X

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಡಿ ರಾಜ್ಯಕ್ಕೆ ಭರಪೂರ ಅನುದಾನ!! ರಸ್ತೆ ಅಭಿವೃದ್ಧಿ ಪಡಿಸುವ ನಿರ್ಧಾರಕ್ಕೆ ಮುಂದಾದ ಮೋದಿ ಸರಕಾರ!!

ಪ್ರಧಾನಿ ನರೇಂದ್ರ ಮೋದಿಜೀಯವರು ಅಧಿಕಾರ ಸ್ವೀಕರಿಸಿದಾಗಿನಿಂದ ಇಡೀ ದೇಶವೇ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ!! ಪ್ರತೀಯೊಂದು ಕ್ಷೇತ್ರದಲ್ಲಿಯೂ ಮೋದೀ ಅಧಿಕಾರವಹಿಸಿದ ಬಳಿಕ ಗಣನೀಯ ಬದಲಾವಣೆಗಳಾಗುತ್ತಿವೆ!! ದೇಶದ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವುದು ಕೇಂದ್ರ ಸರ್ಕಾರದ ಮುಖ್ಯ ಧ್ಯೇಯವಾಗಿದೆ!! ನರೇಂದ್ರ ಮೋದಿಯವರು ಅಧಿಕಾರದ ಚುಕ್ಕಾಣಿಯನ್ನು ಹಿಡಿದಂದಿನಿಂದಲೂ ದೇಶ ಅಭಿವೃದ್ದಿಯತ್ತ ಸಾಗುತ್ತಿದೆಯಲ್ಲದೇ, ನರೇಂದ್ರ ಮೋದಿಯವರ ಸಾಧನೆಗೆ ಇಡೀ ವಿಶ್ವವೇ ತಾ ಮುಂದು ನಾ ಮುಂದು ಎಂದು ಸ್ನೇಹ ಬಯಸಲು ಮುಂದಾಗುತ್ತಿದ್ದರೆ, ಬುದ್ದಿಜೀವಿಗಳು ಮಾತ್ರ ಮೋದಿಯನ್ನು ತೆಗಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ!! ಆದರೆ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ಕೆಲವೇ ವರ್ಷಗಳಿಗೆ ದೇಶ ಅದೆಷ್ಟು ಬದಲಾವಣೆಯ ಹಾದಿಯನ್ನು ಹಿಡಿದೆ ಎಂದರೆ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಿ ಇಂದು ಹೊಸ ಇತಿಹಾಸವನ್ನೇ ಸೃಷ್ಟಿಮಾಡಿದ್ದಲ್ಲದೆ ಇದೀಗ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ರಾಜ್ಯ ಹೆದ್ದಾರಿಯ ನಿರ್ಮಾಣ ಮಾಡಲು ಕೇಂದ್ರ ಸರಕಾರ ರಾಜ್ಯಕ್ಕೂ ಕಾಲಿಟ್ಟಿದೆ!!

ವಂಶ ಪಾರಂಪರೆಯ ಆಡಳಿತದಲ್ಲಿ ಬೇಸತ್ತಿದ್ದ ದೇಶ ಇಂದು ಪ್ರಗತಿ ಪಥದತ್ತ ಸಾಗುತ್ತಿದೆ ಎಂದರೆ ಅದು ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿನಿಂದ ಮಾತ್ರ ಸಾಧ್ಯ!! 2014ರಲ್ಲಿ ಚರಿತ್ರಾರ್ಹ ಗೆಲುವನ್ನು ದಾಖಲಿಸುವ ಮೂಲಕ ಬಿಜೆಪಿಯು ಪ್ರಚಂಡ ಜಯದೊಂದಿಗೆ ಹತ್ತು ವರ್ಷಗಳ ಯುಪಿಎ ಆಡಳಿತವನ್ನು ಬದಿಗೊತ್ತಿ ಕೇಂದ್ರದಲ್ಲಿ ಅಧಿಕಾರ ಸ್ಥಾಪಿಸಿತು. ಅಷ್ಟೇ ಅಲ್ಲದೇ ಮೋದಿ ಅಧಿಕಾರಕ್ಕೆ ಬಂದಿದ್ದು ಜನಸಾಮಾನ್ಯರಲ್ಲಿ, ಸಾಮಾಜಿಕ ವಲಯಗಳಲ್ಲಿ ಹೊಸ ಆಶಾಕಿರಣ ಮೂಡಿಸಿತ್ತಲ್ಲದೆ ಪ್ರತೀಯೊಂದು ಕ್ಷೇತ್ರದಲ್ಲಿಯೂ ಹೊಸ ಇತಿಹಾಸವನ್ನೇ ಸೃಷ್ಠಿಸುವಂತೆ ಮಾಡಿದೆ ನಮ್ಮ ಮೋದೀಜೀ ಸರಕಾರ!!

ಕೇಂದ್ರ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹಲವು ಮಹತ್ತರ ಬದಲಾವಣೆಗಳು ಕಂಡು ಬಂದಿದ್ದು, ಅದರಲ್ಲೂ ಸರ್ಕಾರಿ ಯೋಜನೆಗಳು, ಕಾಮಗಾರಿಗಳು ತೀವ್ರ ವೇಗ ಪಡೆದುಕೊಂಡಿವೆ!! ಅದಕ್ಕೆ ನಿದರ್ಶನವೆಂಬಂತೆ ಕಳೆದ ನಾಲ್ಕು ವರ್ಷಗಳಲ್ಲಿ 9 ಕೋಟಿ ಶೌಚಾಲಯ ನಿರ್ಮಾಣ, ಜನಧನ್ ಯೋಜನೆ ಅನ್ವಯ ಖಾತೆ ತೆರೆಯುವುದು ಸೇರಿ ಹಲವು ಯೋಜನೆಗಳು ಕ್ಷಿಪ್ರಗತಿಯಲ್ಲಿ ಸಾಗಿವೆ. ಇದೀಗ ನರೇಂದ್ರ ಮೋದಿ ಸರಕಾರ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂದಾಗಿದೆ!!

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಡಿ (ಪಿಎಂಜಿಎಸ್‍ವೈ-3) ರಾಜ್ಯಕ್ಕೆ ಭರಪೂರ ಅನುದಾನದ ನಿರೀಕ್ಷೆಯಿದ್ದು ಸುಮಾರು 9 ಸಾವಿರ ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಪಡಿಸುವ ನಿರ್ಧಾರಕ್ಕೆ ಬರಲಾಗಿದೆ. ಗ್ರಾಮೀಣ ಭಾರತವನ್ನು ರಸ್ತೆ ಸಂಪರ್ಕ ಜಾಲದೊಂದಿಗೆ ಬೆಸೆಯುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಪ್ರಾರಂಭಿಕ ಹಂತದಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗಿತ್ತು. ಇದರಿಂದಾಗಿ ಹಳ್ಳಿ ಹಳ್ಳಿಗಳಲ್ಲಿ ಡಾಂಬರು ರಸ್ತೆ ನಿರ್ಮಿಸಲು ಸಾಧ್ಯವಾಗಿತ್ತು. ಆದರೆ, ಗ್ರಾಮ ಸಡಕ್ 2 ನೇ ಹಂತದಲ್ಲಿ ರಾಜ್ಯಕ್ಕೆ ಸ್ವಲ್ಪ ಮಟ್ಟದ ಹಿನ್ನಡೆಯಾಗಿತ್ತು. ಈ ನಷ್ಟ ಭರ್ತಿ ಮಾಡಿಕೊಳ್ಳಲು ಪಿಎಂಜಿಎಸ್‍ವೈ-3 ನೆರವಾಗುವ ವಿಶ್ವಾಸ ಹೊಂದಲಾಗಿದೆ.  ಹಾಲಿ ಆರ್ಥಿಕ ವರ್ಷದಲ್ಲಿ (2018-19) ಪಿಎಂಜಿಎಸ್‍ವೈ-3 ಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಸಂಬಂಧ ರೂಪುರೇಷೆ ಸಿದ್ಧಪಡಿಸುತ್ತಿರುವ ಕೇಂದ್ರ ಸರಕಾರ ಪ್ರಸ್ತಾವನೆ ಕಳುಹಿಸಿ ಕೊಡುವಂತೆ ನಾನಾ ರಾಜ್ಯಗಳಿಗೆ ಸೂಚಿಸಿವೆ ಎಂದರೆ ಮೋದಿ ಸರಕಾರ ಇಡೀ ದೇಶದ ಬದಲಾವಣೆಯತ್ತ ನೋಡುತ್ತಿದೆ!!

 

ಗ್ರಾಮ ಸಡಕ್‍ನ ಮೊದಲ ಹಂತದಲ್ಲಿ 16,359.38 ಕಿ.ಮೀ. ಉದ್ದದ 3,313 ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು. ಇದರಿಂದ 8,009 ಜನವಸತಿ ಪ್ರದೇಶಗಳಿಗೆ ಗುಣಮಟ್ಟದ ಡಾಂಬರು ರಸ್ತೆಯ ಸೌಕರ್ಯ ಸಿಕ್ಕಿತ್ತು. ಇದೀಗ ಮತ್ತೆ ಹಾಗಾಗಿ ಬಹುತೇಕ ರಸ್ತೆಗಳನ್ನು ಪುನಃ ದುರಸ್ತಿ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಹೀಗಾಗಿ ಕೇಂದ್ರ ಸರಕಾರ ರಾಜ್ಯದ ರಸ್ತೆ ನಿರ್ಮಾಣದೆಡೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದೆ!!

ಪಿಎಂಜಿಎಸ್‍ವೈ-2 ರಲ್ಲಿ 2,241.17 ಕಿ.ಮೀ. ಉದ್ದದ 325 ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು ಕೇಂದ್ರದಿಂದ ನೆರವು ಲಭ್ಯವಾಗಿತ್ತು. ಹಾಗಾಗಿ ಈ ಬಾರಿ ಹೆಚ್ಚುವರಿ ಅನುದಾನ ನೀಡುವ ನಿರೀಕ್ಷೆ ಇದೆ!! ಹಾಲಿ ರಸ್ತೆಗಳ ಸುಧಾರಣೆಯೊಂದಿಗೆ ಹೊಸ ರಸ್ತೆಗಳ ನಿರ್ಮಾಣ ಕೈಗೊಳ್ಳುತ್ತಿದ್ದು ಇದರಿಂದ ಗ್ರಾಮೀಣ ಭಾಗದ 9 ಸಾವಿರ ಕಿ.ಮೀ. ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಕೇಂದ್ರ ಸರಕಾರದ ಯೋಜನೆಯಾಗಿದೆ!! ರಸ್ತೆಗಳ ಜತೆಗೆ ಸೇತುವೆಗಳ ನಿರ್ಮಾಣ ಕಾರ್ಯವನ್ನೂ ಗ್ರಾಮ ಸಡಕ್‍ನಡಿ ಕೈಗೆತ್ತಿಕೊಳ್ಳಲಾಗುತ್ತಿದ್ದು ಈ ಬಾರಿ ಪ್ರಧಾನಿ ಮೋದಿ ಸರಕಾರದ ಅಭೂತಪೂರ್ವ ಬದಲಾವಣೆ ಮಾಡುವತ್ತ ದಾಪುಗಾಲುತ್ತಿದ್ದು ಎಲ್ಲರ ಮನದಲ್ಲೂ ಸಂತಸದ ವಿಚಾರವನ್ನು ಬಿತ್ತಿದ್ದಾರೆ!!

ಕೇಂದ್ರ ತಂಡದ ಭೇಟಿ 

ಈ ಸಂಬಂಧ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರಸಿಂಗ್ ತೋಮರ್ ಅವರನ್ನು ಭೇಟಿ ಮಾಡಿದ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಸಮಾಲೋಚಿಸಿದ್ದಾರೆ.  ಜುಲೈ 15 ರಂದು ಕೇಂದ್ರದ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸಿ ಕೊಡುವ ಮೂಲಕ ರಾಜ್ಯದ ಪ್ರತೀಯೊಂದು ಹೆದ್ದಾರಿ ಗಮನಿಸಿ ನಂತರ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಿದ್ದಾರೆ!! ಇದರಿಂದಾಗಿ ಗ್ರಾಮೀಣ ಕರ್ನಾಟಕದ ರಸ್ತೆಗಳಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ದಶಕದ ಬಳಿಕ ಡಾಂಬರು ಕಾಣುವ ಅವಕಾಶ ಬರಬಹುದು ಎಂಬ ಹೊಸ ನಿರೀಕ್ಷೆ ಗರಿಗೆದರುವಂತಾಗಿದೆ!!

source: vijaykarnataka

–  ಪವಿತ್ರ

Editor Postcard Kannada:
Related Post