X

ಕಿಶನ್ ಗಂಗಾ ಜಲವಿದ್ಯುತ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯಿಂದ ಚಾಲನೆ!! ತತ್ತರಿಸಿದ ಪಾಕಿಸ್ತಾನ!!

ಭಾರತ ಮತ್ತು ಪಾಕಿಸ್ತಾನದ ನಂಟು ಯಾವಾಗಲೂ ಹಾವು ಮುಂಗುಸಿ ಇದ್ದಂತೆ!! ಭಾರತ ಪಾಕಿಸ್ತಾನ ಯಾವತ್ತೂ ಮಿತ್ರರಾಗಲು ಸಾಧ್ಯವೇ ಇಲ್ಲ!! ಕೆಲ ಬುದ್ಧಿ ಜೀವಿಗಳಿಗೆ ಪಾಕಿಸ್ತಾನ ಸ್ವರ್ಗದಂತೆ ಕಾಣುವುದು ಆಶ್ಚರ್ಯಕರ!! ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಪಾಕಿಸ್ತಾನಕ್ಕೆ ಏನೂ ಮಾಡಲೂ ಅಸಾಧ್ಯವಂತಾಗಿದೆ!! ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿಸಿ ತಕ್ಕ ಪಾಠ ಕಲಿಸಿದರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಉಗ್ರರ ಪೆÇೀಷಣೆಯ ರಾಷ್ಟ್ರ ಎಂಬುದನ್ನು ಬಿಂಬಿಸಿದರು. ಕೇವಲ ಭಾರತವಲ್ಲದೆ ಪಾಕಿಸ್ತಾನವನ್ನು ವಿಶ್ವದ ದೊಡ್ಡಣ್ಣ ಅಮೇರಿಕಾ ಕೂಡಾ ದೂರ ತಳ್ಳಿದೆ!! ಇಂತಹ ಗಂಡೆದೆಯ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದಾರೆ.


ಕಿಶನ್ ಗಂಗಾ ಜಲವಿದ್ಯುತ್ ಯೋಜನೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ!!

ಕಿಶನ್ ಗಂಗಾ ಜಲವಿದ್ಯುತ್ ಯೋಜನೆ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾಗಿದ್ದು, ಇದು ಕಿಶನ್ ಗಂಗಾ ನದಿಗೆ ಅಡ್ಡಲಾಗಿ 37 ಮೀಟರ್ ಎತ್ತರದ ಅಣೆಕಟ್ಟಾಗಿದೆ. ಈ ಯೋಜನೆಯಿಂದ ವಾರ್ಷಿಕ 1,713 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದ್ದು, ಭಾರತದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದೇ ಹೇಳಲಾಗುತ್ತಿದೆ. ಆದರೆ ಈ ಯೋಜನೆಯನ್ನು ಪಾಕಿಸ್ತಾನ ತಡೆಯಲು ಹಲವು ಬಾರಿ ಪ್ರಯತ್ನಿಸಿತ್ತು. ಇಂಡಸ್ ನದಿ ಒಪ್ಪಂದದಂತೆ ವಿಶ್ವಸಂಸ್ಥೆಯ ಮೆಟ್ಟಿಲೇರಿ ಯೋಜನೆಗೆ ಅಡ್ಡಗಾಲು ಹಾಕಲು ಯತ್ನಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ಹಾಗೂ ಪಾಕಿಸ್ತಾನದ ಹುರುಳಿಲ್ಲದ ವಾದಕ್ಕೆ ಬೆಲೆ ಸಿಗದೆ ಈಗ ಯೋಜನೆ ಪೂರ್ಣಗೊಂಡಿದೆ.

ಹೌದು, ಜಮ್ಮು-ಕಾಶ್ಮೀರದ ಗುರೇಜ್ ನಲ್ಲಿ ನಿರ್ಮಿಸಿದ ಕಿಶನ್ ಗಂಗಾ ಜಲವಿದ್ಯುತ್ ಯೋಜನೆಯನ್ನು ಪಾಕಿಸ್ತಾನದ ವಿರೋಧದ ಮಧ್ಯೆಯೂ ಪೂರ್ಣಗೊಳಿಸಿದ್ದು, ಮೇ ಮೊದಲ ವಾರದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ!! ಇದರಿಂದ ಉಪಟಳ ಮಾಡಿದ್ದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾದಂತಾಗಿದೆ.

 

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ನಿರ್ಮಿಸುತ್ತಿದ್ದ 330 ಮೆಗಾವ್ಯಾಟ್ ಕಿಶನ್ ಗಂಗಾ ಮತ್ತು 850 ಮೆಗಾವ್ಯಾಟ್ ರಟ್ಲೆ ಜಲ ವಿದ್ಯುತ್ ಸ್ಥಾವರಗಳ ಯೋಜನೆಗೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿತ್ತು. ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿದ ವಿಶ್ವಬ್ಯಾಂಕ್, ಯೋಜನೆ ಮುಂದುವರೆಸಲು ಅನುಮತಿ ಕೂಡಾ ನೀಡಿದ್ದರು!! ಸಿಂಧು ಜಲ ಒಪ್ಪಂದದ ಪ್ರಕಾರ ಭಾರತಕ್ಕೆ ಯೋಜನೆ ಕೈಗೊಳ್ಳುವ ಹಕ್ಕಿದೆ!! ಆದರೂ ಪಾಕಿಸ್ತಾನ ಭಾರತಕ್ಕೆ ಈ ಯೋಜನೆಯನ್ನು ಪೂರ್ಣಗೊಳಿಸದಂತೆ ಪದೇ ಪದೇ ತಕಾರಾರು ಮಾಡುತ್ತಲೇ ಬಂದಿತ್ತು!! ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಪಾಕಿಸ್ತಾನವನ್ನು ಮೂಲೆಗುಂಪು ಮಾಡಿ ತನ್ನ ಕೆಲಸವನ್ನು ಸಲೀಸಾಗಿಯೇ ಮಾಡೇ ಬಿಟ್ಟರು ಪ್ರಧಾನಿ ನರೇಂದ್ರ ನರೇಂದ್ರ ಮೋದಿಯವರು!!

ಜಮ್ಮು ಮತ್ತು ಕಾಶ್ಮೀರದ ವಾಯವ್ಯದಲ್ಲಿರುವ ಕಿಶನ್‍ಗಂಗಾ ಜಲವಿದ್ಯುತ್ ಸ್ಥಾವರವು ಝೀಲಂ ನದಿಯ ಜಲಾನಯನ ಪ್ರದೇಶದ ಒಂದು ವಿದ್ಯುತ್ ಸ್ಥಾವರ. ಕಿಶನ್‍ಗಂಗಾ ನದಿ ನೀರನ್ನು ತಿರುಗಿಸುವ ಯೋಜನೆಯಲ್ಲಿ ವಿನ್ಯಾಸಗೊಳಿಸಲಾಗಿದೆ!! ಈ ನದಿ ಜಲವಿದ್ಯುತ್ ಯೋಜನೆಯ ಭಾಗವಾಗಿ ರೂ.5783.17 ಕೋಟಿ ($ 864 ಮಿಲಿಯನ್) ಯೋಜನೆ. ಜಲಾಶಯ. ಇದು ಬಂಡಿಪೆÇೀರ್ ನಿಂದ 5 ಕಿಮೀ (3 ಮೈಲಿ) ಉತ್ತರಕ್ಕೆ , ಜಮ್ಮು ಮತ್ತು ಕಾಶ್ಮೀರ ದಲ್ಲಿ ಇದೆ. ಈ ವಿದ್ಯುತ್ ಸ್ಥಾವರ 330 ಮೆಗಾ ವ್ಯಾಟ್ ಅಳವಡಿಕೆಯಾದ ಸಾಮಥ್ರ್ಯ ಹೊಂದಿರುತ್ತದೆ.  ಆದರೆ ಇದನ್ನು ಪೂರ್ಣಗೊಳಿಸಲು ಮೋದಿಜೀಯೇ ಬರಬೇಕಾಯಿತು!!

ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಂತಹ 56 ಇಂಚಿನ ಎದೆಯುಳ್ಳ ನಾಯಕನನ್ನು ಹೊಂದಿರುವ ನಾವು ಹೆಮ್ಮೆಪಡುವ ಮೂಲಕ ಮೋದಿ ಅವರು ತಮಗೆ ಗುಂಡಿಗೆ ಇದೆ ಎಂಬುದನ್ನು ಸಾಬೀತುಪಡಿಸುತ್ತಲೇ ಇದ್ದಾರೆ. ಇದಕ್ಕೆ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ ಕಿಶನ್ ಗಂಗಾ ಜಲವಿದ್ಯುತ್ ಯೋಜನೆ ಮುಗಿಸಿದ್ದೇ ಉತ್ತಮ ನಿದರ್ಶನವಾಗಿದೆ!!

ಪವಿತ್ರ

Editor Postcard Kannada:
Related Post