X

ವರ್ಕೌಟ್ ಆಯ್ತು ಮೋದಿಯ ಪ್ಲಾನಿಂಗ್!! ಮುಸ್ಲಿಮ್ ಮಹಿಳೆ ಪತಿಯ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಏಕೆ?!

ತ್ರಿವಳಿ ತಲಾಖ್ ಪದ್ಧತಿಯನ್ನು ಶಾಶ್ವತವಾಗಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಕರಡು ಪ್ರತಿಯನ್ನು ಸಿದ್ಧಪಡಿಸಿದ್ದು, ಕಾನೂನನ್ನು ಉಲ್ಪಂಘಿಸುವವರಿಗೆ ತಕ್ಕ ಶಿಕ್ಷೆಯನ್ನೇ ನಿಗದಿಗೊಳಿಸಿತ್ತು.. ಹೌದು! ತಲಾಖ್ ಪದ್ಧತಿಯನ್ನು ವೈಯುಕ್ತಿಕ ಹಕ್ಕಿನ ಮೇರೆಗೆ ಮುಂದುವರೆಸಿದರೆ ಅಥವಾ ಕಾನೂನನ್ನು ಉಲ್ಲಂಘಿಸಿದರೆ, ಜಾಮೀನು ರಹಿತ ಬಂಧನ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಎಚ್ಚರಿಕೆ ನೀಡಿತ್ತು…. ಇದೀಗ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳಿಗೆ ಮೋದಿ ಸರಕಾರದಿಂದ ಮಾಡಿದ ಪ್ಲಾನ್ ಫಲಿಸಿದೆ ಅಂತಾನೇ ಹೇಳಬಹುದು…

ವರ್ಕೌಟ್ ಆಯ್ತು ಮೋದಿ ಪ್ಲಾನ್!!

ಮೋದಿ ಈ ಪ್ಲಾನ್ ಈಗ ಸಕ್ಸಸ್ ಆಗೋ ಸಮಯ ಬಂದಿದೆ ಅಂತಾನೇ ಹೇಳಬಹುದು… ಅತ್ತ ತ್ರಿವಳಿ ತಲಾಖ್‍ನ್ನು ನಿಷೇಧ ಮಾಡಬೇಕು ಇಲ್ಲದೇ ಇದ್ದಲ್ಲಿ ಜಾಮೀನು ರಹಿತ 3 ವರ್ಷಗಳ ಜೈಲುವಾಸ ಅನುಭವಿಸಬೇಕು ಎಂಬ ಮೋದಿ ಸರಕಾರದ ಪ್ಲಾನ್ ಈಗ ಸಕ್ಸಸ್ ಆಗೋವ ಹಂತದಲ್ಲಿದೆ.

ಕೇಂದ್ರ ಸರಕಾರದ ಈ ಕಾನೂನು ಜಾರಿಗೊಳಿಸಿದರೂ, ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ವರದಕ್ಷಿಣೆ ನೀಡದಿದ್ದರೆ ಮೂರು ಬಾರಿ ತಲಾಖ್ ಹೇಳುವ ಮೂಲಕ ನಿನಗೆ ತಲಾಖ್ ನೀಡುತ್ತೇನೆ ಎಂದು ಹೆಂಡತಿಗೆ ಇಲ್ಲೊಬ್ಬ ಗದರಿಸಿದ್ದಾನೆ.. ಮೋದಿ ಸರಕಾರ ಯಾವಾಗ ತಲಾಖ್‍ನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ನಿರ್ಧರಿಸಿತ್ತೋ ಅಂದೇ ಇಡೀ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳು ಕೇಂದ್ರ ಸರಕಾರದ ಜೊತೆ ಕೈ ಜೋಡಿಸಿದ್ದರು…. ಇದೀಗ ಮುಸ್ಲಿಮ್ ಮಹಿಳೆಯೊಬ್ಬಳಿಗೆ ಆತನ ಗಂಡ ವರದಕ್ಷಿಣೆ ಕಿರುಕುಳ ನಿನೀಡುತ್ತಿದ್ದ.. ತದ ನಂತರ ವರದಕ್ಷಿಣೆ ನೀಡದಿದ್ದರೆ ನಿನಗೆ ತಲಾಖ್ ನೀಡುತ್ತೇನೆ ಎಂದು ಭಯಪಡಿಸಿದ್ದ.. ಅದನ್ನು ಕೇಳಿದ ತಕ್ಷಣವೇ ಆಕೆ ಆತನನ್ನು ಕರೆದು ಕೊಂಡು ಪೊಲೀಸ್‍ಸ್ಟೇಷನ್ ಮೆಟ್ಟಿಲೇರುತ್ತಾಳೆ.. ಇಷ್ಟು ದಿನ ಮುಸ್ಲಿಮ್ ಹೆಣ್ಣು ಮಕ್ಕಳು ಗಂಡ ಯಾವಾಗ ಮೂರು ಬಾರಿ ತಲಾಖ್ ಎನ್ನುತ್ತಾನೋ ಅದಕ್ಕೆ ಮರು ಮಾತನಾಡದೆ ತಲಾಖ್ ಅನ್ನು ಸ್ವೀಕರಿಸಬೇಕಿತ್ತು.. ಆದರೆ ಇನ್ನು ತಲಾಖ್ ಎಂದಾಕ್ಷಣಾ ಯಾವ ಹೆಣ್ಣು ತಲಾಖ್‍ಗೆ ಹೆದರುವುದಿಲ್ಲ ಎಂಬುವುದು ಎಲ್ಲಾ ತಲಾಖ್ ಬೆಂಬಲಿಗರಿಗೆ ಅರ್ಥವಾಗಿರಬಹುದು…ಪತಿ ರಿಯಾಝ್ ವಿರುದ್ಧ ಪತ್ನಿ ಶಬ್ನಂ ಕೊಟ್ಟ ದೂರಿನ ಮೇರೆಗೆ ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ..

ರಾಜನಾಥ್ ಸಿಂಗ್ ನೇತೃತ್ವದಲ್ಲಿ, ಸಚಿವರ ಸಮಿತಿಯು ಕರಡು ಪ್ರತಿಯನ್ನು ಸಿದ್ದಗೊಳಿಸಿದ್ದು, ವಿದೇಶಾಂಗ ಇಲಾಖೆ ಸಚಿವೆ ಸುಷ್ಮ ಸ್ವರಾಜ್, ಹಣಕಾಸು ಮಂತ್ರಿ ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್, ಹಾಗೂ ಪಿ.ಪಿ.ಚೌಧರಿ ಸಮಿತಿಯ ಸದಸ್ಯರಾಗಿದ್ದಾರೆ. ಕಾನೂನಿನ ಪ್ರಕಾರ, “ತ್ರಿವಳಿ ತಲಾಖ್ ಸಂತ್ರಸ್ತೆಯು ಆರಕ್ಷಕ ಠಾಣೆಯಲ್ಲಿ ಮೊದಲು ದೂರನ್ನು ದಾಖಲಿಸಬೇಕು. ಕೊನೆಗೆ, ಮ್ಯಾಜಿಸ್ಟ್ರೇಟ್ ಹತ್ತಿರ ಹೋಗಿ, ತನ್ನ ಅಪ್ರಾಪ್ತ ಮಕ್ಕಳು, ಹಾಗೂ ಪತಿಯಿಂದ ನಿರ್ವಹಣಾ ಖರ್ಚನ್ನು ಪಡೆದುಕೊಳ್ಳಬಹುದಾಗಿದೆ.”

ಮೌಖಿಕ, ಲಿಖಿತ, ಫೆÇೀನ್ ಕರೆ, ಸಂದೇಶ, ಈ ಮೇಲ್, ಅಥವಾ ಇನ್ನಿತರ ಯಾವುದೇ ಇಲೆಕ್ಟ್ರಾನಿಕ್ ರೂಪದ ತಲಾಖ್ ನನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಆಗಸ್ಟ್ ನಲ್ಲಿ, ತ್ರಿವಳಿ ತಲಾಖ್ ನನ್ನು ಸರ್ವೋಚ್ಛ ನ್ಯಾಯಾಲಯ ರದ್ದುಗೊಳಿಸಿದ್ದ ಐತಿಹಾಸಿಕ ನಿರ್ಣಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಲ್ಲದೇ, ಮುಸ್ಲಿಂ ಸಮುದಾಯಕ್ಕೆ ಕಠಿಣ ಎಚ್ಚರಿಕೆಯನ್ನೂ ನೀಡಿತ್ತು. ಆದರೂ, ಸುಮಾರು 67 ತ್ರಿವಳಿ ತಲಾಖ್ ಪ್ರಕರಣಗಳು ದಾಖಲಾಗಿತ್ತು.. ಅದಕ್ಕಾಗಿ, ಸಮಿತಿಯು ಬಹುಬೇಗನೇ ಕರಡು ಪ್ರತಿಯನ್ನು ಸಿದ್ಧಗೊಳಿಸಿದ್ದು, ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆಗಳಿವೆ ಎಂದು ತಿಳಿಸಿತ್ತು..

ಮುಸ್ಲಿಂ ಸಮಾಜದಲ್ಲಿ ಇರುವ ಅದೆಷ್ಟೋ ಅನಿಷ್ಠ ಪದ್ದತಿಗಳಿಗೆ ಕಡಿವಾಣ ಹಾಕಲು ಸತತವಾಗಿ ಸರಕಾರ ಪ್ರಯತ್ನ ನಡೆಸುತ್ತಿದ್ದರೂ ಸಹ, ಕೆಲವು ವೈಯುಕ್ತಿಕ ಹಕ್ಕಿನಡಿಯಲ್ಲಿ ಅಡೆ ತಡೆಗಳುಂಟಾಗುತ್ತಿದೆ ಎಂಬುದು ಸತ್ಯ! ಧಾರ್ಮಿಕ ಹಕ್ಕು – ವೈಯುಕ್ತಿಕ ಹಕ್ಕು ಎಂಬುವುದಕ್ಕೆ ಸಮನಾಗಿರುವ ಇಸ್ಲಾಂ ಸಮಾಜದಲ್ಲಿ, ಮಹಿಳಾ ಸಬಲೀಕರಣ ಎನ್ನುವುದು ಕಷ್ಟಸಾಧ್ಯವಾದರೂ ಸಹ, ತ್ರಿವಳಿ ತಲಾಖ್ ಪದ್ದತಿಯನ್ನು ರದ್ದುಗೊಳಿಸಿದ ಮೇಲೆ, ಮಹಿಳೆಯರು ಸ್ವಲ್ಪವಾದರೂ ನೆಮ್ಮದಿಯಿಂದ ಬದುಕಲು ವಾತಾವರಣ ನಿರ್ಮಾಣವಾಗಬಹುದೇನೋ.

ನಿಕಾಹ್ ಹಲಾಲ್ ನಂತಹ ಅದೆಷ್ಟೋ ಅನಿಷ್ಟ ಪದ್ದತಿಗಳಿಂದ ಮುಸಲ್ಮಾನ ಹೆಣ್ಣು ಮಕ್ಕಳು ಘನತೆಯನ್ನೇ ಕಳೆದುಕೊಂಡು ಬದುಕುತ್ತಿದ್ದಾರಷ್ಟೇ! ಪುರುಷ ಪ್ರಧಾನವಾಗಿರುವ ಸಮಾಜದಲ್ಲಿ ಉಸಿರಾಡಲೂ ಕಷ್ಟವಾಗುವಂತಹ ಪರಿಸ್ಥಿತಿಯಲ್ಲಿ, ಬಹುಪತ್ನಿತ್ವವೂ ತೊಡಕಾಗಿಯೇ ಪರಿಣಮಿಸಿದೆ. ಇದಕ್ಕೆಲ್ಲ ಕಡಿವಾಣ ಹಾಕಿದರೆ, ಮುಸ್ಲಿಂ ಸಮುದಾಯದಲ್ಲಿಯೂ ಮಹಿಳಾ ಸಬಲೀಕರಣಕ್ಕೆ ಅವಕಾಶವೊದಗಬಹುದಷ್ಟೇ…

ಪವಿತ್ರ

Editor Postcard Kannada:
Related Post