X

ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷರಿಂದ ವಿಶ್ವ ದಾಖಲೆ..! ಇನ್ನು ೨೪ ಗಂಟೆಯೂ ಭಾರತ ಬೆಳಗುತ್ತಿರುತ್ತೆ..!

ಮೋದಿ ಸರಕಾರವನ್ನು ಎಲ್ಲಾ ವಿಚಾರಗಳಿಗೂ ಪ್ರಶ್ನಿಸುವ ಮತ್ತು ಧೂಷಿಸುವ ವಿರೋಧಿಗಳು ನರೇಂದ್ರ ಮೋದಿಯವರ ದೇಶದ ಅಭಿವೃದ್ಧಿಗೆ ಬೇಕಾದ ಕಾರ್ಯಗಳನ್ನು ಮಾತ್ರ ಗಮನಿಸುತ್ತಿಲ್ಲ. ದಿನದಿಂದ ದಿನಕ್ಕೆ ವಿಕಾಸದ ಹಾದಿಯಲ್ಲಿ ಭಾರತವನ್ನು ಕೊಂಡೊಯ್ಯುತ್ತಿರುವ ಮೋದಿಗೆ ಇಡೀ ವಿಶ್ವವೇ ಇಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಇದೀಗ ಭಾರತ ಪ್ರವಾಸದಲ್ಲಿರುವ ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುವೆಲ್ ಮ್ಯಾಕ್ರೋನ್ ಮತ್ತು ಪ್ರಧಾನಿ ಮೋದಿ ದೇಶದಲ್ಲಿ ಮತ್ತೊಂದು ಹೊಸ ಕ್ರಾಂತಿಗೆ ಸಾಕ್ಷಿಯಾಗಿದ್ದಾರೆ.

ವಿಶ್ವದ ಅತಿದೊಡ್ಡ ಅಣುಶಕ್ತಿ ಸ್ಥಾವರ..!

ಭಾರತದ ಅಭಿವೃದ್ಧಿಗೆ ಬೇಕಾದ ಒಂದೊಂದೇ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಮೋದಿ ಸರಕಾರ ಇದೀಗ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಹ ಒಂದು ಹೊಸ ಯೋಜನೆಯನ್ನು ರೂಪಿಸಿದ್ದಾರೆ. ಮಿರ್ಜಾಪುರದಲ್ಲಿ ಸ್ಥಾಪನೆಯಾದ ಈ ಸ್ಥಾವರವು , ಇಡೀ ವಿಶ್ವದಲ್ಲೇ ಅತೀದೊಡ್ಡ ಅಣುಶಕ್ತಿ ಸ್ಥಾವರವಾಗಿದೆ. ಸುಮಾರು ೧೦೦ ಮೆಗಾವ್ಯಾಟ್ ಸೌರಶಕ್ತಿ ಘಟಕವಾಗಿದ್ದು ಪ್ರಧಾನಿ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಉದ್ಘಾಟಿಸಿದ್ದರು. ಈ ಘಟಕದಿಂದ ಸುಮಾರು ೭೫ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ಜನರ ಉಪಯೋಗಕ್ಕೆ ಬಳಸಲಾಗುತ್ತದೆ. ಈ ಸೌರಶಕ್ತಿ ಘಟಕವನ್ನು ೬೫೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ದಾದರ್ ಕಲಾದಲ್ಲಿನ ೩೮೦ ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

ಭಾರತದ ಜೊತೆ ಕೈಜೋಡಿಸಿದ ಫ್ರಾನ್ಸ್..!

ಈಗಾಗಲೇ ಜಗತ್ತಿನ ಎಲ್ಲಾ ರಾಷ್ಟ್ರಗಳು ನರೇಂದ್ರ ಮೋದಿಯವರ ಆಡಳಿತ ವೈಖರಿಗೆ ಮನಸೋತು ಭಾರತದ ಸ್ನೇಹ ಸಂಬಂಧ ಬೆಳೆಸಿವೆ ಮತ್ತು ಬೆಳೆಸುತ್ತಲೇ ಇದೆ‌. ಇದೇ ರೀತಿ ಮೋದಿಯವರ ಈ ಯೋಜನೆಗೆ ಫ್ರಾನ್ಸ್ ಕೈಜೋಡಿಸಿ ,ಭಾರತದಲ್ಲಿ ನಿರ್ಮಾಣವಾಗುವ ಈ ಬೃಹತ್ ಯೋಜನೆಗೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಭಾರತ ಪ್ರವಾಸದಲ್ಲಿರುವ ಫ್ರೆಂಚ್ ಅಧ್ಯಕ್ಷ ಹೇಳಿಕೊಂಡಿದ್ದಾರೆ. ಈ ಮೂಲಕ ಭಾರತದ ಈ ಯೋಜನೆಗೆ ಮತ್ತಷ್ಟು ಬಲ ಬಂದಿದ್ದು ಉಭಯ ರಾಷ್ಟ್ರಗಳ ಸಮ್ಮುಖದಲ್ಲೇ ಈ ಸ್ಥಾವರ ಲೋಕಾರ್ಪಣೆಗೊಳ್ಳಲಿದೆ.

ರಾಷ್ಟ್ರ ದಿಗ್ಗಜರ ದೋಣಿ ವಿಹಾರ..!

ಭಾರತಕ್ಕೆ ಬರುವ ಎಲ್ಲಾ ವಿದೇಶಿ ನಾಯಕರಿಗೂ ಪ್ರತಿ ಬಾರಿಯೂ ಭಾರತೀಯ ವಿಶೇಷತೆಗಳನ್ನು ಪರಿಚಯಿಸುವ ಮೋದಿ, ನಾಲ್ಕು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ಫ್ರೆಂಚ್ ಅಧ್ಯಕ್ಷ ಮ್ಯಾಕ್ರೋನ್ ದಂಪತಿಗಳನ್ನು ವಾರಣಾಸಿಯಲ್ಲಿ ಬರಮಾಡಿಕೊಂಡು , ಅಸ್ಸಿ ಘಾಟ್ ನಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಿದರು. ಇದಾದ ಬಳಿಕ ಗಂಗಾ ನದಿಯಲ್ಲಿ ‘ಬಜ್ರಾ’ ಎಂಬ ದೋಣಿಯಲ್ಲಿ ಸುತ್ತಾಡಿದರು. ಈ ವೇಳೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಜೊತೆಗಿದ್ದಿದ್ದು ವಿಶೇಷವಾಗಿತ್ತು. ಇದಾದ ಬಳಿಕ ಸ್ಥಳೀಯ ಸಾಂಪ್ರದಾಯಿಕ ಶೈಲಿಯ ಕಲೆಯನ್ನು ವೀಕ್ಷಿಸಿದ ಮೋದಿ ಮತ್ತು ಮ್ಯಾಕ್ರೋನ್ ದಂಪತಿ ಭಾರತದ ಸಂಸ್ಕ್ರತಿಗೆ ಮತ್ತೊಮ್ಮೆ ತಲೆಬಾಗಿದರು.

ಭಾರತದಲ್ಲಿ ಒಂದೊಂದೇ ಯೋಜನೆಗಳನ್ನು ರೂಪಿಸುತ್ತಾ , ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿರುವ ಪ್ರಧಾನಿ ಮೋದಿ, ತಮ್ಮ ಸುತ್ತಮುತ್ತಲಿನ ದೇಶಗಳನ್ನೂ ಭಾರತದ ಜೊತೆ ಸೇರಿಸಿಕೊಳ್ಳುತ್ತಿದ್ದಾರೆ. ಯಾಕೆಂದರೆ ಯಾವುದೇ ಸಂದರ್ಭದಲ್ಲೂ ಭಾರತದ ಪರವಾಗಿಯೇ ಈ ರಾಷ್ಟ್ರಗಳು ಇರುತ್ತವೆ. ನರೇಂದ್ರ ಮೋದಿಯವರ ರಾಜತಾಂತ್ರಿಕ ನಡೆಗೆ ಇಡೀ ವಿಶ್ವವೇ ತಲೆಬಾಗಿದೆ.!

–ಅರ್ಜುನ್

 

Editor Postcard Kannada:
Related Post