X

ರಾಹುಲ್ ಗಾಂಧಿಗೆ ಕಾದಿದೆ ಮತ್ತೊಂದು ಶಾಕ್!! ಸೈನಿಕರ ಸಮವಸ್ತ್ರಕ್ಕೆ ಮೋದಿ ಸರ್ಕಾರದಲ್ಲಿ ಹಣ ಇಲ್ಲ ಎಂದು ಹೇಳಿದವರೇ ಸ್ವಲ್ಪ ಇಲ್ಲಿ ಕೇಳಿ!!

ಇತ್ತೀಚೆಗಷ್ಟೇ ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್ ಗಾಂಧಿಯವರು ಸೈನಿಕರ ಸಮವಸ್ತ್ರ ಖರೀದಿಗೂ ಸರಕಾರದ ಬಳಿ ದುಡ್ಡಿಲ್ಲ, ಸೈನಿಕರೇ ತನಗೆ ಬೇಕಾದಂತಹ ಸಮವಸ್ತ್ರ, ಶೂಗಳನ್ನು ಖರೀದಿಸುತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಿ ತಾನೊಬ್ಬ ಮಹಾನ್ ಸುಳ್ಳುಗಾರನೆಂದು ವಿಶ್ವಕ್ಕೆ ತೋರಿಸಿಕೊಟ್ಟಿದ್ದರು!! ಅಷ್ಟೇ ಅಲ್ಲದೇ, ಮೇಕ್ ಇನ್ ಇಂಡಿಯಾ ಎಂಬುವುದೆಲ್ಲಾ ಸುಳ್ಳು, ಮೋದಿ ಸರಕಾರ ಸೈನಿಕರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದಿದ್ದ ರಾಹುಲ್ ಗಾಂಧಿಯವರಿಗೆ ಇದೀಗ ಬಹು ದೊಡ್ಡ ಶಾಕಿಂಗ್ ಸುದ್ದಿಯೊಂದು ಕಾದಿದೆ.

ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನೇರಿದಂದಿನಿಂದಲೂ ಸೈನಿಕರಿಗೆ ವಿಶೇಷ ಸವಲತ್ತುಗಳನ್ನು ನೀಡುತ್ತಲೇ ಬರುತ್ತಿರುವ ಜತೆಗೆ ಸೈನಿಕ ಕುಟುಂಬಗಳಿಗೂ ನಾನಾ ಸವಲತ್ತುಗಳನ್ನು ನೀಡುತ್ತಲೇ ಬರುತ್ತಿದ್ದಾರೆ!! ಅಷ್ಟೇ ಅಲ್ಲದೇ, ಸೇನೆಗೆ ಆರ್ಥಿಕ ಸ್ವಾತಂತ್ರ್ಯ ನೀಡಿರುವ ಜತೆಗೆ ಶಸ್ತ್ರಾಸ್ತ್ರ ಖರೀದಿ, ಮೇಕ್ ಇನ್ ಇಂಡಿಯಾ ಅನ್ವಯ ಶಸ್ತ್ರಾಸ್ತ್ರ ಉತ್ಪಾದನೆಗೆ ಅನುಕೂಲ ಮಾಡಿಕೊಡುವ ಮೂಲಕ ಭಾರತೀಯ ಸೇನೆಯ ಶಕ್ತಿ ದ್ವಿಗುಣಗೊಳಿಸುತ್ತಲೇ ಬರುತ್ತಿದ್ದಾರೆ!! ಆದರೆ ಇದೀಗ ಅಮೆರಿಕ ಸೇನೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರುವ ವಿಧ್ವಂಸಕ ದಾಳಿ ಸಾಮರ್ಥ್ಯದ ಆಪಾಚೆ ಹೆಲಿಕಾಪ್ಟರ್ ಗಳು ಶೀಘ್ರವಾಗಿ ಭಾರತದ ಬತ್ತಳಿಕೆ ಸೇರಲಿರುವ ಮೂಲಕ ಸೇನೆಗೆ ಹೊಸ ಹುರುಪು ಬರಲಿದೆ.

ಹೌದು…. ಭಾರತದ ಸೇನಾ ಶಕ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಈಗಾಗಲೇ ಅದೆಷ್ಟೋ ರೀತಿಯ ಶಸ್ತ್ರಾಸ್ತ್ರಗಳನ್ನು ಖರೀದಿಸಿರುವ ನರೇಂದ್ರ ಮೋದಿ ಸರಕಾರವು ಕೊನೆಗೂ ಭಾರತೀಯ ಭೂಸೇನೆಗೂ ಜಗತ್ತಿನ ಅತಿ ಪ್ರಬಲ ಅಪಾಚೆ ದಾಳಿ ಹೆಲಿಕಾಪ್ಟರ್ ಖರೀದಿಸುವ ಪ್ರಸ್ತಾಪಕ್ಕೆ ಅಮೇರಿಕದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ!! ಇದರಿಂದಾಗಿ ಭಾರತದ ಸೇನೆಗೆ ಮತ್ತಷ್ಟು ಬಲ ಬರಲಿರುವುದಂತೂ ಅಕ್ಷರಶಃ ನಿಜ.

ಈಗಾಗಲೇ ಅಮೆರಿಕದ ಖ್ಯಾತ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಸಂಸ್ಥೆ ಈ ಅಪಾಚೆ ಹೆಲಿಕಾಪ್ಟರ್ ಗಳನ್ನು ತಯಾರಿಸುತ್ತಿದ್ದು, ಈ ಹಿಂದಿನ ಒಪ್ಪಂದದಂತೆ ಭಾರತಕ್ಕೆ 6 ಅಪಾಚೆ ಎಎಚ್64 ಇ ದಾಳಿ ಹೆಲಿಕಾಪ್ಟರ್ ಗಳನ್ನು ಮಾರಾಟ ಮಾಡಲು ಮುಂದಾಗಿತ್ತು. ಆದರೆ ಈ ಒಪ್ಪಂದಕ್ಕೆ ಅಮೆರಿಕ ಸರ್ಕಾರ ಈವರೆಗೂ ಅನುಮೋದನೆ ನೀಡಿರಲಿಲ್ಲ. ಇದೀಗ ಒಪ್ಪಂದದ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಂಡ ಕಾರಣ ಅಮೆರಿಕ ಸರ್ಕಾರ ಹೆಲಿಕಾಪ್ಚರ್ ಗಳನ್ನು ಭಾರತಕ್ಕೆ ಮಾರಾಟ ಮಾಡಲು ಒಪ್ಪಿಗೆ ನೀಡಿದೆ ಈ ಮೂಲಕ ಸೇನೆಯ ಶಕ್ತಿ ಬಲಪಡಿಸುವ ಜತೆಗೆ ಭಾರತ-ಅಮೆರಿಕ ತಾಂತ್ರಿಕ ಸಹಕಾರ ಒಪ್ಪಂದ ವೃದ್ಧಿಯ ಭಾಗವೂ ಆಗಿದೆ ಎಂದು ತಿಳಿದುಬಂದಿದೆ.

ಇನ್ನು, ಈ ಬಗ್ಗೆ ಅಮೆರಿಕ ರಕ್ಷಣಾ ಇಲಾಖೆಯ ಮೂಲಗಳು ಮಾಹಿತಿ ನೀಡಿದ್ದು, ಅಮೆರಿಕದ ಆಪ್ತ ರಾಷ್ಟ್ರಗಲ್ಲಿ ಒಂದಾಗಿರುವ ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್ ಗಳನ್ನು ನೀಡಲು ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ. ಭಾರತ-ಅಮೆರಿಕ ನಡುವಿನ ಸೇನಾ ಕಾರ್ಯತಂತ್ರ ಒಪ್ಪಂದದ ಅನ್ವಯ ಭಾರತಕ್ಕೆ ಅಪಾಚೆ ಯುದ್ಧ ಹೆಲಿಕಾಪ್ಟರ್ ಗಳು ಸೇರಿದಂತೆ ಹಲವು ಯುದ್ಧ ಸಾಮಗ್ರಿಗಳನ್ನು ಪೂರೈಕೆ ಮಾಡಲು ಅಮೆರಿಕ ಸಿದ್ಧವಿದೆ ಎಂದು ಹೇಳಿದೆ.

ಕಳೆದ ವರ್ಷ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಭಾರತ ಪ್ರವಾಸದ ವೇಳೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು. ಈ ವೇಳೆ  ಸಿ-17 ಗ್ಲೋಬ್ ಮಾಸ್ಟರ್ 3 ಕಾರ್ಯತಂತ್ರ ವಾಯುಶುದ್ಧೀಕರಣ ಸಾಧನಗಳು, ಎಂ-777 ಅತಿ ಲಘು ಹೊವಿಟ್ಜರ್ ಗಳು, ಸಿ130ಜೆ ಸೂಪರ್ ಹರ್ಕ್ಯುಲಿಸ್ ವಿಮಾನ ಗಳು, ಅಪಾಚೆ ದಾಳಿ ಮತ್ತು 15 ಚಿನೂಕ್ ಏರ್ ಲಿಫ್ಟ್ ಹೆಲಿಕಾಪ್ಟರ್ ಗಳು, ಪಿ-8ಐ ನೌಕಾಪಡೆ ಗಸ್ತು ಯುದ್ಧ ವಿಮಾನಗಳ ಖರೀದಿ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಇದೀಗ ಭಾರತಕ್ಕೆ ಆರು ಹೆಲಿಕಾಪ್ಟರ್ ನೀಡಲು ಅಮೆರಿಕ ಸ್ಟೇಟ್ ಡಿಪಾರ್ಟ್ ಮೆಂಟ್ ಒಪ್ಪಿಗೆ ನೀಡಿದೆ ಎಂದು ರಕ್ಷಣೆ ಭದ್ರತೆ ಸಹಕಾರ ಏಜೆನ್ಸಿ ಈ ಕುರಿತು ಪ್ರಕಟಣೆ ತಿಳಿಸಿದೆ.

ಈಗಾಗಲೇ ಭಾರತ ಸರಕಾರ ಸುಮಾರು 930 ದಶಲಕ್ಷ ಡಾಲರ್ ನೀಡಿ ಆರು ಹೆಲಿಕಾಪ್ಟರ್ ಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದು, ಶೀಘ್ರದಲ್ಲೇ ಇವು ಸೇನೆ ಸೇರಲಿವೆ. ಶತ್ರುಗಳ ದಾಳಿಗೆ ಪ್ರತಿದಾಳಿ, ರಕ್ಷಣೆ ಸೇರಿ ಹಲವು ಕಾರಣಗಳಿಗೆ ಹೆಲಿಕ್ಯಾಪ್ಟರ್ ಗಳು ಸಹಾಯಕವಾಗಲಿವೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸನ್ನು ಸಹಿಸಲಾಗದ ಬುದ್ದಿಜೀವಿಗಳಿಗೆ ಇದೆಲ್ಲ ಹೇಗೆ ಅರ್ಥವಾಗಬೇಕು ಹೇಳಿ!! ತಮ್ಮ ಅಧಿಕಾರದ ಅವಧಿಯಲ್ಲಿ ಪ್ರತಿದಾಳಿ ಮಾಡಲು ಅನುಮತಿಗಾಗಿ ಕಾಯುತ್ತಿದ್ದ ಸೈನಿಕರು ಇಂದು ಯಾವುದೇ ಅನುಮತಿಯನ್ನು ಪಡೆಯದೇ ಪ್ರತಿದಾಳಿ ಮಾಡುತ್ತಿದ್ದಾರೆ ಎಂದರೆ ಅದು ನರೇಂದ್ರ ಮೋದಿಯವರ ಸಾಮಾರ್ಥ್ಯ!!

ಮೂಲ:https://www.firstpost.com/india/indian-army-could-soon-get-six-ah-64e-apache-attack-helicopters-as-us-approves-sale-in-930-million-deal-4508009.html

https://www.ndtv.com/india-news/india-to-get-apache-attack-choppers-as-us-approves-sale-in-930-million-deal-1866556

– ಅಲೋಖಾ

Editor Postcard Kannada:
Related Post