X

ಏಳು ತಿಂಗಳಲ್ಲಿ 39.36 ಲಕ್ಷ ಉದ್ಯೋಗ ಸೃಷ್ಟಿ!! ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಮತ್ತೊಂದು ಸಾಧನೆ!!

ಮೋದೀಜೀ ಅಧಿಕಾರದ ಗದ್ದುಗೆಯನ್ನು ಏರಿದಾಗಿನಿಂದ ದೇಶದ ಅಭಿವೃದ್ಧಿಯ ಪಥ ಸಾಗುತ್ತನೇ ಇದೆ!! ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುವ ಅದೆಷ್ಟೋ ಬುದ್ದಿಜೀವಿಗಳು ನರೇಂದ್ರ ಮೋದಿ ದೇಶಕ್ಕೋಸ್ಕರ, ದೇಶದ ಜನರ ಸುಭಿಕ್ಷೆಗೋಸ್ಕರ ಅದೇನೇನು ಮಾಡಿದರು ಎಂದು ತಿಳಿದರೆ ಒಳಿತು!! ಆದರೆ ಸಣ್ಣ ಸಣ್ಣ ವಿಚಾರಗಳಲ್ಲೂ ಹುಳುಕನ್ನು ತೆಗೆದು ಅದನ್ನೇ ಬೊಬ್ಬಿಡುವ ಕಾಂಗ್ರೆಸ್ಸಿಗರಿಗೆ ಇದೀಗ ನರೇಂದ್ರ ಮೋದಿ ಸರಕಾರದ ಮತ್ತೊಂದು ಸಾಧನೆ ವಿರೋಧಿಗಳ ಮುಖಕ್ಕೆ ಹೊಡೆದಂತೆ ಆಗಿದೆ!! ಆದರೆ ಇದೀಗ ನರೇಂದ್ರ ಮೋದಿಯವರು ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಅದೇನೂ ಕ್ರಮ ಕೈಗೊಂಡಿಲ್ಲ ಎಂದು ಬೊಬ್ಬಿರುವವರಿಗೆ ಮೋದಿ ಸರ್ಕಾರದ ಸಾಧನೆ ಗರ ಬಡಿಯುವಂತೆ ಮಾಡುತ್ತೆ!! ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ಆರೋಪ ಕೇಳಿ ಬರುತ್ತಿರುವ ನಡುವೆಯೇ ಕಳೆದ 7 ತಿಂಗಳಲ್ಲಿ ದಾಖಲೆಯ ಉದ್ಯೋಗ ಸೃಷ್ಟಿಸಿ ಮತ್ತೊಂದು ಗರಿಯನ್ನು ಮೋದಿ ಸರ್ಕಾರ ತನ್ನ ಮುಡಿಗೇರಿಸಿಕೊಂಡಿದೆ!!

7 ತಿಂಗಳಲ್ಲಿ 39.36 ಉದ್ಯೋಗ ಸೃಷ್ಟಿ!!

ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ನಂತರ ಉದ್ಯೋಗ ಸೃಷ್ಟಿಯಲ್ಲಿ ವಿಫಲರಾಗಿದ್ದಾರೆ ಎಂದು ದೇಶಾದ್ಯಂತ ಸುಳ್ಳು ಸುದ್ಧಿ ಹಬ್ಬಿಸುವವರಿಗೆ ಎಂಪ್ಲಾಯ್ ಮೆಂಟ್ ಪ್ರಾವಿಡೆಂಟ್ ಫಂಡ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯೊಂದು ತಕ್ಕ ಉತ್ತರವನ್ನು ನೀಡಿದೆ. ದೇಶದಲ್ಲಿ ಕೇವಲ ಏಳು ತಿಂಗಳಲ್ಲಿ 39.36 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಇಪಿಎಫ್‍ಒ ತಿಳಿಸಿದೆ.

ಎಂಪ್ಲಾಯ್  ಪ್ರೋವಿಡೆಂಟ್ ಫಂಡ್  ಪ್ರೊವಿಶನಲ್ ಫಿಗರ್ಸ್ ಡಾಟಾ ಬಿಡುಗಡೆಗೊಳಿಸಿದ್ದು, ಇದರ ಪ್ರಕಾರ ಆರು ತಿಂಗಳಲ್ಲಿ 3.11 ಉದ್ಯೋಗಿಗಳು ಅದರ ಫಂಡ್‍ಗೆ ಸೇರ್ಪಡೆಯಾಗಿದ್ದಾರೆ!! ಇಪಿಎಫ್‍ಒ ನೀಡಿರುವ ಮಾಹಿತಿ ಪ್ರಕಾರ 2018ರ ಮಾರ್ಚ್ ತಿಂಗಳೊಂದರಲ್ಲೇ 6.13 ಲಕ್ಷ ಉದ್ಯೋಗ ಸೃಷ್ಟಿಯಾಗಿವೆ ಎಂದು ತಿಳಿಸಿದೆ. ಎಲ್ಲ ವರ್ಗದಲ್ಲಿ ವಿಶೇಷ ಪರಿಣಿತರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿವೆ. ಎಲ್ಲರಿಗೂ ಸೂಕ್ತ ವೇತನ ದೊರೆಯುತ್ತಿದೆ. ಎಲೆಕ್ಟ್ರಿಕಲ್, ಮೆಕಾನಿಕಲ್ ಹಾಗೂ ಜನರಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದ್ದು, ಕಟ್ಟಡ, ಕೈಗಾರಿಕೆ ಸ್ಥಾಪನೆ, ಉದ್ಯಮ, ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ತಿಳಿಸಿದೆ. ದೇಶದ ಅರ್ಧಕ್ಕಿಂತ ಹೆಚ್ಚು ಉದ್ಯೋಗಗಳು ಸಂಘಟಿತ ಕ್ಷೇತ್ರದಲ್ಲಿ ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನಲ್ಲಿ ಏಳು ತಿಂಗಳಲ್ಲಿ ಸೃಷ್ಟಿಯಾಗಿವೆ.  ಕಳೆದ ತಿಂಗಳು ಇಪಿಎಫ್‍ಒ ಈ ವೇತನದಾರರ ಕುರಿತು ದಾಖಲೆ ಬಿಡುಗಡೆ ಮಾಡಿದೆ.

ಈಗಾಗಲೇ ಕೇಂದ್ರ ಸರ್ಕಾರ ಮಂಡಿಸಿದ 2018-19 ಸಾಲಿನ ಬಜೆಟ್‍ನಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದ್ದು, ಸರ್ಕಾರದ ಮೂಲ ಸೌಕರ್ಯ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಹಲವು ಯೋಜನೆಗಳಲ್ಲಿ ವರ್ಷಕ್ಕೆ ಅಂದಾಜು 50 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿತ್ತು!! ಅಷ್ಟೇ ಅಲ್ಲದೇ ಫೆ.1ರಂದು ಮಂಡಿಸಿರುವ ಬಜೆಟ್‍ನಲ್ಲಿ ಇದೇ ಮೊದಲ ಬಾರಿಗೆ ನಾನಾ ಯೋಜನೆಗಳ ಜಾರಿಗೆ ಬೇಕಾಗುವ ಉದ್ಯೋಗಿಗಳು ಹಾಗೂ ಮಾನವ ದಿನಗಳ ಸಂಖ್ಯೆಯನ್ನು ತಿಳಿಸಲಾಗಿದೆ. ಕೇಂದ್ರ ಆಯವ್ಯಯದಲ್ಲಿ ಹೆದ್ದಾರಿ ನಿರ್ಮಾಣ, ಶೌಚಾಲಯ, ಗ್ರಾಮೀಣ ವಸತಿ, ಗ್ರಾಮೀಣ ರಸ್ತೆ, ಮೆಗಾ ಫುಡ್ ಪಾರ್ಕ್ ಇತ್ಯಾದಿ ಹಲವು ಯೋಜನೆಗಳಿದ್ದು, ಇವುಗಳಿಗೆ ಸಂಬಂಧಿಸಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದೂ ತಿಳಿಸಿತ್ತು!!  ಇದರೊಂದಿಗೆ ಸರ್ಕಾರ ಪ್ರತಿ ವರ್ಷದ ಕೊನೆಯಲ್ಲಿ ತನ್ನ ನಾನಾ ಯೋಜನೆಗಳಡಿಯಲ್ಲಿ ಎಷ್ಟು ಜನರಿಗೆ ಉದ್ಯೋಗ ಲಭಿಸಿತು ಎಂಬುದನ್ನು ಬಹಿರಂಗಪಡಿಸಲಿದೆ. ಇದರಿಂದ ಉದ್ಯೋಗ ಸೃಷ್ಟಿಯಲ್ಲಿ ಸರಕಾರ ವಹಿಸಿರುವ ಪಾತ್ರದ ಬಗ್ಗೆ ಜನ ಜಾಗೃತಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು!! ಅಷ್ಟೇ ಅಲ್ಲದೇ ವಿಸ್ತೃತ ಪ್ರಧಾನಮಂತ್ರಿ ರೋಜ್‍ಗಾರ್ ಯೋಜನೆಯಡಿಯಲ್ಲಿ ವಾರ್ಷಿಕ ಸುಮಾರು 30 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಎಲ್ಲವನ್ನೂ ಸೇರಿಸಿದರೆ ಒಟ್ಟು 50 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಈಗಾಗಲೇ ವರದಿ ತಿಳಿಸಿದೆ!!

ನರೇಂದ್ರ ಮೋದಿ ಸರ್ಕಾರ ಮಾಡಿರುವ ಸಾಧನೆಗಳ ಪಟ್ಟಿಗಳನ್ನು ಮಾಡುತ್ತಾ ಹೋದರೆ ಇಷ್ಟು ವರ್ಷ ಕಾಂಗ್ರೆಸ್ ಸರ್ಕಾರ ಮಾಡದೇ ಇರುವಂತಹ ಅದೆಷ್ಟೋ ಕೆಲಸಗಳನ್ನು ನರೇಂದ್ರ ಮೋದಿ ಸರ್ಕಾರವು ಮಾಡಿದೆ ಎಂದರೆ ಇದಕ್ಕಿಂತಲೂ ದೊಡ್ಡ ಹೆಮ್ಮೆಯ ವಿಚಾರ ಮತ್ತೊಂದಿದೆಯೇ? ಭಾರತ ಬಡ ರಾಷ್ಟ್ರ ಎಂದು ಭಾರತದ ಸ್ನೇಹ ಬಯಸಲು ಹಿಂದೆ ಸರಿಯುತ್ತಿದ್ದ ರಾಷ್ಟ್ರಗಳೆಲ್ಲವೂ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ನೈಪುಣ್ಯತೆಗೆ ತಲೆಬಾಗಿ, ಇಂದು ಭಾರತದೊಂದಿಗೆ ಸ್ನೇಹ ಬೆಳೆಸಲು ಕ್ಯೂ ನಿಲ್ಲುತ್ತೇ ಎಂದರೆ ನರೇಂದ್ರ ಮೋದಿಗೆ ಸರಿಸಾಟಿಯಾದ ಪ್ರಧಾನಿ ಇರಲು ಸಾಧ್ಯವೇ ಇಲ್ಲ ಎಂದನಿಸುತ್ತೆ!!

  • ಪವಿತ್ರ
Editor Postcard Kannada:
Related Post