X

ಮತ್ತೆ ಮೋದಿಗೆ ನಮೋ ಎಂದ ಕರ್ನಾಟಕ ಸಿಎಂ.! ಕೇಂದ್ರ ಸಚಿವರ ಭೇಟಿಯ ಹಿಂದಿನ ಮರ್ಮವೇನು ಗೊತ್ತಾ.?

ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕುಮಾರಸ್ವಾಮಿ ಅವರು, ಮೊದಲ ಎರಡು ದಿನದಲ್ಲಿ ಕೇಂದ್ರದ ಮೋದಿ ಸರಕಾರದ ಬಗ್ಗೆ ಭಾರೀ ಹಗುರವಾಗಿ ಮಾತನಾಡಿ ತಾನೇ ಎಲ್ಲರಿಗಿಂತ ಮಿಗಿಲಾದವನು ಎಂಬಂತೆ ವರ್ತಿಸಿದ್ದರು. ಕಾಂಗ್ರೆಸ್ ಜೊತೆ ಸೇರಿ ಸರಕಾರ ರಚಿಸುವಲ್ಲಿ ಕುಮಾರಸ್ವಾಮಿ ಅವರು ಯಶಸ್ವಿಯಾದ ಖುಷಿಯಲ್ಲಿ ಮೋದಿ ಸರಕಾರವನ್ನು ದೂರುವ ಹಳೇ ಛಾಳಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆದರೆ ಕೇಂದ್ರದ ನೆರವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ ಎಂಬುದು ಖಂಡಿತವಾಗಿಯೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಿಳಿದಿರುವ ವಿಚಾರ. ಆದ್ದರಿಂದಲೇ ಅಧಿಕಾರದ ಅಮಲಿನಿಂದ ಕೊಂಚ ಮಟ್ಟಿಗೆ ಹೊರ ಬಂದಿರುವ ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿಗೆ ಬೇಕಾದ ನೆರವು ಕೋರಿ ಪ್ರಧಾನಿ ಮೋದಿ ಭೇಟಿಯಾಗಿ ಬಂದಿದ್ದಾರೆ. ಈಗಾಗಲೇ ಪ್ರಧಾನಿ ಮತ್ತು ಸಿಎಂ ಕುಮಾರಸ್ವಾಮಿ ಅವರ ಭೇಟಿ ಅಂತ್ಯಗೊಂಡಿದ್ದು, ರಾಜ್ಯಕ್ಕೆ ಕೇಂದ್ರದ ಸಹಾಯ ಬೇಕು ಎಂದು ಕುಮಾರಸ್ವಾಮಿ ಕೇಳಿಕೊಂಡಿದ್ದಾರೆ.!

ಪ್ರಧಾನಿ ಜೊತೆ ಕೇಂದ್ರ ಸಚಿವರ ಭೇಟಿ..!

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ದೆಹಲಿಗೆ ತೆರಳಿ ಅಲ್ಲಿಂದ ಕೆಲ ಕೇಂದ್ರ ಸಚಿವರನ್ನೂ ಭೇಟಿಯಾಗಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದ್ದಾರೆ. ಯಾಕೆಂದರೆ ಕೇವಲ ರಾಜ್ಯ ಸರಕಾರದ ಕಡೆಯಿಂದ ಅಭಿವೃದ್ಧಿ ಎಂಬುದು ಅಸಾಧ್ಯ, ಆದ್ದರಿಂದ ಕೇಂದ್ರದ ನೆರವು ಬೇಕೇಬೇಕು. ಅದಕ್ಕಾಗಿಯೇ ಸ್ವತಃ ಸಿಎಂ ಕುಮಾರಸ್ವಾಮಿ ಅವರೇ ತೆರಳಿದ್ದು, ಇದೀಗ ಮೋದಿ ಸರಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.!

ಕೇಂದ್ರ ಸರಕಾರದ ಜೊತೆ ಈಗಾಗಲೇ ರಾಜ್ಯದ ಅಭಿವೃದ್ಧಿಯ ಬಗ್ಗೆ ಸಮಗ್ರ ಮಾತುಕತೆ ನಡೆಸಿರುವುದರಿಂದ ರಾಜ್ಯಕ್ಕೆ ಹೆಚ್ಚಿನ ನೆರವು ನೀಡುತ್ತಾರೆ ಎಂಬ ನಂಬಿಕೆಯಿದೆ. ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಕೇಂದ್ರ ಸಚಿವರಾದ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.!

ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ..!

ಕಾಂಗ್ರೆಸ್ ಸರಕಾರದಲ್ಲಿ ರಾಜ್ಯದ ಅಭಿವೃದ್ಧಿ ಎಂಬುದು ಮರಿಚಿಕೆಯಾಗಿತ್ತು. ಆದ್ದರಿಂದಲೇ ರಾಜ್ಯದಲ್ಲಿ ಯಾವುದೇ ಉತ್ತಮ ಅಭಿವೃದ್ಧಿ ಕಾಣಸಿಗುತ್ತಿಲ್ಲ‌. ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಕೂಡ ಕರ್ನಾಟಕದ ಅಭಿವೃದ್ಧಿಗೆ ಮೋದಿ ಸರಕಾರದ ಮೊರೆ ಹೋಗಿದ್ದು, ರಾಜ್ಯ ಸರಕಾರ ಯಾವ ಪುರುಷಾರ್ಥಕ್ಕೆ ಇದೆ ಎಂಬೂದೇ ಪ್ರಶ್ನೆ. ಯಾಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ ಎರಡೂ ಪಕ್ಷಗಳು ಸೇರಿಕೊಂಡು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿ , ತಾವೇ ರಾಜ್ಯಭಾರ ಮಾಡುವುದಾಗಿ ಮೆರೆದಿದ್ದರು. ಆದರೆ ಇದೀಗ ಅಭಿವೃದ್ಧಿಯ ವಿಚಾರಕ್ಕೆ ಬಂದಾಗ ಮತ್ತೆ ನರೇಂದ್ರ ಮೋದಿಯವರ ಬಳಿ ನೆರವು ಕೇಳುವುದು ನೋಡುತ್ತಿದ್ದರೆ ಹೆಸರಿಗಷ್ಟೇ ಮೈತ್ರಿ ಸರಕಾರ ಇದೆಯೇ ಎಂಬ ಸಂಶಯ ವ್ಯಕ್ತವಾಗದೇ ಇರಲ್ಲ. ಕಾವೇರಿ ನದಿ ನೀರು ಪ್ರಾಧಿಕಾರದ ರಚನೆಯ ಬಗ್ಗೆಯೂ ಪ್ರಧಾನಿ ಜೊತೆ ಮಾತೂಕತೆ ನಡೆಸಿದ ಕುಮಾರಸ್ವಾಮಿ, ರಾಜ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಚಾರಕ್ಕೂ ಕೇಂದ್ರದ ಮೊರೆ ಹೋಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.!

ಕೇವಲ ಅಧಿಕಾರದ ಆಸೆಯಿಂದ ಮೈತ್ರಿ ಮಾಡಿಕೊಂಡು ಇದೀಗ ಸರಕಾರ ಮುಂದುವರಿಸಲು ಬಿಜೆಪಿಯ ಕೇಂದ್ರದ ಸಹಾಯ ಯಾಚಿಸುವದನ್ನು ಗಮನಿಸಿದಾಗ , ರಾಜ್ಯದ ಅಭಿವೃದ್ಧಿ ಕೇವಲ ಮೋದಿ ಸರಕಾರದಿಂದ ಮಾತ್ರ ಸಾಧ್ಯ ಎಂಬುದು ಅರಿವಾಗುತ್ತದೆ. ಕೇಂದ್ರಕ್ಕೆ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು , ಕರ್ನಾಟಕವನ್ನೂ ಕೇಂದ್ರ ಸರಕಾರವೇ ಅಭಿವೃದ್ಧಿ ಮಾಡಬೇಕೆಂಬ ನಿಟ್ಟಿನಲ್ಲಿ ಕೇಳಿಕೊಂಡಿದ್ದಾರೆ..!

–ಅರ್ಜುನ್

Editor Postcard Kannada:
Related Post