X

ಸ್ವತಃ ಪಾಕಿಸ್ತಾನ ಸರ್ಕಾರದಿಂದಲೇ ಕ್ರಾಂತಿಕಾರಿ ಭಗತ್ ಸಿಂಗ್ ಕುರಿತಾದ ದಾಖಲೆಗಳ ಬಹಿರಂಗ!! ಅಷ್ಟಕ್ಕೂ ಅದೆರಲ್ಲೇನಿದೆ ಗೊತ್ತೇ?!

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಕುಟುಂಬದಲ್ಲಿ ಹುಟ್ಟಿ ಬೆಳೆದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನೆಂದೆನಿಸಕೊಂಡ ಭಗತ್ ಸಿಂಗ್ ಬ್ರಿಟಿಷರ ದುರಾಡಳಿತ ಕೊನೆಗಾಣಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಿಂಸಾ ಮಾರ್ಗವೇ ದಾರಿ ಎಂದು ತೀವ್ರವಾದಿಯಾಗಿ ಚಿಕ್ಕವರಾಗಿದ್ದಾಗಲೇ ಬ್ರಿಟಿಷರ ನಿದ್ದೆ ಗೆಡಿಸಿದಂತಹ ವೀರ ಈತ!! ತನ್ನ ಸಣ್ಣ ವಯಸ್ಸಿನಲ್ಲಿಯೇ ಬ್ರಿಟಿಷರಿಗೆ ನಡುಕ ಹುಟ್ಟಿಸಿದಂತಹ ಈ ಸ್ವಾತಂತ್ರ್ಯ ಹೋರಾಟಗಾರನ ವಿರುದ್ಧ ಲಾಹೋರ್ ನಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ದಾಖಲೆಗಳು ಇದೀಗ ಬಹಿರಂಗಗೊಂಡಿದೆ ಎಂದರೆ ನಂಬ್ತೀರಾ??

ಹೌದು…. ಭಗತ್ ಸಿಂಗ್ ಮತ್ತವರ ಸಹಚರರಾದ ಸುಖದೇವ್ ಮತ್ತು ರಾಜ್ ಗುರು ಕೆಲವೇ ವರ್ಷಗಳಲ್ಲಿ ಕೆಲವೇ ದಾಳಿಗಳ ಮೂಲಕ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸುವಂತೆ ಮಾಡಿದ ಇವರು ನೇಣಿಗೆ ಏರುವಾಗಲೂ ನಗುನಗುತ್ತಲೇ ಭಾರತಾಂಬೆಗೆ ಜಯಕಾರ ಹಾಕುತ್ತ, ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನ ಭಗತ್ ಸಿಂಗ್ ಗಳು ಜನ್ಮ ತಾಳಲಿದ್ದಾರೆ ಎಂದು ನೇಣು ಕುಣಿಕೆಗೆ ತಲೆಕೊಟ್ಟಂತಹ ವೀರ ಪುರಷರಿವರು!! ತಾವು ಹುತಾತ್ಮರಾಗಿ ದೇಶದ ಯುವಕರಲ್ಲಿ ಕಿಚ್ಚು ಸ್ವಾಭಿಮಾನದ ಕಿಡಿ ಎಬ್ಬಿಸಿ, ಅದರ ಕೆನ್ನಾಲಿಗೆ ಬ್ರಿಟಿಷರಿಗೆ ಬಿಸಿ ಮುಟ್ಟಿಸುವ ಹಾಗೆ ಮಾಡಿದ ವೀರನ ಬಗ್ಗೆ ತಿಳಿಯದೇ ಇರದಂತಹ ಅದೆಷ್ಟೋ ಕಡತಗಳು ಇದೀಗ ಬಹಿರಂಗಗೊಂಡಿದ್ದು ಒಂದು ಕಡೆಯಾದರೆ, ಇದನ್ನು ಸ್ವತಃ ಪಾಕಿಸ್ತಾನ ಸರ್ಕಾರವೇ ಬಹಿರಂಗಗೊಳಿಸಿದೆ ಎಂದರೆ ಅದು ನಿಜಕ್ಕೂ ಕೂಡ ಅಚ್ಚರಿಯ ವಿಚಾರವೇ ಸರಿ!!

ಸುಮಾರು 6 ಲಕ್ಷ ವೀರ ದೇಶಪ್ರೇಮಿಗಳ ಬಲಿದಾನದ ಮೇಲೆ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. 1857ರ ಪ್ರಥಮ ಸ್ವಾತಂತ್ರ್ಯ ಮಹಾಸಂಗ್ರಾಮ, ಕೂಕಾ ಆಂದೋಲನ, ಖುದಿರಾಮನ ಸಾಹಸ, ಭಗತ್ ಸಿಂಗರ ಬಲಿದಾನ, ಸುಭಾಷರ ಸೇನೆ ಹೀಗೆ ಅನೇಕರ ಪ್ರಯತ್ನ ಬಲಿದಾನಗಳಿಂದ ನಮ್ಮ ಸ್ವಾತಂತ್ರ್ಯ ಅಲಂಕೃತಗೊಂಡಿದೆ. ಆದರೆ ಇದೀಗ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಮತ್ತವರ ಸಹಚರರಾದ ಸುಖದೇವ್ ಮತ್ತು ರಾಜ್ ಗುರು ವಿರುದ್ಧ ಲಾಹೋರ್ ನಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ದಾಖಲೆಗಳನ್ನು ಪಾಕಿಸ್ತಾನ ಸರ್ಕಾರ ಬಹಿರಂಗ ಪಡಿಸಿದ್ದು ನಮಗೆ ತಿಳಿಯದೇ ಇರದಂತಹ ಸಾಕಷ್ಟು ವಿಚಾರಗಳು ಇದೀಗ ಅನಾವರಣಗೊಂಡಿದೆ!!

ಅಷ್ಟಕ್ಕೂ ಭಗತ್ ಸಿಂಗ್ ಬಗ್ಗೆ ಬಹಿರಂಗಗೊಂಡ ಕಡತದಲ್ಲೇನಿತ್ತು ಗೊತ್ತೇ??

ಕೆಲದಿನಗಳ ಹಿಂದೆ ಭಗತ್ ಸಿಂಗ್ ಮತ್ತು ಅವರ ಸಹಚರರ ವಿಚಾರಣೆ ಕುರಿತ ಕೆಲವು ಕಡತಗಳನ್ನು ಪಾಕ್ ನ ಪಂಜಾಬ್ ಸರ್ಕಾರದ ಚಾರಿತ್ರಿಕ ಪತ್ರಗಳ ಸಂಗ್ರಹಾಲಯ ಸಾರ್ವಜನಿಕ ಪ್ರದರ್ಶನಕ್ಕೆ ಇಟ್ಟಿತ್ತು. ಲಾಹೋರ್ ನ ಅನಾರ್ಕಲಿ ಸ್ಮಾರಕ ಭವನದಲ್ಲಿ ಏರ್ಪಾಡಾಗಿದ್ದ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಇನ್ನೂ ಹಲವು ದಾಖಲೆಗಳು ಸೇರಿ ಒಟ್ಟು 50 ದಾಖಲೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಈ ಪ್ರದರ್ಶನದಲ್ಲಿ ಕೋರ್ಟ್ ಕಲಾಪ, ತಂದೆಯೊಂದಿಗೆ ಮಾತನಾಡಲು ಭಗತ್ ಕೋರ್ಟ್ ಗೆ ಸಲ್ಲಿಸಿದ್ದ ಮನವಿ, ಮರಣದಂಡನೆ ವಿಧಿಸುವ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಭಗತ್ ಸಿಂಗ್ ತಂದೆ ಸಲ್ಲಿಸಿದ್ದ ಅರ್ಜಿ, ಮೂವರಿಗೂ ಮರಣದಂಡನೆ ವಿಧಿಸಿದ್ದ ಆದೇಶ ಸೇರಿ ಎಲ್ಲ ಕಡತಗಳನ್ನು ಲಾಹೋರ್ ನಲ್ಲಿ ಸಾರ್ವಜನಿಕವಾಗಿ ಪ್ರದರ್ಶನಕ್ಕೆ ಇಡಲಾಗಿರುವ ಮೂಲಕ ಭಗತ್ ಸಿಂಗ್ ಅವರ ಬಗೆಗಿನ ಮತ್ತಷ್ಟು ವಿಚಾರಗಳು ಬಹಿರಂಗಗೊಳ್ಳುವಂತಾಗಿರುವುದೇ ಹೆಮ್ಮೆಯ ವಿಚಾರ!!

ಅಷ್ಟೇ ಅಲ್ಲದೇ ಭಗತ್ ಮತ್ತು ಸಂಗಡಿಗರಿಗೆ ಮರಣದಂಡನೆ ಶಿಕ್ಷೆ ವಿಧಿಸಿ, ಗೌಪ್ಯವಾಗಿ ಅಂತ್ಯಸಂಸ್ಕಾರ ನೆರವೇರಿಸಿ, ಅಸ್ಥಿಗಳನ್ನು ಸಟ್ಲೆಜ್ ನದಿಯಲ್ಲಿ ವಿಸರ್ಜನೆ ಮಾಡಿದ 2 ದಿನಗಳ ಬಳಿಕ ಮೌಲಾನಾ ಜಫರ್ ಅಲಿಖಾನ್ ತಮ್ಮ ಪತ್ರಿಕೆ ಜಮೀನ್ದಾರ್ ನಲ್ಲಿ ಪ್ರಕಟಿಸಿದ್ದ ವರದಿಯ ಪ್ರತಿಯನ್ನೂ ಪ್ರದರ್ಶನದಲ್ಲಿಡಲಾಗಿದೆ. ಅಲ್ಲದೆ, ಒಂದು ದಿನಕ್ಕೆ ಸೀಮಿತಗೊಳಿಸಲು ಉದ್ದೇಶಿಸಲಾಗಿದ್ದ ಪ್ರದರ್ಶನವನ್ನು ಭಾನುವಾರದವರೆಗೆ (ಏ.1) ವಿಸ್ತರಿಸಲು ನಿರ್ಧರಿಸಿರುವುದಾಗಿ ಪಂಜಾಬ್ ನ ಚಾರಿತ್ರಿಕ ಪತ್ರಗಳ ಸಂಗ್ರಹಾಲಯ ತಿಳಿಸಿರುವುದೇ ಹೆಮ್ಮೆಯ ವಿಚಾರವಾಗಿದೆ!!

ಈಗಾಗಲೇ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವಂತೆ, “ಲಾಹೋರ್ ನಲ್ಲಿ ನಡೆದ ಘಟನೆಯಿಂದಾಗಿ ಗಲ್ಲು ಶಿಕ್ಷೆಯನ್ನು ಪೂರ್ಣಗೊಳಿಸಿದ ಬ್ರಿಟೀಷರಿಗೆ ಹೊಸದೊಂದು ಹೆದರಿಕೆ ಶುರುವಾಗಿತ್ತು. ಯಾಕೆಂದರೆ ಭಗತ್ ಸಿಂಗ್, ರಾಜಗುರು, ಸುಖದೇವರು ಈಗಾಗಲೇ ದೇಶಾದ್ಯಂತ ಹೀರೋಗಳಾಗಿದ್ದರು. ಮೂವರು ಯುವಕರು ಸಾವಿನ ಕೊನೇ ಕ್ಷಣದಲ್ಲೂ ನಿರ್ಭಿತಿಯಿಂದ ನಗುನಗುತ್ತಾ ಪ್ರಾಣ ಅರ್ಪಿಸಿದರೆಂಬ ವಾರ್ತೆಯನ್ನು ಕೇಳಿದ ಯುವಕ ಯುವತಿಯರು ರೋಮಾಂಚನಗೊಂಡು ಬ್ರಿಟೀಷರ ವಿರುದ್ದ ಹೋರಾಡಲು ಪಣತೊಡುತ್ತಿದ್ದರು. ಹುತಾತ್ಮರ ಪಾರ್ಥೀವ ಶರೀರಗಳೇನಾದರೂ ಹೊರಗಿರುವ ಜನರಿಗೆ ಸಿಕ್ಕಿಬಿಟ್ಟರೆ ಅದರ ಸ್ಫೂರ್ತಿಯಿಂದಲೇ ಬ್ರಿಟೀಷರ ಸರ್ವನಾಶವಾದೀತೆಂದು ಹೆದರಿದ ಬ್ರಿಟೀಷ್ ಸರ್ಕಾರ, ಅವರ ಶವವನ್ನು ಯಾರಿಗೂ ತಿಳಿಯದಂತೆ ಗುಟ್ಟಾಗಿ ಸುಟ್ಟುಹಾಕಿಬಿಡಲು ಆದೇಶಿಸಿತು.

ಹಾಗಾಗಿ ಜೈಲು ಅಧಿಕಾರಿಗಳು ಮೂವರ ಶವಗಳನ್ನು ತುಂಡು ತುಂಡುಗಳಾಗಿ ಕತ್ತರಿಸಿ ಚೀಲದಲ್ಲಿ ತುಂಬಿದರಲ್ಲದೇ ಹಿಂದಿನ ಬಾಗಿಲ ಮೂಲಕ ಜೈಲಿನಿಂದ ಹೊರಕ್ಕೆ ಸಾಗಿಸಿದರು. ಟ್ರಕ್‍ವೊಂದಕ್ಕೆ ಆ ಚೀಲಗಳನ್ನು ತುಂಬಿಕೊಂಡು ಸಟ್ಲೇಜ್ ನದಿ ತೀರಕ್ಕೆ ಸಾಗಿಸಿದರು. ಅಲ್ಲಿ ಶವಗಳನ್ನು ಕೆಳಗಿಳಿಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು. ದೂರದಿಂದಲೇ ಬೆಂಕಿಯನ್ನು ನೋಡಿದ ಜನಕ್ಕೆ ವಿಷಯ ಅರ್ಥವಾಗಿಹೋಯಿತು. ಕೂಡಲೇ ಜನ ಸಾಗರೋಪಾದಿಯಲ್ಲಿ ಅಲ್ಲಿಗೆ ಧಾವಿಸತೊಡಗಿದರು. ಪಂಜು ಹಿಡಿದು ಪ್ರವಾಹದಂತೆ ಬರುತ್ತಿದ್ದ ಜನರನ್ನು ಕಂಡು ಅಧೀರರಾದ ಅಧಿಕಾರಿಗಳು ಅರ್ಧ ಬೆಂದ ಶವಗಳನ್ನು ಸಟ್ಲೇಜ್ ನದಿಯಲ್ಲಿ ಎಸೆದು ಪ್ರಾಣ ಉಳಿಸಿಕೊಳ್ಳಲು ಕತ್ತಲಲ್ಲಿ ಪರಾರಿಯಾದರು. ಇದನ್ನು ನೋಡಿದ ಜನರು ನದಿಗಿಳಿದು ಶವಗಳನ್ನು ಹುಡುಕಿ ತಂದರು. ಅಪಾರ ಗೌರವದಿಂದ ಪೂಜ್ಯಭಾವದಿಂದ ವಿಧಿವತ್ತಾಗಿ ಶವ ಸಂಸ್ಕಾರ ಮಾಡಿದರು” ಎಂದು!!

ಅಷ್ಟೇ ಅಲ್ಲದೇ, ಭಗತ್‍ಸಿಂಗ್ ಸಾಯುವ ಮುನ್ನ ಹೀಗೆ ಹೇಳಿದ್ದ. “ನನ್ನೊಬ್ಬನನ್ನು ಗಲ್ಲಿಗೆ ಹಾಕಿ ಈ ಬ್ರಿಟೀಷ್ ಸರ್ಕಾರ ಸಾದಿಸುವುದೇನೂ ಇಲ್ಲ. ಬದಲಾಗಿ ನನ್ನ ಬಲಿದಾನದಿಂದ ಈ ದೇಶದಲ್ಲಿ ಕ್ರಾಂತಿಕಾರ್ಯ ಬಹುಬೇಗ ವ್ಯಾಪಿಸಿಕೊಳ್ಳುತ್ತದೆ. ಹಿಂದೂಸ್ಥಾನದ ತಾಯಂದಿರು ತಮ್ಮ ಒಡಲಲ್ಲಿ ಭಗತ್‍ಸಿಂಗ್ ನಂತಹಾ ಮಕ್ಕಳು ಜನಿಸಲಿ ಎಂದು ಬಯಸುತ್ತಾರೆ. ನಾನು ಸತ್ತ ಮೇಲೆ ನನ್ನ ದೇಹದಿಂದಲೂ ಭೂಮಾತೆಯ ಸುವಾಸನೆ ಹೊರಹೊಮ್ಮುತ್ತದೆ. ಸಾವಿರಾರು ಜನ ಭಗತ್‍ಸಿಂಗ್‍ರು ಆ ಸುಗಂಧದಿಂದ ಉದ್ಭವಿಸುತ್ತಾರೆ. ಬ್ರಿಟೀಷ್ ಸಿಂಹಾಸನವನ್ನು ಕಿತ್ತೊಗೆದು ಈ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುತ್ತಾರೆ” ಎಂದು!! ಆದರೆ ಇದುವೇ ಮಾತು ಮುಂದೆ ನಿಜವಾಯಿತು. ಭಗತ್‍ಸಿಂಗ್‍ನ ಆತ್ಮಾರ್ಪಣೆಯಿಂದ ಸ್ಫೂರ್ತಿಗೊಂಡ ಅನೇಕ ಯುವಕ ಯುವತಿಯರು ಸಾಗರೋಪಾದಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಅಸೀಮ ಪರಿಶ್ರಮದ ಫಲವಾಗಿ 1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತು.

ಈ ಕುರಿತಾದ ದಾಖಲೆಗಳೆಲ್ಲವೂ ಇದೀಗ ಪಾಕಿಸ್ತಾನ ಸರ್ಕಾರ ಬಹಿರಂಗ ಪಡಿಸಿದ್ದು, ಕೋರ್ಟ್ ಕಲಾಪ, ತಂದೆಯೊಂದಿಗೆ ಮಾತನಾಡಲು ಭಗತ್ ಕೋರ್ಟ್ ಗೆ ಸಲ್ಲಿಸಿದ್ದ ಮನವಿ, ಮರಣದಂಡನೆ ವಿಧಿಸುವ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಭಗತ್ ಸಿಂಗ್ ತಂದೆ ಸಲ್ಲಿಸಿದ್ದ ಅರ್ಜಿ, ಮೂವರಿಗೂ ಮರಣದಂಡನೆ ವಿಧಿಸಿದ್ದ ಆದೇಶ ಸೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ದಾಖಲೆಗಳು ಸೇರಿ ಒಟ್ಟು 50 ದಾಖಲೆಗಳನ್ನು ಪ್ರದರ್ಶನಕ್ಕೆ ಇಡಲಾಗಿರುವ ಮೂಲಕ ಕೆಲ ಸತ್ಯ ಸಂಗತಿಗಳು ಈ ಮೂಲಕ ಬಹಿರಂಗಗೊಂಡಂತಾಗಿದೆ!!

ಮೂಲ:http://vijayavani.net/pakistan-displays-all-records-of-bhagat-singhs-case-file/

– ಅಲೋಖಾ

Editor Postcard Kannada:
Related Post