X
    Categories: ಅಂಕಣ

ಚೀನಾವನ್ನು ಮಟ್ಟಹಾಕಲು ಟ್ರಂಪ್ ಗಿಂತ “ಮೋದಿಯೇ ಸಮರ್ಥ ವ್ಯಕ್ತಿ” ಎಂದು ಅಮೇರಿಕಾದ ತಂತ್ರಜ್ಞನೇ ಹೀಗೆ ಹೇಳಬೇಕಾದರೆ…..

ಚೀನಾ-ಯುರೋಪ್-ಅರಬ್-ಆಫ್ರಿಕಾ ಖಂಡಗಳನ್ನು ಸುಲಭದಲ್ಲಿ ತಲುಪಲು ಸಾಧ್ಯವಾಗುವಂತೆ ಎಲ್ಲ ರಸ್ತೆಗಳು, ರೈಲು ಮಾರ್ಗ ಹಾಗೂ ಬಂದರುಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಚೀನಾ “ಒನ್ ಬೆಲ್ಟ್ ಒನ್ ರೋಡ್” ಎನ್ನುವ ಮಹಾತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಲಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ!! ಆದರೆ ಈ ಯೋಜನೆಯನ್ನು ವಿರೋಧಿಸುವ ಏಕೈಕ ವಿಶ್ವ ನಾಯಕ ಎಂದರೆ, ಅದು ನರೇಂದ್ರ ಮೋದಿ ಎಂದು ಅಮೆರಿಕಾದ ಖ್ಯಾತ ಉನ್ನತ ತಜ್ಞ ಹೇಳಿದ್ದಾರೆ!!

ಹೌದು… ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯಲ್ಲಿ ಭಾರತ ಪ್ರಸ್ತಾಪಿಸುತ್ತಿರುವ ಕಾಶ್ಮೀರ ವಿಷಯ ಅಪ್ರಸ್ತುತ ಎಂದು ಚೀನಾ ಹೇಳಿದ್ದು, ಸಿಪಿಇಸಿ ಯೋಜನೆಗೆ ಅಂತಾರಾಷ್ಟ್ರೀಯ ಬೆಂಬಲ ವ್ಯಕ್ತವಾಗಿದೆ ಎಂದಿರುವ ಚೀನಾ, ಭಾರತದ ವಾದವೇ ಅಪ್ರಸ್ತುತ ಎಂದು ವಾದಿಸಿತ್ತು!! ಆದರೆ ಇದೀಗ ಅಮೆರಿಕಾದ ಖ್ಯಾತ ಉನ್ನತ ತಜ್ಞ ಮೈಕೆಲ್ ಪಿಲ್ಸ್ಬರಿ ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಯ ವಿರುದ್ಧ ನಿಲ್ಲಬಲ್ಲ ಏಕೈಕ ವಿಶ್ವ ನಾಯಕನೇ ಪ್ರಧಾನಿ ನರೇಂದ್ರ ಮೋದಿ ಮಾತ್ರ ಎಂದು ಹೇಳಿದ್ದಾರೆ.

ಈ ಮಾರ್ಗವು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಪಿಒಕೆ ಮೇಲೆ ಹಾದುಹೋಗುತ್ತಿದೆಯಲ್ಲದೇ, ವಿವಾದಿತ ಪ್ರದೇಶವೊಂದರ ಮೇಲೆ ಅಂತಾರಾಷ್ಟ್ರೀಯ ರಸ್ತೆ ಹಾದು ಹೋಗುತ್ತಿರುವುದು ಸರಿಯಲ್ಲ. ಮತ್ತು ಪಾಕ್ ಆಕ್ರಮಿತ ಕಾಶ್ಮೀರ ತನಗೆ ಸೇರಿದ್ದರಿಂದ ತನ್ನ ಸಾರ್ವಭೌಮತೆಗೆ ಧಕ್ಕೆ ಬರಲಿದೆ. ಅಲ್ಲದೆ ಯೋಜನೆ ರೂಪಿಸುವಾಗ ತನ್ನ ಅನುಮತಿ ಪಡೆದಿಲ್ಲ ಎಂದು ಯೋಜನೆಗೆ ಭಾರತ ವಿರೋಧ ವ್ಯಕ್ತಪಡಿಸಿತ್ತು!!

ಆದರೆ ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಮತ್ತು ಅವರ ಮಹತ್ವಾಕಾಂಕ್ಷೆಯ ಯೋಜನೆಯ ವಿರುದ್ಧ ಮೋದಿ ಮತ್ತು ಅವರ ತಂಡ ಬಹಿರಂಗವಾಗಿ ಮಾತನಾಡಿದೆ ಎಂದು ಅಮೆರಿಕಾ ಕಾಂಗ್ರೆಸ್ಸಿನ ವಿಚಾರಣೆಯ ಸಂದರ್ಭದಲ್ಲಿ, ಪ್ರತಿಷ್ಠಿತ ಟಿಂಕ್ ಟ್ಯಾಂಕ್ ನಿರ್ದೇಶಕ ಮೈಕೆಲ್ ಪಿಲ್ಸ್ಬರಿ ಹೇಳಿದ್ದಾರೆ. ಚೀನಾದ ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್) ಯೋಜನೆ ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೋಗಿದ್ದು ಚೀನಾದ ಈ ಯೋಜನೆಯನ್ನು ಭಾರತ ಪ್ರಪ್ರಥಮವಾಗಿ ಬಹಿರಂಗವಾಗಿ ತಿರಸ್ಕರಿಸಿದೆ. ಚೀನಾದ ಈ ಮಹತ್ವಾಕಾಂಕ್ಷಿ ಯೋಜನೆ ಸಾಕಾರಗೊಳ್ಳಲು ವಿಶ್ವದಲ್ಲೇ ಅತೀವೇಗವಾಗಿ ಬೆಳೆಯುತ್ತಿರುವ ಭಾರತದ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ!!

ಏನಿದು ಒನ್‍ಬೆಲ್ಟ್ ಒನ್ ರೋಡ್ ಯೋಜನೆ!!!

ಒಬಿಒಆರ್ ಎಂಬುದು ಚೀನಾವನ್ನು ಯುರೋಪ್, ಮಧ್ಯ ಹಾಗೂ ಪಶ್ಚಿಮ ಏಷ್ಯಾವನ್ನು ಜೋಡಿಸುವ ರಸ್ತೆ, ಜಲ ಸಂಪರ್ಕ ಯೋಜನೆಯೂ ಆಗಿದೆ. 21ನೇ ಶತಮಾನದ “ಮಾರಿಟೈಮ್ ಸಿಲ್ಕ್ ರೋಡ್” ಎಂಬ ಯೋಜನೆಯೂ ಇದರಡಿಯೇ ಬರುತ್ತಿದ್ದು, ಇದು ಚೀನಾವನ್ನು ಆಗ್ನೇಯ ಏಷ್ಯಾ ರಾಷ್ಟ್ರಗಳು, ಆಫ್ರಿಕಾ ಹಾಗೂ ಯುರೋಪ್ ಜತೆ ಜೋಡಿಸುತ್ತದೆ. ಈ ಯೋಜನೆಯನ್ನು ಸಿಲ್ಕ್ ರೋಡ್ ಎಕನಾಮಿಕ್ ಬೆಲ್ಟ್ (ಎಸ್‍ಆರ್‍ಇಬಿ) ಮತ್ತು ಮಾರಿಟೈಮ್ ಸಿಲ್ಕ್ ರೋಡ್ (ಎಂಎಸ್‍ಆರ್) ಎಂದು ಎರಡಾಗಿ ವಿಂಗಡಿಸಬಹುದು.

ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯ ಹಾಗೂ ನೆರೆ ರಾಷ್ಟ್ರಗಳು, ಚೀನಾ ಮತ್ತು ದಕ್ಷಿಣ ಹಾಗೂ ಆಗ್ನೇಯ ಏಷ್ಯಾದ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಇದು ಪೂರಕ. ಈ ಭಾಗದಲ್ಲಿ ಇಂಡೋನೇಷ್ಯಾದಿಂದ ಯುರೋಪ್ ತನಕ ಆರ್ಥಿಕ ಸಮೀಕರಣಕ್ಕೆ ಹೊಸ ವ್ಯಾಖ್ಯೆ ಬರೆಯಬಹುದು. ಅದೇ ರೀತಿ, ವಾಣಿಜ್ಯ ವಹಿವಾಟು, ಇಂಧನ ವಹಿವಾಟು ಸೇರಿದಂತೆ ಒಟ್ಟಾರೆ ಆರ್ಥಿಕ ಚಟುವಟಿಕೆಗೆ ಈ ಯೋಜನೆ ಸಹಕಾರಿ.

ಒಬಿಒಆರ್ ಉಪಕ್ರಮವು ರೈಲುಮಾರ್ಗ, ಭೂಮಾರ್ಗದ ಹೆದ್ದಾರಿಗಳು, ತೈಲ ಮತ್ತು ಅನಿಲ ಸಾಗಣೆಯ ಕೊಳವೆಮಾರ್ಗಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳ ಒಂದು ಜಾಲವನ್ನು ಒಳಗೊಂಡಿದ್ದು, ಚೀನಾದ ಪ್ರಧಾನ ಭೂಭಾಗದಿಂದ ಪ್ರಾರಂಭಿಸಿ ಮಧ್ಯ ಏಷ್ಯಾ ಹಾಗೂ ರಷ್ಯಾ ಮೂಲಕ ವ್ಯಾಪಿಸಿರುವಂಥದ್ದಾಗಿದೆ; ಇದರ ಒಂದು ಕವಲು ಕಜಕಿಸ್ತಾನ್ ಮೂಲಕ, ಮತ್ತೊಂದು ಮಂಗೋಲಿಯಾ ಮೂಲಕ ಹಾದುಹೋಗುತ್ತವೆಯಾದರೂ, ಈ ಎರಡೂ ಅಂತಿಮವಾಗಿ ಟ್ರಾನ್ಸ್-ಸೈಬೀರಿಯನ್ ರೈಲುಮಾರ್ಗದೊಂದಿಗೆ ಸಂಪರ್ಕ ಹೊಂದಿ ಮಾಸ್ಕೊ ಕಡೆಗೆ ಸಾಗುತ್ತವೆ.

ಇನ್ನು ಸಮುದ್ರಮಾರ್ಗವು, ಚೀನಾದ ಪೂರ್ವಭಾಗದ ಕರಾವಳಿ ಪ್ರದೇಶದಿಂದ ಪ್ರಾರಂಭಗೊಂಡು, ಆಗ್ನೇಯ ಏಷ್ಯಾ, ದಕ್ಷಿಣ ಏಷ್ಯಾ, ಕೊಲ್ಲಿ ಪ್ರದೇಶ, ಪೂರ್ವ ಆಫ್ರಿಕಾ ಮತ್ತು ಮೆಡಿಟರೇನಿಯನ್ ಪ್ರದೇಶಗಳ ಮೂಲಕ ಹಾದುಹೋಗುವ ಬಂದರುಗಳು ಮತ್ತು ಕರಾವಳಿ ಮೂಲಸೌಕರ್ಯಗಳ ಒಂದು ಜಾಲವಾಗಿದೆ; ಈ ಜಾಲವು ಪೈರೇಯಸ್(ಗ್ರೀಸ್), ವೆನಿಸ್(ಇಟಲಿ), ರಾಟರ್ಡ್ಯಾಂ(ನೆದರ್ಲೆಂಡ್ಸ್) ಮತ್ತು ಮೊಂಬಾಸಾ(ಕೀನ್ಯಾ)ದಲ್ಲಿ ಕೊನೆಗೊಳ್ಳುತ್ತದೆ. ಯೋಜನೆಯನ್ನು ತಿರಸ್ಕರಿಸುವ ವಿಶ್ವದ ಏಕೈಕ ನಾಯಕ ಮೋದಿ!!

ಚೀನಾದ ಈ ಯೋಜನೆಯನ್ನು ಬಹಿರಂಗವಾಗಿ ತಿರಸ್ಕರಿಸಿದ “ವಿಶ್ವದ ಏಕೈಕ ನಾಯಕನೇ” ಪ್ರಧಾನಿ ನರೇಂದ್ರ ಮೋದಿ!! ಹೌದು ಮೋದಿ ಮತ್ತು ಅವರ ತಂಡ ಬಹಿರಂಗವಾಗಿ ಇದರ ಬಗ್ಗೆ ಮಾತನಾಡುತ್ತಿದ್ದು ಚೀನಾದ ಬೆಲ್ಟ್ ಮತ್ತು ರೋಡ್ ಯೋಜನೆ ಭಾರತೀಯ ಸಾರ್ವಭೌಮ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪಿಲ್ಸ್ಬರಿ ಹೇಳಿದರು. ಅಷ್ಟೇ ಅಲ್ಲದೇ, ಅಮೆರಿಕಾ ಸರಕಾರ, ಈ ಮೊದಲು ಚೀನಾದ ಯೋಜನೆಗೆ ಸಹಕಾರ ನೀಡುವುದಾಗಿ ತಿಳಿಸಿತ್ತು ಆದರೆ ಇದೀಗ ತಟಸ್ಥವಾಗಿದೆ ಎಂದು ಕೂಡ ಅವರು ಹೇಳಿದರು.

ತದನಂತರ ತನ್ನ ಹೊಸ ಇಂಡೋ-ಪೆಸಿಫಿಕ್ ಕಾರ್ಯತಂತ್ರಕ್ಕಾಗಿ ಟ್ರಂಪ್ ಆಡಳಿತವನ್ನು ಶ್ಲಾಘಿಸುತ್ತಾ ಟ್ರಂಪ್ ಆಡಳಿತದ “ಮುಕ್ತ ಮತ್ತು ತೆರೆದ” ಇಂಡೋ-ಪೆಸಿಫಿಕ್ ನೀತಿಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ “ಚೀನಾ ಈಗಾಗಲೇ ಭಾರತದ ಮಹತ್ವವನ್ನು ಅರಿತುಕೊಂಡಿದೆ ಆದರೆ ಅದನ್ನು ಅವರು ಇಷ್ಟಪಡುವುದಿಲ್ಲ” ಅಷ್ಟೇ ಅಲ್ಲದೇ, “ಹಿಂದೂ ಮಹಾಸಾಗರವನ್ನು ಭಾರತ ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವುದು ರಕ್ಷಣಾತ್ಮಕವಾಗಿ ಭಾರತಕ್ಕೆ ಅತ್ಯಗತ್ಯವಾಗಿದ್ದು ಇದಕ್ಕಾಗಿ ಅಮೆರಿಕಾದ ಪಿಎ ಯುದ್ದ ವಿಮಾನವನ್ನು ಹಲವಾರು ಶತಕೋಟಿ ಡಾಲರ್ ವೆಚ್ಚದಲ್ಲಿ ಖರೀದಿಸಿದೆ. ಇದು ಹಿಂದೂ ಮಹಾಸಾಗರ ದಲ್ಲಿ ಪ್ರಸ್ತುತ ಸನ್ನಿವೇಶ ವನ್ನು ಟ್ರ್ಯಾಕ್ ಮಾಡಲು ಭಾರತಕ್ಕೆ ಭಾರಿ ಪ್ರಮಾಣದಲ್ಲಿ ಸಹಾಯವಾಗಲಿದೆ” ಎಂದು ಚೀನಾ ಸಂಬಂಧಿತ ವಿಷಯಗಳ ತಜ್ಞ ಮತ್ತು ಅಮೆರಿಕಾದ ರಕ್ಷಣಾ ಅಧಿಕಾರಿ ಪಿಲ್ಸ್ಬರಿ ಹೇಳಿದ್ದಾರೆ!!

ಇದಷ್ಟೇ ಅಲ್ಲದೇ, ಭಾರತದೊಂದಿಗಿನ ವ್ಯಾಪಕ ಸಹಕಾರಕ್ಕಾಗಿ ಚೀನಾ ಈ ಮೊದಲು ಒಬಾಮಾ ಸರ್ಕಾರವನ್ನು ಕೂಡ ತಿರಸ್ಕರಿಸಿತ್ತು ಆದರೆ ಭಾರತ ಅತ್ಯಂತ ಪ್ರಭಾವಶಾಲಿ ರಾಷ್ಟ್ರ ವಾಗಿ ಬೆಳೆಯುತ್ತಿರುವುದನ್ನು ಚೀನಾ ಒಪ್ಪಿಕೊಳ್ಳಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಅಮೆರಿಕಾದ ವಿಶ್ಲೇಷಕ ಉತ್ತರಿಸಿದರು.

ಚೀನಾಕ್ಕೆ ಏಷ್ಯಾದಲ್ಲಿ ಅನಿಯಂತ್ರಿತ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುವ ಉದ್ದೇಶ !!!

ಚೀನಾ ತನ್ನ ಈ ಮಹತ್ವಾಕಾಂಕ್ಷಿ ಯೋಜನೆಗೆ ನೆರೆ ರಾಷ್ಟ್ರಗಳನ್ನು ಸಹಿ ಹಾಕಿಸುವ ಮೂಲಕ ಏಷ್ಯಾದಲ್ಲಿ ಅನಿಯಂತ್ರಿತ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುವ ಉದ್ದೇಶ ಮತ್ತು ಒತ್ತಾಸೆಯನ್ನು ಹೊಂದಿದೆ ಇದಕ್ಕೆ ಪ್ರಮುಖ ಕಾರಣ ಚೀನಾದ ಹಲವು ನೆರೆಹೊರೆಯ ರಾಷ್ಟ್ರಗಳು ಸಾಲ ಮರು ಪಾವತಿ ಮಾಡಲು ವಿಫಲವಾಗಿರುವುದು ಎಂದು ಮೈಕೆಲ್ ಮಾರ್ಕ್ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಚೀನಾದ ಪರಿಣತಿ ಮತ್ತು ಬಂಡವಾಳದ ವಿಸ್ತಾರವಾದ ಬಾಂಧವ್ಯವನ್ನು ವಿಶ್ವದ ವಿವಿಧ ಭಾಗಗಳಿಗೆ ವಿಸ್ತರಿಸಲು ಬೆಲ್ಟ್ ಮತ್ತು ರೋಡ್ ಯೋಜನೆ ಉದ್ದೇಶಿಸಿದೆ. ಆದರೆ ಪಾಕಿಸ್ತಾನ-ಆಕ್ರಮಿತ-ಕಾಶ್ಮೀರದಲ್ಲಿ (ಪಿಒಕೆ) ಇದು ಹಾದುಹೋಗುವುದರಿಂದ ಭಾರತ ಈ ಯೋಜನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.

ಇದಕ್ಕೆ ಪ್ರತಿಯಾಗಿ ಈ ವರ್ಷದ ಮೇ ತಿಂಗಳಲ್ಲಿ ಚೀನಾ ಆಯೋಜಿಸಿದ್ದ ಬೆಲ್ಟ್ ಅಂಡ್ ರೋಡ್ ಫೆÇೀರಮ್ (ಬಿ.ಆರ್.ಎಫ್) ಅನ್ನು ಭಾರತ ಬಹಿಷ್ಕರಿಸಿತ್ತು.ಅಷ್ಟೇ ಅಲ್ಲದೇ, ಅಮೇರಿಕಾದ ಕಂಪನಿಗಳು ಆಸ್ತಿ ಕಳ್ಳತನದ ಅಪಾಯವನ್ನು ಎದುರಿಸುತ್ತಿದ್ದು, ಉನ್ನತ ತಂತ್ರಜ್ಞಾನದ ಸಂಶೋಧನೆ ಮತ್ತು ಸೂಕ್ಷ್ಮ ವ್ಯಾಪಾರ ರಹಸ್ಯಗಳನ್ನು ಚೀನಾ ಕದಿಯುತ್ತಿದೆ.

ಹಾಗಾಗಿ ರಾಜ್ಯ-ಬೆಂಬಲಿತ ಸಂಸ್ಥೆಗಳೊಂದಿಗೆ ಪೈಪೆÇೀಟಿ ಮಾಡಲಾಗದ ಚೀನಾ ಇಂತಹ ಕೆಲಸಕ್ಕೆ ಕೈ ಹಾಕಿದೆ ಎಂದು ಅವರು ಆರೋಪಿಸಿರುವ ಇವರು ಕಡಿಮೆ ಬಡ್ಡಿದರದ ನೆಪದಲ್ಲಿ ಸಾಲ ಮರುಪಾವತಿ ಮಾಡಲಾಗದ ದೇಶಕ್ಕೆ ಚೀನಾ ಸಾಲ ನೀಡುತ್ತಿದೆ ಎಂದ ಅವರು ಶ್ರೀಲಂಕಾ ವನ್ನು ಉಲ್ಲೇಖಿಸಿದರು. ಅಷ್ಟೇ ಅಲ್ಲದೇ, ಶ್ರೀಲಂಕಾದ ಉದಾಹರಣೆಯನ್ನು ನೋಡಿದ್ದೇವೆ, ಅದು ಸಾಲ ಮರು ಪಾವತಿ ಮಾಡಲು ವಿಫಲವಾಗಿದೆ ..! ಅಂತಿಮವಾಗಿ ಶ್ರೀಲಂಕಾ ತನ್ನ ಪ್ರಮುಖ ಬಂದರನ್ನು ಚೀನಾ ನಿಯಂತ್ರಣಕ್ಕೆ ವರ್ಗಾಯಿಸಬೇಕಾಯಿತು ಎಂದು, ಅವರು ಹೇಳಿದರು!!

ಆದರೆ ಭಾರತವು, ಪಾಕಿಸ್ತಾನದ ಗ್ವಾದಾರ್ ಹಾಗೂ ಚೀನಾದ ಕ್ಸಿನ್ಜಿಯಾಂಗ್ ಪ್ರದೇಶವನ್ನು ಸಂಪರ್ಕಿಸುವ 3,000 ಕಿ.ಮೀ. ಉದ್ದದ ಯೋಜನೆಯಾದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಒಡ್ಡಿರುವ ಭದ್ರತಾ ಕಳವಳಗಳ ಕಾರಣದಿಂದಾಗಿ ಅದರ ಒಂದು ಭಾಗವಾದ ಸದರಿ ಉಪಕ್ರಮವನ್ನು ಭಾರತ ವಿರೋಧಿಸುತ್ತಿದೆ.

ಪಾಕ್-ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ಮೂಲಕ ಸದರಿ ಕಾರಿಡಾರ್ ಹಾದುಹೋಗುತ್ತದೆ. ಅಷ್ಟೇ ಅಲ್ಲದೇ, ತನ್ನದೇ ಭೂಪ್ರದೇಶದ ಒಂದು ಭಾಗ ಎಂಬುದಾಗಿ ಭಾರತ ಹಕ್ಕು ಸಾಧಿಸುತ್ತಿರುವಂಥ ವಿವಾದಿತ ಪ್ರದೇಶದಲ್ಲಿ ಚೀನಿಯರ ಹಾಜರಿಯಿದ್ದರೆ, ಅದು ಭಾರತದ ಸಾರ್ವಭೌಮತೆಗೆ ಒಡ್ಡಲ್ಪಡುವ ಕಳವಳ ಎಂಬುದೇ ಈ ಆಕ್ಷೇಪಕ್ಕೆ ಕಾರಣವಾಗಿದೆ.

ಇನ್ನು ಈ ಬಗ್ಗೆ ಅಮೆರಿಕಾದ ಖ್ಯಾತ ಉನ್ನತ ತಜ್ಞ ಮೈಕೆಲ್ ಪಿಲ್ಸ್ಬರಿ ಚೀನಾ ಮತ್ತು ಅದರ ಬೆಲ್ಟ್ ಮತ್ತು ರೋಡ್ ಯೋಜನೆಯ ವಿರುದ್ಧ ನಿಲ್ಲಬಲ್ಲ ಏಕೈಕ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಎನ್ನುವುದನ್ನು ಹೇಳಿದ್ದು, ಇದು ಭಾರತದ ನಿಲುವನ್ನು ಇಡೀ ವಿಶ್ವದೆದುರು ತೆರೆದಿಟ್ಟಂತಾಗಿದೆ!!

– ಅಲೋಖಾ

Editor Postcard Kannada:
Related Post