X

ಇತಿಹಾಸದಲ್ಲೇ ಇಂತಹ ನಿರ್ಣಯ ಕೈಗೊಂಡ‌ ಏಕೈಕ ನಾಯಕ ನರೇಂದ್ರ ಮೋದಿ!

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ದೇಶದ ಬಡವರನ್ನು ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು ತಂದಿರುವುದು ನಮ್ಮೆಲ್ಲರಿಗೂ ತಿಳಿದೇ ಇದೆ. ಬಗವರ ಹಸಿವು ನೀಗಿಸಲು, ಅವರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಉಚಿತ ಆಹಾರ ಧಾನ್ಯ‌ಗಳನ್ನು ನೀಡಲಾಗುತ್ತಿದ್ದು, ಈ ಯೋಜನೆಯ‌ನ್ನು 2023 ರ ಡಿಸೆಂಬರ್ ವರೆಗೆ, ಅಂದರೆ ಮುಂದಿನ ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತ ಆಹಾರ ಧಾನ್ಯಗಳನ್ನು ಮುಂದಿನ ವರ್ಷಾಂತ್ಯದ ವರೆಗೆ ಈ ದೇಶದ ಬಡ ಜನರಿಗೆ ಒದಗಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯ ವಿಸ್ತರಣೆ‌ಯಿಂದಾಗಿ ಈ ದೇಶದ 81.35 ಕೋಟಿ ಬಡ ಜನರಿಗೆ 2023 ರಲ್ಲಿಯೂ ಆಹಾರ ಭದ್ರತೆ ದೊರೆಯಲಿದೆ. ಈ ಯೋಜನೆಯನ್ವಯ ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿ‌ಗೆ ಪ್ರಸ್ತುತ 5 ಕೆಜಿ ಆಹಾರ ಪದಾರ್ಥಗಳನ್ನು ಕೆಜಿ‌ಗೆ 2 ರಿಂದ 3 ರೂ. ಗಳಲ್ಲಿ ನೀಡುತ್ತಿದೆ.

ಈ ಯೋಜನೆಯನ್ವಯ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ತಿಂಗಳಿಗೆ 35 ಕೆಜಿ‌ಗಳಷ್ಟು ಆಹಾರ ಧಾನ್ಯ ವಿತರಣೆ ನಡೆಯುತ್ತಿದೆ. ಬಡ ಕುಟುಂಬ‌ಗಳಿಗೆ 3 ರೂಪಾಯಿ‌ಗೆ ಒಂದು ಕೆಜಿ ಅಕ್ಕಿ, 2 ರೂ. ಗಳಿಗೆ ಒಂದು ಕೆಜಿ ಗೋದಿಯನ್ನು ಒದಗಿಸುವ ಮೂಲಕ ಆಹಾರ ಭದ್ರತೆ ಒದಗಿಸುತ್ತಿದೆ.

ಈ ಹಿಂದೆ ಸಬ್ಸಿಡಿ ದರದಲ್ಲಿ ಆಹಾರ ಪದಾರ್ಥಗಳನ್ನು ಪಡೆಯುತ್ತಿದ್ದ ಸುಮಾರು 81.35 ಕೋಟಿ ಫಲಾನುಭವಿಗಳಿಗೆ ಈಗ ಕೇಂದ್ರ ಸರ್ಕಾರ ಉಚಿತ‌ವಾಗಿ ಆಹಾರ ಪದಾರ್ಥಗಳನ್ನು ಒದಗಿಸುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ವರ್ಷಕ್ಕೆ 2 ಲಕ್ಷ ಕೋಟಿ ರೂ. ಗಳ ವೆಚ್ಚವನ್ನು ಭರಿಸುತ್ತಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಈ ದೇಶದ ಬಡ ಜನರ ಹಿತಾಸಕ್ತಿ‌ಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಈ ದೇಶದ ಬಡವರು ಉಪವಾಸ ಕೂರುವಂತಾಗಬಾರದು ಎನ್ನುವ ನಿಟ್ಟಿನಲ್ಲಿ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುವ ಯೋಜನೆಯನ್ನು ಮುಂದಿನ ವರ್ಷಕ್ಕೂ ವಿಸ್ತರಣೆ ಮಾಡಿರುವುದು, ಈ ದೇಶದ ಆರ್ಥಿಕ ಅಶಕ್ತ ಕುಟುಂಬಗಳ ಮುಖದಲ್ಲಿ ನಗು ತರಿಸಿರುವುದಂತೂ ಸತ್ಯ.

Post Card Balaga:
Related Post