X

ಸೋಲುವ ಕಾಂಗ್ರೆಸ್‌ ಅದೆಷ್ಟು ಬಿಟ್ಟಿ ಭಾಗ್ಯ ಪೋಷಿಸುತ್ತದೆ?

ಬಿಟ್ಟಿ ಯೋಜನೆಗಳು ಜನರನ್ನು ಉದ್ಧಾರ ಮಾಡುವುದಿಲ್ಲ. ಬದಲಾಗಿ ಜನರನ್ನು ಮತ್ತಷ್ಟು ಬಡತನದತ್ತ ತಳ್ಳುತ್ತದೆ. ದೇಶದ ಅಭಿವೃದ್ಧಿಯ ಮೇಲೆಯೂ ಹೊಡೆತ ನೀಡುತ್ತದೆ. ಬಹಳ ಮುಖ್ಯವಾಗಿ ಎಲ್ಲವನ್ನೂ ಉಚಿತವಾಗಿಯೇ ಪಡೆದ ವ್ಯಕ್ತಿಗಳಲ್ಲಿ ಕೆಲವರಾದರೂ ಜೀವನದಲ್ಲಿ ಸೋಂಬೇರಿಗಳಾಗುತ್ತಾರೆ. ಇದು ಜಡತ್ವಕ್ಕೂ ಕಾರಣವಾಗುತ್ತದೆ. ಇವೆಲ್ಲದರ ಜೊತೆ ಮತ್ತೊಂದು ಮುಖ್ಯ ವಿಷಯವೆಂದರೆ ಯಾವುದೇ ಸರ್ಕಾರ ಉಚಿತವಾಗಿ ಏನನ್ನೇ ನೀಡುತ್ತದೆ ಎಂಬ ಭರವಸೆ ನೀಡಿದರೂ, ಅದರ ವೆಚ್ಚದ ಹೊರೆಯನ್ನು ಸಹ ತೆರಿಗೆಯ ರೂಪದಲ್ಲಿ ಭರಿಸಬೇಕಾದವರು ಉಚಿತಗಳ ಘೋಷಣೆ ಮಾಡಿದವರಲ್ಲ. ಬದಲಾಗಿ ನಾವು, ನೀವು. ಅಂದರೆ ಜನಸಾಮಾನ್ಯರೇ.

ಅಂದ ಹಾಗೆ ಇಂದು ಕಾಂಗ್ರೆಸ್‌ನ ಐವತ್ತು ವರ್ಷದ ಯುವ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಯುವ ಕ್ರಾಂತಿ ಸಮಾವೇಶ ನಡೆಸಿದೆ. ಈ ಸಮಾವೇಶದಲ್ಲಿ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ನಾಲ್ಕನೇ ಬಿಟ್ಟಿ ಘೋಷಣೆಯನ್ನು ಮಾಡಿದೆ. ಅಂತೂ ಈ ಬಾರಿ ಕಾಂಗ್ರೆಸ್ ಗೆಲ್ಲುವ ಭರವಸೆ ಸ್ವತಃ ಆ ಪಕ್ಷಕ್ಕೆಯೇ ಇಲ್ಲವಾಗಿದ್ದು, ಈ ನಿಟ್ಟಿನಲ್ಲಿ ಹೇಗೂ ಸೋಲುವವರು, ಭರವಸೆಗಳನ್ನು ಕೊಟ್ಟರೆ ಯಾವುದೇ ನಷ್ಟ ಇಲ್ಲ. ಅದನ್ನು ಈಡೇರಿಸುವ ಅಗತ್ಯವಿಲ್ಲವಲ್ಲಾ ಎಂದುಕೊಂಡು ಉಚಿತ ಭರವಸೆಗಳನ್ನು ನೀಡುತ್ತಲೇ ಇದೆ.

ಅಂದ ಹಾಗೆ ಈ ಬಾರಿ ನಿರುದ್ಯೋಗಿ ಯುವಕರ ಮೂಗು ಸೇರುವ ಕೆಲಸ ಮಾಡಿರುವ ಕಾಂಗ್ರೆಸ್, ಅವರಿಗೆ ಯುವ ನಿಧಿ ಯೋಜನೆಯನ್ನು ಆರಂಭಿಸುವುದಾಗಿ ಹೇಳಿದೆ. ಈ ಯೋಜನೆಯ ಮೂಲಕ ನಿರುದ್ಯೋಗಿ ಪದವೀಧರ ಯುವಕ, ಯುವತಿಯರಿಗೆ ೨ ವರ್ಷಗಳ ವರೆಗೆ ಮೂರು ಸಾವಿರ ರೂ. ಆರ್ಥಿಕ ನೆರವನ್ನು ನೀಡುವುದಾಗಿಯೂ ಘೋಷಿಸಿದೆ.

ಈ ಹಿಂದೆ ಕಾಂಗ್ರೆಸ್ ರಾಜ್ಯದ ಪ್ರತಿ ಕುಟುಂಬಗಳ ಯಜಮಾನಿಕೆ ಹೊತ್ತ ಮಹಿಳೆಯ ಖಾತೆಗೆ ಮಾಸಿಕ ಎರಡು ಸಾವಿರ ರೂ. ನೀಡುವುದಾಗಿ, ಪ್ರತಿ ಮನೆಗೆ ೨೦೦ ಯೂನಿಟ್ ವಿದ್ಯುತ್ ಉಚಿತ ನೀಡುವುದಾಗಿ, ಉಚಿತ ೧೦ ಕೆ. ಜಿ. ಅಕ್ಕಿ ವಿತರಿಸುವುದಾಗಿಯೂ ಘೋಷಿಸಿತ್ತು. ಸದ್ಯ ಈ ಬಿಟ್ಟಿ ಭಾಗ್ಯಗಳ ಪಾಲಿಗೆ ಯುವ ನಿಧಿ ಯೋಜನೆಯನ್ನೂ ಘೋಷಿಸಿದ್ದು, ಆ ಮೂಲಕ ನಿರುದ್ಯೋಗಿ ಜನರನ್ನು ಮರಳು ಮಾಡಲು ಕಾಂಗ್ರೆಸ್ ಹೊರಟಿರುವುದು ಹಾಸ್ಯಾಸ್ಪದ.

Post Card Balaga:
Related Post