X

ನೆಹರೂ ಅಂದು ದೇಶಭಕ್ತಿ ಮೆರೆಯುತ್ತಿದ್ದರೆ ಇಂದು ಆ ರಾಜ್ಯ ಸ್ವರ್ಗವಾಗಿರುತ್ತಿತ್ತು.!! ಭಾರತೀಯರ ಪಾಲಿಗೆ ವಿಲನ್ ಆದ ಚಾಚಾ.!

ಭಾರತದ ಸ್ವಾತಂತ್ರ್ಯ ನಂತರದ ಇತಿಹಾಸದಲ್ಲೇ ಒಂದು ಕರಾಳ ಮುಖ ಎಂಬೂದಿದ್ದರೆ ಅದು ಪ್ರಥಮ ಪ್ರಧಾನಿ ಎನಿಸಿಕೊಂಡ ನೆಹರೂ ಎಂದರೆ ತಪ್ಪಾಗದು. ಯಾಕೆಂದರೆ ಭಾರತವನ್ನು ಬ್ರಿಟಿಷರು ತಮ್ಮ ಗುಲಾಮಗಿರಿಗೆ ಬಳಸಿಕೊಂಡರು. ಆದರೆ ಅದೆಷ್ಟೋ ವೀರರ ಜೀವ ಬಲಿಯಿಂದಾಗಿ ಭಾರತಕ್ಕೆ ಸ್ವಾತಂತ್ರ್ಯವೇನೋ ದೊರೆಯಿತು, ಆದರೆ ಜವಾಹರಲಾಲ್ ನೆಹರು ರಂತಹ ಕೊಳಕು ನೇತಾರನಿಂದಾಗಿ ಭಾರತ ಮತ್ತೆ ಪಾತಾಳಕ್ಕೆ ಕುಸಿಯಿತು.

ನೆಹರು ತನ್ನ ವೈಯಕ್ತಿಕ ಲಾಭವನ್ನೇ ನೋಡಿಕೊಂಡರೇ ವಿನಃ ದೇಶದ ಒಳಿತಿಗಾಗಿ ಯಾವುದೇ ಒಳ್ಳೆಯ ಕೆಲಸ ಮಾಡಲಿಲ್ಲ. ಕೇವಲ ಆಡಂಬರಕ್ಕಾಗಿ ಪ್ರಧಾನಿ ಪಟ್ಟ ಏರಿದ ನೆಹರೂ ಭೋಗ ಜೀವನವನ್ನು ನಡೆಸಿಕೊಂಡು ಬಂದವರು. ನೆಹರೂ ರವರ ಮುಸ್ಲಿಂ ಪ್ರೇಮದ ಬಗ್ಗೆ ಈಗಾಗಲೇ ತಿಳಿದಿದೆಯಾದರೂ, ಯಾವ ಮಟ್ಟಿಗೆ ಮುಸ್ಲೀಮರನ್ನು ಓಲೈಸಿದ್ದರು ಎಂಬೂದು ತಿಳಿಯೋಣ..!

ಚಿಕ್ಕಂದಿನಿಂದಲೇ ಉರ್ದುವಿನ ಒಲವು, ಮುಸಲ್ಮಾನರೊಂದಿಗೆ ಒಡನಾಟ ಇಟ್ಟುಕೊಂಡಿದ್ದ ನೆಹರೂಗೆ ಅಂತಹ ಭಾವನೆ ಮೂಡಿಸಿದ್ದರಲ್ಲಿ ತಪ್ಪಿಲ್ಲ. ಆದರೆ ನೆಹರೂರವರ ಮುಸ್ಲಿಂ ಪ್ರೇಮ , ಹಿಂದೂ ಧರ್ಮವನ್ನು ದ್ವೇಷಿಸುವಂತೆ ಮಾಡಿತ್ತು. ಒಬ್ಬ ಭಾರತೀಯನಾಗಿ , ಭಾರತದ ಪ್ರಧಾನಿಯಾಗಿ ಅದರಲ್ಲೂ ಓರ್ವ ಹಿಂದೂವಾಗಿ ಭಾರತೀಯ ಆಚಾರ ವಿಚಾರಗಳಿಗೆ ಬೆಲೆ ಕೊಡದೆ ಪಾಶ್ಚಾತ್ಯ ಸಂಪ್ರದಾಯವನ್ನು ಅನುಸರಿಸುತ್ತಿದ್ದ ನೆಹರೂ ಭಾರತೀಯರ ಪಾಲಿಗೆ ಕೇವಲ ಹೆಸರಿಗಷ್ಟೇ ಪ್ರಧಾನಿಯಾಗಿದ್ದರು.

ಕಾಶ್ಮೀರದ ವಿಚಾರದಲ್ಲೂ ಆಗಿದ್ದು ಇಷ್ಟೇ, ನೆಹರುಗೆ ಇದ್ದ ಭಾರತದ ಮೇಲಿನ ತಾತ್ಸಾರ ಮನೋಭಾವವೇ ಕಾಶ್ಮೀರವನ್ನು ಹೊತ್ತಿ ಉರಿಯುವಂತೆ ಮಾಡಿತ್ತು. ಸ್ವಾತಂತ್ರ್ಯ ನಂತರ ಸರ್ದಾರ ಪಟೇಲರು ರಾಜ್ಯ ವಿಲೀನ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಅದನ್ನು ಯಶಸ್ವಿಯಾಗಿ ನಿರ್ಹಿಸಿದ್ದರು. ಆದರೆ ಅದರಲ್ಲೂ ಮೂಗುತೂರಿಸಿಕೊಂಡು ಬಂದಿದ್ದ ನೆಹರು , ಕಾಶ್ಮೀರವನ್ನು ವಿಲೀನ ಮಾಡುವ ಕಾರ್ಯವನ್ನು ತಾನೇ ಮಾಡುವುದಾಗಿ ಹೇಳಿ , ಕಾಶ್ಮೀರವನ್ನು ಉತ್ತರಿಸಲಾಗದ ಪ್ರಶ್ನೆಯಾಗಿ ಉಳಿಸಿಬಿಟ್ಟರು.

ಕಾಶ್ಮೀರದಲ್ಲಿ ಹೆಚ್ಚಾಗಿ ಮುಸ್ಲಿಮರೇ ಇದ್ದರೂ ಅವರನ್ನು ಆಳುವ ದೊರೆ ಮಾತ್ರ ಹಿಂದೂವಾಗಿದ್ದರು. ಮೊದಲೇ ಮುಸ್ಲೀಮರೆಂದರೆ ಅದೇನೋ ಹುಚ್ಚು ಪ್ರೀತಿ ಹೊಂದಿದ್ದ ನೆಹರು ,ಸದಾ ಕಾಶ್ಮೀರದ ರಾಜನ ವಿರೋಧಿ ಬಣದಲ್ಲೇ ನಿಂತಿದ್ದರು. ರಾಜನನ್ನು ಪಟ್ಟದಿಂದ ಕೆಳಗಿಳಿಸಿ ಕಾಶ್ಮೀರವನ್ನು ಸಂಪೂರ್ಣವಾಗಿ ಪಾಕಿಸ್ತಾನಕ್ಕೆ ಬಿಟ್ಟುಕೊಡಲು ತಯಾರಾಗಿದ್ದಾರು.

ಕಾಶ್ಮೀರ ಮುಸ್ಲಿಂ ಮುಖಂಡರಿಗೆ ನಾಯಕತ್ವದ ಬಲ ನೀಡಿ ಕಾಶ್ಮೀರ ರಾಜನ ವಿರುದ್ಧ ಪ್ರತಿಭಟಿಸುವಂತೆ ಮಾಡಿ ರಾಜನನ್ನು ಪಟ್ಟದಿಂದ ಇಳಿಸಲು ತಂತ್ರಚ ರೂಪಿಸಿದ್ದರು. ಆದರೆ ರಾಜತಂತ್ರದ ಮುಂದೆ ನೆಹರೂರವರ ರಾಜಕೀಯ ತಂತ್ರ ಫಲಿಸಲಿಲ್ಲ. ಯಾಕೆಂದರೆ ರಾಜನ ವಿರುದ್ಧ ಪ್ರತಿಭಟಿಸಿದವರನ್ನು ರಾಜದ್ರೋಹದ ಆಪಾದನೆಯ ಮೇಲೆ ಬಂಧಿಸಲಾಯಿತು. ಇದರಿಂದ ಕೋಪಗೊಂಡ ನೆಹರೂ ಸ್ವತಃ ತಾವೇ ಕಾಶ್ಮೀರ ಗಡಿದಾಟಿ ಪ್ರವೇಶಿಸಿದ್ದರು.

ಆದರೆ ಯಾವುದನ್ನೂ ಲೆಕ್ಕಿಸದ ಕಾಶ್ಮೀರ ರಾಜ ನಿಷೇಧ ಹೇರಿದ ನಂತರವೂ ಕಾಶ್ಮೀರ ಗಡಿ ದಾಟಿದ ಉದ್ಧಟತನಕ್ಕಾಗಿ ಅವರು ನೆಹರೂರವರನ್ನೇ ಬಂಧಿಸಿದರು. ಮೊದಲೇ ಕೆಂಡಕಾರುತ್ತಿದ್ದ ನೆಹರೂ – ಕಾಶ್ಮೀರ ರಾಜನ ವೈಮನಸ್ಸು ತಾರಕಕ್ಕೇರಿತು. ಕೊನೆಗೆ ಯಾವುದೇ ದಾರಿ ತೋಚದ ನೆಹರು ಕಾಂಗ್ರೆಸಿನ ಕಾರ್ಯಕಾರಿ ಸಮಿತಿ ನೀಡಿದ ತೀಕ್ಷ್ಣ ಆದೇಶದಿಂದಾಗಿ ನೆಹರೂ ಕಾಶ್ಮೀರದಿಂದ ಅನಿವಾರ್ಯವಾಗಿ ಮರಳಬೇಕಾಯಿತು.

ದೇಶದ ಪ್ರಧಾನಿಯಾಗಿದ್ದ , ಮಹಾ ನಾಯಕರ ಕೃಪಾಕಟಾಕ್ಷವಿದ್ದ ನೆಹರೂಗೇ ಕಾಶ್ಮೀರದಲ್ಲಿ ಮರ್ಯಾದೆ ಸಿಗಲಿಲ್ಲ , ಇನ್ನು ನಾವೇನು ಮಹಾ ಎಂದು ಅರಿತ ಕಾಶ್ಮೀರಿ ಮುಸ್ಲಿಂ ಮುಖಂಡರು ಮಹಾರಾಜರಿಗೊಂದು ಕ್ಷಮಾಪಣ ಪತ್ರ ಬರೆದರು. ಕಾಶ್ಮೀರದಲ್ಲಿ ಇನ್ನು ಮುಂದೆ ನಮ್ಮಿಂದ ಯಾವುದೇ ತೊಂದರೆಯಾಗದಂತೆ ನಾವು ಮತ್ತು ನಮ್ಮ ಸಂಘಟನೆ ನೋಡಿಕೊಳ್ಳುತ್ತದೆ, ಮಹಾರಾಜರಿಗೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಪತ್ರ ಬರೆದಿದ್ದರು.

ನೆಹರು ಭಾರತದ ಪ್ರಥಮ ಪ್ರಧಾನಿ ಎಂಬ ಕಾರಣಕ್ಕೆ ಮಾತ್ರ ಅವರನ್ನು ಇಂದಿಗೂ ಕೆಲವರಾದರೂ ನೆನೆದುಕೊಳ್ಳುತ್ತಾರೆ. ಆದರೆ ನೆಹರೂ ಪ್ರಧಾನಿಯಾಗಿ ದೇಶಕ್ಕೆ ಬೇಕಾದ ಯಾವುದೇ ಕೊಡುಗೆ ನೀಡಲಿಲ್ಲ. ಕೇವಲ ತಮ್ಮ ಐಶಾರಾಮಿ ಜೀವನಕ್ಕಾಗಿ ದೇಶದ ಪ್ರಧಾನಿ ಪಟ್ಟ ಅಲಂಕರಿಸಿ ದೇಶದ ಸಂಪತ್ತನ್ನು ಉಪಯೋಗಿಸಿಕೊಂಡರು.

ಕಾಶ್ಮೀರದ ವಿಚಾರದಲ್ಲಿ ಮೌಢ್ಯತೆ ಪ್ರದರ್ಶನ ಮಾಡುತ್ತಲೇ ಇದ್ದ ನೆಹರೂ ,ಕಾಶ್ಮೀರವನ್ನು ಪ್ರತ್ಯೇಕವಾದಿಗಳ ಕೈಗೆ ನೀಡಿ ತಾವು ಹಾಯಾಗಿರಲು ತಯಾರಾಗಿದ್ದರು. ಆದರೆ ಅದಕ್ಕೆ ಸರದಾರ್ ಪಟೇಲ್ ರಂತಹ ದೇಶಭಕ್ತ ನಾಯಕರು ಅನುವು ಮಾಡಿಕೊಡಲಿಲ್ಲ. ಇದರಿಂದಾಗಿ ನೆಹರೂ ಮುಂದುವರೆಯಲಿಲ್ಲ. ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವ ಹೊಣೆಯನ್ನು ಸರ್ದಾರ ಪಟೇಲ್ ರಿಗೆ ಕೊಡದೇ , ತಾವೇ ನೋಡಿಕೊಳ್ಳುವುದಾಗಿ ಜಂಬ ಮೆರೆಯುತ್ತಿದ್ದ ನೆಹರೂಗೆ ಕಾಶ್ಮೀರದಲ್ಲಿ ನಡೆಯುತ್ತಿದ್ದ ದೇಶ ವಿರೋಧಿ ಚಟುವಟಿಕೆಗಳು ಗಮನಕ್ಕೆ ಬರಲೇ ಇಲ್ಲ.!

ನೆಹರೂರವರ ಉದ್ದಟತನದಿಂದಲೇ ಪ್ರತ್ಯೇಕಗೊಂಡಿದ್ದ ಪಾಕಿಸ್ತಾನ ಭಾರತದ ವಿರುದ್ಧ ಯುಧ್ದ ಸಾರಿತ್ತು. ಆದರೆ ನೆಹರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದನ್ನೆಲ್ಲಾ ಗಮನಿಸುತ್ತಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಮಾತ್ರ ಸುಮ್ಮನೆ ಕೂರಲಿಲ್ಲ. ಪಾಕಿಸ್ತಾನಕ್ಕೆ ಬೇಕಾದ ಎಲ್ಲಾ ರೀತಿಯ ತಿರುಗೇಟು ನೀಡಿದ್ದರು.

ನೆಹರೂ ಒಬ್ಬರು ಅಂದು ತಮ್ಮ ದೇಶಪ್ರೇಮ ಮೆರೆಯುತ್ತಿದ್ದರೆ ಇಂದು ನೆಹರೂ ಭಾರತೀಯರ ಪಾಲಿಗೆ ಹೀರೋ ಆಗಿರಯತ್ತಿದ್ದರು. ಆದರೆ ಹಾಗಾಗಲಿಲ್ಲ. ನೆಹರೂ ದೇಶಭಕ್ತರ ಪಾಲಿಗೆ ಇಂದಿಗೂ ವಿಲನ್ ಆಗಿಯೇ ಉಳಿದುಬಿಟ್ಟರು.

–ಅರ್ಜುನ್

Editor Postcard Kannada:
Related Post