X
    Categories: ಅಂಕಣ

ಮೋದಿಯನ್ನು ಹಣಿಯಲು ಹೋಗಿ ಮಮತಾ ಬ್ಯಾನರ್ಜಿ ತೃತೀಯ ರಂಗಕ್ಕೆ ಅಂತಿಮ ಮೊಳೆ ಹೊಡೆಯಲು ಸಿದ್ಧಳಾಗಿದ್ದು ಹೇಗೆ ಗೊತ್ತೇ?!

ಹವಾಯಿ ಚಪ್ಪಲಿ, ಸಾಧಾರಣ ಸೀರೆ ತೊಟ್ಟು ಸರಳತನಕ್ಕೆ ಹೆಸರುವಾಸಿಯಾಗಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇತ್ತೀಚೆಗೆ ಅಪಾರ ಸೌಲಭ್ಯ ಹಾಗೂ ಸರ್ವಾಧಿಕಾರಿಯಂತೆ ವರ್ತಿಸಲು ಆರಂಭಿಸಿದ್ದಂತೂ ಅಕ್ಷರಶಃ ನಿಜ!! ಕೆಲವು ಸಮಯಗಳ ಹಿಂದೆಯಷ್ಟೇ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದ ಟಿಎಂಸಿ ನಾಯಕರೊಬ್ಬರು ಗುಪ್ತಚರ ಇಲಾಖೆ ಮಾಹಿತಿ ನೀಡುವ ಮೊದಲೇ ಪ್ರಧಾನಿ ನರೇಂದ್ರ ಮೋದಿಯವರನ್ನು ಉಡೀಸ್ ಮಾಡಲಿದ್ದೇವೆಂದು ಹೇಳಿದ್ದರು!! ಆದರೆ ಇದೀಗ ಮೋದಿಯನ್ನು ಮಟ್ಟ ಹಾಕಲು ಸರ್ವ ಪ್ರಯತ್ನಗಳನ್ನು ಪಡುತ್ತಿರುವ ದೀದಿ ಪಿಎಂ ಆಗಲು ಹೊರಟಿದ್ದಾರೆ ಎಂದರೆ ನಂಬ್ತೀರಾ??

ಹಿಂದೂಗಳೆಂದೆರೆ ಸಾಕು ಕಿಡಿ ಕಾರುತ್ತಿರುವ ಮಮತಾ ಬ್ಯಾನರ್ಜಿ ಅವರಿಗೆ ಅಧಿಕಾರ ಮದವೋ ಏನೋ ಗೊತ್ತಿಲ್ಲ. ಆದರೆ ರಾಜ್ಯದಲ್ಲಿ ಹಿಂದೂಗಳ ವಿರುದ್ಧ ಯಾವುದೇ ಷಡ್ಯಂತ್ರ ನಡೆದರೂ, ಹಿಂದೂಗಳಿಗೆ ಅನ್ಯಾಯವಾದರೂ ಮಮತಾ ಬ್ಯಾನರ್ಜಿ ಮಾತ್ರ ಏನೂ ಆಗೇ ಇಲ್ಲ ಎಂಬಂತೆ ವರ್ತಿಸುತ್ತಿರುವ ಮೂಲಕ ಹಿಂದೂಗಳ ಪಾಲಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇಲ್ಲವಾಗಿ ಹೋಗಿದ್ದಾರೆ!! ಯಾಕೆಂದರೆ ಈಗಾಗಲೇ ಮಮತಾ ಬ್ಯಾನರ್ಜಿ ಮೊಹರಂ ನ ಸಮಯದಲ್ಲಿ ದುರ್ಗಾಪೂಜೆಯ ಮೂರ್ತಿ ವಿಸರ್ಜನೆಯಿಂದಾಗಿ ಮುಸ್ಲಿಮರ ಪ್ರಾರ್ಥನೆಗೆ ಅಡ್ಡಿಯಾಗುವುದೆಂಬ ಕಾರಣವನ್ನಿಟ್ಟುಕೊಂಡು ದುರ್ಗಾ ಮಾತೆಯ ವಿಸರ್ಜನೆಯನ್ನು ಮುಂದೂಡುವಂತೆ ಹೇಳಿ ಹಿಂದೂಗಳನ್ನು ಕೆರಳಿಸುವಂತೆ ಮಾಡಿದ್ದರು.

ಹಾಗಾಗಿ ದೀದೀ ಸರ್ಕಾರದಲ್ಲಿ ಮುಸಲ್ಮಾನರಿಗೆ ಇರುವಷ್ಟು ಸವಲತ್ತುಗಳು ಹಿಂದೂಗಳಿಗೆ ಇಲ್ಲ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು.!! ಆದರೆ ಇದೀಗ ಮಮತಾ ಬ್ಯಾನರ್ಜಿ ಪ್ರಧಾನಿ ಹುದ್ದೆಯನ್ನೇರಲು ನಾನಾ ಕಸರತ್ತುಗಳನ್ನು ನಡೆಸಿರುವ ಬಗ್ಗೆ ಸುದ್ದಿಯಾಗಿದ್ದು, 2019 ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾಡಿದ್ದಾದರೂ ಏನು ಗೊತ್ತೇ??

ನೋಟು ನಿಷೇದ, ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿ ತರುವ ಮೂಲಕ ಈಡೀ ವಿಶ್ವದ ಗಮನ ಸೆಳೆದಿದ್ದ ನರೇಂದ್ರ ಮೋದಿ ಸರ್ಕಾರವನ್ನು ಮಮತಾ ಬ್ಯಾನರ್ಜಿ ಹಾಗೂ ಆಕೆಯ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಟೀ ಮಾರುವವನಂತೆ ಬಂದ ನರೇಂದ್ರ ಮೋದಿಯವರು ದೇಶದ ಹಣವನ್ನು ಹೊತ್ತು ಓಡಿಹೋಗುತ್ತಿದ್ದಾರೆಂದು ನರೇಂದ್ರ ಮೋದಿಯ ವಿರುದ್ದ ಕಿಡಿ ಕಾರಿದ್ದರು. ಆದರೆ ಇದೀಗ ಪ್ರಧಾನಿ ಮಟ್ಟಕ್ಕೆ ಕಣ್ಣು ಹಾಕಿರುವ ಮಮತಾ ಬ್ಯಾನರ್ಜಿ ನರೇಂದ್ರ ಮೋದಿಯವರನ್ನು ಕೆಳಗಿಳಿಸಲು ಸಕಲ ಸಿದ್ದತೆಗಳನ್ನು ಮಾಡುತ್ತಿದ್ದಾರೆ!!

ಹೌದು… ಸದಾ ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ವಿರೋಧ ಒಡ್ಡುವ ಮಮತಾ ಬ್ಯಾನರ್ಜಿ, ಮೋದಿ ವಿರುದ್ಧ ತೃತೀಯ ರಂಗ ಕಟ್ಟಲು ಮುಂದಾಗಿದ್ದಾರೆ!! ಇದಕ್ಕೆ ಸಂಬಂಧಿಸಿದಂತೆ ಇಂದು ದೀದಿ ಪ್ರತಿಪಕ್ಷಗಳ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರಲ್ಲದೇ 2019ರ ಲೋಕಸಭೆ ಚುನಾವಣೆಗೆ ಕೇಂದ್ರ ಸರ್ಕಾರದ ವಿರುದ್ಧ ಸೆಡ್ಡು ಹೊಡೆಯಲು ಸರ್ವರೀತಿಯಲ್ಲೂ ಸನ್ನದ್ಧರಾಗಿದ್ದಾರೆ. ಅಷ್ಟೇ ಅಲ್ಲದೇ 2019 ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮೋದಿ ವಿರೋಧಿಗಳೆಲ್ಲಾ ಒಗ್ಗಟ್ಟಾಗುವಂತೆ ಕರೆ ಕೂಡ ಕೊಟ್ಟಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಸೆಡ್ಡು ಹೊಡೆಯಲು ಸರ್ವರೀತಿಯಲ್ಲೂ ಸನ್ನದ್ಧವಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ದಂಡಯಾತ್ರೆಗೆ ಬ್ರೇಕ್ ಹಾಕೋಕೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ದೆಹಲಿಯಲ್ಲಿ ಬೀಡು ಬಿಟ್ಟಿರುವ ದೀದಿ ಪ್ರಾದೇಶಕ ಪಕ್ಷಗಳ ಹೊಸ ಮೈತ್ರಿಗೆ ಕೈ ಹಾಕಿದ್ದಾರಲ್ಲದೇ ಪ್ರತಿಪಕ್ಷಗಳ ನಾಯಕರನ್ನು ಭೇಟಿಯಾಗಿ ಮೋದಿ ವಿರುದ್ಧ ರಣತಂತ್ರ ಹೂಡಲು ಚರ್ಚೆ ನಡೆಸಿದ್ದಾರೆ.

ಪ್ರಾದೇಶಿಕ ಪಕ್ಷಗಳು ಒಂದಾಗಿ ಚುನಾವಣೆಗೆ ಹೋದರೆ ಬಿಜೆಪಿಗೆ ಕಡಿವಾಣ ಹಾಕಬಹುದು ಅನ್ನೋದು ಮಮತಾ ಫಾರ್ಮುಲಾ!! ಹಾಗಾಗಿ ನಿನ್ನೆಯಿಂದ ಮೂರು ದಿನಗಳ ದೆಹಲಿ ಪ್ರವಾಸದಲ್ಲಿರುವ ಮಮತಾ ಬ್ಯಾಕ್ ಟು ಬ್ಯಾಕ್ ಪ್ರಾದೇಶಿಕ ನಾಯಕರನ್ನ ಭೇಟಿಯಾಗ್ತಿದ್ದಾರೆ. ರೀಜನಲ್ ಪಾರ್ಟಿಗಳು ಒಂದಾಗಿ ಮೋದಿಯನ್ನು ಎದುರಸಬೇಕೆಂದು ದೀದಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಅಖಿಲೇಶ್ ಹಾಗೂ ಮಾಯಾವತಿ ಒಂದಾದ್ರೆ ಅವರನ್ನು ಯಾರಿಗೂ ಸೋಲಿಸೋಕೆ ಆಗಲ್ಲ ಅಂತ ಹೇಳಿರುವ ಮಮತಾ, ತೃತೀಯ ರಂಗದ ರಚನೆಗೆ ಲಖ್ನೋದಲ್ಲೇ ಮಾತುಕತೆ ನಡೆಸೋದಾಗಿ ಹೇಳಿದ್ದಾರೆ. ಅಷ್ಟಕ್ಕೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ಮಾಡಿ ಚರ್ಚಿಸಿದ್ದಾರೂ ಯಾರನ್ನು ಗೊತ್ತೇ??

2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ದಂಡಯಾತ್ರೆಗೆ ಬ್ರೇಕ್ ಹಾಕೋಕೆ ಮಮತಾ ಬ್ಯಾನರ್ಜಿ ಪ್ಲಾನ್ ಮಾಡಿದ್ದು, ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ!! ಈ ಸಂದರ್ಭದಲ್ಲಿ ಎನ್ ಸಿ ಪಿ ಮುಖ್ಯಸ್ಥರಾದ ಶರದ್ ಪವಾರ್, ಆರ್ ಜೆಡಿ ಸಂಸದೆ ಮಿಶಾ ಭಾರ್ತಿ, ಡಿಎಂಕೆ ಮುಖ್ಯಸ್ಥೆ ಕನಿಮೋಳಿ, ಶಿವಸೇನೆ ಸಂಸದ ಸಂಜಯ್ ರಾವುತ್ ಜೊತೆ ಮಾತುಕತೆ ನಡೆಸಿದ್ದು, ತೃತೀಯ ರಂಗ ನಿರ್ಮಾಣಕ್ಕೆ ಎಲ್ಲ ನಾಯಕರನ್ನೂ ಒಗ್ಗೂಡಿಸಿದ್ದಾರೆ.

ಹಾಗೆಯೇ ಎಸ್-ಪಿ, ಬಿ ಎಸ್ ಪಿ ಮೈತ್ರಿಯೊಂದಿಗೂ ತೃತೀಯ ರಂಗ ನಿರ್ಮಿಸಲು ಮುಂದಾಗಿರುವ ದೀದಿ ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ , “ಬಿಜೆಪಿ ಕೋಮು ದ್ವೇಷದಿಂದ ಕೂಡಿದ ಪಕ್ಷ. ಬಿಜೆಪಿ ತನ್ನ ಅಂಗಪಕ್ಷಗಳೊಂದಿಗೆ ಸರಿಯಾದ ಬಾಂಧವ್ಯ ಇಟ್ಟುಕೊಂಡಿಲ್ಲ. ಹಾಗೆ ತನ್ನ ಗುಣಮಟ್ಟ ಕಳೆದುಕೊಂಡಿದೆ” ಎಂದು ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲದೇ ಪ್ರಾದೇಶಿಕ ಪಕ್ಷಗಳು ಒಂದಾಗಿ ಚುನಾವಣೆಗೆ ಹೋದರೆ ಬಿಜೆಪಿಗೆ ಕಡಿವಾಣ ಹಾಕಬಹುದು ಎಂದು ಹೇಳಿರುವ ಮಮತಾ, ನಿನ್ನೆಯಿಂದ ಮೂರು ದಿನಗಳ ದೆಹಲಿ ಪ್ರವಾಸದಲ್ಲಿದ್ದು, ಬ್ಯಾಕ್ ಟು ಬ್ಯಾಕ್ ಪ್ರಾದೇಶಿಕ ನಾಯಕರನ್ನು ಭೇಟಿಯಾಗ್ತಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ದೀದಿ, ಮೋದಿ ವಿರುದ್ಧ ಸಂಘಟಿತ ಬಲ ಪ್ರದರ್ಶಿಸಲು ಕಾಂಗ್ರೆಸ್ ಜೊತೆಗೂ ಮಾತುಕತೆಗೆ ಮುಂದಾಗಿದ್ದಾರೆ. ಹಾಗೆಯೇ ನಾಳೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾರನ್ನೂ ಭೇಟಿಯಾಗಲಿದ್ದಾರೆ. ಈ ಮೂಲಕ ಮೋದಿಯೊಂದಿಗೆ ಮುನಿಸಿಕೊಂಡ ಪ್ರತಿಯೊಬ್ಬರೊಂದಿಗೂ ದೀದಿ ಸಾಮರಸ್ಯ ಮೂಡಿಸಿಕೊಳ್ಳಲು ಮುಂದಾಗಿದ್ದಾರೆ.

ಅಂತೂ ಈ ಬಾರಿ ಪೃಧಾನಿ ಪಟ್ಟವನ್ನೇರಲು ತೃತೀಯ ರಂಗವನ್ನು ಕಟ್ಟಲು ಮುಂದಾಗುತ್ತಿರುವ ಮಮತಾ ಬ್ಯಾನರ್ಜಿ ಅದರಲ್ಲೆ ಅದೆಷ್ಟು ಸಫಲತೆಯನ್ನು ಕಾಣುತ್ತಾರೋ ನಾ ಕಾಣೆ!! ಸದಾ ದುಷ್ಟ ಬುದ್ದಿಗಳಿಂದಲೇ ಹಿಂದೂಗಳನ್ನು ಮಣಿಸಲು ಯತ್ನಿಸುತ್ತಿರುವ ದೀದಿ ಸರ್ಕಾರ ಇತ್ತೀಚೆಗಷ್ಟೇ “ಈ ವರ್ಷ ಮೋದಿ ಅವರು ಕೆಂಪುಕೋಟೆಯಲ್ಲಿ ಮಾಡುವ ಭಾಷಣವೇ ಅವರ ಕೊನೆಯ ಭಾಷಣ, ಇದನ್ನು ನಿಮ್ಮ ಮನೆಯ ಗೋಡೆಗಳ ಮೇಲೆ ಬರೆದಿಟ್ಟುಕೊಳ್ಳಿ” ಎಂದು ತೃಣ ಮೂಲ ಕಾಂಗ್ರೆಸ್ ನಾಯಕ ಡೆರೆಕ್ ಓ ಬ್ರಯನ್ ಭವಿಷ್ಯ ನುಡಿದಿದ್ದಾರಲ್ಲದೇ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2019ರಲ್ಲಿ ನರೇಂದ್ರ ಮೋದಿ ಅವರು ಸ್ವಾತಂತ್ರೋತ್ಸವದ ಭಾಷಣ ಮಾಡುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು.

ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರ ವಿರುದ್ಧ ಆಜೀವ ಪರ್ಯಂತ ಹೋರಾಡಿ ಅಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ ಕಮ್ಯುನಿಸ್ಟರಿಗಿಂತ ಹೆಚ್ಚಾಗಿ ಹಿಂದೂಗಳನ್ನು ದ್ವೇಷಿಸಲು ಆರಂಭಿಸಿದ್ದಂತೂ ಅಕ್ಷರಶಃ ನಿಜ. ಆದರೆ ಇದೀಗ 2019 ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೋದಿ ವಿರೋಧಿಗಳನ್ನು ಬೇಟಿ ಮಾಡಿ ಪ್ರಧಾನಿ ಪಟ್ಟಕ್ಕೆ ಏರಲು ಸಕಲ ಸಿದ್ಧತೆಯನ್ನು ನಡೆಸುತ್ತಿರುವುದನ್ನು ನೋಡಿದರೆ, ಇನ್ನು ಅದ್ಯಾವ್ಯಾವ ಕುತಂತ್ರಗಳನ್ನು ಹೂಡುತ್ತಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ!!

ಮೂಲ:https://economictimes.indiatimes.com/news/politics-and-nation/sharad-pawar-plays-united-opposition-card-aggainst-bjp-mamata-agrees/articleshow/63496854.cms

– ಅಲೋಖಾ

Editor Postcard Kannada:
Related Post