X

ನುಡಿಯಲ್ಲಿ ಮಾತ್ರವಲ್ಲ ನಡೆಯಲ್ಲೂ ಮಾದರಿ ನಮೋ: ಟ್ರೆಂಡ್ ಸೃಷ್ಟಿಸಿದ ಪ್ರಧಾನಮಂತ್ರಿ ಮಾಡಿದ್ದೇನು?

ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಟ್ರೆಂಡ್ ಸೆಟ್ ಮಾಡುತ್ತಲೇ ಇರುತ್ತಾರೆ. ನಿನ್ನೆಯೂ ಸಹ ಪ್ರಧಾನಿ ಅವರು ತಾವು ಧರಿಸಿದ್ದ ಜಾಕೆಟ್‌ ವಿಷಯದಲ್ಲಿ ಟ್ರೆಂಡ್ ಆಗಿದ್ದರು.

ಪರಿಸರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರ ಕಾಳಜಿ ಗಮನಾರ್ಹ. ಮೊನ್ನೆ ‌ಮೊನ್ನೆಯಷ್ಟೇ ಪ್ರಧಾನಿ ಮೋದಿ ಅವರಿಗೆ ಬೆಂಗಳೂರಿನಲ್ಲಿ ನಡೆದ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಾಟಲಿಯ ಮರುಬಳಕೆಯಿಂದ ತಯಾರಿಸಲಾದ ಜಾಕೆಟ್ ಒಂದನ್ನು ಉಡುಗೊರೆಯನ್ನಾಗಿ ನೀಡಲಾಗಿತ್ತು. ಪ್ಲಾಸ್ಟಿಕ್ ಮರುಬಳಕೆಯಿಂದ ತಯಾರಿಸಲಾದ ಈ ಜಾಕೆಟ್ ಅನ್ನೇ ಪ್ರಧಾನಿ ನಮೋ ಅವರು ಸಂಸತ್ತಿನಲ್ಲಿ ಕಾಣಿಸಿಕೊಂಡಿದ್ದರು. ಆ ಮೂಲಕ ಯುವ ಜನತೆಗೆ ಸ್ಪೂರ್ತಿಯಾಗಿದ್ದರು.

ಆದರೆ ದೇಶದ ಅಭಿವೃದ್ಧಿಯ ಬಗ್ಗೆ ಕಂತೆ ಕಂತೆ ಭಾಷಣ ಬಿಗಿಯುವ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆಯೂ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಖರ್ಗೆ ನಿನ್ನೆ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಧರಿಸಿದ್ದ ಲೂಯಿಸ್ ವಿಟ್ಟನ್ ಶಾಲು ಖರ್ಗೆ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೇಚಿಗೆ ‌ಸಿಲುಕಿಸಿದ್ದಂತೂ ಸತ್ಯ. ಆ ಶಾಲ್‌ನ ಮೌಲ್ಯ 56,332 ರೂ. ಗಳಾಗಿದ್ದು, ದುಂದುವೆಚ್ಚ ಮಾಡುವುದರಲ್ಲಿ ಕಾಂಗ್ರೆಸ್ ನಾಯಕರು ಎತ್ತಿದ ‘ಕೈ’ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಬಿಜೆಪಿ ನಾಯಕ ಶೆಹಜಾಬ್ ಪೂನಾವಾಲ ಟ್ವೀಟ್ ಸಹ ಮಾಡಿದ್ದು, ಪ್ರಧಾನಿ ಮೋದಿ ಅವರು ಭಾರತದಲ್ಲೇ ತಯಾರಿಸಿದ, ಅದರಲ್ಲೂ ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ತಯಾರು ಮಾಡಿದ ಜಾಕೆಟ್ ಧರಿಸಿದ್ದಾರೆ. ಆದರೆ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರು ಲೂಯಿಸ್ ವಿಟ್ಟನ್ ಶಾಲು ಧರಿಸಿದ್ದಾರೆ. ಮರುಬಳಕೆಯ ಮೂಲಕ ಪ್ರಧಾನಿ ಮೋದಿ ಅವರು ಇಡೀ ದೇಶಕ್ಕೆ ಒಂದು ಉತ್ತಮವಾದ ಸಂದೇಶ ನೀಡಿದ್ದಾರೆ. ಖರ್ಗೆ ಅವರು ಧರಿಸಿದ ಶಾಲಿಗೆ ಸಂಬಂಧಿಸಿದ ಹಾಗೆ ನಾನು ಹೇಳಿಕೆ ನೀಡುವುದಿಲ್ಲ ಎಂದು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

ತಮ್ಮ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದ್ದರೂ, ಬೇರೆಯವರ ತಟ್ಟೆಯಲ್ಲಿನ ನೊಣವನ್ನು ತೋರಿಸಿ ನಗುವ ಮನಸ್ಥಿತಿ ಕಾಂಗ್ರೆಸ್ ಪಕ್ಷದ್ದು ಎನ್ನುವುದು ಆಗಾಗ್ಗೆ ಸಾಬೀತಾಗುತ್ತಲೇ ಇರುತ್ತದೆ. ಒಂದು ವೇಳೆ ಬಿಜೆಪಿ ನಾಯಕರು ಹೀಗೆ ದುಬಾರಿ ಬಟ್ಟೆ, ವಸ್ತುಗಳನ್ನು ಬಳಕೆ ಮಾಡಿದ್ದರೆ ಆ ಬಗ್ಗೆ ಕಾಮೆಂಟ್ ಮಾಡಿ, ಅವರೇನೋ ಮಹಾಪರಾಧ ಮಾಡುತ್ತಿರುವ ಹಾಗೆ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷದವರು ಮಾಡುತ್ತಿದ್ದರು. ಈಗ ತಮ್ಮದೇ ಪಕ್ಷದ ನಾಯಕನೊಬ್ಬ ದುಬಾರಿ ಬೆಲೆಯ ಶಾಲು ಧರಿಸಿದರೂ ಕಾಂಗ್ರೆಸ್ ತುಟಿಪಿಟಿಕ್ ಎಂದಿಲ್ಲ. ಕೊನೆ ಪಕ್ಷ ಪ್ರಧಾನಿ ಮೋದಿ ಅವರ ಈ ಮಾದರಿ ನಡೆಗೆ ಶ್ಲಾಘನೆ ಸಹ ವ್ಯಕ್ತಪಡಿಸದಿರುವುದು ಕಾಂಗ್ರೆಸ್ ನಾಯಕರ ಸ್ವಾರ್ಥ ಮನಸ್ಥಿತಿಗೆ ಹಿಡಿದ ಕೈಗನ್ನಡಿ.

Post Card Balaga:
Related Post