X

ನಮೋ ಆ್ಯಪ್ ಮೂಲಕ ಮೋದಿ ಸಂವಾದ!! ಕರ್ನಾಟಕದಲ್ಲೂ ವಿಜಯಪತಾಕೆಯನ್ನು ಹಾರಿಸಲು ಸಜ್ಜಾಗಿರುವ ಮೋದಿ ಹೇಳಿದ್ದೇನು ಗೊತ್ತೇ??

ಈಗಾಗಲೇ ವಿಧಾನಸಭಾ ಚುನಾವಣೆಯ ಬಿಸಿ ಎಲ್ಲೆಡೆ ಹಬ್ಬಿದ್ದು, ಮೋದಿ ಅಲೆ ಕಾಂಗ್ರೆಸ್ಸಿಗರನ್ನು ಬಗ್ಗು ಬಡಿದದ್ದಂತೂ ಅಕ್ಷರಶಃ ನಿಜ!! ಆಡಳಿತರೂಡ ಪಕ್ಷ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ, ಇತ್ತ ಬಿಜೆಪಿ ದೇಶಾದ್ಯಂತ ಗೆದ್ದು ಕರ್ನಾಟಕದಲ್ಲೂ ಗೆಲುವಿನ ಪತಾಕೆಯನ್ನು ಹಾರಿಸಲು ಸಜ್ಜಾಗಿ ನಿಂತಿದೆ. ಇದಕ್ಕಾಗಿ ಸಾಕ್ಷಿ ಎನ್ನುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅನೇಕ ಬಾರಿ ಕರ್ನಾಟಕದ ಸ್ಥಿತಿ ಗತಿ ಅಳೆದಿದ್ದು, ಅಭ್ಯರ್ಥಿಗಳ ಆಯ್ಕೆ ಮುಗಿದ ಬೆನ್ನಲ್ಲೇ ಇದೀಗ ನರೇಂದ್ರ ಮೋದಿಯವರು ಅಭ್ಯರ್ಥಿಗಳ ಜೊತೆ ಮೊಬೈಲ್ ಆ್ಯಪ್ ಮೂಲಕ ಸಂವಾದ ನಡೆಸಿ ಒಂದಿಷ್ಟು ಸಲಹೆ, ಸೂಚನೆ ನೀಡಿದ್ದಾರೆ.

ಹೌದು… ಈಗಾಗಲೇ ಎಲ್ಲಾ ಕಡೆಗಳಲ್ಲಿ ಚುನಾವಣಾ ಕಾವು ಹೆಚ್ಚಾಗಿದ್ದು, ನರೇಂದ್ರ ಮೋದಿಯವರನ್ನು ತೆಗಳುವ ಕಾರ್ಯವು ಕಾಂಗ್ರೆಸ್ಸಿಗರಿಂದ ನಡೆಯುತ್ತಲೇ ಇದೆ!! ನರೇಂದ್ರ ಮೋದಿ ಸರ್ಕಾರವನ್ನು ಬಗ್ಗುಬಡಿಯಲು ಕಾಂಗ್ರೆಸ್ ಹರಸಾಹಸವನ್ನೇ ಪಡುತ್ತಿದ್ದು, ಇದಕ್ಕೆ ಪ್ರತಿತಂತ್ರ ಎಂಬುವಂತೆ ನರೇಂದ್ರ ಮೋದಿಯವರು ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂಬ ಹಠದಿಂದ 224 ಕ್ಷೇತ್ರಗಳ ಮೇಲೂ ಮೋದಿ ನಿಗಾವಹಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರತೀಯೊಬ್ಬ ಬಿಜೆಪಿ ಅಭ್ಯರ್ಥಿಯ ಜೊತೆಯೂ ಸಂಭಾಷಣೆಯನ್ನು ಮಾಡಲು ನಿರ್ಧಾರ ಕೈಗೊಂಡಿದ್ದಾರೆ!!

ಹಾಗಾಗಿ ಮೇ 12ರಂದು ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರೊಂದಿಗೆ ಮೊಬೈಲ್ ಆ್ಯಪ್ ಮೂಲಕ ಸಂವಾದ ನಡೆಸಿದ್ದಾರೆ. ಹಾಗಾಗಿ ಕರ್ನಾಟಕ ಚುನಾವಣೆಯನ್ನು ಮತ್ತಷ್ಟು ರಂಗುಗೊಳಿಸಲು 224 ಕ್ಷೇತ್ರಗಳ ಮೇಲೂ ಪ್ರಧಾನಿ ಮೋದಿ ಕಣ್ಣಿಟ್ಟಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಮೋದಿಯಿಂದ ದೊಡ್ಡ ಮಟ್ಟದ ಮಾಸ್ಟರ್ ಪ್ಲಾನ್ ನಡೆದಿದೆ.

ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ನಾಮಪತ್ರ ಸಲ್ಲಿಕೆ ಮಾಡಿರುವ ಬಿಜೆಪಿ ಅಭ್ಯರ್ಥಿಗಳ ಜತೆ ಮೋದಿ ಆ್ಯಪ್ ಮೂಲಕ ಗುರುವಾರ ಸಂವಾದ ನಡೆಸಿದ್ದಾರೆ!! ಸಂವಾದದ ಸಂದರ್ಭದಲ್ಲಿ ಅವರು ಪಕ್ಷದ ಕಾರ್ಯಕರ್ತರಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಹುರಿದುಂಬಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರು, ಸಂಸದರು ಮತ್ತು ಶಾಸಕರಿಗೆ ಅವರು ಸಲಹೆ, ಮಾರ್ಗದರ್ಶನವನ್ನೂ ಈ ಮೂಲಕ ನೀಡಿದ್ದಾರೆ!!

ಕರ್ನಾಟಕಕ್ಕೆ ಬಿಜೆಪಿಯ ಮೂರು ಪ್ರಮುಖ ಕಾರ್ಯಸೂಚಿಗಳನ್ನು ನೀಡಿರುವ ನರೇಂದ್ರ ಮೋದಿ

ಪ್ರಧಾನಿ ಮೋದಿ ಅವರು ನಾಳೆ 224 ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಚುನಾವಣೆ ಪ್ರಚಾರ ಕುರಿತಂತೆ ಸೂಕ್ತ ಮಾರ್ಗದರ್ಶನ ನೀಡಲಿರುವ ಇವರು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬಿಜೆಪಿ ನಾಯಕರ ಜತೆ ಸಂವಾದಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಚುನಾವಣೆ ಜಯಿಸಲು ಅಭ್ಯರ್ಥಿಗಳಿಗೆ ಮೂರು ಪ್ರಮುಖ ಕಾರ್ಯಸೂಚಿಗಳನ್ನು ನೀಡಿದ್ದಾರೆ. ಅವು,

– ಅಭಿವೃದ್ಧಿ
– ವೇಗವಾದ ಅಭಿವೃದ್ಧಿ
– ಸರ್ವರೀತಿಯ ಅಭಿವೃದ್ಧಿ.

ಅಷ್ಟೇ ಅಲ್ಲದೇ ಪ್ರತಿ ಕ್ಷೇತ್ರದಲ್ಲಿ ನಡೆದಿರುವ ಸಿದ್ಧತೆ, ಬೂತ್ ಸಶಕ್ತೀಕರಣ, ಅಭ್ಯರ್ಥಿಗಳ ಪ್ರಚಾರ ವೈಖರಿ ಕುರಿತು ಸ್ವತಃ ಪ್ರಧಾನಿ ಮೋದಿಯೇ ಅಭ್ಯರ್ಥಿಗಳ ಜತೆ ಸಂವಾದ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ನೇರವಾಗಿ ಅಭ್ಯರ್ಥಿಗಳ ಜತೆಗೆ ಸಂಪರ್ಕ ಸಾಧಿಸುವ ಮೂಲಕ ಮೋದಿ ಪ್ರಸಕ್ತ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಲ್ಲದೆ ಚುನಾವಣೆ ಕಾರ್ಯವೈಖರಿ ಬಗ್ಗೆ ಮೋದಿ ಅವರು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಹೌದು…. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬೆಳಗ್ಗೆ 9 ಗಂಟೆಗೆ ಪಕ್ಷದ ಅಭ್ಯರ್ಥಿಗಳು, ಪದಾಧಿಕಾರಿಗಳು, ಸಂಸದರು, ಶಾಸಕರೊಂದಿಗೆ ಮೋದಿ ಆ್ಯಪ್ ನಲ್ಲಿ ಸಂವಾದ ನಡೆಸಿದರು. ಈ ಸಮಯದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದಿಷ್ಟು ಸಲಹೆ, ಸೂಚನೆ ನೀಡಿದ್ದಾರೆ!! ಅಷ್ಟೇ ಅಲ್ಲದೇ ಭಾರತದ ರಾಜಕೀಯ ವ್ಯವಸ್ಥೆಯಲ್ಲಿರುವ ಎಲ್ಲ ದೋಷಗಳ ಮೂಲ ಕಾಂಗ್ರೆಸ್ ಪಕ್ಷ ಎಂಬ ಸತ್ಯವನ್ನ ಯಾರು ನಿರಾಕರಿಸಲು ಸಾಧ್ಯವಿಲ್ಲ. ಈ ಕಾಂಗ್ರೆಸ್ ಸಂಸ್ಕೃತಿಯನ್ನು ದೇಶದಿಂದ ಹೊರಹಾಕುವ ತನಕ ನಾವು ನಮ್ಮ ರಾಜಕೀಯ ವೈವಸ್ಥೆಯನ್ನು ಶುದ್ಧೀಕರಿಸುವುದು ಅಸಾಧ್ಯ ಎಂದು ಮೋದಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ!!

ಇದೇ ಸಂದರ್ಭದಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡಲು ಇತರ ರಾಜಕೀಯ ಪಕ್ಷಗಳು ಹಿಂಜರಿಯುತ್ತಿವೆ. ವಿಭಜನೆಯ ಮೇಲೆ ಕೇಂದ್ರೀಕೃತವಾದ ಆ ಪಕ್ಷಗಳಿಗೆ ಇದನ್ನು ಒಪ್ಪಿಕೊಳ್ಳಲಾಗಲಿಲ್ಲ. ನಾವು ಅಭಿವೃದ್ಧಿ ಮಾದರಿಯಲ್ಲಿ ಮಾತ್ರವೇ ಚುನಾವಣೆಗಳನ್ನು ನಡೆಸುತ್ತೇವೆ ಮತ್ತು ಹೋರಾಡುತ್ತೇವೆ ಎಂದು ನಾಮಪತ್ರ ಸಲ್ಲಿಕೆ ಮಾಡಿರುವ ಬಿಜೆಪಿ ಅಭ್ಯರ್ಥಿಗಳ ಜತೆ ಮೊಬೈಲ್ ಆ್ಯಪ್ ಮೂಲಕ ಸಂವಾದ ನಡೆಸಿದ್ದಾರೆ.

ಒಟ್ಟಿನಲ್ಲಿ ಕರ್ನಾಟಕದಲ್ಲೂ ಚುನಾವಣೆಯನ್ನು ಜಯಿಸಲು ಹರಸಾಹಸ ಪಡುತ್ತಿರುವ ಸಿದ್ದರಾಮಯ್ಯ ಸರ್ಕಾರದ ಮದವನ್ನು ಇಳಿಸಲು ನರೇಂದ್ರ ಸರ್ಕಾರವು ಕರ್ನಾಟಕದಲ್ಲೂ ಭರ್ಜರಿ ತಯಾರಿ ನಡೆಸಿದೆ. ಹಾಗಾಗಿ ನರೇಂದ್ರ ಮೋದಿಯವರು ಮೇ 1ರಿಂದ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯಾದ್ಯಂತ 15 ರಿಂದ 20 ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ ಎನ್ನುವ ಮಾಹಿತಿ ಕೇಳಿ ಬಂದಿದೆ!!

ಮೂಲ:http://zeenews.india.com/kannada/assembly-elections/prime-minister-narendra-modi-addresses-bjp-leaders-and-candidates-with-mobile-app-5375

– ಅಲೋಖಾ

Editor Postcard Kannada:
Related Post