X

ರೋಗಿಗಳ ಚಿಕಿತ್ಸೆಯ ನೆಪದಲ್ಲಿ ಹಣ ಕೀಳುವ, ರೋಗಿಯನ್ನು ಸತಾಯಿಸುವ ಆಸ್ಪತ್ರೆ ಸಿಬ್ಬಂದಿಗೆ ಗಡಗಡ ನಡುಗುವಂತೆ ಮಾಡಿದೆ ಮೋದಿಯವರ ಈ ಆ್ಯಪ್!!

ದೇಶದ ಜನರ ಕ್ಷೇಮಾಭಿವೃದ್ಧಿಗೆ ನರೇಂದ್ರ ಮೋದಿ ಸರ್ಕಾರವು ನಾನಾ ಯೋಜನೆಗಳನ್ನು ಜಾರಿ ಗೊಳಿಸಿದ್ದಲ್ಲದೇ ವೈದ್ಯಕೀಯ ವೆಚ್ಚಗಳು ದಿನೇದಿನೇ ಹೆಚ್ಚುತ್ತಿದ್ದು, ಗಂಭೀರ ಕಾಯಿಲೆಯಿಂದ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಬಿಲ್ ಪಾವತಿಸುವುದು ಅವರ ಕುಟುಂಬಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದ್ದ ಸಂದರ್ಭದಲ್ಲಿ, ನರೇಂದ್ರ ಮೋದಿ ಸರ್ಕಾರವು ಆರೋಗ್ಯ ವಿಮೆಯನ್ನು ಜಾರಿಗೊಳಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದರು!! ಆದರೆ ಇದೀಗ ಕೇಂದ್ರ ಸರ್ಕಾರವು ಆಸ್ಪತ್ರೆಯ ವೈದ್ಯರುಗಳಿಗೆ ನಡುಕ ಹುಟ್ಟಿಸುವಂತಹ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಇದೀಗ ಮತ್ತೆ ಸುದ್ದಿಯಲ್ಲಿದೆ!!

ಈಗಾಗಲೇ ಆಧುನಿಕತೆಯ ಪ್ರವಾಹದಲ್ಲಿ ಸಿರಿವಂತ ಬಡವ ಎನ್ನದೇ ಎಲ್ಲರ ಬದುಕುಗಳನ್ನು ಹಿಂಡಿ ಹಿಪ್ಪೆ ಮಾಡುವ ಕಾಯಿಲೆಗಳು ಸರ್ವೇಸಾಮಾನ್ಯವಾಗಿ ಕಂಡು ಬಂದರೂ ಕೂಡ ಆಸ್ಪತ್ರೆ, ಔಷಧ ವೆಚ್ಚ ಭರಿಸುವ ಸಾಮರ್ಥ್ಯವಿಲ್ಲದೇ ಅಸಹಾಯಕರಾಗಿ ಜೀವ ಕಳೆದುಕೊಳ್ಳುವ ಎಷ್ಟೋ ಜೀವಗಳಿಗೆ ಆಸರೆ ನೀಡುವ ಮತ್ತು ವರದಾನ ಎನ್ನಬಹುದಾದ ವ್ಯವಸ್ಥೆಯಾಗಿ ಕೇಂದ್ರ ಸರ್ಕಾರವು ಜನೌಷಧ ಯೋಜನೆಯನ್ನು ಜಾರಿಗೊಳಿಸಿ ರೋಗಿಗಳ ಪಾಲಿಗೆ ವರದಾನವಾಗಿದ್ದಂತಹ ವಿಚಾರ ಗೊತ್ತೇ ಇದೆ.

ಅಷ್ಟೇ ಅಲ್ಲದೇ, ಕಾಯಿಲೆ ಪೀಡಿತರಾದ ಜನರಿಗೆ ಕಡಿಮೆ ದರದಲ್ಲಿ ಔಷಧ ಸಿಗುವಂತೆ ನೋಡಿ ಕೊಳ್ಳುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಜನೌಷಧ ಕೇಂದ್ರಗಳಲ್ಲಿ ಮಾರುಕಟ್ಟೆ ದರಕ್ಕಿಂತ ಶೇ.70ರಷ್ಟು ರಿಯಾಯ್ತಿ ದರದಲ್ಲಿ ಔಷಧ ಹಾಗೂ ವೈದ್ಯಕೀಯ ಸಲಕರಣೆಯನ್ನು ಒದಗಿಸುವ ಅತ್ಯಂತ ಅಗ್ಗದ ಯೋಜನೆಯಾಗಿ ಕಂಡು ಬಂದಿದೆ. ಆದರೆ ಇದೀಗ ಮಹತ್ತರವಾದ ನಿರ್ಧಾರದ ಮೂಲಕ ವಿಶ್ವದ ಗಮನ ಸೆಳೆಯಲು ಮುಂದಾಗಿರುವ ನರೇಂದ್ರ ಮೋದಿ ಸರ್ಕಾರ ಸಾರ್ವಜನಿಕ ಆಸ್ಪತ್ರೆಗಳ ಸ್ಥಿತಿ ಗತಿಗಳ ಕುರಿತ ಮಾಹಿತಿಯನ್ನು ಜನಸಾಮಾನ್ಯರ ಕೈ ಬೆರಳಲ್ಲೆ ದೊರಕುವಂತೆ ಹಾಗೂ ದೂರಗಳನ್ನು ಸ್ವೀಕರಿಸಲು ಮುಂದಾಗಿದೆ.

ಹೌದು…. ಇನ್ನು ಮುಂದೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜನಸಾಮಾನ್ಯರು ವೈದ್ಯರುಗಳ ಆಮಿಷಗಳಿಗೆ ತಲೆಬಾಗ ಬೇಕಾಗಿಲ್ಲ!! ಅಷ್ಟೇ ಅಲ್ಲದೇ ವೈದ್ಯರು ಏನಾದರೂ ವಾಮಮಾರ್ಗ ಹಿಡಿದರೂ ಅದು ಅವರಿಗೆ ಸಂಕಷ್ಟ ತಂದೊಡ್ಡಲಿರುವುದಂತೂ ಅಕ್ಷರಶಃ ನಿಜ. ಹಾಗಾಗಿ ಸೂಕ್ತ ಸೌಲಭ್ಯ ನೀಡದೇ ಸತಾಯಿಸುವ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳಿಗೆ ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರವು “ಮೈ ಆಸ್ಪತ್ತಾಲ್ ಆ್ಯಪ್” ನ್ನು ಜಾರಿಗೊಳಿಸಿದೆ!! ಸಂಕಷ್ಟದಲ್ಲಿರುವ ಸಾರ್ವಜನಿಕರು ನಿತ್ಯ ಸರ್ಕಾರಿ ಆಸ್ಪತ್ರೆಗೆ ಪರದಾಡುವುದು ಸಾಮಾನ್ಯವಾಗಿದೆಯಲ್ಲದೇ ಕೆಲವು ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ದೊರೆಯದೇ ಜನ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವ ಸ್ಥಿತಿ ಇದೆ. ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದು, ಸಾರ್ವಜನಿಕರ ಆಸ್ಪತ್ರೆಗಳ ಮಾಹಿತಿಯನ್ನು ಇಲಾಖೆ ಹಿರಿಯ ಅಧಿಕಾರಿಗಳಿಗೆ ತಿಳಿಸಲು ಈ ಆ್ಯಪ್ ನ್ನು ಸಿದ್ಧಪಡಿಸಲಾಗಿದೆ.

ವಿಶ್ವದ ಇತಿಹಾಸದಲ್ಲೇ ಅತಿ ದೊಡ್ಡ ಆರೋಗ್ಯ ವಿಮೆಯನ್ನು ಜಾರಿಗೆ ತರುವ ಮೂಲಕ ಗಮನ ಸೆಳೆದಿದ್ದ ಕೇಂದ್ರ ಸರ್ಕಾರವು ಇದೀಗ ಸಾರ್ವಜನಿಕ ಆಸ್ಪತ್ರೆಗಳ ಸ್ಥಿತಿ ಗತಿಗಳ ಕುರಿತ ಮಾಹಿತಿಯನ್ನು ಜನಸಾಮಾನ್ಯರಿಂದಲೇ ಪಡೆದುಕೊಳ್ಳಲು “ಮೈ ಆಸ್ಪತ್ತಾಲ್ ಆ್ಯಪ್” ನ್ನು ಜಾರಿಗೊಳಿಸುವ ಮೂಲಕ ವೈದ್ಯರ ನಿರ್ಲಕ್ಯಗಳಿಗೆ ಬ್ರೇಕ್ ಹಾಕಿದೆ!! ಹಾಗಾಗಿ ಇನ್ನು ಮುಂದೆ ಆಸ್ಪತ್ರೆಗಳ ಸ್ಥಿತಿ ಗತಿಗಳ ಕುರಿತ ಮಾಹಿತಿಯು ಜನಸಾಮಾನ್ಯರ ಕೈ ಬೆರಳಲ್ಲೆ ದೊರಕುವಂತಾಗಿದೆ!!

ಕೇಂದ್ರ ಸರ್ಕಾರವು 2017-18ರ ಕೇಂದ್ರ ಬಜೆಟ್‍ನಲ್ಲಿ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಉಚಿತ ಆರೋಗ್ಯ ಸೇವೆಯ ಯೋಜನೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಕಟಿಸಿದ್ದರು. ಅಷ್ಟೇ ಅಲ್ಲದೇ ವರ್ಷಕ್ಕೆ ಗರಿಷ್ಠ 5 ಲಕ್ಷದವರೆಗೆ ಚಿಕಿತ್ಸೆ ಪಡೆಯಲು ಈ ಯೋಜನೆಯಲ್ಲಿ ಅವಕಾಶ ಇದೆಯಲ್ಲದೇ 2018-19ನೇ ವರ್ಷಕ್ಕೆ ಈ ಯೋಜನೆಗೆ 2,000 ಕೋಟಿ ಮೀಸಲಿರಿಸಲಾಗಿದ್ದು, ಎಲ್ಲಾ ರಾಜ್ಯಗಳು ಈ ಯೋಜನೆಗೆ ಸೇರ್ಪಡೆಯಾಗಲಿದೆ ಎಂದು ಹೇಳಿದ್ದರು.

ಆದರೆ ಇದೀಗ ಸಾರ್ವಜನಿಕರ ಆಸ್ಪತ್ರೆಗಳ ಮಾಹಿತಿಯನ್ನು ಇಲಾಖೆ ಹಿರಿಯ ಅಧಿಕಾರಿಗಳಿಗೆ ತಿಳಿಸಲು “ಮೈ ಆಸ್ಪತ್ತಾಲ್ ಆ್ಯಪ್” ನ್ನು ಸಿದ್ಧಪಡಿಸಲಾಗಿದೆ!! ಹಾಗಾಗಿ ಈ “ಮೈ ಆಸ್ಪತ್ತಾಲ್ ಆ್ಯಪ್” ನ ಮುಖಾಂತರ ಆಸ್ಪತ್ರೆಗಳ ಸ್ಥಿತಿ ಗತಿಗಳ ಬಗ್ಗೆ, ಅಷ್ಟೇ ಅಲ್ಲದೇ ಈ ಮೂಲಕ ಜನರು ನೇರವಾಗಿ ಆಸ್ಪತ್ರೆಗಳ ಸಮಸ್ಯೆಗಳ ಮತ್ತು ಉತ್ತಮ ಸೌಲಭ್ಯದ ಬಗ್ಗೆ ಶ್ಲಾಘನೀಯ ಮಾತುಗಳನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಬಹುದಾಗಿದೆ!!

ಹಾಗಾಗಿ ಈ ಮೂಲಕ ಸಾರ್ವಜನಿಕರು ನೀಡಿದ ದೂರು ಅಥವಾ ಶ್ಲಾಘನೆಯನ್ನು ಪರಿಗಣಿಸಿ ಸರ್ಕಾರ ಸೂಕ್ತ ಸೌಲಭ್ಯ ನೀಡುವುದರ ಜೊತೆಗೆ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ!! ಇವಿಷ್ಟೇ ಅಲ್ಲದೇ ಈ ಮೂಲಕ ಆಸ್ಪತ್ರೆಗಳಿಗೆ ಉತ್ತಮ ಸೌಲಭ್ಯ ಒದಗಿಸುವುದು ಮಾತ್ರವಲ್ಲದೇ ಬಹುಮಾನ ನೀಡಿ ಪೆÇ್ರೀತ್ಸಾಹಿಸಲು ಕೇಂದ್ರ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆ ನಿರ್ಧರಿಸಿದೆ. ಹಾಗಾಗಿ ಈ ಯೋಜನೆಯಿಂದ ಜನರು ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯ ದೊರೆಯದೇ ಸಂಕಷ್ಟದಲ್ಲಿದ್ದರೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಆಸ್ಪತ್ರೆಯಲ್ಲಿ ವೈದ್ಯರಿಂದಾದ ತಪ್ಪುಗಳನ್ನು ನೇರವಾಗಿ ಹೇಳಬಹುದಾಗಿದೆ!!

ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ಸರ್ಕಾರಿ ಅಧಿಕಾರಿಗಳಿಗೆ ನಾನಾ ರೀತಿಯ ಮಹತ್ತರವಾದ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಬಿಸಿ ಮುಟ್ಟಿಸಿದ್ದು, ಸರ್ಕಾರಿ ಕೆಲಸ ಬೇಕು ಎಂದವರು ಸೇನೆಯಲ್ಲಿ 5ವರ್ಷ ಕೆಲಸ ಮಾಡಲೇಬೇಕಾಗಿದೆ ಎನ್ನುವ ಕ್ರಾಂತಿಕಾರಿ ನಿರ್ಧಾರವನ್ನು ಜಾರಿಗೊಳಿಸುವ ಮೂಲಕ ಸರ್ಕಾರಿ ಉದ್ಯೋಗಿಗಳಿಗೆ ಬಿಸಿ ಮುಟ್ಟಿಸಿದ್ದರು!! ಆದರೆ ಸೂಕ್ತ ಸೌಲಭ್ಯ ನೀಡದೇ ಸತಾಯಿಸುವ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಿರುವ ನರೇಂದ್ರ ಮೋದಿ ಸರ್ಕಾರವು “ಮೈ ಆಸ್ಪತ್ತಾಲ್ ಆ್ಯಪ್” ನ್ನು ಜಾರಿಗೊಳಿಸುವ ಮೂಲಕ ವೈದ್ಯರ ಎದೆಯಲ್ಲಿ ನಗಾರಿ ಬಾರಿಸಿದಂತಾಗಿದೆ!!

ಮೂಲ: https://tulunadunews.com/tnn12171

– ಅಲೋಖಾ

Editor Postcard Kannada:
Related Post