X
    Categories: ದೇಶ

ಸೇನೆಗೆ ಅವಮಾನಿಸಿದ ರಾಹುಲ್‌ಗೆ ‘ಠಾಕೂರ್ ಠಕ್ಕರ್’

ಭಾರತೀಯ ಸೇನೆಯನ್ನು ಅಪಮಾನಿಸುವಂತೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ವಾಗ್ದಾಳಿ ನಡೆಸಿದ್ದಾರೆ.

ಭಾರತ – ಚೀನಾ ಗಡಿ ವಿವಾದದ ಬಗ್ಗೆ ರಾಹುಲ್, 2020 ರ ಗಲ್ವಾನ್ ಘರ್ಷಣೆ ನಂತರ ಕೇಂದ್ರ ಸರ್ಕಾರ‌ವು ಚೀನಾದೊಂದಿಗಿನ ಗಡಿ ಸಮಸ್ಯೆ‌ಯನ್ನು ಸೂಕ್ತವಾಗಿ ನಿಭಾಯಿಸಿಲ್ಲ. ಅಲ್ಲಿ ಇನ್ನೂ ಉದ್ವಿಗ್ನ ಸ್ಥಿತಿ‌ಯೇ ಇದೆ. ಚೀನಾ ಆಕ್ರಮಣ ಮಾಡಲು ಸಿದ್ಧತೆ ನಡೆಸುವುದಲ್ಲ, ಯುದ್ಧಕ್ಕೆ‌ಯೇ ಸಿದ್ಧತೆ ನಡೆಸುತ್ತಿದೆ ಎಂಬುದನ್ನು ಅವರಿಗೆ ನೋಡಿದರೆಯೇ ತಿಳಿಯುತ್ತದೆ. ಆದರೆ ಈ ಸಂಗತಿಯನ್ನು ಒಪ್ಪಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಸಿದ್ಧವಿಲ್ಲ. ಕೇಂದ್ರ ಸರ್ಕಾರ ತಂತ್ರದ ಮೇಲೆ ಕೆಲಸ ಮಾಡುತ್ತಿಲ್ಲ. ಕೇವಲ ಘಟನೆಗಳ ಮೇಲೆ ಕೆಲಸ ಮಾಡುತ್ತಿದೆ. ಚೀನಾವು ಭಾರತದ ಭೂಮಿ‌ಯನ್ನು ವಶಕ್ಕೆ ತೆಗೆದುಕೊಂಡಿದೆ. ಆದರೆ ಸರ್ಕಾರ ಅದನ್ನು ಮರೆಮಾಚುತ್ತಿದೆ. ಅದನ್ನು ನಿರ್ಲಕ್ಷ್ಯ ಮಾಡಿದೆ. ಚೀನಾವು ಲಡಾಖ್ ಮತ್ತು ಅರುಣಾಚಲ ಪ್ರದೇಶದ‌ಲ್ಲಿ ಆಕ್ರಮಣಕ್ಕೆ ತಯಾರಿ ನಡೆಸುತ್ತಿದೆ. ಭಾರತ ಸರ್ಕಾರ ಮಲಗಿದೆ ಎಂಬುದಾಗಿ ಹೇಳಿದ್ದರು.

ರಾಹುಲ್ ಗಾಂಧಿ ಮಾತಿಗೆ ಪ್ರತಿಯೇಟು ನೀಡಿರುವ ಠಾಕೂರ್, ಭಾರತದ ಸೇನೆಯನ್ನು ರಾಹುಲ್ ಗಾಂಧಿ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ನಮ್ಮ ದೇಶದ ಮೇಲೆ ನಂಬಿಕೆ ಇಲ್ಲ. ಡೋಕ್ಲಾಮ್ ಘಟನೆಯ ಸಮಯದಲ್ಲಿ ಚೀನಾದ ಅಧಿಕಾರಿಗಳೊಂದಿಗೆ ರಾಹುಲ್ ಸೂಪ್ ಸವಿಯುತ್ತಿದ್ದರು. ಆದರೆ ಭಾರತದ ಸೇನೆ ಚೀನಾದ ಸೈನಿಕರ ಜೊತೆಗೆ ಹೋರಾಟ ನಡೆಸುತ್ತಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ‌ವನ್ನು ಪ್ರಶ್ನೆ ಮಾಡಿದರು. ಕಾಂಗ್ರೆಸ್ ಪಕ್ಷ, ರಾಹುಲ್‌ಗೆ ಭಾರತೀಯ ಸೇನೆಯ ಮೇಲೆ ನಂಬಿಕೆ ಇಲ್ಲ ಎಂದು ಟೀಕಿಸಿದ್ದಾರೆ.

ದೇಶದಲ್ಲಿ 300 ಕ್ಕೂ ಅಧಿಕ ರಕ್ಷಣಾ ವಸ್ತುಗಳು ತಯಾರಾಗುತ್ತಿವೆ. ಭಾರತ ಈಗ ರಕ್ಷಣಾ ಸಾಮಗ್ರಿಗಳನ್ನು ಹೆಚ್ಚು ರಫ್ತು ಮಾಡುತ್ತಿರುತ್ತಿರುವ ದೇಶ. ಇನ್ನು ಮುಂದಿನ ದಿನಗಳಲ್ಲಿ ಆಮದುದಾರ ರಾಷ್ಟ್ರವಾಗಿರುವುದಿಲ್ಲ. ಇದು ಆತ್ಮನಿರ್ಭರ ಭಾರತ. ಇನ್ನು ಡೋಕ್ಲಾಮ್ ಘರ್ಷಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ಸೇನೆಯನ್ನು ಭೇಟಿಯಾಗಿದ್ದರು ಎಂದು ತಿಳಿಸಿದ್ದಾರೆ.

ಹಾಗೆಯೇ ಇದು 1962 ರ ಭಾರತ ಅಲ್ಲ. 2014 ರ ನಂತರದಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವ‌ದಲ್ಲಿ ಮುನ್ನಡೆಯುತ್ತಿರುವ ಭಾರತ. ಯುಪಿಎ ಸರ್ಕಾರ ಭಾರತೀಯ ಸೇನೆಗೆ ಶಸ್ತ್ರಾಸ್ತ್ರಗಳನ್ನು, ಬುಲೆಟ್ ಪ್ರೂಫ್ ಜಾಕೆಟ್, ಶೂ‌ಗಳನ್ನು ಒದಗಿಸಲಾಗಲಿಲ್ಲ. ಕಾಂಗ್ರೆಸ್ ಸರ್ಕಾರ ಭಾರತೀಯ ಸೇನೆಗಾಗಿ ಏನು ಮಾಡಿದೆ? ಎಂಬುದಾಗಿ ಪ್ರಶ್ನಿಸಿದ್ದಾರೆ.

Post Card Balaga:
Related Post