X

ಸ್ವ ಕ್ಷೇತ್ರ ಅಮೇಥಿ ಯಾಕೆ ಅಭಿವೃದ್ಧಿ ಆಗಿಲ್ಲ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಲಾಗದೇ ಯೋಗಿಯನ್ನು ಕೇಳಿ ಎಂದು ನಗೆಪಾಟಲಿಗೀಡಾದ ರಾಹುಲ್ ಗಾಂಧಿ!!

ದೇಶದ ಪ್ರಧಾನಿ ಆಗಬೇಕೆಂದು ತುದಿಗಾಲಲ್ಲಿ ನಿಂತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸದಾ ಸುದ್ದಿಗೆ ಗ್ರಾಸವಾಗುತ್ತಲೇ ಇದ್ದು, ಕೇಂದ್ರ ಸರ್ಕಾರವನ್ನು ದೂಷಿಸುವ ಬರದಲ್ಲಿ ತಾನು ಅದೇನು ಮಾತಾನಾಡುತ್ತಿದ್ದೇನೆ ಎನ್ನುವುದು ಗೊತ್ತಾಗುತ್ತಿಲ್ಲವೋ ಏನೋ ಗೊತ್ತಿಲ್ಲ!! ಆದರೆ ಸದಾ ಒಂದಲ್ಲ ಒಂದು ವಿಚಾರದ ಮೂಲಕ ಸುದ್ದಿಯಾಗುತ್ತಲೇ ಇರುವ ರಾಹುಲ್ ಗಾಂಧಿ ಸ್ವ ಕ್ಷೇತ್ರ ಅಮೇಥಿಯಲ್ಲಿ ವಿದ್ಯಾರ್ಥಿಗಳ ಮುಂದೆಯೇ ನಗೆಪಾಟಲೀಗೆ ಗುರಿಯಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈಗಾಗಲೇ ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್ ಗಾಂಧಿ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸಲು ಕೂಡ ಕಿಂಚಿತ್ತೂ ತಿಳುವಳಿಕೆಯನ್ನೂ ಹೊಂದಿಲ್ಲ ಎಂಬುವುದನ್ನು ಈಗಾಗಲೇ ಸಾಕಷ್ಟು ಬಾರಿ ನಿರೂಪಿಸಿದ್ದಾರೆ!! ವಿಪರ್ಯಾಸವೆಂದರೆ ಮುಂದಿನ ಪ್ರಧಾನಿ ಹುದ್ದೆಯನ್ನು ಏರುವ ಬಹುದೊಡ್ಡ ಕನಸನ್ನು ಹೊತ್ತಿರುವ ರಾಹುಲ್ ಗಾಂಧಿಯವರಿಗೆ ಕೆಲವೊಂದು ಬಾರಿ ಕನಿಷ್ಠ ಜ್ಞಾನವೂ ಇಲ್ಲ ಎಂಬುವುದನ್ನು ಸಾಬೀತು ಪಡಿಸುತ್ತಲೇ ಬಂದಿದ್ದಾರೆ!! ಅಷ್ಟೇ ಅಲ್ಲದೇ ನರೇಂದ್ರ ಮೋದಿಯವರನ್ನು ಪ್ರತಿಯೊಂದು ವಿಚಾರಕ್ಕೂ ಎಳೆದು ತರುತ್ತಿರುವ ಕೀಳು ಮಟ್ಟದ ಬುದ್ದಿ ಮತ್ತೊಮ್ಮೆ ಅನಾವರಣವಾಗಿದೆ.

ಇತ್ತೀಚೆಗಷ್ಟೇ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸಂವಾದದಲ್ಲಿ ವಿದಾರ್ಥಿನಿಯೊಬ್ಬಳು “ರಾಹುಲ್ ಗಾಂಧಿಯವರೇ, ನಾನು ಎನ್.ಸಿ.ಸಿ. ಮಾಡಿದ್ದೇನೆ. ನನಗೆ ಮುಂದಿನ ಭವಿಷ್ಯದಲ್ಲಿ ಯಾವ ರೀತಿ ಅವಕಾಶ ಸಿಗಬಹುದು ಎಂದು ಹೇಳಬಹುದೇ” ಎಂದು ಪ್ರಶ್ನಿಸಿದ್ದಳು!! ಆದರೆ ಈ ಸಂದರ್ಭದಲ್ಲಿ ಪೇಚಿಗೆ ಸಿಲುಕಿದ್ದ ರಾಹುಲ್ ಗಾಂಧಿ, “ಎನ್.ಸಿ.ಸಿ. ಬಗ್ಗೆ ತನಗೇನೂ ಗೊತ್ತಿಲ್ಲ. ಆ ತರಹದ ವಿಚಾರದಲ್ಲಿ ನನಗೆ ಮಾಹಿತಿ ಇಲ್ಲ. ಆದರೆ ನಿನಗೆ ಭವಿಷ್ಯದಲ್ಲಿ ಉತ್ತಮ ಅವಕಾಶ ಇದೆ. ಓರ್ವ ಯುವ ನಾಯಕನಾಗಿ ನಾನು ನಿನಗೆ ದೇಶದಲ್ಲಿ ಉತ್ತಮ ಅವಕಾಶವನ್ನು ಕಲ್ಪಿಸಿಕೊಡಬಹುದಾಗಿದೆ” ಎಂದು ಹೇಳಿದ್ದರು!!

ಆದರೆ, ಈ ತರಹದ ವಿಚಾರಗಳು ನನಗೆ ಗೊತ್ತಿಲ್ಲ ಎನ್ನುವ ಮೂಲಕ ಎನ್.ಸಿ.ಸಿ. ಗೆ ಭಾರೀ ಅವಮಾನವನ್ನೇ ಮಾಡಿದ್ದ ರಾಹುಲ್ ಗಾಂಧಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದ ವಿಚಾರ ತಿಳಿದೇ ಇದೆ!! ಆದರೆ ಇದೀಗ ಸ್ವಕ್ಷೇತ್ರ ಅಮೇಥಿಯಲ್ಲಿರುವ ಸರ್ಕಾರಿ ಶಾಲೆಗೆ ರಾಹುಲ್ ಗಾಂಧಿ ಭೇಟಿ ನೀಡಿರುವ ವೇಳೆ ವಿದ್ಯಾರ್ಥಿನಿಗೆ ನೀಡಿದ ಉತ್ತರದಿಂದಾಗಿ ಪೇಚಿಗೆ ಸಿಲುಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗಿದೆ.

ಅಷ್ಟಕ್ಕೂ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ, ರಾಹುಲ್ ನೀಡಿದ ಉತ್ತರ ಏನು ಗೊತ್ತೇ??

ಹೌದು…. ಅಮೇಥಿಯ ಶಾಲಾ ಬಾಲಕಿಯೊಬ್ಬಳು ರಾಹುಲ್ ಗಾಂಧಿಯವರಿಗೆ, “ಸರ್ಕಾರ ಹಲವಾರು ಕಾನೂನುಗಳನ್ನು ಜಾರಿಗೆ ತರುತ್ತದೆ. ಆದರೆ ಅವು ಹಳ್ಳಿಗಳಲ್ಲಿ ಯಾಕೆ ಕಾರ್ಯಗತಗೊಳ್ಳುವುದಿಲ್ಲ” ಅಂತಾ ಕೇಳಿದ್ದಾಳೆ. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, “ಈ ಪ್ರಶ್ನೆಯನ್ನು ನೀವು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇಳಬೇಕು. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿದೆಯೇನು? ಅಂತಾ ಪ್ರತಿಯಾಗಿ ಪ್ರಶ್ನಿಸಿದ್ದಾರೆ. ಅಲ್ಲದೇ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಪ್ರಶ್ನೆ ಕೇಳಿ, ಉತ್ತರಿಸ್ತೇನೆ” ಎಂದಿದ್ದಾರೆ.

vedio: video: https://economictimes.indiatimes.com/news/politics-and-nation/rahul-gandhi-gives-bizarre-answers-to-students-in-amethi/articleshow/63795265.cms

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಮಾತು ಅಲ್ಲಿದ್ದವರಲ್ಲಿ ನಗೆ ತರಿಸಿತ್ತಲ್ಲದೇ ರಾಹುಲ್ ಗಾಂಧಿಯವರು ನೀಡಿದ ಉತ್ತರಕ್ಕೆ ಮರು ಪ್ರಶ್ನೆಯಾಗಿ, “ಸಾರ್, ನಾನು ಕೇಳ್ತಿರೋದು ಅಮೇಥಿಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿರೋದು ಎಂದು, ರಾಹುಲ್ ಗಾಂಧಿಯವರನ್ನು ಈ ಪ್ರಶ್ನೆಗೆ ಉತ್ತರ ನೀಡುವಂತೆ ಒತ್ತಾಯಿಸಿದರು!! ಆ ವೇಳೆ ಪೇಚಿಗೆ ಸಿಲುಕಿಕೊಂಡ ರಾಹುಲ್ ಗಾಂಧಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಹರಿಹಾಯ್ದರಲ್ಲದೇ, “ಅಮೇಥಿಯಲ್ಲಿ ಈಗ ಯೋಗಿ ಸರ್ಕಾರ ಆಡಳಿತವಿದೆ. ನಾನು ಅಮೇಥಿಯ ಸಂಸದನಷ್ಟೇ. ನನ್ನ ಕೆಲಸ ಏನಿದ್ರು, ಲೋಕಸಭೆಯಲ್ಲಿ ಕಾನೂನನ್ನು ರೂಪಿಸುವುದು. ಯುಪಿಯಲ್ಲಿ ಯೋಗಿ ದರ್ಬಾರ್ ನಡೆಯುತ್ತಿದ್ದು, ಅವರು ವಿದ್ಯುತ್, ನೀರು ಮತ್ತು ಶಿಕ್ಷಣಕ್ಕೆ ಆದ್ಯತೆ ಕೊಡುವುದರ ಬದಲು ಅಶಾಂತಿ ಮೂಡಿಸುವ ಕೆಲಸ ಮಾಡ್ತಿದ್ದಾರೆ” ಎಂದು ಪ್ರಶ್ನೆಗೆ ಉತ್ತರ ನೀಡುವ ಬದಲು ಈಡೀ ಮಾತಾನ್ನೇ ಬೇರೆಡೆಗೆ ತಿರುಗಿಸಿ ನಗೆಪಾಟಲೀಗೆ ಗುರಿಯಾಗಿದ್ದಾರೆ!!

ಸಂಸದ ಮಾಡಬೇಕಾದ ಕೆಲಸವನ್ನು ಯೋಗಿ ಆದಿತ್ಯನಾಥರು ಮಾಡಬೇಕೇ??

ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ರಾಹುಲ್, ಹೋದಲ್ಲೆಲ್ಲಾ ಭಾರತ ದೇಶದ ಮರ್ಯಾದೆಯನ್ನು ಹರಾಜು ಮಾಡಿಕೊಂಡು ಬರುತ್ತಿದ್ದಾರೆ. ಯಾಕೆಂದರೆ ಈ ಹಿಂದೆ ವಿದೇಶಿ ಪ್ರವಾಸದ ವೇಳೆ ಸಿಂಗಾಪುರ್ ನಲ್ಲಿ ಮಾತನಾಡುತ್ತಾ ಮೋದಿ ಸರ್ಕಾರವನ್ನು ಟೀಕಿಸಲು ಹೋಗಿ ಸ್ವತಃ ತಾವೇ ವಿವಾದಕ್ಕೀಡಾಗಿದ್ದರು!! ದೇಶದಲ್ಲಿ ಸರ್ಕಾರದ ಯಾವುದೇ ನಿರ್ಧಾರಗಳು ಸರಿಯಾಗಿ ಜಾರಿಯಾಗುತ್ತಿಲ್ಲ. ದೇಶದ ರಕ್ಷಣೆಯ ವಿಚಾರದಲ್ಲಿ ಕೇಂದ್ರ ಸರಕಾರ ಉಡಾಫೆ ತೋರುತ್ತಿದೆ ಎಂದು ವಿದೇಶದಲ್ಲಿ ಹೇಳಿಕೊಂಡ ರಾಹುಲ್, ಭಾರತದ ಆಂತರಿಕ ವಿಚಾರವನ್ನೂ ವಿದೇಶದಲ್ಲಿ ಹೇಳಿಕೊಳ್ಳುವ ಮೂಲಕ ವಿವಾದಕ್ಕೀಡಾಗಿದ್ದರು.

ಆದರೆ ಅಮೇಥಿಯಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿರುವ ರಾಹುಲ್, ಸಂಸದನಾಗಿ ಏನೋ ಅಭಿವೃದ್ದಿ ಮಾಡಲಾಗದೇ ಸಂಸದನ ಕೆಲಸ ಲೋಕಸಭೆಯಲ್ಲಿ ಕಾನೂನು ರೂಪಿಸುವುದು ಎಂದು ಹೇಳುತ್ತಾರಲ್ಲ ಇವರಿಗೆ ಅದೇನು ಹೇಳಬೇಕೋ ನಾ ಕಾಣೆ!! ಸಂಸದರಾಗಿ ಸ್ಥಳೀಯವಾಗಿ ನಾನಾ ಕೆಲಸಗಳನ್ನು ಮಾಡಲು ಅವಕಾಶವಿದೆ. ಅಷ್ಟೆ ಅಲ್ಲದೇ ಸಂವಿಧಾನಾತ್ಮಕವಾಗಿ ಸಂಸದರು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಮೂಲಕ ವಾರ್ಷಿಕ ಐದು ಕೋಟಿ ರೂಪಾಯಿ ಖರ್ಚು ಮಾಡಬಹುದಾಗಿದೆ. ಅಲ್ಲದೇ ಸ್ಥಳೀಯ ಆಡಳಿತದಲ್ಲಿ ಸಕ್ರೀಯವಾಗಿ ಮೇಲ್ವಿಚಾರಣೆ ನಡೆಸುವ ಅಧಿಕಾರ ಕ್ಷೇತ್ರದ ಪ್ರತಿನಿಧಿಯಾಗಿ ಸಂಸದರಿಗೆ ಇರುತ್ತದೆ. ಹಾಗಾಗಿ ರಾಹುಲ್ ಗಾಂಧಿ ಈ ಬಗ್ಗೆ ಹೇಳಬಹುದಿತ್ತು. ಆದರೆ ಇದರ ಬದಲಾಗಿ ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ರನ್ನು ಟೀಕಿಸಿದ್ದು ಎಷ್ಟರ ಮಟ್ಟಿಗೆ ಸಮಂಜಸ ಅನ್ನೋದೆ ಗೊತ್ತಾಗುತ್ತಿಲ್ಲ!!

ಒಟ್ಟಿನಲ್ಲಿ ಹೋದಲ್ಲೆಲ್ಲಕಡೆ ತನ್ನ ಮರ್ಯಾದೆಯನ್ನು ಕಳೆದುಕೊಳ್ಳುತ್ತಿರುವ ರಾಹುಲ್ ಗಾಂಧಿಯವರು ಈಗಾಗಲೇ ಸರಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನಗೆಪಾಟಲಿಗೆ ಗುರಿಯಾಗುತ್ತಿರುವುದು ಸರ್ವೇ ಸಾಮಾನ್ಯ ಎಂದೆನಿಸಿದೆ!! ಆದರೆ ವಿದ್ಯಾರ್ಥಿಗಳು ಕೇಳಿದ ಸರಳ ಪ್ರಶ್ನೆಗಳಿಗೆ ಉತ್ತರಿಸಲಾಗದೇ ನರೇಂದ್ರ ಮೋದಿಯವರನ್ನು, ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥರನ್ನು ಪ್ರತಿಯೊಂದು ವಿಚಾರಕ್ಕೂ ಎಳೆದು ತರುತ್ತಿರುವ ಇವರು ದೇಶದ ಪ್ರಧಾನಿಯಾದರೆ ದೇಶ ಅದ್ಯಾವ ಸ್ಥಿತಿಗೆ ತಲುಪಬಹುದು ಅನ್ನೋದೇ ಬಲು ಕಷ್ಟಕರ ಎನಿಸಿದೆ!!

ಮೂಲ : https://www.aninews.in/news/national/general-news/rahul-gandhi-gives-bizarre-answers-to-students-in-amethi201804170130040001/

– ಅಲೋಖಾ

 

Editor Postcard Kannada:
Related Post