X

ಹಣೆಗೆ ಮಣ್ಣಿನ ತಿಲಕವಿಟ್ಟು, ಮಣ್ಣಿಗೆ ನಮಸ್ಕರಿಸಿದ ಪ್ರಧಾನಿ ಮೋದಿ

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆರಂಭವಾದ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಅಭಿಯಾನ ‘ಮೇರಿ ಮಾಟಿ, ಮೇರಿ ದೇಶ್’ ಸಮಾರೋಪಗೊಂಡಿದೆ.

ಸ್ವಾತಂತ್ರ್ಯ ಮತ್ತು ಈ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ, ತ್ಯಾಗ ಮಾಡಿದ ಹುತಾತ್ಮ ಯೋಧರಿಗೆ, ವೀರರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರ್ಮಾಣವಾಗಲಿರುವ ‘ಅಮೃತ ವಾಟಿಕಾ’ಗೆ ಬಳಸಲು ದೇಶದೆಲ್ಲೆಡೆಯಿಂದ ಮಣ್ಣು ಸಂಗ್ರಹದ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿತ್ತು. ಅದರಂತೆ ದೇಶದೆಲ್ಲೆಡೆಯಿಂದ ಮಣ್ಣು ಸಹ ಸಂಗ್ರಹವಾಗಿ ಅಮೃತ ಕಲಶಗಳಲ್ಲಿ ದೆಹಲಿಗೆ ಬಂದಿತ್ತು. ಈ ಅಭಿಯಾನದ ಸಮಾರೋಪ ನಡೆದಿದೆ.

ಈ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ದೇಶದೆಲ್ಲೆಡೆಯಿಂದ ದೆಹಲಿಗೆ ಅಮೃತ ಕಲಶದಲ್ಲಿ ಮಣ್ಣು ಆಗಮಿಸಿತ್ತು. ಹೀಗೆ ಬಂದ ಮಣ್ಣನ್ನು ದೇಶಕ್ಕೆ ಸಮರ್ಪಣೆ ಮಾಡುವ ಕಾರ್ಯವನ್ನು ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದ್ದಾರೆ. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಮಣ್ಣನ್ನು ಮುಟ್ಚಿ ನಮಸ್ಕರಿಸಿ, ಆ ಮಣ್ಣಿನ ತಿಲಕವನ್ನು ಹಣೆಗಿರಿಸುವ ಮೂಲಕ ಅಮೃತ ಕಲಶಗಳಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಿದ್ದಾರೆ.

ದೆಹಲಿಯ ಕರ್ತವ್ಯ ಪಥ್ ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಣ್ಣನ್ನು ಅಮೃತ ವಾಟಿಕಾ ನಿರ್ಮಾಣಕ್ಕಾಗಿ ದೇಶಕ್ಕೆ ಸಮರ್ಪಣೆ ಮಾಡುವ ಕಾರ್ಯ ನಡೆದಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳಾದ ಹಿನ್ನೆಲೆಯಲ್ಲಿ ಇಂತಹ ಒಂದು ವಿನೂತನ ಅಭಿಯಾನಕ್ಕೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದರು. ಇದಕ್ಕಾಗಿ ದೇಶದ ಮೂಲೆ‌‌ ಮೂಲೆಯಿಂದ ಮಣ್ಣು ಸಂಗ್ರಹ ಮಾಡಿ ದೆಹಲಿಗೆ ಕೊಂಡೊಯ್ಯಲಾಗಿತ್ತು. ಈ ಮಣ್ಣನ್ನು ದೇಶಕ್ಕೆ ಸಮರ್ಪಣೆ ಮಾಡಲಾಗಿದೆ.

ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಇದಾಗಿದ್ದು, ಈ ಸಂದರ್ಭದಲ್ಲಿ ಮಣ್ಣಿನ ತಿಲಕವಿಟ್ಟು ಗೌರವ ಸಲ್ಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿಯೇ ಮೇರಾ ಯುವ ಭಾರತ್ ಪೋರ್ಟಲ್‌ಗೂ ಚಾಲನೆ ನೀಡಲಾಗಿದೆ.

ಮೇರಿ ಮಾಟಿ, ಮೇರಿ ದೇಶ್ ಕಾರ್ಯಕ್ರಮದಡಿಯಲ್ಲಿ ಅಮೃತ ವಾಟಿಕಾದ ‌ನಿರ್ಮಾಣಕ್ಕೆ ದೇಶಕ್ಕಾಗಿ ಹೋರಾಟ ಮಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸ್ಥಳಗಳಿಂದ ಮಣ್ಣನ್ನು ಶೇಖರಿಸಿ ತರಲಾಗಿದೆ. ದೇಶದ ಎಂಟು ಲಕ್ಷ ಗ್ರಾಮಗಳ ಸಸಿಗಳನ್ನು ಇಲ್ಲಿ ನೆಟ್ಟು ಬೆಳೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

Post Card Balaga:
Related Post