X

ರಾಹುಲ್ ಗಾಂಧಿ‌ಗೆ ಪ್ರಧಾನಿ ಮೋದಿ ಹೇಗೆ ಟಾಂಗ್ ಕೊಟ್ರು ಗೊತ್ತಾ!..

ಭಾರತವನ್ನು, ಸಂವಿಧಾನವನ್ನು ವಿದೇಶಿ ನೆಲದಲ್ಲಿ ನಿಂತು ಅವಹೇಳನ ಮಾಡಿ ಸಾರ್ವಜನಿಕರಿಂದ ಮಂಗಳಾರತಿ ಮಾಡಿಸಿಕೊಂಡ ವ್ಯಕ್ತಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೇ ಹೋದರೆ ಈ ವ್ಯಕ್ತಿಗೆ ತಿಂದದ್ದು ಅರಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಅವರು ವಿವಾದಗಳನ್ನು ಸೃಷ್ಟಿ ಮಾಡಿ, ಜನರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇರುತ್ತಾರೆ.

ಇಂತಹ ವಿವಾದಿತ ವ್ಯಕ್ತಿತ್ವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೆಸರು ಹೇಳದೆಯೇ, ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ರಾಜಕಾರಣಕ್ಕೆ ಸಂಬಂಧಿಸಿದ ಹಾಗೆ ಕೆಲವು ವ್ಯಕ್ತಿಗಳನ್ನು ಮತ್ತೆ ಮತ್ತೆ ಲಾಂಚ್ ಮಾಡುತ್ತಲೇ ಇರಬೇಕು. ಏಕೆಂದರೆ ಒಂದು ದಾರಿ ತಪ್ಪಿದಾಗ ಇನ್ನೊಂದು ಹಾದಿಯನ್ನು ಹುಡುಕಿಕೊಳ್ಳುವ ಸ್ಟಾರ್ಟ್‌ಅಪ್‌ಗಳ ಹಾಗಲ್ಲ ರಾಜಕೀಯ ಎಂದು ಹೇಳುವ ಮೂಲಕ ರಾಗಾ‌ಗೆ ಟಾಂಗ್ ನೀಡಿದ್ದಾರೆ.

ಸ್ಟಾರ್ಟ್‌ಅಪ್ ಮಹಾಕುಂಭದಲ್ಲಿ ಮಾತನಾಡಿರುವ‌ ಅವರು, ಭಾರತದಲ್ಲಿ ಅನೇಕ ಜನರು ಸ್ಟಾರ್ಟ್‌ಅಪ್‌ಗಳನ್ನು ಆರಂಭ ಮಾಡುತ್ತಾರೆ. ಆದರೆ ಕೆಲವು ಸ್ಟಾರ್ಟ್‌ಅಪ್‌ಗಳು ನಿರೀಕ್ಷೆ ಹಾಗೆ ಸಮಾಜವನ್ನು ತಲುಪಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪದೇ ಪದೇ ಲಾಂಚ್ ಮಾಡಬೇಕಾಗಿರುತ್ತದೆ‌. ರಾಜಕೀಯದಲ್ಲೂ ಇಂತಹವರ ಸಂಖ್ಯೆ ಅಧಿಕವಾಗಿದೆ. ಹಾಗಾಗಿ ಕೆಲವು ಜನರನ್ನು ಮತ್ತೆ ಮತ್ತೆ ಲಾಂಚ್ ಮಾಡಬೇಕಾಗುತ್ತದೆ ಎಂದು ಅವರು ರಾಹುಲ್‌ ಗಾಂಧಿಗೆ ಪರೋಕ್ಷವಾಗಿ ತಿವಿದಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯ ಬಳಿಕ ನಮ್ಮ ಬಿಜೆಪಿ ಪಕ್ಷ ಸತತ ಮೂರನೇ ಬಾರಿಗೆ ಸರ್ಕಾರ ರಚನೆ ಮಾಡಲಿದೆ. ಹಾಗಾಗಿ ಒಟ್ಟಾರೆ ಬಜೆಟ್ ಮಂಡನೆ ಮಾಡಲಾಗಿದೆ. ಸಾಮಾನ್ಯವಾಗಿ ಇಂತಹ ಪ್ರಮುಖ ಘಟನೆಗಳನ್ನು ಚುನಾವಣಾ ಸಮಯದಲ್ಲಿ ಮುಂದೂಡಲಾಗುತ್ತದೆ. ಆದರೆ ನಾವು ಬಜೆಟ್ ಮಂಡನೆ ಮಾಡಿದ್ದೇವೆ. ಎಂದು ಪ್ರಧಾನಿ ಹೇಳಿದ್ದಾರೆ.

ಚುನಾವಣೆ ಬಂದ ಬಳಿಕ ಸಹ ಕಾರ್ಯಕ್ರಮ ಜಾರಿಗೆ ಬರಲಿದೆ ಎಂದರೆ ಇದು ಬದಲಾವಣೆಗೆ ನಾಂದಿ ಹಾಡುತ್ತಿದೆ ಎಂದೇ ಅರ್ಥ. ಕಳೆದ ಹತ್ತು ವರ್ಷಗಳ ಹಿಂದೆ ಭಾರತದಲ್ಲಿ ಕೇವಲ ನೂರು ಸ್ಟಾರ್ಟ್‌ಅಪ್‌ಗಳಿದ್ದವು. ಆದರೆ, ಈಗ ಒಂದೂ ಕಾಲು ಲಕ್ಷಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ನೇರವಾಗಿ ಹನ್ನೆರಡು ಸಾವಿರ ಮಂದಿ ಭಾಗಿಗಳಾಗಿದ್ದಾರೆ. ಈಗ ಭಾರತ ಸ್ಟಾರ್ಟ್‌ಅಪ್ಗಳನ್ನು ಹೊಂದಿರುವ ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Post Card Balaga:
Related Post