X

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿಯವರಿಗೆ ಬಹಿರಂಗ ಪತ್ರ… ನಿಜವಾಗಿಯೂ ಮೋದಿ ಕರ್ನಾಟಕಕ್ಕೆ ಕಾಲಿಡಬಾರದು!!

ಮಾನ್ಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೆನಿಸಿಕೊಂಡಿರುವ ದೊರೆಸ್ವಾಮಿಯವರೇ… ನಾನೊಬ್ಬ ಭಾರತೀಯ ಪ್ರೇಮಿಯಾಗಿ ನಿಮಗೊಂದು ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ಸ್ವತಂತ್ರ್ಯ ಹೋರಾಟಗಾರರ ಬಗ್ಗೆ ಅತೀವವಾದ ಅಭಿಮಾನವನ್ನು ಹೊಂದಿಕೊಂಡಿರುವ ನಾನು ನಿಮ್ಮನ್ನು ಕೆಲವೊಂದು ವಿಚಾರದಲ್ಲಿ ಪ್ರಶ್ನಿಸುತ್ತಿದ್ದೇನೆ. ದಯವಿಟ್ಟು ಉತ್ತರಿಸಿ…

ಮಾನ್ಯ ದೊರೆಸ್ವಾಮಿಯವರೇ… ಅದು ನಾನು ಕಾಲೇಜು ಓದುತ್ತಿರುವ ಸಮಯವಾಗಿರಬಹುದು. ಅಂದು ಅದೆಲ್ಲೋ ನಾನು ನಿಮ್ಮ ಹೆಸರನ್ನು ಕೇಳಿದ್ದೆ. ರಾಷ್ಟ್ರಪಿತ ಎನಿಸಿಕೊಂಡಿರುವ ಮಹಾತ್ಮ ಗಾಂಧೀಜಿಯ ಜೊತೆಗೆ ಸ್ವಾತಂತ್ರ್ಯ ಹೋರಾಟವನ್ನು ಮಾಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎನ್ನುವ ಮಾತುಗಳು ಅದೆಲ್ಲಿಂದಲೋ ಮಾರ್ಧನಿಸಿತ್ತು. ಅವರು ಕರ್ನಾಟಕ ರಾಜ್ಯದವರು, ಈಗಲೂ ನಮ್ಮೊಂದಿಗೆ ಇದ್ದಾರೆ ಎನ್ನುವಾಗ ನನ್ನ ದೇಶಭಕ್ತಿಯೂ ನೂರ್ಮಡಿಯಾಯಿತು. ಗಾಂಧಿ ತಾತನೊಂದಿಗೆ ನಮ್ಮ ರಾಜ್ಯದ ವ್ಯಕ್ತಿಯೋರ್ವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಮಾತುಗಳೇ ಕಿವಿಗೆ ಇಂಪನ್ನು ತರುತ್ತಿತ್ತು.

ಆದರೆ ನನ್ನ ಆ ಎಲ್ಲಾ ಅಭಿಮಾನಗಳನ್ನು ನೀವು ಒಂದೇ ಒಂದು ಕಾರ್ಯಕ್ರಮದಲ್ಲಿ ಚೂರು ಚೂರು ಮಾಡಿ ಬಿಟ್ರಿ. ಅತಿಯಾಗಿಯೇ ಪ್ರೀತಿಸುತ್ತಿದ್ದ ನಾನು ಆ ಎಲ್ಲಾ ಅಭಿಮಾನಗಳನ್ನೂ ಒಂದು ಕೊಡ ನೀರನ್ನು ತಲೆಗೆ ಸುರಿಸಿಕೊಂಡು ಕಳೆದುಕೊಂಡುಬಿಟ್ಟೆ.

ಯಾವುದೇ ಕಾರಣಕ್ಕೂ ಪ್ರಧಾನಿ ನರೇಂದ್ರ ಮೋದಿಯನ್ನು ಕರ್ನಾಟಕಕ್ಕೆ ಬರಲು ಬಿಡಬಾರದು ಎಂದು ಕರೆ ಕೊಟ್ಟಿದ್ದೀರಿ… ನೀವು ಹೇಳಿದ್ದು ಅಕ್ಷರಷಃ ಸತ್ಯ. ನಿಜವಾಗಿಯೂ ಮೋದಿಯನ್ನು ಕರ್ನಾಟಕಕ್ಕೆ ಬರಲು ಬಿಡಬಾರದು. ನನ್ನಲ್ಲೂ ಈ ವಿಚಾರಕ್ಕೆ ಹಲವಾರು ಕಾರಣಗಳಿವೆ. ಹೇಳುತ್ತೇನೆ ನೋಡಿ…

* ಕಾಶ್ಮೀರದಲ್ಲಿ ದಿನ ನಿತ್ಯ ಕಲ್ಲುತೂರಾಟಗಳು ನಡೆಯುತ್ತಿದ್ದವು. ಪ್ರತ್ಯೇಕವಾದಿಗಳು, ಉಗ್ರರ ಉಪಟಳಗಳು ಎಗ್ಗಿಲ್ಲದೆ ನಡೆಯುತ್ತಿದ್ದವು. ಆದರೆ ಮೋದಿ ಬಂದ ಮೇಲೆ ಅದೆಲ್ಲ ನಿಂತು ಹೋಗಿದೆ. ಹೀಗಾಗಿ ಅಲ್ಲಿರುವ ಉಗ್ರರಿಗೆ ಕಲ್ಲು ತೂರಲು ಹಣ ಇಲಲ್ಲದಂತಾಗಿದೆ. ಈ ಕಾರಣಕ್ಕಾಗಿಯೇ ಮೋದಿಯನ್ನು ಕರ್ನಾಟಕಕ್ಕೆ ಬರಲು ಬಿಡಬಾರದು.

* ತೆರಿಗೆ ಕಳ್ಳರನ್ನು ಸದೆಬಡಿದು, ನೋಟ್ ಬ್ಯಾನ್ ಮೂಲಕ ಅವರು ಅಡಗಿಟ್ಟ ಹಣವನ್ನೆಲ್ಲಾ ಹೊರಬರುವಂತೆ ಮಾಡಿದ್ದರು ಮೋದಿ. ಈ ಮೂಲಕ ಅವರು ಅಕ್ರಮವಾಗಿ ಕೂಡಿಟ್ಟ ಹಣವನ್ನು ಉಪಯೋಗಿಸದಂತೆ ಮಾಡಿ ತೀರಾ ಬಡವರಿಗೆ ಭಾರೀ ಉಪಕಾರವನ್ನು ಮಾಡಿದ್ದರು. ಈ ಕಾರಣಕ್ಕಾಗಿಯೇ ಮೋದಿಯನ್ನು ಕರ್ನಾಟಕಕ್ಕೆ ಬರಲು ಬಿಡಬಾರದು.

* ಹಿಂದೆ ನಮ್ಮ ಭಾರತೀಯ ಸೈನಿಕರ ರುಂಡವನ್ನು ಕಡಿದು ಪಾಕಿಸ್ಥಾನಕ್ಕೆ ಕೊಂಡೊಯ್ದಿದ್ದರೂ ನಮ್ಮ ಸರ್ಕಾರ ಅಸಹಾಯಕ ಸ್ಥಿತಿಯನ್ನು ಅನುಸರಿಸಿತ್ತು. ಆದರೆ ಮೋದಿ ಬಂದ ಮೇಲೆ ಸರ್ಜಿಕಲ್ ಸ್ಟ್ರೈಕ್ ಸಹಿತ ಅನೇಕ ರೀತಿಯ ತಂತ್ರಗಾರಿಕೆಗಳನ್ನು ಉಪಯೋಗಿಸಿಕೊಂಡು ಅದೆಷ್ಟೋ ಪಾಕ್ ಸೈನಿಕರನ್ನು ಕೊಂದು ಬಿಸಾಕಿದ್ದರು. ಎಷ್ಟೊಂದು ಜೀವಗಳನ್ನು ಕೊಂದು ಹಾಕಿದ್ದರು ಮೋದಿಯವರು. ನರ ಹಂತಕರು. ಈ ಕಾರಣಕ್ಕಾಗಿಯೇ ಮೋದಿಯನ್ನು ಕರ್ನಾಟಕಕ್ಕೆ ಬರಲು ಬಿಡಬಾರದು.

* ತಾಕತ್ತಿದ್ದರೆ ಹೈದರ್‍ಬಾದ್‍ಗೆ ಬನ್ನಿ ಎಂದು ಮೋದಿಗೆ ಸವಾಲೆಸೆದಿದ್ದ ಓವೈಸಿಗೆ ತನ್ನ 56 ಇಂಚಿನ ಎದೆಯ ಘರ್ವವನ್ನು ತೋರಿಸಿದ್ದ ಮೋದೀಜಿ ಆತನ ಕ್ಷೇತ್ರಕ್ಕೇ ತೆರಳಿ ದಿಟ್ಟ ಸವಾಲೆಸೆದಿದ್ದರು. ಓರ್ವ ದೇಶದ್ರೋಹಿ ಮುಸಲ್ಮಾನ ನಾಯಕನಿಗೆ ಮೋದಿ ಹೀಗೆ ಮಾಡಬಾರದಿತ್ತು. ಈ ಕಾರಣಕ್ಕಾಗಿಯೇ ಮೋದಿಯನ್ನು ಕರ್ನಾಟಕಕ್ಕೆ ಬರಲು ಬಿಡಬಾರದು.

* ಭಾರತದ ಬದ್ದ ವೈರಿ ರಾಷ್ಟ್ರ ಪಾಕಿಸ್ಥಾನ. ಈ ರಾಷ್ಟ್ರದ ಉಗ್ರರು ಮೋದಿಯನ್ನು ಹತ್ಯೆ ಮಾಡಲೆಂದೇ ಹೊಂಚು ಹಾಕಿಕೊಂಡು ಇರುತ್ತಾರೆ. ಅಲ್ಲಿನ ಉಗ್ರರು ಮೋದಿಯನ್ನು ಪಾಕಿಸ್ಥಾನಕ್ಕೆ ಆಗಮಿಸಿದರೆ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಆದರೆ ವೀಸಾನೂ ಇಲ್ಲದೆ, ಭದ್ರತೆನೂ ಇಲ್ಲದೆ, ಕೇವಲ ಒಂದೇ ಒಂದು ಗಂಟೆಯಲ್ಲಿ ನಿರ್ಧರಿಸಿಕೊಂಡು ಪಾಕಿಸ್ಥಾನಕ್ಕೆ ಎಂಟ್ರಿ ಕೊಡುತ್ತಾರೆ ಪ್ರಧಾನಿ ಮೋದೀಜಿ. ಅಲ್ಲಿನ ಉಗ್ರರಿಗೆ ಮೋದಿ ಈ ರೀತಿ ಚಳ್ಳೆ ಹಣ್ಣು ತಿನ್ನಿಸಬಾರದಿತ್ತು. ಈ ಕಾರಣಕ್ಕಾಗಿಯೇ ಮೋದಿಯನ್ನು ಕರ್ನಾಟಕಕ್ಕೆ ಬರಲು ಬಿಡಬಾರದು.

* ಅಂದು ರೈತರು ಯೂರಿಯಾ ಗೊಬ್ಬರ ಇಲ್ಲದೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ. ಆದರೆ ತಮ್ಮ ಸರ್ಕಾರ ಬಂದ ನಂತರ ಈ ವರೆಗೂ ರೈತರು ಯೂರಿಯಾ ಗೊಬ್ಬರದ ಬಗ್ಗೆ ಪ್ರತಿಭಟನೆ ನಡೆಸಿಲ್ಲ. ಮಾತ್ರವಲ್ಲದೆ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದ್ದ ಯೂರಿಯಾ ಗೊಬ್ಬರವನ್ನು ನೇರವಾಗಿ ರೈತರಿಗೆ ಮುಟ್ಟಿಸಿ ಅಕ್ರಮವನ್ನು ತಡೆದಿದ್ದರು. ಈ ಮೂಲಕ ಅಕ್ರಮ ವಹಿವಾಟುದಾರರ ಹೊಟ್ಟೆಗೆ ಹೊಡೆದಿದ್ದರು. ಈ ಕಾರಣಕ್ಕಾಗಿಯೇ ಮೋದಿಯನ್ನು ಕರ್ನಾಟಕಕ್ಕೆ ಬರಲು ಬಿಡಬಾರದು.

* ಪ್ರಕೃತಿ ವಿಕೋಪದಿಂದ ರೈತರು ತಾವು ಬೆಳೆಸಿದ ಬೆಳೆಗಳನ್ನು ಕಳೆದುಕೊಂಡಿದ್ದರು. ಈ ಕಾರಣಕ್ಕೆ ಮೋದಿಯವರು ಫಸಲ್ ಭೀಮಾ ಎಂಬ ಯೋಜನೆಯನ್ನು ತಂದು ರೈತರಿಗೆ ವರದಾನವಾಗಿಸಿದರು. ಇದರಿಂದ ನಿಮ್ಮಂತವರಿಗೆ ಪ್ರತಿಭಟನೆ ಮಾಡಲು ವೇದಿಕೆ ಇಲ್ಲದಂತಾಗಿತ್ತು. ಈ ಕಾರಣಕ್ಕಾಗಿಯೇ ಮೋದಿಯನ್ನು ಕರ್ನಾಟಕಕ್ಕೆ ಬರಲು ಬಿಡಬಾರದು.

* ದೇಶದ ಜನರ ಆರೋಗ್ಯದ ಹಿತದೃಷ್ಟಿಯನ್ನು ತಳೆದು ಪ್ರಧಾನ ಮಂತ್ರಿ ಜನೌಷಧ ಕೇಂದ್ರವನ್ನು ಸ್ಥಾಪಿಸಿ ಬರೋಬ್ಬರಿ 90% ಬೆಲೆಗಳನ್ನು ಕಡಿಮೆಗೊಳಿಸಿದ್ದರು. ಉದಾಹರಣೆಗೆ 15000 ರೂಗಳಷ್ಟು ಇದ್ದಂತಹ ಕ್ಯಾನ್ಸರ್ ಔಷಧ ಈಗ ಕೇವಲ 1800 ರೂಗಳಿಗೆ ಸಿಗುತ್ತಿದೆ. ಇದರಿಂದ ದೇಶದಲ್ಲಿ ಭಾರೀ ಅವ್ಯವಹಾರ ನಡೆಸುತ್ತಿದ್ದ ಲೈಕಾ,ಲುಪಿನ್,ರಾನ್ ಬಾಕ್ಸೀಯಂತಹ ಮಾತ್ರೆಗಳ ಮಾಫಿಯಾಗಳನ್ನು ತಡೆಗಟ್ಟಿ ಬಡವರಿಗೆ ನ್ಯಾಯ ದೊರಕಿಸಿದ್ದರು. ಈ ಕಾರಣಕ್ಕಾಗಿಯೇ ಮೋದಿಯನ್ನು ಕರ್ನಾಟಕಕ್ಕೆ ಬರಲು ಬಿಡಬಾರದು.

* ಒಂದು ಕಾಲದಲ್ಲಿ ಭಾರತ ಎಂದರೆ ಹಾವಾಡಿಗರ ದೇಶ ಎನ್ನುತ್ತಿದ್ದ ವಿದೇಶಿಗರು ಈಗ ಭಾರತವೆಂದರೆ ಕೈ ಮುಗಿದು ನಮಸ್ಕರಿಸುತ್ತಾರೆ. ಇದಕ್ಕೆ ಮೋದಿ ಕಾರಣ. ಈ ಮೂಲಕ ನಿಮ್ಮಂತಹ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರತಿಭಟನೆ ಮಾಡಲು ವಿಷಯವೇ ಇಲ್ಲದಂತೆ ಮಾಡಿದ್ದರು. ಈ ಕಾರಣಕ್ಕಾಗಿಯೇ ಮೋದಿಯನ್ನು ಕರ್ನಾಟಕಕ್ಕೆ ಬರಲು ಬಿಡಬಾರದು.

* ಮುಸ್ಲಿಂ ರಾಷ್ಟ್ರದಲ್ಲಿ ತಾನು ಹಿಂದು ಎಂದು ಹೇಳುವಂತಹ ಸಂದರ್ಭದಲ್ಲಿ ಮೋದಿ ಆ ದೇಶಕ್ಕೆ ತೆರಳಿ ಬೃಹತ್ ಹಿಂದೂ ದೇವಾಲಯಕ್ಕೆ ಅನುಮತಿ ಕೇಳಿ, ಮುಸ್ಲಿಂ ರಾಷ್ಟ್ರವೇ ಹಿಂದೂ ದೇವರನ್ನು ಹೆಮ್ಮೆಯಿಂದ ಪೂಜೆ ಮಾಡುವ ಹಾಗೆ ಮಾಡಿದ್ದರು. ಇದು ಅವರ ಕೋಮುವಾದಿತನವನ್ನು ಬಿಂಬಿಸುತ್ತದೆ. ಈ ಕಾರಣಕ್ಕಾಗಿಯೇ ಮೋದಿಯನ್ನು ಕರ್ನಾಟಕಕ್ಕೆ ಬರಲು ಬಿಡಬಾರದು.

* ಕರ್ನಾಟಕ ರಾಜ್ಯಕ್ಕೆ ಈವರೆಗೂ ಯಾವ ಒಂದು ಸರ್ಕಾರವೂ ನೀಡದಷ್ಟು ಹಣ ಕಾಸಿನ ನೆರವನ್ನು ರಾಜ್ಯಕ್ಕೆ ನೀಡಿ ಭಾರೀ ಕೊಡುಗೆಯನ್ನು ನೀಡಿ ಸಹಕರಿಸಿದ್ದಾರೆ. ಇಲ್ಲಿನ ಪ್ರತಿಯೊಂದು ಬೇಡಿಕೆಗೂ ಅವರು ಸ್ಪಂಧಿಸಿದ್ದಾರೆ. ರಾಜ್ಯದಲ್ಲಿ ಹಲವಾರು ಐಐಟಿ ಹಾಗೂ ಸ್ಮಾರ್ಟ್ ಸಿಟಿಗಳಿಗೆ ಅವಕಾಶ ನೀಡಿದ್ದಾರೆ. ಈ ಕಾರಣಕ್ಕಾಗಿಯೇ ಮೋದಿಯನ್ನು ಕರ್ನಾಟಕಕ್ಕೆ ಬರಲು ಬಿಡಬಾರದು.

ಈ ಎಲ್ಲಾ ಕಾರಣಕ್ಕಾಗಿ ಮೋದಿ ಕರ್ನಾಟಕಕ್ಕೆ ಕಾಲಿಡಬಾರದು. ನಿಜವಾಗಿಯೂ ಕರ್ನಾಟಕಕ್ಕೆ ಯಾರು ಬರಬೇಕು ಗೊತ್ತಾ ದೊರೆಸ್ವಾಮಿಯವರೇ…

* ಭಾರತವನ್ನು ತುಂಡು ತುಂಡು ಮಾಡಿ ಕತ್ತರಿಸುತ್ತೇವೆ ಎಂದು ದೆಹಲಿಯಲ್ಲಿ ಕುಳಿತು ಬೊಬ್ಬೆ ಬಿಟ್ಟರಲ್ಲಾ ನಿಮ್ಮ ಸಂಬಂಧಿಕರಾದ, ದೇಶದ್ರೋಹಿಗಳಾದ ಕನ್ಹಯ್ಯಾ ಕುಮಾರ್ ಹಾಗೂ ಉಮ್ ಖಾಲಿದ್. ಅವರು ಈ ರಾಜ್ಯಕ್ಕೆ ಬಂದು ಪ್ರಚಾರವನ್ನು ನಡೆಸಲಿ.

* ಅಪ್ಪಟ ದೇಶಭಕ್ತನಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಯವರನ್ನು ಆಕ್ಟರ್ ಎಂದು ಹೇಳಿ, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ನಾಡದ್ರೋಹಿ ಹೇಳಿಕೆಗಳನ್ನು ನೀಡಿದ್ದ ಆ ನಿಮ್ಮ ಪ್ರಕಾಶ್ ರೈ ಇದ್ದಾನಲ್ಲ… ಅವನು ಈ ರಾಜ್ಯಕ್ಕೆ ಬಂದು ಪ್ರಚಾರವನ್ನು ನಡೆಸಲಿ.

* ಪಾಕಿಸ್ಥಾನದ ಎನ್‍ಜಿಒ ಒಂದಿಗೆ ಕೈಜೋಡಿಸಿ ದೇಶದ ಭದ್ರತೆಗೆ ಆತಂಕವನ್ನೇ ತಂದಿಟ್ಟಿದ್ದರಲ್ಲಾ ನಿಮ್ಮ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ತೀಸ್ತಾ ಸಟಲ್ವಾಡ್… ಅವರು ಈ ರಾಜ್ಯಕ್ಕೆ ಬಂದು ಪ್ರಚಾರವನ್ನು ನಡೆಸಲಿ.

* ತಾನೊಬ್ಬ ದಲಿತರ ನಾಯಕ ಎಂದು ಪೋಸು ನೀಡಿ, ಜನರನ್ನು ಮರುಳು ಮಾಡಿ ಶಾಸಕನಾಗಿ, ಎಸ್‍ಡಿಪಿಐ ಅವರು ದಲಿತರ ಮೇಲೆ ಹಲ್ಲೆ ಮಾಡಿದರೂ ಅವರನ್ನು ಪ್ರಶ್ನಿಸದೆ ಅವರೊಂದಿಗೆ ಕೈಜೋಡಿಸಿದ್ದರಲ್ಲಾ ಆ ನಿಮ್ಮ ಮಗನಂತಿರುವ ಜಿಗ್ನೇಶ್ ಮೇವಾನಿ…ಅವರು ಈ ರಾಜ್ಯಕ್ಕೆ ಬಂದು ಪ್ರಚಾರವನ್ನು ನಡೆಸಲಿ. ಮಾತ್ರವಲ್ಲದೆ ಈ ರಾಜ್ಯದ ದಲಿತರೂ ಎಸ್‍ಡಿಪಿಐ ಗೂಂಡಾಗಳಿಂದ ಒದೆ ತಿನ್ನಲಿ ಎನ್ನುವ ಉದ್ಧೇಶವನ್ನು ಇಟ್ಟುಕೊಂಡು ಆ ಜಿಗ್ನೇಶ್ ಮೇವಾನಿಯನ್ನು ಪ್ರತಿ ಜಿಲ್ಲೆಯಲ್ಲೂ ಪ್ರಚಾರ ಮಾಡುವಂತೆ ಮಾಡಬೇಕ

* ಒಟ್ಟಾರೆ ಮೋದಿಯನ್ನು ಸೋಲಿಸಬೇಕೆಂಬ ಉದ್ಧೇಶವನ್ನು ಇಟ್ಟುಕೊಂಡು ನಿಮ್ಮ ಪ್ರೀತಿಯ ಕಾಂಗ್ರೆಸ್ ನಾಯಕರು ಪಾಕಿಸ್ಥಾನ ನಾಯಕರೊಂದಿಗೆ ಕೈಜೋಡಿಸಿದ್ದಾರಲ್ಲಾ. ಅವರು ಈ ರಾಜ್ಯಕ್ಕೆ ಬಂದು ಪ್ರಚಾರ ನಡೆಸಲಿ.

ಮತ್ಯಾಕೆ ತಡ… ನೀವೂ ಕಾಂಗ್ರೆಸ್ ಜೊತೆ ಅಧಿಕೃತವಾಗಿ ಕೈಜೋಡಿಸಿ ಪ್ರಚಾರ ಮಾಡಿ. ಅದುವೇ ಸತ್ಯ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಬರಬೇಕು. ಯಾವುದೇ ಕಾರಣಕ್ಕೂ ಮೋದಿ ಕಾಲಿಡಬಾರದು. ಖಂಡಿತಾ ಮೋದಿಯನ್ನು ನೀವು ತೆಗಳಲೇ ಬೇಕು. ಯಾಕೆಂದರೆ ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಅತಿಯಾಗಿಯೇ ಪ್ರೀತಿಸುತ್ತಿದ್ದವರು. ಆದರೇನು ಮಾಡೋದು ನಿಮಗೆ ಆ ಯೋಗ್ಯತೆ ಇಲ್ಲದಾಯಿತು ಅಲ್ವಾ.

ಕೊನೆಯ ಒಂದು ಮಾತು… ಬಿಳಿಯ ಬೆಡ್ ಶೀಟ್ ಮೇಲೆ ಗಾಂಧಿಯೊಡನೆ ಕೂತರೆ ಸ್ವಾತಂತ್ರ್ಯ ಹೋರಾಟಗಾರನಾಗುವುದಿಲ್ಲ. ಬದಲಾಗಿ ದೇಶಕ್ಕಾಗಿ ರಕ್ತವನ್ನು ನೀಡಿದ್ದ ಕ್ರಾಂತಿಕಾರಿಗಳು ನಿಜವಾದ ಸ್ವಾತಂತ್ರ್ಯ ಹೋರಾಟಗಾರರು. ದೊರೆಸ್ವಾಮಿಯವರೇ ನೀವು 120 ವರ್ಷಗಳ ಕಾಲ ಬದುಕಬೇಕು ಅನ್ನುವುದೇ ನಮ್ಮ ಆಶಯವಾಗಿದೆ. ಧನ್ಯವಾದಗಳು.

-ಸುನಿಲ್ ಪಣಪಿಲ

Editor Postcard Kannada:
Related Post