X

ಕೇವಲ 3 ವರ್ಷದಲ್ಲಿ ಅಟಲ್ ಪಿಂಚಣಿ ಯೋಜನೆಗೆ 1 ಕೋಟಿ ಜನ ಸೇರ್ಪಡೆ!! ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೊಂದು ಯಶಸ್ಸು!!

ನರೇಂದ್ರ ಮೋದಿ ಸರ್ಕಾರವು ಜನರ ಕಲ್ಯಾಣಕ್ಕಾಗಿ ಈಗಾಗಲೇ ಅದೆಷ್ಟೋ ಯೋಜನೆಗಳನ್ನು ಜಾರಿಗೊಳಿಸಿದ್ದು, ವೃದ್ಧಾಪ್ಯಕ್ಕೊಂದು ಜೀವನ ಭದ್ರತೆ ಸಿಗಲೆಂದು ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿರುವ ವಿಚಾರ ಗೊತ್ತೇ ಇದೆ!! ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ನಿವೃತ್ತಿ ಜೀವನದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂಬ ದೃಷ್ಟಿಯಿಂದ ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದ್ದ ಕೇಂದ್ರ ಸರ್ಕಾರಕ್ಕೆ ಇದೀಗ ಅತೀ ದೊಡ್ಡ ಯಶಸ್ಸು ಸಿಕ್ಕಿದಂತಾಗಿದೆ!!

ನಿವೃತ್ತಿ ಯೋಜನೆ ಅಡಿಯಲ್ಲಿ ಹೆಚ್ಚೆಚ್ಚು ಜನರು ಒಳಗೊಳ್ಳುವಂತೆ ಮಾಡಿ ನಿವೃತ್ತಿ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಈ ಯೋಜನೆಗೆ ಇಂದು ಅತೀ ದೊಡ್ಡ ಯಶಸ್ಸು ಸಿಕ್ಕಿದ್ದು, ನರೇಂದ್ರ ಮೋದಿಯವರನ್ನು ತೆಗಳುವವರಿಗೆ ಈ ಮೂಲಕ ತಕ್ಕ ಉತ್ತರ ಸಿಕ್ಕಿದೆ!! ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆ ಏರಿದಾಗಿನಿಂದಲೂ ಜನರ ಕಲ್ಯಾಣಕ್ಕಾಗಿ ಅದೆಷ್ಟೋ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಕೂಡ ನರೇಂದ್ರ ಮೋದಿ ಬಡವರಿಗೆ ಅದೇನೂ ಕೂಡ ಮಾಡಿಲ್ಲ ಎಂದು ಕೆಲವರು ಸುಖಾಸುಮ್ಮನೆ ಹೇಳುವವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಅಟಲ್ ಪಿಂಚಣಿ ಯೋಜನೆ ಸಾಕ್ಷಿಯಾಗಿದೆ!!

3 ವರ್ಷದಲ್ಲಿ ಅಟಲ್ ಪಿಂಚಣಿ ಯೋಜನೆಗೊಳಪಟ್ಟವರು 1 ಕೋಟಿ ಜನರು!!

ಅಟಲ್ ಪಿಂಚಣಿ ಯೋಜನೆ ಆರಂಭಗೊಂಡು 3 ವರ್ಷಗಳಾಗಿದ್ದು ಯೋಜನೆಗೊಳಪಟ್ಟವರ ಸಂಖ್ಯೆ 1 ಕೋಟಿ ದಾಟಿದೆ ಎಂದು ಕೇಂದ್ರ ತಿಳಿಸಿದೆ!! ಪ್ರಧಾನಿ ನರೇಂದ್ರ ಮೋದಿಯವರು 2015ರ ಮೇ 9 ರಂದು ಕೋಲ್ಕಾತ್ತಾದಲ್ಲಿದಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದರು!! ಪ್ರಸ್ತುತ 1.10 ಕೋಟಿ ಜನರು ಈ ಯೋಜನೆ ಒಳಪಟ್ಟಿದ್ದಾರೆ!! ದೇಶದ ಶೇಖಡ 85 ರಷ್ಟು ಕಾರ್ಯಪಡೆಯನ್ನು ಒಳಗೊಂಡ ಅಸಂಘಟಿತ ವಲಯದ ಕಾರ್ಮಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಮೋದಿ ಸರ್ಕಾರ ಈ ಪಿಂಚಣಿ ಯೋಜನೆಯನ್ನು ಆರಂಭ ಮಾಡಿದೆ!! ಈ ಯೋಜನೆಗೊಳಪಡುವವರು ಮಾಸಿಕ ರೂ. 1000, ರೂ 2000, ರೂ 3000, ರೂ 4000 ಅಥವಾ ರೂ 5000 ನ್ನು 60 ವರ್ಷದವರೆಗೆ ಪಾವತಿಸುತ್ತಾ ಬಂದರೆ 60 ವರ್ಷದ ಬಳಿಕ ಅದಕ್ಕೆ ಅನುಗುಣವಾದ ಮೊತ್ತದ ಪಿಂಚಣಿ ಅವರಿಗೆ ಅಥವಾ ಅವರ ಸಂಗಾತಿಗೆ ಬರುತ್ತದೆ!!

ನರೇಂದ್ರ ಮೋದಿಯವರು ಜಾರಿಗೊಳಿಸಿರುವ ಅಟಲ್ ಪಿಂಚಣಿ ಯೋಜನೆಗೆ ಇದೀಗ 1 ಕೋಟಿ ಮಂದಿ ನೋಂದಣಿ ಮಾಡುವ ಮೂಲಕ ಈ ಯೋಜನೆಗೆ ಅಭೂತಪೂರ್ವವಾದಂತಹ ಬೆಂಬಲ ದೊರೆತಿದೆಯಲ್ಲದೇ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿಗೆ ಇದು ಒಂದು ಕಾರಣವಾಗಲಿದೆ!! ಇತ್ತೀಚೆಗಷ್ಟೇ ಪೋಸ್ಟ್ ಆಪೀಸ್ ಹಾಗೂ ಎಸ್ ಬಿ ಐನಲ್ಲಿ ಇದ್ದ ಅಟಲ್ ಪಿಂಚಣಿ ಯೋಜನೆಯನ್ನು 11 ಪೇಮೆಂಟ್ ಬ್ಯಾಂಕ್ ಹಾಗೂ 10 ಸಣ್ಣ ಫೈನಾನ್ಸ್ ಬ್ಯಾಂಕ್‍ಗಳಿಗೆ ಆರ್‍ಬಿಐ ವಿಸ್ತರಿಸಿತ್ತು!! ಹಾಗಾಗಿ ಇದನ್ನು ಬ್ಯಾಂಕ್ ಗಳಲ್ಲಿಯೂ ಪಿಂಚಣಿ ಯೋಜನೆಯನ್ನು ಆರಂಭ ಮಾಡಲಾಗಿರುವುದರಿಂದ ಹೆಚ್ಚು ಜನರಿಗೆ ಅನುಕೂಲವಾಗಲಿರುವ ಜೊತೆಗೆ ಪೋಸ್ಟ್ ಆಫೀಸ್, ಎಸ್‍ಬಿಐಗೆ ಹೋಗಬೇಕು ಎನ್ನುವ ತೊಂದರೆ ಈ ಮೂಲಕ ದೂರವಾಗಿತ್ತು!!

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಬಹುನಿರೀಕ್ಷಿತ ಯೋಜನೆ ಸಾಮಾನ್ಯ ಜನರಿಗೂ ತಲುಪಿಸಲು ಎಸ್‍ಬಿಐ ನಿರ್ಧರಿಸಿದರೆ ಬಂದೀಖಾನೆ ಇಲಾಖೆ ಕೈದಿಗಳಿಗೂ ಆರ್ಥಿಕ ಭದ್ರತೆ ಒದಗಿಸಿದ್ದಾರೆ. ರಾಜ್ಯದಲ್ಲಿ 100 ಜೈಲುಗಳಲ್ಲಿ ಅಂದಾಜು 15,262 ಕೈದಿಗಳಿದ್ದು, ಜೈಲಿನಿಂದ ಬಿಡುಗಡೆ ಬಳಿಕ ಉತ್ತಮ ಪ್ರಜೆಯಾಗಿ ಜೀವನ ನಡೆಸುವಂತೆ ಕೈದಿಗಳಿಗೆ ಮನಃಪರಿವರ್ತನೆ ಹಾಗೂ ಮರ ಕೆಲಸ, ಗಾಮೇಂಟ್ಸ್, ಬೇಕರಿ ಉತ್ಪನ್ನ ತಯಾರಿಕೆ ಸೇರಿ ವಿವಿಧ ಕೌಶಲ ತರಬೇತಿ ಕೊಡಲಾಗುತ್ತದೆ. ಇದರ ಜತೆಗೆ ಕೈದಿಗಳಿಗೆ ಸಾಲ, ವಿಮಾ ಯೋಜನೆ, ಪಿಂಚಣಿ ಸೌಲಭ್ಯ ಸಿಗಲೆಂದು ಜನ್ ಧನ್ ಬ್ಯಾಂಕ್ ಖಾತೆ ಮತ್ತು ಅಟಲ್ ಪಿಂಚಣಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ಈ ಮೊದಲೇ ತಿಳಿಸಿದ್ದರು!!

ಅಂತೂ ಅಸಂಘಟಿತ ವಲಯಕ್ಕೆಂದೇ ನರೇಂದ್ರ ಮೋದಿಯವರು ಜಾರಿಗೆ ತಂದಂತಹ ಯೋಜನೆಗಳಿಗೆ ಜನರು ಉತ್ತಮ ಸ್ಪಂದನೆ ನೀಡುವ ಮೂಲಕ ಬಡವರಿಗೆ ನರೇಂದ್ರ ಮೋದಿ ಏನು ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತಮ ಉತ್ತರ ಸಿಕ್ಕಂತಾಗಿದೆ!! ಜೈ ಮೋದೀಜೀ

source: Atal Pension Yojana crosses 1 crore subscribers in 3 years Read more at: //economictimes.indiatimes.com/articleshow/64175510.cms utm_source=contentofinterest&utm_medium=text&utm_campaign=cppst

  • ಪವಿತ್ರ

 

Editor Postcard Kannada:
Related Post