X

ಜಗವೆ ಮುಗಿಬಿದ್ದು ಕೊಳ್ಳುವ Apple iPhone ಗಳಲ್ಲಿ “ಭಾರತದಲ್ಲಿ ತಯಾರಿಸಲ್ಪಟ್ಟದ್ದು” ಎನ್ನುವ ಬರಹಗಳು ಮೋದಿಯವರ “ಮೇಕ್ ಇನ್ ಇಂಡಿಯಾ” ಯೋಜನೆ ತಂದ ಫಲ!!

ಹಿಂದೊಂದು ಕಾಲವಿತ್ತು, ಜಗತ್ತಿನಲ್ಲಿ ತಯಾರಾಗುವ ಉತ್ಪನ್ನಗಳಿಗೆ ಮೇಡ್ ಇನ್ ಜರ್ಮನಿ, ಮೇಡ್ ಇನ್ ಜಪಾನ್, ಸ್ವಿಸ್ಸ್ ಮೇಡ್, ಮೇಡ್ ಇನ್ ಅಮೇರಿಕಾ ಟ್ಯಾಗ್ ಗಳಿರುತ್ತಿದ್ದವು. ಹೀಗೆ ಬರೆಸಿಕೊಂಡ ಉತ್ಪನ್ನಗಳಿಗೆ ಭಾರಿ ವಿಶ್ವಾಸಾರ್ಹತೆ ಮತ್ತು ಬೇಡಿಕೆ ಆಗಲೂ ಇತ್ತು ಮತ್ತು ಈಗಲೂ ಇದೆ. ಇಂತಹ ಉತ್ಪನ್ನಗಳಿಗೆ ಕೇಳಿದಷ್ಟು ಬೆಲೆ ಕೊಟ್ಟು ತೆಗೆದುಕೊಳ್ಳುತ್ತಾರೆ ಪಾಶ್ಚಾತ್ಯ ಗುಲಾಮಗಿರಿಯ ಮನಸ್ಥಿತಿಯ ಜನರು. ಇನ್ನು ಮುಂದೆ ಇಂಥ ಉತ್ಪನ್ನಗಳ ಹಿಂದೆ ನಾವು “ಮೇಡ್ ಇನ್ ಇಂಡಿಯಾ” ಟ್ಯಾಗ್ ಅನ್ನು ನೋಡಬಹುದು!! ಬ್ರಿಟಿಷರ ಜಾಗ್ವಾರ್ ಕಾರಿನಿಂದ ಹಿಡಿದು ಅಮೆರಿಕನ್ನರ ಆಪಲ್ ಫೋನ್ ವರೆಗೆ ಇನ್ನು ಎಲ್ಲೆಂದರಲ್ಲಿ ಮೇಡ್ ಇನ್ ಇಂಡಿಯಾ ಕಲರವ!! ಇದಕ್ಕೆಲ್ಲ ಕಾರಣ ನಮ್ಮ ಪ್ರಧಾನ ಸೇವಕ ಮೋದಿ.

“ಮೇಕ್ ಇನ್ ಇಂಡಿಯಾ” ಮೋದಿಜಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಯೂಪಿಎ ಕಾಲದಲ್ಲಿ ಆಗುತ್ತಿದ್ದಂತೆ ಈ ಯೋಜನೆ ಕೇವಲ ಒಂದು ಘೋಷಣೆಯಾಗಿ ಉಳಿಯಲಿಲ್ಲ ಬದಲಾಗಿ ವಿದೇಶಿ ಕಂಪನಿಗಳಿಗೆ ಭಾರತದ ಹೆಬ್ಬಾಗಿಲನ್ನು ತೆರೆದು ಭಾರತಕ್ಕೆ ಕೋಟ್ಯಂತರ ರುಪಾಯಿ ವಿದೇಶಿ ಹಣ ಹರಿದು ಬರುವಂತೆ ಮಾಡಿತು. ರಾತ್ರಿ ಹಗಲೆನ್ನದೆ ದುಡಿವ ಮೋದಿ ಜಗತ್ತಿನ ಎಲ್ಲಾ ರಾಷ್ಟ್ರಗಳ ಬಾಗಿಲನ್ನು ಬಡಿದು, “ಬನ್ನಿ ನಮ್ಮ ದೇಶದಲ್ಲಿ ನಿರ್ಮಿಸಿ” ಎಂದು ಆಹ್ವಾನವಿತ್ತರು. ಮೋದಿಯವರ ಆಹ್ವಾನಕ್ಕೆ ಮನ್ನಣೆ ಇತ್ತ ವಿಶ್ವ ಪ್ರಸಿದ್ದ ಕಂಪನಿಗಳು ಇಂದು ತಮ್ಮ ಶಾಖೆಗಳನ್ನು ಭಾರತದಲ್ಲಿ ತೆರೆದಿವೆ. ಅದರಲ್ಲಿ ಒಂದು ಭಾರತೀಯರು ಹುಚ್ಚರಂತೆ ಪ್ರೀತಿಸುವ Apple iPhone ನ ಶಾಖೆ ಎಂದರೆ ನಂಬುತ್ತೀರಾ?

ಈ ವರೆಗೆ Apple iPhone SE ಮಾಡಲಿನ ಬಿಡಿಭಾಗಗಳನ್ನು ಚೀನಾದಲ್ಲಿ ಜೋಡಿಸಲಾಗುತ್ತಿತ್ತು. 2014 ರಲ್ಲಿ ಮೋದಿಜಿಯವರ ಮೇಕ್ ಇನ್ ಇಂಡಿಯಾದ ಫಲವಾಗಿ ಈ ಮಾಡಲಿನ ಫೋನ್ ಗಳು ಕಳೆದ ನಾಲ್ಕು ವರ್ಷಗಳಿಂದ ಭಾರತದಲ್ಲಿ ಜೋಡಿಸಲ್ಪಡುತ್ತಿವೆ. 2014 ರಲ್ಲಿಇಡಿಯ ಭಾರತದಲ್ಲೆ ಕೇವಲ 2 ಫಾಕ್ಟರಿಗಳಿದ್ದವು ಆದರೆ 2018 ರಲ್ಲಿ ಬರೋಬ್ಬರಿ 120 ಫಾಕ್ಟರಿಗಳಾಗಿವೆ!! ನಾಲ್ಕೇ ವರ್ಷದ ಅವಧಿಯಲ್ಲಿ 2 ಇದ್ದಿದ್ದು 120!! ಇದು ಸಾಧ್ಯವಾದದ್ದು ಯಾರಿಂದ? ಒಬ್ಬ ವ್ಯಕ್ತಿ ಮೋದಿಯಿಂದ!! ವಿಶ್ವದ ಅಗ್ರಗಣ್ಯ ದೇಶಗಳು ಇಂದು ಮೋದಿ ನಾಯಕತ್ವದಲ್ಲಿ ವಿಶ್ವಾಸ ಇಟ್ಟಿವೆ. ಭಾರತದಲ್ಲಿ ಮಾತ್ರ ಇನ್ನೂ ಕೆಲವರಿಗೆ ಮೋದಿ ನಾಯಕತ್ವದ ಮೇಲೆ ನಂಬಿಕೆ ಇಲ್ಲ ಅಷ್ಟೆ. ನಿಮ್ಮ ಸ್ಮೃತಿಯ ಕಡತಗಳನ್ನು ಕೊಡಕಿ ನೋಡಿ, ಈ ಹಿಂದೆ ಇದ್ದ ಯಾವುದೆ ಸರಕಾರದ ಅವಧಿಯಲ್ಲೂ ಈ ವೇಗದಲ್ಲಿ ಅಭಿವೃದ್ದಿಯನ್ನು ಕಂಡಿದ್ದೀರಾ? ಇಲ್ಲವೆ ಇಲ್ಲ.

ನಿಮಗೆ ಸಂತೋಷ ನೀಡುವ ಇನ್ನೂ ಒಂದು ವಿಚಾರವಿದೆ ಕೇಳಿ. ಐಫೋನ್ ಗಳನ್ನು ಜೋಡಿಸುವ ದೇಶಗಳಲ್ಲಿ ಜಾಗತಿಕವಾಗಿ ಮೂರನೇ ದೇಶ ನಮ್ಮ ಭಾರತ. ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಯೊಂದು ಭಾರತವನ್ನು ಆಯ್ಕೆ ಮಾಡಿರುವುದು ಆ ಕಂಪನಿಗೆ ಭಾರತ ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ಸೂಚಿಸುತ್ತದೆ. ಇದು ಭಾರತೀಯರಿಗೆ ಹೆಮ್ಮೆಯ ವಿಚಾರವಾದರೆ, ಇನ್ನು ಕನ್ನಡಿಗರಿಗೆ ಕುಣಿದಾಡಲು ಮತ್ತೊಂದು ಖುಷಿಯ ವಿಚಾರವಿದೆ. ಈ ವರ್ಷದ ಕೊನೆಯೊಳಗೆ  ಬೆಂಗಳೂರಿನಲ್ಲಿ ‘ಮೇಡ್ ಇನ್ ಇಂಡಿಯಾ’ ಐಫೋನ್ ಗಳ ಪೂರ್ಣ ಪ್ರಮಾಣದ ಉತ್ಪಾದನೆ ಆರಂಭಿಸಲಿದೆ ಎಂದು ಸ್ವತಃ ಕಂಪನಿಯೆ ಹೇಳಿಕೊಂಡಿದೆ!! ಸರಕು ಮತ್ತು ಸೇವೆಗಳ ತೆರಿಗೆಗಳ (GST) ಸ್ಪಷ್ಟತೆಯ ಬಳಿಕ ಭಾರತದಲ್ಲೆ ಪೂರ್ಣ ಪ್ರಮಾಣದಲ್ಲಿ ಐಫೋನ್ ಗಳನ್ನು ನಿರ್ಮಿಸಲಾಗುವುದು ಎನ್ನಲಾಗಿದೆ. ಮೋದಿಯವರ ನೀತಿಗಳನ್ನು ವಿರೋಧಿಸುವ ಮಾನಸಿಕ ರೋಗಿಗಳೆ ಕಣ್ಬಿಟ್ಟು ನೋಡಿ, ಇದೆಲ್ಲವೂ ಮೋದಿಯವರ ಪರಿಶ್ರಮದ ಫಲ. ಮೋದಿ ವಿದೇಶ ಯಾತ್ರೆ ಏಕೆ ಹೋಗುತ್ತಾರೆ? ಎಂದು ಕೇಳುವ ಮೋದಿ ವಿರೋಧಿಗಳೆ ಇನ್ನು ಮುಂದೆ ನೀವು ಖರೀದಿಸುವ ಪ್ರತಿ ವಸ್ತುವಿನಲ್ಲೂ ಮೇಡ್ ಇನ್ ಇಂಡಿಯಾ ಎಂದು ಬರೆದಿದ್ದರೆ ಅದು ಮೋದಿಯ ವಿದೇಶಿ ಯಾತ್ರೆಯ ಫಲ ಎಂದು ತಿಳಿದು ತೆಪ್ಪಗೆ ಕುಳಿತಿರಿ.

ಐಫೋನ್ ಗಳನ್ನು ಜೋಡಿಸುವ ವಿಷಯದಲ್ಲಿ ಭಾರತದ ಅಸಾಧಾರಣ ಕಾರ್ಯಕ್ಷಮತೆಯನ್ನು ಸ್ವತಃ ಆಪಲ್ ಸಿಇಒ ಟಿಮ್ ಕುಕ್ ಹೊಗಳಿದ್ದಾರೆ ಎಂದರೆ ನಮ್ಮ ಮೇಲೆ ಅವರಿಟ್ಟಿರುವ ವಿಶ್ವಾಸ ಸಾರ್ಥಕವಾಯೆತೆಂದರ್ಥ. ಭಾರತದಲ್ಲಿ ಜೋಡಿಸಲ್ಪಟ್ಟ ಬಳಿಕ 2016 ರ ಹಣಕಾಸಿನ ಅವಧಿಯಲ್ಲಿ ಐಫೋನ್ ಗಳ ಮಾರಾಟವು 50% ನಷ್ಟು ಹೆಚ್ಚಾಗಿದ್ದರೆ ಚೀನಾದಲ್ಲಿ ಮಾರಾಟ ತಟಸ್ಥವಾಗಿದೆ! ಪ್ರಪಂಚದಲ್ಲಿ ಒಬ್ಬ ವ್ಯಕ್ತಿಯ ಮುಂದೆ “ಮೇಡ್ ಇನ್ ಚೈನಾ” ಮತ್ತು “ಮೇಡ್ ಇನ್ ಇಂಡಿಯಾ” ಉತ್ಪನ್ನಗಳನ್ನಟ್ಟಿರೆ ನಿಸ್ಸಂಶಯವಾಗಿ ಆ ವ್ಯಕ್ತಿ ಮೇಡ್ ಇನ್ ಇಂಡಿಯಾ ಉತ್ಪನ್ನವನ್ನೆ ಖರೀದಿಸುತ್ತಾನೆ. ಇದು ಭಾರತದ ತಾಕತ್ತು. ಭಾರತದೆದುರು ಚೀನಾ ಯಾವತ್ತಿದ್ದರೂ ಇಲಿಯೆ ಮತ್ತು ಭಾರತ ಯಾವತ್ತಿಗೂ ಘರ್ಜಿಸುವ ಹುಲಿಯೆ. ಗಡಿಯ ವಿಚಾರವಿರಲಿ ಇಲ್ಲ ಜಾಗತಿಕ ಮಾರುಕಟ್ಟೆಯಿರಲಿ ಭಾರತವೆ “ಚಕ್ರವರ್ತಿ”. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತದ ಈ ವರ್ಚಸ್ಸಿಗೆ ಪ್ರಧಾನ ಸೇವಕ ಕಾರಣ. ಮೋದಿ ಭಾರತವನ್ನ ವಿಶ್ವ ಗುರು ಮಾಡಿಯೆ ತೀರುತ್ತಾರೆ. ಮೋದಿ ಮೇಲೆ ನಂಬಿಕೆ ಇಡಿ.. 2019ರಲ್ಲಿ ಮತ್ತೊಮ್ಮೆ ಅವರಿಗೆ ಭಾರತಾಂಬೆಯ ಸೇವೆ ಮಾಡಲು ಅವಕಾಶ ನೀಡಿ….ಎಕ್ ಬಾರ್ ಫಿರ್ ಮೋದಿ ಸರ್ಕಾರ್…..

-ಶಾರ್ವರಿ

Editor Postcard Kannada:
Related Post