X

ಯೂಟರ್ನ್ ಮಾಸ್ಟರ್ ಕೇಜ್ರಿವಾಲನ ಮತ್ತೊಂದು ಎಡಬಿಡಂಗಿತನ ಅನಾವರಣ!! ಸಮಾವೇಶಕ್ಕೆ ಬಂದವರಿಗೆ ಕಾಸೂ ಇಲ್ಲ ಊಟವೂ ಇಲ್ಲ!!

ಪ್ರತಿ ಬಾರಿ ಒಂದಲ್ಲ ಒಂದು ವಿವಾದಗಳಿಂದಲೇ ಸುದ್ದಿ ಮಾಡುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರೀವಾಲ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ!! ದೆಹಲಿಯಲ್ಲಿ ನೆಲೆ ಕಳೆದುಕೊಂಡಿರುವ ಆಮ್ ಆದ್ಮಿ ಪಕ್ಷ ಇದೀಗ ಜನರನ್ನು ಒಗ್ಗೂಡಿಸಲು ವಾಮ ಮಾರ್ಗಗಳನ್ನು ಹಿಡಿದಿದ್ದಂತೂ ಅಕ್ಷರಶಃ ನಿಜ. ಆದರೆ ಇದೀಗ ಪಕ್ಷದ ಸಮಾವೇಶಕ್ಕೆ ಜನರನ್ನು ಸೇರಿಸಲು ಮಾಡಿರುವ ಅನಾಚಾರಗಳು ಇದೀಗ ಒಂದೊಂದಾಗಿ ಬಟಾ ಬಯಲಾಗುತ್ತಿದೆ.

ಹೌದು.. ಅಣ್ಣಾ ಹಜಾರೆಯವರ ಹೋರಾಟ ಯಾವಾಗ ದೇಶದಲ್ಲಿ ಹೊಸ ಆಂದೋಲವನ್ನು ಸೃಷ್ಟಿಸಿತ್ತೋ ಅಂದಿನಿಂದ ದೇಶ ನವ ಪಥದಲ್ಲಿ ಸಾಗಿದ್ದ ವೇಳೆ ದೇಶದ ಜನತೆಗೆ ಈ ವ್ಯಕ್ತಿ ಯಾರು ಅಂತಾನೆ ಗೊತ್ತಿಲ್ಲದ ಸಮಯದಲ್ಲಿ ಅಣ್ಣಾ ಹಜಾರೆಯವರ ಹೋರಾಟದಲ್ಲಿ ಮೆಲ್ಲನೆ ತೂರಿಕೊಂಡು ಬಂದವರೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್!! ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ದವಿರುವ ಅರವಿಂದ ಕೇಜ್ರಿವಾಲ್ ಇದೀಗ ಮತ್ತೊಂದು ದುಸ್ಸಾಹಕ್ಕೆ ಕೈ ಹಾಕಿದ್ದಲ್ಲದೇ ಈ ಬಗ್ಗೆ ತಮ್ಮ ಪಕ್ಷದ ನಾಯಕನೇ ಗಂಭೀರ ಆರೋಪ ಮಾಡಿದ್ದಾರೆ.

ಅಣ್ಣಾ ಹಜಾರೆಯವರ ಹೋರಾಟದಲ್ಲಿ ಸಕ್ರಿಯವಾಗಿ ಬೆರೆತುಕೊಂಡು ನಂತರ ಅದನ್ನೇ ಬಂಡವಾಳವಾಗಿ ಇಟ್ಟುಕೊಂಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು ಅರವಿಂದ್ ಕೇಜ್ರಿವಾಲ್. ತಾನೊಬ್ಬ ಆರ್ ಟಿ ಐ ಕಾರ್ಯಕರ್ತನಾಗಿದ್ದು, ನಯಾ ಪೈಸೆಯ ರಾಜಕೀಯ ಅನುಭವವೇ ಇಲ್ಲದ ಓರ್ವ ರಾಜಕಾರಣಿ ಅದೇಗೋ ದೆಹಲಿಯ ಮುಖ್ಯಮಂತ್ರಿಯಾಗಿದ್ದು ಇತಿಹಾಸ. ಆದರೆ ಇದೀಗ ಹಿಸಾರ್ ನ ಹಳೆಯ ಸರ್ಕಾರಿ ಕಾಲೇಜೊಂದರಲ್ಲಿ ಸಮಾವೇಶವೊಂದನ್ನು ಆಯೋಜಿಸುವ ಮೂಲಕ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರೀವಾಲ್ ಹರ್ಯಾಣದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ್ದು, ಈ ಸಮಾವೇಶವೇ ಭಾರೀ ವಿವಾದಕ್ಕೀಡಾಗಿದೆ.

ಅಷ್ಟೇ ಅಲ್ಲದೇ, ದೆಹಲಿಯಲ್ಲಿ ನೆಲೆ ಕಳೆದುಕೊಂಡಿರುವ ಆಮ್ ಆದ್ಮಿ ಪಕ್ಷ ಇದೀಗ ಜನರನ್ನು ಒಗ್ಗೂಡಿಸಲು ವಾಮ ಮಾರ್ಗಗಳನ್ನು ಹಿಡಿದಿದ್ದು, ಪಕ್ಷದ ಸಮಾವೇಶಕ್ಕೆ ಜನರನ್ನು ಸೇರಿಸಲು ಕೂಡ ಹಣ ನೀಡಿ ಜನರನ್ನು ಕರೆದುಕೊಂಡು ಬರುತ್ತಿದೆ ಎನ್ನುವ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೇ ಹಣ ನೀಡುತ್ತೇವೆ ಎಂದು ಜನರನ್ನು ಕರೆದುಕೊಂಡು ಬಂದು ಕೈ ಕೊಟ್ಟಿದ್ದಕ್ಕೆ ಹರ್ಯಾಣದ ಹಿಸ್ಸಾರ್ ನಲ್ಲಿ ನಡೆದ ಸಮಾವೇಶದ ನಂತರ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಕಾಲದಲ್ಲಿ ಕೇಜ್ರಿವಾಲರ ‘ಹನುಮಂತ’ ಎಂದು ಕರೆಯಲಾಗುತ್ತಿದ್ದ ದೆಹಲಿಯ ಶಾಸಕ ಕಪಿಲ್ ಮಿಶ್ರಾ ಇದೀಗ ಕೇಜ್ರೀವಾಲ್ ವಿರುದ್ಧವೇ ಗಂಭೀರ ಆರೋಪವೊಂದನ್ನು ಮಾಡುತ್ತಾ ಈ ಸಮಾವೇಶಕ್ಕೆ ಬಾಡಿಗೆಯ ಕಾರ್ಯಕರ್ತರನ್ನು ಒಗ್ಗೂಡಿಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲದೆ ಸಮಾವೇಶ ಮುಗಿದ ಬಳಿಕ ಆಗಮಿಸಿದ್ದ ಕಾರ್ಮಿಕರಿಗೆ ಹಣ ನೀಡದೆ ಕಳುಹಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ವಿಡಿಯೋವೊಂದನ್ನು ಟ್ವೀಟ್ ಮಾಡಿರುವ ಕಪಿಲ್ “ಸಮಾವೇಶವಾಯ್ತು, ಹಣವೂ ಮುಗಿಯಿತು” ಎಂದು ಬರೆದುಕೊಂಡಿದ್ದಾರೆ!!! ಅಷ್ಟೇ ಅಲ್ಲದೇ ವಿಡಿಯೋದಲ್ಲಿ ಸಮಾವೇಶಕ್ಕೆ ಆಗಮಿಸಿದ ವ್ಯಕ್ತಿಯೊಬ್ಬ ತನ್ನನ್ನು ಇಲ್ಲಿ ಬಹಾದ್ದೂರ್ ಘರ್ ನಿಂದ ಇಲ್ಲಿಗೆ ಕರೆತಂದಿರುವುದಾಗಿ ತಿಳಿಸಿದ್ದಾನೆ. ವಿಡಿಯೋದಲ್ಲಿ ಮಾತನಾಡಿರುವ ಮತ್ತೊಬ್ಬ ವ್ಯಕ್ತಿಯು ಸಮಾವೇಶ ಭಾರೀ ಮಜಾವಾಗಿತ್ತು, ಆದರೆ ಹಣವೇ ಸಿಕ್ಕಿಲ್ಲ ಎಂದಿದ್ದಾರೆ.

ಈ ಹಿಂದೆ ದಿಲ್ಲಿ ಸರ್ಕಾರದ ಸಂಪುಟದಿಂದ ವಜಾಗೊಂಡಿದ್ದ ಕಪಿಲ್ ಮಿಶ್ರಾ ಕೇಜ್ರಿವಾಲ್ ವಿರುದ್ದ ಬಾಂಬ್ ಸಿಡಿಸಿ ಸುದ್ದಿಯಾಗಿದ್ದರು!! ಹೌದು.. ಕೇಜ್ರಿವಾಲ್ 2 ಕೋಟಿ ರೂಪಾಯಿ ಲಂಚ ಪಡೆದಿದ್ದರ ಬಗ್ಗೆ ಮಾತಾನಾಡಿರುವ ಕಪಿಲ್ ಮಿಶ್ರಾ, ” ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಂದ ಕೇಜ್ರಿವಾಲ್ 2 ಕೋಟಿ ರೂಪಾಯಿ ಲಂಚ ಪಡೆದಿದ್ದನ್ನು ತಾನು ಕಣ್ಣಾರೆ ನೋಡಿದ್ದೇನೆ” ಎಂಬುದಾಗಿ ಸುದ್ದಿಗೋಷ್ಠಿಯಲ್ಲಿಯೇ ತಿಳಿಸಿದ್ದರು.

ಆದರೆ ಇದೀಗ ಹರ್ಯಾಣದ ಹಿಸ್ಸಾರ್ ನಲ್ಲಿ ನಡೆದ ಆಪ್ ಸಮಾವೇಶದಲ್ಲಿ, ನಗರದ ಕೂಲಿ ಕೆಲಸ ಕಾರ್ಮಿಕರನ್ನು 350 ರೂಪಾಯಿ ಮತ್ತು ತಿಂಡಿ ಪೆÇಟ್ಟಣ, ನೀರು, ಚಾ ನೀಡುತ್ತೇವೆ ಎಂದು ಆಮಿಷವೊಡ್ಡಿ ಕರೆದುಕೊಂಡು ಬರಲಾಗಿದೆ. ಆದರೆ ಸಮಾವೇಶ ಮುಗಿದ ಒಂದು ಗಂಟೆವರೆಗೂ ಹಣ, ಆಹಾರ ನೀಡದೇ ಇರುವುದರಿಂದ ಆಕ್ರೋಶಗೊಂಡ ಕೂಲಿ ಕಾರ್ಮಿಕರು ಮಾಧ್ಯಮದವರ ಎದುರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಇಲ್ಲಿಗಾಗಮಿಸುವ ಪ್ರತಿಯೊಬ್ಬರಿಗೂ 350 ರೂಪಾಯಿ ನೀಡುವ ಒಪ್ಪಂದ ಮಾಡಿ ಕರೆತರಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಇಲ್ಲಿ 2 ಗುಂಪುಗಳಲ್ಲಿ ಒಟ್ಟು 118 ಮಂದಿ ಜನರನ್ನು ಕರೆತರಲಾಗಿದೆ. ಆದರೆ ಈ ವಿಡಿಯೋದಲ್ಲಿ ಅದೆಷ್ಟು ವಾಸ್ತವತೆ ಇದೆ ಎಂಬುವುದನ್ನು ಹೇಳಲು ಸಾಧ್ಯವಿಲ್ಲವಾದರೂ ಕೂಡ ಕಪಿಲ್ ಮಿಶ್ರಾ ಮಾತ್ರ ಕೇಜ್ರಿವಾಲ್ ವಿರುದ್ಧ ಬಹಳಷ್ಟು ಉತ್ತಮವಾಗಿ ಇದನ್ನು ಬಳಸಿಕೊಂಡಿರುವುದಂತೂ ಸತ್ಯ.

ರ್ಯಾಲಿಯಲ್ಲಿ ಭಾಗವಹಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ “2019ರಲ್ಲಿ ನಡೆಯಲಿರುವ ಹರ್ಯಾಣದ ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದರು. ಆದರೆ ಸಮಾವೇಶಕ್ಕೆ ಹಣ ನೀಡುತ್ತೇನೆ ಎಂದು ಕರೆದುಕೊಂಡು ಬಂದ ಕೂಲಿ ಕಾರ್ಮಿಕರಿಗೆ ಹಣ ನೀಡದೇ ಸತಾಯಿಸದಿರುವುದು ವಿಡಿಯೋದಲ್ಲಿ ಬಿಡುಗಡೆಯಾಗಿದ್ದು, ಆಪ್ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆಯಲ್ಲದೇ ಆಪ್ ಜನರ ವಿಶ್ವಾಸ ಕಳೆದುಕೊಂಡಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾದಂತಿದೆ!!

ಒಟ್ಟಿನಲ್ಲಿ ದೆಹಲಿಯಲ್ಲಿ ನೆಲೆ ಕಳೆದುಕೊಂಡಿರುವ ಆಮ್ ಆದ್ಮಿ ಪಕ್ಷ ಇದೀಗ ಜನರನ್ನು ಒಗ್ಗೂಡಿಸಲು ಅಡ್ಡದಾರಿಗಳನ್ನು ಹಿಡಿದಿದ್ದು, ನಗರದ ಕೂಲಿ ಕೆಲಸ ಕಾರ್ಮಿಕರನ್ನು 350 ರೂಪಾಯಿ ಮತ್ತು ತಿಂಡಿ ಪೆÇಟ್ಟಣ, ನೀರು, ಚಾ ನೀಡುತ್ತೇವೆ ಎಂದು ಆಮಿಷವೊಡ್ಡಿ ಕರೆದುಕೊಂಡು ಬರಲಾಗಿರುವ ಬಗ್ಗೆ ಪ್ರತಿಪಕ್ಷಗಳು ವ್ಯಂಗ್ಯವಾಡಿದ್ದು ಮಾತ್ರ ನಾಚಿಕೆಗೇಡಿನ ಸಂಗತಿ.

– ಅಲೋಖಾ

Editor Postcard Kannada:
Related Post