ಸಮಾರಂಭಕ್ಕೆ ಅಳವಡಿಸಿದ್ದ ಬ್ಯಾನರ್ ಕಿತ್ತು ಮಳೆಯಿಂದ ರಕ್ಷಣೆ ಪಡೆದುಕೊಳ್ಳುತ್ತಿದ್ದರು. ಮತ್ತೆ ಕೆಲವರು ಕುರ್ಚಿಗಳನ್ನೇ ತಲೆಯ ಮೇಲೆ ಇಟ್ಟುಕೊಂಡು ಮಳೆ ಬೀಳದ ಹಾಗೆ ನೋಡಿಕೊಳ್ಳಲು ಯತ್ನಿಸುತ್ತಿದ್ದರು.

ಮಳೆಯಿಂದಾಗಿ ಇಂದಿನ ಸಂಪೂರ್ಣ ಕಾರ್ಯಕ್ರಮವೇ ಸ್ಥಳಾಂತರವಾಗಿದೆ ಎನ್ನಲಾಗಿದೆ. ವಿಧಾನ ಸೌಧಾದ ಬಾಂಕ್ವೆಟ್ ಹಾಲ್‍ನಲ್ಲಿ ಸಿದ್ದಪಡಿಸಿದರಾದರೂ ಅಲ್ಲಿ 500 ಜನರಿಂದ ಹೆಚ್ಚು ಜನ ಕೂರಲು ಸಾಧ್ಯವಾಗದ ಕಾರಣ ಬೇರೆ ಸ್ಥಳಾವಕಾಶಕ್ಕಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

 

ಇಂದಿನ ಕುಮಾರ ಸ್ವಾಮಿಯ ಪಟ್ಟಾಭಿಶೇಕ ಕಾರ್ಯಕ್ರಮಕ್ಕೆ ಆಂದ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳ ಮುಖ್ಯಮಂತ್ರಿ ಪಿಣರಾಯಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಸಹಿತ ಅನೇಕ ಗಣ್ಯರು ಹಾಜರಾಗಲಿದ್ದಾರೆ.

ಒಟ್ಟಾರೆ ಇಂದಿನ ಪ್ರಮಾಣ ವಚನ ಕಾರ್ಯಕ್ರಮ ಮಳೆರಾಯನ ಅಡ್ಡಿಯಿಂದಾಗಿ ಧಿಕ್ಕಾಪಾಲಾಗಿದ್ದು ಭಾರತೀಯ ಜನತಾ ಪಕ್ಷ ಸಹಿತ ಕಾಂಗ್ರೆಸ್ ಹಾಗೂ ಜನತಾ ದಳ ವಿರೋಧಿಗಳು ಲೇವಡಿ ಮಾಡುತ್ತಿದ್ದಾರೆ. ಅನೈತಿಕ ಸಂಬಂಧದಂತೆ ನಡೆಸಿಕೊಳ್ಳುತ್ತಿರುವ ಈ ಸರ್ಕಾರಕ್ಕೆ ಜನರ ಶಾಪವೇ ಮುಳುವಾಗಲಿದೆ. ಅದು ಇಂದಿನಿಂದಲೇ ಕಾಡಲಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

-ಏಕಲವ್ಯ

Editor Postcard Kannada:
Related Post