X

ಭ್ರಷ್ಟಾಚಾರ ನಿಗ್ರಹ ಮಸೂದೆಗೆ ಪ್ರತಿಪಕ್ಷಗಳ ವಿರೋಧ: ಒಂದೇ ದಿನದಲ್ಲಿ 11 ಬಾರಿ ಮುಂದೂಡಲ್ಪಟ್ಟು ದಾಖಲೆ ಬರೆದ ರಾಜ್ಯಸಭಾ ಕಲಾಪ! ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ನಾಯ್ಡು!!!

ರಾಜ್ಯಸಭೆಯಲ್ಲಿ ಭ್ರಷ್ಟಾಚಾರ ನಿಗ್ರಹ ಮಸೂದೆಯನ್ನು ಅಂಗೀಕರಿಸಲು ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಕಲಾಪ ಹನ್ನೊಂದು ಬಾರಿ ಮುಂದೂಡಲ್ಪಟ್ಟು ದಾಖಲೆ ನಿರ್ಮಿಸಿದೆ. ಪ್ರತಿಪಕ್ಷಗಳು ಭ್ರಷ್ಟಾಚಾರ ನಿಗ್ರಹ ಮಸೂದೆಗೆ ಎಷ್ಟು ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ವಿಚಾರ ಬಹಿರಂಗಗೊಂಡಿದ್ದು, ಪ್ರತಿಪಕ್ಷಗಳ ವರ್ತನೆ ದೇಶವ್ಯಾಪಿ ಸರ್ವತ್ರ ಖಂಡನೆಗೆ ಗುರಿಯಾಗಿದೆ.

ಒಂದು ಕಡೆ ತಮಿಳುನಾಡು ಸಂಸದರ ಕಾವೇರಿ ಗಲಾಟೆ, ಮತ್ತೊಂದೆಡೆ ಆಂಧ್ರ ಪ್ರದೇಶ ಸಂಸದರ ವಿಶೇಷ ಸ್ಥಾನಮಾನ ಗದ್ದಲದಿಂದಾಗಿ ಸಂಸತ್ ಕಲಾಪ ಯಾವುದೇ ಚರ್ಚೆ ಇಲ್ಲದೆ ಬರೋಬ್ಬರಿ 23 ದಿನ ವ್ಯರ್ಥವಾಗಿತ್ತು. ಇದೀಗ ಒಂದೇ ದಿನದಲ್ಲಿ ಸಾಕಷ್ಟು ಗದ್ದಲ ನಡೆಸಿ ಕಲಾಪವನ್ನು 11 ಬಾರಿ ಮುಂದೂಡುವಂತೆ ಮಾಡಿಸಿ, ಇಡೀ ದೇಶದ ಹಣವನ್ನು, ಸಮಯವನ್ನು ವ್ಯರ್ಥಗೊಳಿಸಿದ್ದರು. ಸಭೆಯಲ್ಲಿ ಗಲಾಟೆ ಎಬ್ಬಿಸಿ ಸಮಯವನ್ನು ವ್ಯರ್ಥಗೊಳಿಸುವ ಇಂಥವರನ್ನು ಯಾವ ಪುರುಷಾರ್ಥಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಇಡೀ ದೇಶ ವಾಸಿಗಳಿಂದ ವ್ಯಕ್ತಗೊಂಡಿದೆ.

ಭ್ರಷ್ಟಾಚಾರ ಮಸೂದೆಗೆ ವಿರೋಧ ಯಾಕೆ?

ಸಭೆಯಲ್ಲಿ ಭ್ರಷ್ಟಾಚಾರ ಮಸೂದೆಯನ್ನು ಮಂಡಿಸಲು ಬಿಜೆಪಿ ಹಿಂದಿನಿಂದಲೂ ಸಿದ್ಧತೆ ನಡೆಸಿದೆ. ಈ ಮಸೂದೆಗೆ ಆರಂಭದಿಂದಲೂ ವಿರೋಧ ವ್ಯಕ್ತವಾಗಿತ್ತು. ಅನೇಕ ಸಲ ಗದ್ದಲದಿಂದಾಗಿ ಈ ಮಸೂದೆಯಲ್ಲಿ ಅಂಗೀಕರಿಸಲು ಸಾಧ್ಯವಾಗಿರಲಿಲ್ಲ. ಇಂದು ಆ ಮಸೂದೆಯನ್ನು ಮಂಡಿಸಲು ಹೋದಾಗ ಪ್ರತಿಪಕ್ಷಗಳು ಹಿಂದೆಂದಿಗಿಂತಲೂ ಹೆಚ್ಚು ಗಲಾಟೆ ನಡೆಸಿ ಅಂಗೀಕಾರವಾದಂತೆ ನೋಡಿದ್ದಾರೆ. ಸಭೆಯಲ್ಲಿ ಗಲಾಟೆ ನಡೆಯುವುದನ್ನು ಮನಗಂಡು ಸಭಾಧ್ಯಕ್ಷ ವೆಂಕಯ್ಯ ನಾಯ್ಡು 11 ಬಾರಿ ಸಭೆಯನ್ನು ಮುಂದೂಡಿದ್ದಾರೆ. ಎಂದಿನಂತೆ ಇಂದು ಕೂಡಾ ಸಭೆ ವ್ಯರ್ಥಗೊಂಡಿದ್ದು, ಅದನ್ನು ಗುರುವಾರಕ್ಕೆ ಮುಂದೂಡಲಾಗಿದೆ. ತಮಗೆ ಭ್ರಷ್ಟಾಚಾರ ನಡೆಸಿ ದೇಶವನ್ನು ಕೊಳ್ಳೆಹೊಡೆಯಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಭ್ರಷ್ಟಾಚಾರ ನಿಗ್ರಹ ಮಸೂದೆಗೆ ಇವರೆಲ್ಲಾ ಅಡ್ಡಿಪಡಿಸಿದ್ದಾರೆ ಎನ್ನುವುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ನಾಯ್ಡು!!

ಕಲಾಪವು ಇಷ್ಟೊಂದು ದಿನಗಳ ಕಾಲ ವ್ಯರ್ಥವಾಗುವುದನ್ನು ಮನಗಂಡು ಬೇಸರಗೊಂಡ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರು ಇದೊಂದು ಪ್ರಜಾಪ್ರುತ್ವದ ಕಗ್ಗೊಲೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಮಧ್ಯಾಹ್ನದವರೆಗೂ ಗಲಾಟೆ ಮುಂದುವರಿಯುವುದನ್ನು ನೋಡಿದ ನಾಯ್ಡು ಮಧ್ಯಾಹ್ನ 2 ಗಂಟೆಗೆ 11 ಬಾರಿ ಮುಂದೂಡಿದರು. ಮತ್ತೆ ಮಧ್ಯಾಹ್ನ ಸಮಾವೇಶಗೊಂಡಾಗಲೂ ಸಭೆಯಲ್ಲಿ ಗದ್ದಲ ನಡೆಯುವುದನ್ನು ಕಂಡು ಸದಸ್ಯರ ವರ್ತನೆಯನ್ನು ತೀವ್ರವಾಗಿ ಖಂಡಿಸಿ ಕಲಾಪವನ್ನು ಗುರುವಾರಕ್ಕೆ ಮುಂದೂಡಿದ್ದಾರೆ.

ಇದಕ್ಕೂ ಮೊದಲು ಕಾಂಗ್ರೆಸ್, ಎಐಎಡಿಎಂಕೆ, ಬಿಎಸ್ಪಿ, ಸಿಪಿಐಎಂ, ಎಎಪಿ, ಟಿಡಿಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸದಸ್ಯರು ‘ನರೇಂದ್ರ ಮೋದಿ ದಲಿತ ವಿರೋಧಿ’ ಎಂಬ ಭಿತ್ತಿಫಲಕ ಹಿಡಿದುಕೊಂಡು, ದಲಿತ ವಿರೋಧಿ ಸರಕಾರವನ್ನು ಸಹಿಸಲಾಗದು ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಆದರೆ ದಲಿತರ ಕಾನೂನಿನ ಆದೇಶ ಹೊರಡಿಸಿರುವುದು ಸುಪ್ರೀಂಕೋರ್ಟ್. ಆದರೆ ಹಿಂದೂಗಳಿಂದ ದಲಿತರನ್ನು ಪ್ರತ್ಯೇಕಿಸುವ ಸಲುವಾಗಿ ಒಡೆದು ಆಳುವ ನೀತಿಯಿಂದ ಇದನ್ನು ಮೋದಿಗೆ ಬಗಲಿಗೆ ಹಾಕುತ್ತಿದ್ದಾರೆ. ಇದೆಲ್ಲವನ್ನು ಜನರು ಅರ್ಥೈಸಿಕೊಂಡಿದ್ದಾರೆ..

ಈ ಗದ್ದಲದ ಮಧ್ಯೆಯೇ ಭ್ರಷ್ಟಾಚಾರ ನಿಗ್ರಹ (ತಿದ್ದುಪಡಿ) ಮಸೂದೆ 2013ನ್ನು ಮಂಡಿಸಲು ಉಪಸಭಾಧ್ಯಕ್ಷ ಪಿ.ಜೆ.ಕುರಿಯನ್ ಸಚಿವ ಜಿತೇಂದ್ರ ಸಿಂಗ್‌ಗೆ ಸೂಚಿಸಿದರು.

ಈ ಸಂದರ್ಭ ಮಸೂದೆಯ ಬಗ್ಗೆ ಚರ್ಚೆ ನಡೆಸುವ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ವಿಪಕ್ಷ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಕಳೆದ ನಾಲ್ಕು ವರ್ಷಗಳಿಂದ ಈ ಮಸೂದೆಯ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈಗ ಸ್ಥಾಯಿ ಸಮಿತಿಯ ಗಮನಕ್ಕೆ ತಂದು ಮಸೂದೆ ಮಂಡಿಸಲಾಗಿದೆ. ಆದ್ದರಿಂದ ಚರ್ಚೆಯ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು. ಆದರೂ ಗದ್ದಲ ಮುಂದುವರಿದಾಗ ಅಂತಿಮವಾಗಿ ಸದನದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಎನ್‍ಡಿಎ ಸಂಸದರು 23 ದಿನಗಳ ಕಾಲ ಕಲಾಪ ವ್ಯರ್ಥವಾಗುವುದನ್ನು ಕಂಡು ಸಂಬಳ, ಇತರ ಭತ್ಯೆಯನ್ನು ಸ್ವೀಕರಿಸುವುದಿಲ್ಲ ಎಂದು ದಿಟ್ಟ ಕ್ರಮಕ್ಕೆ ಮುಂದಾಗಿದ್ದರು. ಆದರೆ ತಮ್ಮಿಂದಾಗಿ ಕಲಾಪ ವ್ಯರ್ಥವಾಗಿದೆ ಎಂದು ಗೊತ್ತಿದ್ದರೂ ಪ್ರತಿಪಕ್ಷಗಳ ಸದಸ್ಯರು ಸಂಬಳ ಬೇಡ ಎಂದು ಹೇಳಿಲ್ಲ. ಇದರಿಂದ ಅವರಿಗೆ ದೇಶದ ಪ್ರಗತಿಯ ಚಿಂತೆಯೇ ಇಲ್ಲ ಎಂಬ ವಿಚಾರ ಬಹಿರಂಗಗೊಂಡಿದೆ.

source :http://www.kannadaprabha.com/nation/rajya-sabha-adjourned-a-record-11-times-in-a-single-day/313513.html

chekithana

Editor Postcard Kannada:
Related Post