X

ನ್ಯಾಟೋದಿಂದ ಪಾಕಿಸ್ತಾನ ಕಿಕ್ ಔಟ್: ಸಂಪೂರ್ಣ ಅವನತಿಯತ್ತ ಉಗ್ರ ರಾಷ್ಟ್ರ!

ಶಾಕ್ ಮೇಲೆ ಶಾಕ್.. ಪಾಕಿಸ್ತಾನ ಲಾಕ್..

ಪಾಕಿಸ್ತಾನ ಆರ್ಥಿಕ, ಆಹಾರದ ಸಮಸ್ಯೆ ಎದುರಿಸುತ್ತಿರುವ ಸಂಗತಿ ಜನಜನಿತ. ಒಂದು ಕಡೆಯಲ್ಲಿ ಭಯೋತ್ಪಾದನೆ, ಇನ್ನೊಂದು ಕಡೆಯಲ್ಲಿ ಭಿಕ್ಷೆ ಬೇಡುವ ಸ್ಥಿತಿ.. ಇಂತಹ ಸಂಕಷ್ಟದ ನಡುವೆ ಜಗತ್ತು ಸಹ ಒಂದಿಲ್ಲೊಂದು ರೀತಿಯಲ್ಲಿ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಶಾಕ್ ನೀಡುತ್ತಿರುವುದು ಆ ಉಗ್ರ ರಾಷ್ಟ್ರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ದುರಂತ ಸ್ಥಿತಿಗೆ ತಲುಪಿಸುವ ಪಾಕಿಸ್ತಾನವನ್ನು ನ್ಯಾಟೋ ಅಲ್ಲದ ಪ್ರಮುಖ ಮಿತ್ರಕೂಟದಿಂದ ಹೊರಹಾಕಲು ಅಮೆರಿಕದ ಕಾಂಗ್ರೆಸಿನಲ್ಲಿ ಮಸೂದೆ ಮಂಡಿಸಲಾಗಿದೆ. ಈ ವರೆಗೂ ನ್ಯಾಟೋ ಅಲ್ಲದ ಮಿತ್ರಕೂಟದಲ್ಲಿ ಅಮೆರಿಕ ಸ್ಥಾನ ಪಡೆದಿತ್ತು. ಈ ಕಾರಣದಿಂದ ಪಾಕ್‌ಗೆ ಅಮೆರಿಕದಿಂದ ಹೆಚ್ಚುವರಿ ರಕ್ಷಣಾ ಸರಬರಾಜು, ರಕ್ಷಣಾ ಸಾಮಗ್ರಿಗಳಿಗಾಗಿ ಹೆಚ್ಚಿನ ಸಾಲ ಸೌಲಭ್ಯ, ರಕ್ಷಣಾ ಸಾಮಗ್ರಿಗಳ ಅಭಿವೃದ್ಧಿಗೆ ಒತ್ತು, ಪರೀಕ್ಷೆ, ಹಣಕಾಸಿನ ಸಹಾಯ ಇತ್ಯಾದಿಗಳು ಲಭ್ಯವಾಗುತ್ತಿದ್ದವು. ನ್ಯಾಟೋ ಅಲ್ಲದ ಮಿತ್ರಕೂಟದ ಪದನಾಮ ಕಳೆದುಕೊಂಡರೆ ಪಾಕ್‌ಗೆ ಅಮೆರಿಕದಿಂದ ಸಿಗುತ್ತಿದ್ದ ಈ ಎಲ್ಲಾ ಸವಲತ್ತುಗಳಿಗೂ ಬ್ರೇಕ್ ಬೀಳಲಿದೆ. ಆ ಮೂಲಕ ಪಾಕ್‌ಗೆ ಮತ್ತೊಂದು ಶಾಕ್ ಎದುರಾಗಲಿದೆ.

ಈ ಮಿತ್ರಕೂಟದಿಂದ ಪಾಕಿಸ್ತಾನವನ್ನು ಹೊರ ಹಾಕುವ ಮಸೂದೆಯನ್ನು ಅಲ್ಲಿನ ಕಾಂಗ್ರೆಸ್ ಸದಸ್ಯ ಆ್ಯಂಡಿ ಬಿಗ್ಸ್ ಮಂಡನೆ ಮಾಡಿದ್ದಾರೆ. ಇದನ್ನು ರ
ಕಾನೂನಾಗಿ ಜಾರಿಗೆ ತರುವ ಮೊದಲು ಅಮೆರಿಕಾದ ಹೌಸ್ ಮತ್ತು ಸೆನೆಟ್ ಈ ಮಸೂದೆಯನ್ನು ಅಂಗೀಕರಿಸಬೇಕಾಗುತ್ತದೆ. ಅಗತ್ಯ ಕ್ರಮಗಳ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ವಿದೇಶಾಂಗ ವ್ಯವಹಾರಗಳ ಸಮಿತಿಗೆ ಕಳುಹಿಸಿ ಕೊಡಲಾಗಿದೆ.

ಹಾಗೆಯೇ ಇತ್ತೀಚೆಗಷ್ಟೇ ಕಪ್ಪು ಪಟ್ಟಿಗೆ ಸೇರಿರುವ ಪಾಕ್ ಮೂಲದ ಉಗ್ರ ಹಕ್ಕಾನಿ ಮತ್ತು ಆತನ ಭಯೋತ್ಪಾದಕ ಜಾಲದ ವಿರುದ್ಧ ಪಾಕಿಸ್ತಾನ ಯಾವ ರೀತಿಯ ಕ್ರಮ ಕೈಗೊಂಡಿದೆ?, ಆತನ ಅಡಗುದಾಣಗಳನ್ನು ಮಟ್ಟ ಹಾಕಲು ಪಾಕಿಸ್ತಾನ ಯಾವೆಲ್ಲಾ ರೀತಿಯ ಕ್ರಮ ಕೈಗೊಂಡಿದೆ?, ಈ ಬಗ್ಗೆ ಪಾಕಿಸ್ತಾನದ ಬದ್ಧತೆ ಏನು ಎಂಬುದನ್ನು ವಿವರಿಸುವಂತೆಯೂ ಈ ಮಸೂದೆ ಯುಎಸ್ ಅಧ್ಯಕ್ಷರನ್ನು ಕೇಳಿರುವುದಾಗಿ ಮೂಲಗಳು ವರದಿ ಮಾಡಿವೆ.

ಒಟ್ಟಿನಲ್ಲಿ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಒಂದರ ಮೇಲೆ ಒಂದರಂತೆ ಕಷ್ಟಗಳು ಎದುರಾಗುತ್ತದೆ. ಮಾಡಿದ್ದುಣ್ಣೋ ಮಹರಾಯ ಎಂಬ ಪರಿಸ್ಥಿತಿ ಪಾಕಿಸ್ತಾನಕ್ಕೆ ಬಂದೊದಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

Post Card Balaga:
Related Post