X

ಕಾಶಿ ತಮಿಳು ಸಂಗಮ ಉದ್ಘಾಟಿಸಿ‌ದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಮುಂದಿನ ಒಂದು ತಿಂಗಳ ಕಾಲ ನಡೆಯಲಿರುವ ‘ಕಾಶಿ ತಮಿಳು ಸಂಗಮವನ್ನು’ ಇಂದು ಉದ್ಘಾಟನೆ ಮಾಡಿದ್ದಾರೆ. ಈ ಕಾರ್ಯಕ್ರಮ‌ಕ್ಕೆ ಕಾಶಿ ಮಹಾಸಂಗಮಕ್ಕೆ ಸಾಂಪ್ರದಾಯಿಕ ಶೈಲಿಯಲ್ಲಿ ಆಗಮಿಸಿದ್ದಾರೆ.

ಶತಮಾನಗಳ ಹಳೆಯ ಜ್ಞಾನ‌ದ ಬಂಧ ಮತ್ತು ಉತ್ತರ ಮತ್ತು ದಕ್ಷಿಣ ಭಾರತದ ಪ್ರಾಚೀನ ನಾಗರೀಕತೆಯ ಸಂಬಂಧವನ್ನು ಮರುಶೋಧನೆ ನಡೆಸುವ ಕಾರ್ಯವನ್ನು ಈ ಕಾರ್ಯಕ್ರಮ‌ವು ಮಾಡಲಿದೆ.

ಈ ಕಾರ್ಯಕ್ರಮ‌ವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಕೇಂದ್ರ ಸರ್ಕಾರ‌ದ ಜೊತೆಗೂಡಿ ನಡೆಸುತ್ತಿದೆ. ಈ ಕಾರ್ಯಕ್ರಮ‌ದಲ್ಲಿ ದ್ರಾವಿಡ ಸಂಸ್ಕೃತಿ‌ಯ ಪರಿಚಯ, ತಮಿಳರ ಪಾಕ ಪದ್ಧತಿ, ತಮಿಳುನಾಡು ಸಂಸ್ಕೃತಿ ಮತ್ತು ಸಂಗೀತವನ್ನು ಪರಿಚಯ ಮಾಡಿಕೊಡಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಕಾಶಿ – ತಮಿಳಃ ಸಂಗಮಂ ವಾರಣಾಸಿ‌ಯಲ್ಲಿ ನಡೆಯುತ್ತಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಮೃದ್ಧ ಸಾಂಸ್ಕೃತಿಕ ಪರಿಚಯವನ್ನು ಮಾಡಿಕೊಡುವುದು ಉದ್ದೇಶವಾಗಿದೆ. ಜೊತೆಗೆ ಪ್ರಾಚೀನ ಸಂಸ್ಕೃತಿ‌ಯ ಏಕತೆಯನ್ನು ಪರಿಚಯ ಮಾಡಿಕೊಡಲಾಗುವುದು ಎಂಬುದಾಗಿಯೂ ಅವರು ತಿಳಿಸಿದ್ದಾರೆ.

ತಮಿಳುನಾಡು ಸಂಸ್ಕೃತಿ‌ಯನ್ನು ಜನರಿಗೆ ಪರಿಚಯ ಮಾಡಿಕೊಡುವ ಅಂಗಡಿಗಳು, ಕರಕುಶಲ ವಸ್ತುಗಳ ಪ್ರದರ್ಶನ, ಸ್ವಾತಂತ್ರ್ಯ ಹೋರಾಟ ಬಿಂಬಿಸುವ ವಸ್ತಗಳ ಪ್ರದರ್ಶನ‌ವನ್ನು ಸಹ ನಾವು ಈ ಕಾರ್ಯಕ್ರಮ‌ದಲ್ಲಿ ಕಾಣಬಹುದು.

Post Card Balaga:
Related Post